Sri Lanka Couple: ದೇಶದಲ್ಲೂ ತುರ್ತು ಪರಿಸ್ಥಿತಿ; ಶ್ರೀಲಂಕಾದ ಈ ಜೋಡಿಗೂ 'ತುರ್ತು ಪರಿಸ್ಥಿತಿ'!

ಶ್ರೀಲಂಕಾದಲ್ಲಿ ಸರ್ಕಾರದ ವಿರುದ್ಧ ಜನರ ಪ್ರತಿಭಟನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರಧಾನಿ ಕಚೇರಿಯ ಮುಂದೆ ಜನ ಪ್ರತಿಭಟನೆ ಮಾಡುತ್ತಿರುವಾಗ ಜೋಡಿಯೊಂದು ಕಿಸ್ ಮಾಡಿಕೊಂಡ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಚುಂಬನದಲ್ಲಿ ನಿರತ ದಂಪತಿ

ಚುಂಬನದಲ್ಲಿ ನಿರತ ದಂಪತಿ

  • Share this:
22 ಮಿಲಿಯನ್ ಜನರಿರುವ ಶ್ರೀಲಂಕಾದಲ್ಲಿನ (Sri Lanka)  ಆರ್ಥಿಕ ಮತ್ತು ರಾಜಕೀಯ ಅವ್ಯವಸ್ಥೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜನ ಸರ್ಕಾರದ ವಿರುದ್ಧ ತಮ್ಮ ಅಕ್ರೋಶವನ್ನು ಪ್ರತಿಭಟನೆಯ (Protest) ಮೂಲಕ ಪ್ರತಿದಿನವೂ ಹೊರಹಾಕುತ್ತಲೇ ಇದ್ದಾರೆ. ದೇಶದ ಆರ್ಥಿಕ ದುಸ್ಥಿತಿಯ ಕಾರಣದಿಂದಾಗಿ ಶ್ರೀಲಂಕವೂ ವಿಶ್ವದಲ್ಲಿ ಗಮನ ಸೆಳೆದಿದೆ. ಅಧ್ಯಕ್ಷ ಗೋಟಾಬಯ ರಾಜಪಕ್ಸೆ (Gotabaya Rajapaksa) ಅವರು ಬುಧವಾರ ದೇಶದಿಂದ ಮಾಲ್ಡೀವ್ಸ್‌ಗೆ ಪಲಾಯನ ಮಾಡಿದರು. ಪ್ರಧಾನಿ ರಾನಿಲ್ ವಿಕ್ರಮ್ ಸಿಂಘೆ (Ranil Wickremesinghe) ಅವರನ್ನು ಹಂಗಾಮಿ ಅಧ್ಯಕ್ಷರಾಗಿ (Acting President) ಘೋಷಿಸಿದೆ. ಸರ್ಕಾರದ ಯೋಜನೆಗಳ ವಿರುದ್ಧ ಜನ ತೀವ್ರತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈ ಬಾರಿ ಹೋರಾಟಕ್ಕಿಂತಲೂ ಪ್ರತಿಭಟನೆಯ ನಡುವೆ ಜೋಡಿಯೊಂದು ಚುಂಬನ (Kiss) ಮಾಡಿದ ಪೋಟೋ ವಿಶ್ವದಲ್ಲೇ ಸಖತ್ ವೈರಲ್ ಆಗುತ್ತಿದೆ.

ಮಾಲ್ಡೀವ್ಸ್ ಗೆ ಪಲಾಯನ ಮಾಡಿದ ರಾಜಪಕ್ಸೆ
ದೇಶದ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುವಲ್ಲಿ ವಿಫಲವಾದ ಗೋಟಾಬಯ ರಾಜಪಕ್ಸೆ ದೇಶದ ಜನರ ಪ್ರತಿಭಟನೆಯನ್ನು ಎದುರಿಸಲಾಗದೆ ಗುರುವಾರ ರಾತ್ರಿ ಮಾಲ್ಡೀವ್ಸ್ ಪಲಾಯನ ಮಾಡಿದರು ಮತ್ತು ಅಲ್ಲಿಂದ ನಂತರ ಸಿಂಗಾಪುರಕ್ಕೆ ಪಲಾಯನ ಮಾಡಿದರು ಎನ್ನಲಾಗುತ್ತಿದೆ.

ಹಂಗಾಮಿ ಅಧ್ಯಕ್ಷರಾಗಿ ಪ್ರಧಾನಿ ರಾನಿಲ್ ವಿಕ್ರಮ್ ಸಿಂಘೆ
ಗೋಟಾಬಯ ಅವರ ನಿರ್ಗಮನದ ನಂತರ, ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಅವರು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದರು.ಇದು ಪ್ರತಿಭಟನಾಕಾರರನ್ನು ಮತ್ತಷ್ಟು ಕೆರಳಿಸಿತು ಪ್ರತಿಭಟನೆಗಳನ್ನು ನಿಯಂತ್ರಿಸುವ ಸಲುವಾಗಿ ವಿಕ್ರಮ್ ಸಿಂಘೆ ದೇಶದಲ್ಲಿ ತುರ್ತುಪರಿಸ್ಥಿಯನ್ನು ಘೋಷಣೆ ಮಾಡಿದರು. ಆದರೆ ಜನ ಇದರ ವಿರುದ್ಧ ಇನ್ನಷ್ಟು ಕೋಪಗೊಂಡು ಲಂಕಾ ಧ್ವಜಗಳನ್ನು ಹಿಡಿದುಕೊಂಡು ತುರ್ತು ಪರಿಸ್ಥಿತಿಯನ್ನು ಧಿಕ್ಕರಿಸಿ ಪ್ರಧಾನಿ ಕಚೇರಿಯ ಕಟ್ಟಡವನ್ನು ಸುತ್ತುವರೆದರು.

ಇದನ್ನೂ ಓದಿ: Viral Video: ನಡುರಸ್ತೆಯಲ್ಲಿ ನಾಗಿನ್ ಡ್ಯಾನ್ಸ್! ಯುವಕರ ವಿಡಿಯೋ ನೋಡಿ ನೆಟ್ಟಿಗರು ಖುಷ್

ಪ್ರತಿಭಟನೆಯ ನಡುವೆ ವೈರಲ್ ಆದ ಕಿಸ್ಸಿಂಗ್ ಪೋಟೋ
ಪ್ರಧಾನಿ ಕಚೇರಿಯ ಮುಂದೆ ಜನರು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಜೋಡಿಯೊಂದು ಪ್ರತಿಭಟನೆಯ ನಡುವೆಯೂ ಪ್ರೀತಿಗೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಪರಸ್ಪರ ಕಿಸ್ ಮಾಡಿಕೊಂಡರು. ಇದೀಗ ಇವರು ಕಿಸ್ ಮಾಡಿಕೊಳ್ಳುತ್ತಿರುವ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗಿ ವೈರಲ್ ಆಗುತ್ತಿದೆ.





ಇದು "ಕಪಲ್ಸ್ ಗೋಲ್ಸ್" ಎಂದ ನ್ಯೂಸ್ ವೈರ್
ಸುಡುವ ಸೂರ್ಯನ ಬಿಸಿಲಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನಡುವೆಯೂ ಜೋಡಿಯೊಂದು ಎತ್ತರದ ಜಾಗದಲ್ಲಿ ನಿಂತು ಕಿಸ್ ಮಾಡುತ್ತಿರುವ ಫೋಟೋವನ್ನು ಶ್ರೀಲಂಕಾದ ಸ್ಥಳೀಯ ಮಾಧ್ಯಮ ನ್ಯೂಸ್ ವೈರ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಫೋಟೋದ ಜೊತೆಗೆ 'ಕಪಲ್ಸ್ ಗೋಲ್ಸ್' ಎಂದು ಬರೆದುಕೊಂಡಿದೆ.
ಪೋಸ್ಟ್ ಗೆ ಕಮೆಂಟ್ ಮಾಡಿದ ಕೆಲವರು, ಪ್ರತಿಭಟನೆಯ ನಡುವೆ ಇಂತಹ ಘಟನೆಗಳು ನಡೆಯುವುದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಅವರ ನಡುವಿನ ಪ್ರೀತಿಯ ಬಗ್ಗೆ ಹೊಗಳಿದ್ದಾರೆ.

ತೀವ್ರಸ್ವರೂಪ ತಾಳಿದ ಪ್ರತಿಭಟನೆ
ಪ್ರತಿಭಟನೆಯ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯು ತೀವ್ರತರವಾಗಿ ಗಾಯಗೊಂಡಿದ್ದು ಅವನನ್ನು ಆಸ್ಪತ್ರೆಗೆ ಕೊಂಡುಹೋಗುವಾಗ ಸಾವನ್ನಪ್ಪಿದ್ಧಾನೆ. 100 ಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪ್ರತಿಭಟನೆಯನ್ನು ಹತ್ತಿಕ್ಕಲು ವಿಕ್ರಮ ಸಿಂಘೆ ಪೋಲಿಸ್ ಕಾರ್ಯಾಚರಣೆಯನ್ನು ಘೋಷಿಸಿದ್ದಾರೆ.

ಇದನ್ನೂ ಓದಿ: UK: ಬ್ರಿಟನ್ ಕಾಲೇಜ್​ನಲ್ಲಿ ಇಂಡಿಯನ್ ಸಾಂಗ್, ಸಖತ್ ಸ್ಟೆಪ್ ಹಾಕಿದ ವಿದ್ಯಾರ್ಥಿಗಳು

ಶ್ರೀಲಂಕಾದಲ್ಲಿನ ಆರ್ಥಿಕ ದುಸ್ಥಿತಿ ಮತ್ತು ರಾಜಕೀಯ ಅವ್ಯವಸ್ಥೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಇದರಿಂದ ಅಲ್ಲಿನ ಜನರ ಮನಸ್ಥಿತಿಯು ಪ್ರತಿಭಟನೆಯ ಕಡೆಗೆ ಹೆಚ್ಚು ಪ್ರಚೋದಿಸುತ್ತಿದೆ. ಈ ನಡುವೆ ದಂಪತಿಗಳ ಕಿಸ್ಸಿಂಗ್ ಪೋಟೋ ವೈರಲ್ ಆಗುತ್ತಿರುವುದು ಹಾಸ್ಯಸ್ಪದವಾಗಿ ಕಂಡು ಬಂದರೂ ಪ್ರತಿಭಟನೆಯ ನಡುವಿನ ಪ್ರೀತಿಯ ಒಲವು ಪ್ರಶಂಸೆಗೆ ಪಾತ್ರವಾಗಿದೆ. ಮತ್ತು ಈ ಪೋಟೋ ವೈರಲ್ ಆಗುವ ಮೂಲಕವೂ ಶ್ರೀಲಂಕಾದ ಪ್ರತಿಭಟನೆಯ ಪರಿಸ್ಥಿತಿ ವಿಶ್ವದಲ್ಲಿ ಮತ್ತೆ ಗಮನ ಸೆಳೆಯುತ್ತಿದೆ.
Published by:Nalini Nalini
First published: