• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Blue Whale: ತಿಮಿಂಗಿಲದ ಹೃದಯದ ಸೈಜ್​ ಕೇಳಿದ್ರೆ ಶಾಕ್ ಆಗ್ತೀರಾ, 3 ಮನುಷ್ಯರ ತೂಕ ಅಂದ್ರೆ ನಂಬ್ತೀರಾ?

Blue Whale: ತಿಮಿಂಗಿಲದ ಹೃದಯದ ಸೈಜ್​ ಕೇಳಿದ್ರೆ ಶಾಕ್ ಆಗ್ತೀರಾ, 3 ಮನುಷ್ಯರ ತೂಕ ಅಂದ್ರೆ ನಂಬ್ತೀರಾ?

ನೀಲಿ ತಿಮಿಂಗಿಲದ ಹೃದಯ

ನೀಲಿ ತಿಮಿಂಗಿಲದ ಹೃದಯ

Blue Whale Heart: ನೀಲಿ ತಿಮಿಂಗಿಲಗಳು ಜಗತ್ತಿನ ಭೂಮಿಯಲ್ಲಿರುವ ಬಹುದೊಡ್ಡ ಜೀವಿಗಳಲ್ಲಿ ಒಂದಾಗಿದೆ. ಇದೀಗ ಈ ಜೀವಿಯ ಹೃದಯದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ನೋಡುಗರು ಬೆಚ್ಚಿಬಿದ್ದಿದ್ದಾರೆ.

  • Share this:

    ಜಗತ್ತಿನಲ್ಲಿ (World) ನಾವು ಹಲವಾರು ವಿಶೇಷತೆಗಳನ್ನು ನೋಡುತ್ತಿರುತ್ತೇವೆ, ಕೇಳಿರುತ್ತೇವೆ. ಜಗತ್ತು ಎಷ್ಟೇ ಬದಲಾವಣೆಯಾದರೂ, ಹೊಸ ಹೊಸ ಟೆಕ್ನಾಲಜಿ ಬಂದರೂ ಕೆಲವೊಂದು ವಿಷಯಗಳು ನೋಡುಗರನ್ನೇ ಒಮ್ಮೆ ಬೆರಗಾಗಿಸುತ್ತದೆ. ಇನ್ನು ವಿಶ್ವದಲ್ಲಿ ಹಲವಾರು ನಮಗೆ ತಿಳಿಯದ ವಿಷಯಗಳಿವೆ. ಅದ್ರಲ್ಲೂ ಸಮುದ್ರದಲ್ಲಿರುವಂತಹ ಜೀವಿಗಳ (Sea ​​Creature) ಬಗ್ಗೆ ಗೊತ್ತಿರದ ವಿಷಯಗಳು ಹಲವಾರು ಇದೆ. ಜಗತ್ತಿನ ಅತೀ ದೊಡ್ಡ ಜೀವಿ ಎಂದರೆ ಅದು ನೀಲಿ ತಿಮಿಂಗಿಲ (Blue Whale). ಇದರ ಬಗ್ಗೆ ತಿಳಿಯದಿರುವ ಹಲವಾರು ವಿಷಯಗಳಿವೆ. ಇನ್ನು ಇದರ ಹೃದಯದ ಗಾತ್ರ ಈ ಜೀವಿಯ ಬೆಳವಣಿಗೆಯನ್ನು ತೋರಿಸುತ್ತದೆ. ಇದೀಗ ನೀಲಿ ತಿಮಿಂಗಿಲದ ಹೃದಯ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ (Social Media) ಫುಲ್ ವೈರಲ್ ಆಗುತ್ತಿದೆ.


    ನೀಲಿ ತಿಮಿಂಗಿಲಗಳು ಜಗತ್ತಿನ ಭೂಮಿಯಲ್ಲಿರುವ ಬಹುದೊಡ್ಡ ಜೀವಿಗಳಲ್ಲಿ ಒಂದಾಗಿದೆ. ಇದೀಗ ಈ ಜೀವಿಯ ಹೃದಯದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ನೋಡುಗರು ಬೆಚ್ಚಿಬಿದ್ದಿದ್ದಾರೆ.


    ನೀಲಿ ತಿಮಿಂಗಿಲಾದ ಹೃದಯ!


    ನಾವು ಸಾಮಾನ್ಯವಾಗಿ ಇತರೆ ಜೀವಿಗಳ, ಮಾನವರ ಹೃದಯಗಳನ್ನು ಮೊಬೈಲ್​ನಲ್ಲೋ, ಫೋಟೋದಲ್ಲೋ ನೋಡಿರುತ್ತೇವೆ. ಆದರೆ ಇಲ್ಲೊಂದು ನೀಲಿತಿಮಿಂಗಿಲದ ದೊಡ್ಡ ಗಾತ್ರದ ಹೃದಯದ ಫೋಟೋ ಫುಲ್​ ವೈರಲ್ ಆಗಿದೆ. ಪ್ರಮುಖ ವಾಣಿಜ್ಯೋದ್ಯಮಿ ಹರ್ಷ್ ಗೋಯೆಂಕಾ ಎಂಬವರು ಸಾಮಾಜಿಕ ಮಾಧ್ಯಮದಲ್ಲಿ ಯಾವುದಾದರೂ ಅದ್ಭುತ ಫೋಟೋಗಳು ಮತ್ತು ವಿಡಿಯೋಗಳನ್ನು ಆಗಾಗ ಶೇರ್​ ಮಾಡುತ್ತಿರುತ್ತಾರೆ.


    ಇದನ್ನೂ ಓದಿ: ಯಾವಾಗ್ಲೂ ಸಣ್ಣ-ಪುಟ್ಟ ವಿಷಯಕ್ಕೂ ಸಾರಿ ಕೇಳ್ತೀರಾ? ಅಷ್ಟಕ್ಕೂ ನಿಮ್ಗೆ ಈ ಪದದ ಅರ್ಥ ಗೊತ್ತಿದ್ಯಾ?


    ಇತ್ತೀಚೆಗೆ ಅವರು ನೀಲಿ ತಿಮಿಂಗಿಲದ ಸಂರಕ್ಷಿತ ಹೃದಯದಂತೆ ಕಾಣುವ ಫೋಟೋವೊಂದನ್ನು ತನ್ನ ಟ್ವಿಟರ್​ ಅಕೌಂಟ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಹರ್ಷ್ ಗೋಯೆಂಕಾ ಅವರು ಹಂಚಿಕೊಂಡಿರುವ ಫೋಟೋದಲ್ಲಿ ತಿಮಿಂಗಿಲದ ಹೃದಯವನ್ನು ನೋಡಿದರೆ ನೀವು ಬೆರಗಾಗುತ್ತೀರಿ.


    ನೀಲಿ ತಿಮಿಂಗಿಲದ ಹೃದಯ


    ವಿಶೇಷತೆ ಏನು?


    ಇನ್ನು ಈ ಫೋಟೋದಲ್ಲಿ ಕಾಣುತ್ತಿರುವ ಫೋಟೋ ನೀಲಿ ತಿಮಿಂಗಿಲದ ಸಂರಕ್ಷಿತ ಹೃದಯವಾಗಿದೆ. ಇದು 181 ಕೆಜಿ ತೂಕ ಮತ್ತು 4.9 ಅಡಿ ಉದ್ದ ಮತ್ತು 3.9 ಅಡಿ ಅಗಲವಿದೆ. ಇದರ ಹೃದಯ ಬಡಿತ 3.2 ಕಿಮೀಗಿಂತ ಹೆಚ್ಚು ದೂರದವರೆಗೂ ಕೇಳಿಸುತ್ತದೆ ಎಂದು ಹರ್ಷ್​ ಅವರು ಫೋಟೋದಲ್ಲಿ ಬರೆದುಕೊಂಡಿದ್ದಾರೆ.



    2014 ರಲ್ಲಿ ಪತ್ತೆಯಾದ ಹೃದಯ


    2014 ರಲ್ಲಿ ನ್ಯೂಫೌಂಡ್‌ಲ್ಯಾಂಡ್‌ನಲ್ಲಿ ತೊಳೆದು ಪ್ರದರ್ಶಿಸಲು ಇಟ್ಟಿದ್ದ ನೀಲಿ ತಿಮಿಂಗಿಲದ ಹೃದಯದ ಚಿತ್ರ ಇದಾಗಿದೆ. ಇದು ಸಂಶೋಧನೆಗೆ ಉತ್ತಮ ಸ್ಥಿತಿಯಲ್ಲಿದ್ದು ಕೆನಡಾದ ಟೊರೊಂಟೊದಲ್ಲಿನ ರಾಯಲ್ ಒಂಟಾರಿಯೊ ಮ್ಯೂಸಿಯಂನಲ್ಲಿ ವಿಜ್ಞಾನಿಗಳು ಸಂರಕ್ಷಿಸಿದ್ದಾರೆ. ವಿಶ್ವದ ಅತಿ ದೊಡ್ಡ ಹೃದಯದ ಚಿತ್ರವನ್ನು ಇದೀಗ ಗೋಯೆಂಕಾ ಅವರು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.




    ಟ್ವಿಟರ್​ನಲ್ಲಿ ಫುಲ್ ವೈರಲ್​


    ಇನ್ನು ಹರ್ಷ್​ ಗೊಯೆಂಕಾ ಅವರು ಈ ನೀಲಿ ತಿಮಿಂಗಿಲದ ಹೃದಯದ ಫೋಟೋವನ್ನು ಮಾರ್ಚ್​ 13ರಂದು ಪೋಸ್ಟ್ ಮಾಡಿದ್ದಾರೆ. ಇದುವರೆಗೆ ಈ ಫೋಟೋ 166 ಸಾವಿರಾ ವೀಕ್ಷಣೆಯನ್ನು ಪಡೆದಿದೆ. 2 ಸಾವಿರಕ್ಕೂ ಹೆಚ್ಚು ಲೈಕ್​ಗಳನ್ನು ಪಡೆದಿದೆ. ಇನ್ನು ಈ ಚಿತ್ರಕ್ಕೆ ಹಲವಾರು ಕಮೆಂಟ್​ಗಳು ಬಂದಿದ್ದು,  ಅದರಲ್ಲೊಬ್ಬರು “ಅದ್ಭುತ ಆದರೆ ನಿಜ. ಪ್ರಕೃತಿಯೇ ಸರ್ವಶ್ರೇಷ್ಠ” ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಈ ಜಗತ್ತನ್ನು ಎಷ್ಟು ಸುಂದರವಾಗಿ ಚಿತ್ರಿಸಲಾಗಿದೆ ಎಂದು ಆಶ್ಚರ್ಯಕರ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

    Published by:Prajwal B
    First published: