• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Bonsai Varieties: 200 ವಿಧದ ಬೋನ್ಸಾಯ್​ ಸಂಗ್ರಹಿಸಿರುವ ವ್ಯಕ್ತಿ, ಲಕ್ಷ ಲಕ್ಷ ಕೊಟ್ಟರೂ ಮಾರಾಟ ಮಾಡಲ್ವಂತೆ

Bonsai Varieties: 200 ವಿಧದ ಬೋನ್ಸಾಯ್​ ಸಂಗ್ರಹಿಸಿರುವ ವ್ಯಕ್ತಿ, ಲಕ್ಷ ಲಕ್ಷ ಕೊಟ್ಟರೂ ಮಾರಾಟ ಮಾಡಲ್ವಂತೆ

ಬೋನ್ಸಾಯ್

ಬೋನ್ಸಾಯ್

ಬೋನ್ಸಾಯ್​ ಗಿಡಗಳು ಮನೆಯ ಒಳಗಿನ ಸ್ಥಳವನ್ನು ಅಂದಗೊಳಿಸಲು ಬಹಳಷ್ಟು ಉಪಯೋಗಕ್ಕೆ ಬರುತ್ತದೆ. ಅದೇ ರೀತಿ ಇಲ್ಲೊಬ್ಬರು ಕೊಚ್ಚಿಯ 59 ವರ್ಷದ ನಿವೃತ್ತ ಮೆರೈನ್​​ ಇಂಜಿನಿಯರ್​ ಲೆನಸ್​​ ಗ್ಸೇವಿಯರ್ ಎಂಬವರು ಪ್ರಪಂಚದ ವಿವಿಧ ರೀತಿಯ ಬೋನ್ಸಾಯ್​ ಗಿಡಗಳನ್ನು ಸಂಗ್ರಹಿಸಿಟ್ಟಿದ್ದಾರೆ.

  • Share this:

ಪುಟ್ಟದಾದ ಮುದ್ದು ಮುದ್ದಾದ ಬೋನ್ಸಾಯ್​ ಗಿಡಗಳು (Bonsai Plants) ವನಲೋಕದ ಆಕರ್ಷಕಣೆಗಳಲ್ಲಿ ಒಂದು. ಸಣ್ಣ ಸಸ್ಯ ಕುಂಡಗಳಲ್ಲಿ ಬೆಳೆಯುವ ಈ ದೊಡ್ಡ ಗಿಡಗಳು ಎಷ್ಟೋ ಜನರ ಮನೆ, ಆಫೀಸ್​​​ನಲ್ಲಿ ಒಳಗಿನ ವಿನ್ಯಾಸವನ್ನು (Design) ಹೆಚ್ಚಿಸಿದೆ. ಈ ನಿಟ್ಟಿನಲ್ಲಿ ಬಹುತೇಕರು ಈ ಬೋನ್ಸಾಯ್​ ಗಿಡಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಕೂಡ ರೂಢಿಸಿಕೊಂಡಿರುತ್ತಾರೆ. ಇದೇ ರೀತಿ ಪ್ರಪಂಚದ ವಿವಿಧ ರೀತಿಯ ಬೋನ್ಸಾಯ್​ ಗಿಡಗಳನ್ನು ಸಂಗ್ರಹಿಸಿರುವ ಕೊಚ್ಚಿಯ 59 ವರ್ಷದ ನಿವೃತ್ತ ಮೆರೈನ್​​ ಇಂಜಿನಿಯರ್​ ಲೆನಸ್​​ ಗ್ಸೇವಿಯರ್ (Lenus Xavier). ಸದ್ಯ​​​ ಅವರ ಬೋನ್ಸಾಯ್​ ಸಂಗ್ರಹದ ವಿಡೀಯೋಗಳು ಸದ್ಯ ಎಲ್ಲೆಡೆ ವೈರಲ್ ಆಗಿವೆ.


ವಿದೇಶದ ಬೋನ್ಸಾಯ್​ ತೋಟಕ್ಕೆ ಭೇಟಿ


ಗ್ಸೇವಿಯರ್​​ರವರು ಬಾಲ್ಯದಿಂದಲೂ ತೋಟಗಾರಿಕೆ ಬಗ್ಗೆ ಆಸಕ್ತಿ ಇಟ್ಟುಕೊಂಡು ಬಂದವರು. 15 ವರ್ಷ ವಯಸ್ಸಿನವರಾಗಿದ್ದಾಗಲೇ ಬೋನ್ಸಾಯ್​ ಗಿಡಗಳ ಬಗ್ಗೆ ವಿಶೇಷ ಒಲವು ಮೂಡಿತು. ನಂತರ ಇಂಡೋನೇಷ್ಯಾ. ಸಿಂಗಾಪುರ್​​, ಮಲೇಷ್ಯಾ ಮತ್ತು ಚೀನಾದಂತಹ ಏಷ್ಯಾದ ಹಲವಾರು ದೇಶಗಳಿಗೆ ಕೆಲಸದ ನಿಮಿತ್ತ ಭೇಟಿ ನೀಡಲು ಆರಂಭಿಸಿದರು.


ಈ ಸಂದರ್ಭದಲ್ಲಿ ಬೋನ್ಸಾಯ್ ತೋಟಗಳಿಗೂ ಭೇಟಿ ನೀಡುತ್ತಿದ್ದರು. ಅಲ್ಲಿ ಬೇರೆ ಬೇರೆ ರೀತಿಯ ಬೋನ್ಸಾಯ್​​ ಗಿಡಗಳ ಬಗ್ಗೆ ತಿಳಿದುಕೊಂಡರು. ಅವುಗಳನ್ನು ಬೆಳೆಸುವುದು ಹೇಗೆ?ನಿರ್ವಹಿಸುವುದು ಹೇಗೆ ಎನ್ನುವುದನ್ನು ಅರಿತುಕೊಂಡರು.


ಇದನ್ನೂ ಓದಿ: ಭಾರತದ ಮಾರುಕಟ್ಟೆ ಆಳುತ್ತಿರುವ ಪ್ರಸಿದ್ಧ ಬ್ರಾಂಡ್‌ಗಳ ಹೆಸರಿನ ಹಿಂದಿರುವ ಇತಿಹಾಸವಿದು!


ಪುಟ್ಟ ಮಕ್ಕಳಂತೆ ಬೋನ್ಸಾಯ್​ಗಳು


ಅಷ್ಟೇ ಅಲ್ಲದೇ ಕೆಲವು ಸ್ಥಳಗಳಲ್ಲಿ ತಾವು ಬೆಳೆಸಿದ ಬೋನ್ಸಾಯ್​ ಗಿಡಗಳ ಉದ್ಯಾನವನ್ನು ಮಕ್ಕಳಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಸಂಗತಿ ಅವರಿಗೆ ಸಾರ್ಥಕ ಎನಿಸಿದೆ. ಉದ್ಯಾನವನದಲ್ಲಿ ಹೂಡಿದ ಶ್ರಮ ಮತ್ತು ಸಮಯ ಬಹಳ ಉಪಯುಕ್ತವಾಗುವುದನ್ನು ನೋಡಲು ಸಂತಸವೆನಿಸುತ್ತದೆ.


ಸಾಕು ಪ್ರಾಣಿಗಳನ್ನು ಬೆಳೆಸುವ ರೀತಿ, ಅಲ್ಲದೇ ಮಗುವನ್ನು ಬೆಳೆಸುವ ರೀತಿಯಂತೆ ಮನಸ್ಸಿಗೆ ಖುಷಿ ನೀಡುತ್ತದೆ ಎಂದು ಹೇಳುತ್ತಾರೆ ಗ್ಸೇವಿಯರ್​.


200 ವಿಧದ ಬೋನ್ಸಾಯ್​


ಇಂದು ಗ್ಸೇವಿಯರ್​​ರವರು 200 ವಿಧದ ಬೋನ್ಸಾಯ್​ ಗಿಡಗಳನ್ನು ಹೊಂದಿದ್ದಾರೆ. ಜುನಿಪರ್, ಎಲಿಫ್ಯಾಂಟ್​ ಟ್ರೀ, ಟ್ರೋಪಿಕಲ್ ಬಾಕ್ಸ್​ವುಡ್​​, ಜೇಡ್​, ಬ್ಲ್ಯಾಕ್​ಪೈನ್ ಇನ್ನೂ ಹಲವಾರು ಬೊನ್ಸಾಯ್​​​ಗಳ ಸಂಗ್ರಹವಿದೆ. ಉತ್ತರ ಭಾರತ ಮತ್ತು ಈಶಾನ್ಯ ಭಾಗಗಳ ಪ್ರಭೇದಗಳು ಸಹ ಇದರಲ್ಲಿವೆ.


ಬೋನ್ಸಾಯ್​ ಕಲಾತ್ಮಕತೆಗೆ ಬೆಳವಣಿಗೆ ಮುಖ್ಯ


ಬೋನ್ಸಾಯ್​​ ಮರ ನೋಡುವುದಕ್ಕೆ ಬೆಳವಣಿಗೆ ಕಡಿಮೆ ಎನಿಸಿದರೂ ಅದರ ಬೆಳವಣಿಗೆಗೆ 10 ವರ್ಷಗಳು ಬೇಕೇ ಬೇಕು. ಇನ್ನು ಅವುಗಳಿಗೆ ಸರಿಯಾದ ಪೋಷಣೆ ನೀಡುವ ಮೂಲಕ ಒಳ್ಳೆಯ ಆಕಾರದಲ್ಲಿ ಬೆಳವಣಿಗೆಯಾಗುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೇ ಅಡ್ಡ ದಿಡ್ಡಿಯಾಗಿ ಬೆಳೆಯಬಹುದು.


ಬೋನ್ಸಾಯ್


ಇದಕ್ಕೆ ನನ್ನ ಮನಸ್ಸು ಒಪ್ಪುತ್ತಿರಲಿಲ್ಲ. ಜೊತೆಗೆ ಅದರ ಕಲಾತ್ಮಕತೆಯೂ ಕೂಡ ಕಡಿಮೆಯಾಗುತ್ತದೆ ಎನ್ನುವ ಕಾಳಜಿ ಇಟ್ಟು ಬೆಳೆಸಿದ್ದೇನೆ ಎನ್ನುತ್ತಾರೆ.


5 ಲಕ್ಷ ಕೊಟ್ಟರೂ ಕೊಡಲಾರೆ


700 ಬೋನ್ಸಾಯ್​​ ಗಿಡಗಳಿದ್ದರೂ ಅದನ್ನು ಮಾರಾಟ ಮಾಡಲು ಗ್ಸೇವಿಯರ್​​ ಮನಸ್ಸು ಮಾಡಿಲ್ಲ. ಸಾಕು ಪ್ರಾಣಿಗಳಂತೆ, ಮಗುವಿನಂತೆ ನೋಡಿಕೊಂಡಿದ್ದಾರೆ. ಅವರಷ್ಟೇ ಪ್ರೀತಿ, ಕಾಳಜಿ ಮಾಡುವವರು ಸಿಗದಿದ್ದರೇ ಎನ್ನುವ ಭಯವೂ ಇದೆ. ಜೊತೆಗೆ ಅವುಗಳನ್ನು ಬಿಟ್ಟಿರಲಾರದ ಪ್ರೀತಿಯೂ ಇದೆ.


ಆದರೆ ಈ ಬೋನ್ಸಾಯ್​ ಮರಗಳಿಗೆ ಆಕರ್ಷಿತರಾಗಿ 5 ಲಕ್ಷದವರೆಗೆ ಹಣವನ್ನು ನೀಡುತ್ತೇವೆ ಎಂದವರು ಇದ್ದಾರೆ. ಆದರೆ ಈ ಸಸ್ಯಗಳ ಮೇಲಿನ ನನ್ನ 35 ವರ್ಷಗಳ ಪ್ರೀತಿಗೆ ಹಣ ಪರ್ಯಾಯವಾಗುತ್ತದೆಯೇ? ಖಂಡಿತಾ ಸಾಧ್ಯವಿಲ್ಲ ಎನ್ನುತ್ತಾರೆ.
ಏನಿದು ಬೋನ್ಸಾಯ್​?


ಬೋನ್ಸಾಯ್​ ಎಂದರೆ ಜಪಾನಿ ಭಾಷೆಯಲ್ಲಿ ಟ್ರೇನಲ್ಲಿ ಬೆಳೆಯುವ ಸಸ್ಯ. ಇನ್ನು ಬೋನ್ಸಾಯ್​​​​ಗಳನ್ನು ಮನೆಯೊಳಗೆ ಇಲ್ಲವೇ ಹೊರಗೆ ಕೂಡ ಬೆಳೆಸಬಹುದು.


ಇದಕ್ಕೆ ಕಿಟ್, ಕೋರ್ಸ್​​ಗಳು, ವಿಡಿಯೋಗಳು ಸಿಗುತ್ತವೆ. ಬೋನ್ಸಾಯ್​ ಜಪಾನಿ ದೇಶದ ಒಂದು ಕಲೆ ಎಂದು ಹೇಳಲಾಗುತ್ತದೆ. ಇಲ್ಲಿ ವಿಜ್ಞಾನಿಗಳು ಮರಗಿಡಗಳ ವಿಶೇಷ ಗುಣ ಪತ್ತೆ ಹಚ್ಚಿ ಬೋನ್ಸಾಯ್​ ತಳಿ ಸಿದ್ಧ ಮಾಡುತ್ತಾರೆ ಎನ್ನಲಾಗುತ್ತದೆ.


ಮನೆಯಲ್ಲಿ ಬೋನ್ಸಾಯ್​ ಏಕಿರಬೇಕು?


ಇನ್ನು ಮನೆಯಲ್ಲಿ ಬೋನ್ಸಾಯ್​ ಮರವಿದ್ದರೇ ಮಾನಸಿಕ ಸಮಸ್ಯೆಗಳು ದೂರವಾಗುತ್ತದೆ. ಆತಂಕ ಕಡಿಮೆಯಾಗುತ್ತದೆ. ವಾತಾವರಣದಲ್ಲಿರುವ ಟಾಕ್ಸಿಕ್ ಅಂಶವನ್ನು ಕಡಿಮೆ ಮಾಡುತ್ತದೆ. ಶೀತಕ್ಕೆ ಸಂಬಂಧಿಸಿದ ರೋಗಗಳನ್ನು ತಡೆಯುತ್ತದೆ ಎನ್ನಲಾಗುತ್ತದೆ..

top videos
    First published: