Viral Invitation Card: ಇದು ಮಾತ್ರೆ ಅಲ್ಲ ಕಣ್ರೀ, ಮದುವೆ ಇನ್ವಿಟೇಷನ್ ಕಾರ್ಡ್! ಫಾರ್ಮಾಸಿಸ್ಟ್-ನರ್ಸ್ ಜೋಡಿಯ ಕ್ರಿಯೇಟಿವ್ ಐಡಿಯಾ

ಫಾರ್ಮಾಸಿಸ್ಟ್ ಹಾಗೂ ನರ್ಸ್ ಜೋಡಿಯೊಂದು ತಮ್ಮ ಮದುವೆಗೆ ಬನ್ನಿ ಅಂತ ಸ್ನೇಹಿತರು, ಕುಟುಂಬಸ್ಥರು, ಸಂಬಂಧಿಕರು, ಪರಿಚಯಸ್ಥರು, ಊರಿನವರ ಮನೆಗೆ ಹೋಗಿ ಟ್ಯಾಬ್ಲೆಟ್‌ ಸ್ಟ್ರಿಪ್ (tablet strip) ಕೊಟ್ಟು ಬಂದಿದ್ದಾರಂತೆ! ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ವೈರಲ್ ಆದ ಮದುವೆ ಆಮಂತ್ರಣ ಪತ್ರಿಕೆ

ವೈರಲ್ ಆದ ಮದುವೆ ಆಮಂತ್ರಣ ಪತ್ರಿಕೆ

  • Share this:
ತಮಿಳುನಾಡು: ಮದುವೆ (Marriage) ಎನ್ನುವುದು ಮನುಷ್ಯನ ಜೀವನದ (Men’s Life) ಮಹತ್ವದ ಘಟ್ಟಗಳಲ್ಲಿ ಒಂದು. ಮದುವೆ ಸ್ವರ್ಗದಲ್ಲೇ (Heaven) ನಿಶ್ಚಯವಾಗಿರುತ್ತವೆ ಅಂತಾರೆ. ಯಾರ ಬಾಳಲ್ಲಿ ಯಾರು ಸಂಗಾತಿಯಾಗಬೇಕು (spouse) ಅಂತಾ ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತಂತೆ. ಹೀಗೆ ಒಂಟಿಯಾಗಿರೋ ಲೈಫ್‌ನಲ್ಲಿ (Single Life) ಜಂಟಿಯಾಗಿ, ಬದುಕಿಗೆ ಹೊಸ ಟರ್ನ್ (New Turn) ನೀಡುವ ಮದುವೆ ಸ್ಮರಣೀಯವಾಗಿರಬೇಕು (Memorable) ಅನ್ನೋದು ಎಲ್ಲರ ಆಸೆ. ಈ ಮದುವೆಯ ಆಮಂತ್ರಣ ಪತ್ರಿಕೆ (Wedding Invitation Card) ಕೂಡ ಡಿಫರೆಂಟ್ (Different) ಆಗಿರಬೇಕು ಅಂತ ಎಲ್ಲರ ನಾನಾ ಪ್ರಯತ್ನ ಮಾಡುತ್ತಾರೆ. ಆದರೆ ತಮಿಳುನಾಡಿನಲ್ಲಿ (Tamil Nadu) ಫಾರ್ಮಾಸಿಸ್ಟ್ ಹಾಗೂ ನರ್ಸ್ ಜೋಡಿಯೊಂದು (Pharmacist and nurse Couple) ತಮ್ಮ ಮದುವೆಗೆ ಬನ್ನಿ ಅಂತ ಸ್ನೇಹಿತರು, ಕುಟುಂಬಸ್ಥರು, ಸಂಬಂಧಿಕರು, ಪರಿಚಯಸ್ಥರು, ಊರಿನವರ ಮನೆಗೆ ಹೋಗಿ ಟ್ಯಾಬ್ಲೆಟ್‌ ಸ್ಟ್ರಿಪ್ (tablet strip) ಕೊಟ್ಟು ಬಂದಿದ್ದಾರಂತೆ!

 ಫಾರ್ಮಾಸಿಸ್ಟ್, ನರ್ಸ್ ಜೋಡಿಯ ಟ್ಯಾಬ್ಲೆಟ್ ಸ್ಟ್ರಿಪ್‌ ಇನ್ವಿಟೇಷನ್ ಕಾರ್ಡ್!

ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಫಾರ್ಮಾಸಿಸ್ಟ್ ಹಾಗೂ ನರ್ಸ್ ಇಬ್ಬರ ಮದುವೆ ನಿಶ್ಚಯವಾಗಿತ್ತು. ಅವರ ಮದುವೆಗೆ ಅಂತ ಎಲ್ಲರಿಗೂ ಆಹ್ವಾನ ಪತ್ರಿಕೆ ಕೊಡೋದಕ್ಕೆ ಯೋಚಿಸಿದ್ದಾರೆ.  ಎಲ್ಲರಿಗಿಂತ ತಮ್ಮ ಮದುವೆ ಆಮಂತ್ರಣ ಪತ್ರಿಕೆ ಡಿಫ್ರೆಂಟ್ ಆಗಿರಬೇಕು ಅಂತ ಯೋಚಿಸಿ ಟ್ಯಾಬ್ಲೆಟ್ ಸ್ಟ್ರಿಪ್‌ ರೀತಿಯಲ್ಲಿ ಇನ್ವಿಟೇಷನ್ ಪ್ರಿಂಟ್ ಮಾಡಿಸಿದ್ದಾರೆ. ಈ ವಿಶಿಷ್ಟವಾದ ಮದುವೆ ಆಮಂತ್ರಣ ಪತ್ರಿಕೆ ಇದೀಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

ಇನ್ವಿಟೇಷನ್‌ ಕಾರ್ಡ್‌ನಲ್ಲಿ ಏನಿದೆ?

ಟ್ಯಾಬ್ಲೆಟ್ ಸ್ಟ್ರಿಪ್‌ನಲ್ಲಿ ಮುದ್ರಿಸಲಾದ ಮದುವೆಯ ಕಾರ್ಡ್ ದಿನಾಂಕ, ವಿಳಾಸ ಮತ್ತು ಮದುವೆಯ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒಳಗೊಂಡಿದೆ. ಈ ಜೋಡಿ ಸೆಪ್ಟೆಂಬರ್ 5 ರಂದು ಮದುವೆಯಾಗಲು ನಿರ್ಧರಿಸಿದೆ. ಡಿಜೆ ಪಾರ್ಟಿ ಮತ್ತು ರಿಸೆಪ್ಷನ್ ವಿವರಗಳನ್ನು ಸಹ ಉಲ್ಲೇಖಿಸಲಾಗಿದೆ. ಸೆಪ್ಟೆಂಬರ್ 5 ರಂದು 'ವಿಶೇಷ ದಿನಗಳನ್ನು' ಕೆಂಪು ಪೆಟ್ಟಿಗೆಯಲ್ಲಿ ಪಟ್ಟಿ ಮಾಡಲಾಗಿದೆ; ಅದರ ಅಡಿಯಲ್ಲಿ, ವರ ಮತ್ತು ವಧುವಿನ ಪೋಷಕರ ಹೆಸರುಗಳನ್ನು ಮುದ್ರಿಸಲಾಗಿದೆ. ಎಡಭಾಗದಲ್ಲಿ, ವರ ಮತ್ತು ವಧುವಿನ ಶಿಕ್ಷಣದ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ. "ಎಲ್ಲಾ ಸ್ನೇಹಿತರು ಮತ್ತು ಸಂಬಂಧಿಕರು ನನ್ನ ಮದುವೆ ಸಮಾರಂಭವನ್ನು ತಪ್ಪಿಸಿಕೊಳ್ಳಬೇಡಿ" ಎಂದು ಕೆಂಪು ಅಕ್ಷರಗಳಲ್ಲಿ ಎಚ್ಚರಿಕೆಯನ್ನು ಸಹ ಮುದ್ರಿಸಲಾಗಿದೆ.

ಇದನ್ನೂ ಓದಿ: Marriage Dhoka: ವಯಸ್ಸು 30 ಅಂತ ಯಾಮಾರಿಸಿ ಯುವಕನನ್ನು ಮದ್ವೆಯಾದ 52ರ ಆಂಟಿ! ಮೇಕಪ್‌ ನೋಡಿ ಮೋಸ ಹೋದ ಹುಡುಗ

ಈ ವಧು, ವರರು ಯಾರು?

ತಿರುವಣ್ಣಾಮಲೈ ಜಿಲ್ಲೆಯ ವರ ಎಜಿಲರಸನ್ ಮತ್ತು ವಿಲ್ಲುಪುರಂ ಜಿಲ್ಲೆಯ ವದು ಗೆಂಜಿಯ ವಸಂತಕುಮಾರಿ ಸೆಪ್ಟೆಂಬರ್ 5 ರಂದು ವಿವಾಹವಾಗಲಿದ್ದಾರೆ. ವರ ಎಜಿಲರಸನ್  ಫಾರ್ಮಾಸಿಸ್ಟ್ ಆಗಿ ಕೆಲ ಮಾಡುತ್ತಿದ್ದರೆ, ವಧು ಗೆಂಜಿಯ ವಸಂತಕುಮಾರಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.

ಅತಿಥಿಗಳಿಗೆ ವಿಶೇಷ ಆಹ್ವಾನ ಪತ್ರಿಕೆ ಕೊಟ್ಟ ಜೋಡಿ

ಟ್ಯಾಬ್ಲೆಟ್ ಸ್ಟ್ರಿಪ್‌ನಲ್ಲಿ ಮುದ್ರಿಸಲಾದ ಮದುವೆಯ ಕಾರ್ಡ್ ದಿನಾಂಕ, ವಿಳಾಸ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಹಾಕಲಾಗಿದೆ. ಭಾವೀ ದಂಪತಿ ಇದೀಗ ತಮ್ಮ ಮದುವೆಗೆ ಬನ್ನಿ ಅಂತ ಸ್ನೇಹಿತರು, ಕುಟುಂಬಸ್ಥರು, ಸಂಬಂಧಿಕರು, ಪರಿಚಯಸ್ಥರು, ಊರಿನವರ ಮನೆಗೆ ಹೋಗಿ ಈ ವಿಶಿಷ್ಟ ಆಮಂತ್ರಣ ಪತ್ರಿಕೆ ಕೊಟ್ಟು ಬಂದಿದ್ದಾರೆ.

ಇದನ್ನೂ ಓದಿ: Special Marriage: ಮಾತಿಲ್ಲ, ಕಥೆಯಿಲ್ಲ ಬರೀ ಪ್ರೀತಿ! ಮಾತುಬಾರದವರ ನಡುವೆ ವಿಶೇಷ ಮದುವೆ

ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಇನ್ವಿಟೇಷನ್ ಕಾರ್ಡ್

ಈ ವಿಶಿಷ್ಟ, ವಿಶೇಷ ಹಾಗೂ ವಿಚಿತ್ರ ಮದುವೆ ಆಮಂತ್ರಣ ಪತ್ರಿಕೆ ಇದೀಗ ಇಂಟರ್‌ನೆಟ್‌ನಲ್ಲಿ ಭಾರೀ ವೈರಲ್ ಆಗಿದೆ. "ಎಜಿಲರಸನ್ ಮತ್ತು ವಸಂತಕುಮಾರಿ ವೆಡ್ಡಿಂಗ್" ಎಂಬ ದಪ್ಪ ಮುದ್ರಿತ ಅಕ್ಷರಗಳೊಂದಿಗೆ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಭಾವೀ ವಧು, ವರರ ಕ್ರಿಯೇಟಿವ್ ಐಡಿಯಾಕ್ಕೆ ತಲೆದೂಗಿದ್ದಾರೆ. ಮೆಚ್ಚುಗೆಯ ಕಾಮೆಂಟ್ ಸುರಿಸುತ್ತಿದ್ದಾರೆ.
Published by:Annappa Achari
First published: