Congratulations Brother, ಅಬ್ಬಬ್ಬ ಲಾಟ್ರಿ! ಈತನಿಗೆ ಸಿಕ್ಕಿದ್ದು 2 ಟ್ರಿಲಿಯನ್ ಪೌಂಡ್ ಮೊತ್ತದ ಪರಿಹಾರ!

2 ಟ್ರಿಲಿಯನ್ ಪೌಂಡ್ ಮೊತ್ತದ ಪರಿಹಾರದ ಚೆಕ್ ನೋಡಿ ಆತ ಖುಷಿಪಟ್ಟಿದ್ದ. ಆದರೆ ಆ ಖುಷಿ ನಿಜವಾಗಿಯೂ ಅವನಿಗೆ ಧಕ್ಕಲೇ ಇಲ್ಲ. ಅರೇ, ಅದೇನಾಯ್ತು? ಹಾಗಿದ್ರೆ ಆ ಚೆಕ್ ನಕಲಿಯಾ? ಅದನ್ನು ಕಳಿಸಿದ್ದು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ...

2 ಟ್ರಿಲಿಯನ್ ಪೌಂಡ್ ಮೊತ್ತದ ಪರಿಹಾರದ ಚೆಕ್

2 ಟ್ರಿಲಿಯನ್ ಪೌಂಡ್ ಮೊತ್ತದ ಪರಿಹಾರದ ಚೆಕ್

 • Share this:
  ಈ ಸ್ಟೋರಿ (Story) ಓದಿದ್ರೆ, “ಕಂಗ್ರಾಜ್ಯುಲೇಷನ್ಸ್ ಬ್ರದರ್ (Congratulations Brother), ಅಬ್ಬಬ್ಬಬ್ಬ ಲಾಟ್ರಿ (lottery)” ಅಂತ ನೀವು ಹೇಳಬೇಕು ಅಂದುಕೊಳ್ಳುವುದರಲ್ಲಿ ಡೌಟೇ ಇಲ್ಲ. ಯಾಕೆಂದ್ರೆ ಎಷ್ಟೋ ಜನರು ತಮಗಾದ ಯಾವುದೋ ಒಂದು ರೀತಿಯ ನಷ್ಟಕ್ಕೆ ಅಥವಾ ಹಾನಿಗೆ ತಮಗೆ ಬರಬೇಕಾದ ಪರಿಹಾರದ ಹಣ(Compensation)  ಇನ್ನೂ ಬಂದಿಲ್ಲ, ಯಾವಾಗ ಬರುತ್ತೆ ಎಂದು ಸಂಬಂಧಪಟ್ಟಂತಹ ಕಚೇರಿಯಲ್ಲಿ (Office) ಹೋಗಿ ಬಹುತೇಕ ಎಲ್ಲಾ ಟೇಬಲ್‌ಗಳ ಹತ್ತಿರ ಗಂಟೆ ಗಟ್ಟಲೆ ನಿಂತುಕೊಂಡು ಕಾದಿರುತ್ತಾರೆ. ಆದರೆ ಕೆಲವು ಅದೃಷ್ಟವಂತರಿಗೆ ಕೂತಲ್ಲಿಯೇ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಹಣ ಪರಿಹಾರ ಸಿಗುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಅದೃಷ್ಟವಂತ ವ್ಯಕ್ತಿಯ ಬಗ್ಗೆ ನಾವು ಇಲ್ಲಿ ನಿಮಗೆ ಹೇಳುತ್ತೇವೆ ಕೇಳಿ. ಈ ವ್ಯಕ್ತಿಯು ಆ ಪರಿಹಾರಕ್ಕಾಗಿ ಎಲ್ಲಿಯೂ ಹೋಗದೆ ಮನೆಯಲ್ಲಿಯೇ ಕೂತಿರುವಾಗ ಅವರಿಗೆ ಬರಬೇಕಾದ ಪರಿಹಾರದ ಚೆಕ್ ಬಂದಿದೆ ನೋಡಿ. ಇದನ್ನು ನೋಡಿ ಅವರಿಗೆ ಎಷ್ಟು ಸಂತೋಷದ ಜೊತೆಗೆ ಶಾಕ್ ಸಹ ಆಗಿದೆ, ಏಕೆಂದರೆ ಇವರಿಗೆ ಬಂದ ಚೆಕ್‌ನಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 2 ಟ್ರಿಲಿಯನ್ ಪೌಂಡ್ ಮೊತ್ತ ಇದೆಯಂತೆ.

  ಚಂಡಮಾರುತದಿಂದ ಪರದಾಡಿದ್ದಕ್ಕೆ ಪರಿಹಾರ!

  ಹೌದು.. ಇದು ನಡೆದದ್ದು ಯುಕೆಯಲ್ಲಿ ಎಂದು ಹೇಳಲಾಗುತ್ತಿದೆ. ಯುಕೆ ವಿದ್ಯುತ್ ಶಕ್ತಿ ಪೂರೈಕೆದಾರರು ತಪ್ಪಾಗಿ ಅರ್ವೆನ್ ಚಂಡಮಾರುತದ ಸಮಯದಲ್ಲಿ ಕೆಲವು ದಿನಗಳವರೆಗೆ ವಿದ್ಯುತ್ ಇಲ್ಲದೆ ಪರದಾಡಿದ ವ್ಯಕ್ತಿಗೆ 2 ಟ್ರಿಲಿಯನ್ ಪೌಂಡ್‌ಗಿಂತಲೂ ಹೆಚ್ಚಿನ ಮೊತ್ತದ ಪರಿಹಾರದ ಚೆಕ್ ಅನ್ನು ಕಳುಹಿಸಿದ್ದಾರೆ.

  ಹೆಬ್ಡೆನ್ ಬ್ರಿಡ್ಜ್ ಮೂಲದ ಗರೆತ್ ಹ್ಯೂಸ್, ಯುಕೆಯಲ್ಲಿ ಅರ್ವೆನ್ ಎಂಬ ಚಂಡಮಾರುತವೊಂದು ಬಂದು ಹಾನಿ ಮಾಡಿದಾಗ ಕೆಲವು ದಿನಗಳವರೆಗೆ ಮನೆಯಲ್ಲಿ ವಿದ್ಯುತ್ ಇಲ್ಲದೆಯೇ ಇರಬೇಕಾಯಿತು ಎಂದು ಹೇಳಲಾಗುತ್ತಿದೆ.

  ಸೋಶಿಯಲ್ ಮೀಡಿಯಾದಲ್ಲಿ ಚೆಕ್ ವೈರಲ್

  ಹ್ಯೂಸ್ ತನ್ನ ವಿದ್ಯುತ್ ಶಕ್ತಿ ಪೂರೈಕೆದಾರರಿಂದ ಒಂದು ರೀತಿಯ ಪರಿಹಾರವನ್ನು ನಿರೀಕ್ಷಿಸುತ್ತಿದ್ದಾಗ ಅವರು ಅವನಿಗೆ 2 ಟ್ರಿಲಿಯನ್ ಪೌಂಡ್ ಭಾರಿ ಮೊತ್ತದ ಪರಿಹಾರದ ಚೆಕ್ ಕಳುಹಿಸಿದಾಗ, ಅದನ್ನು ನೋಡಿ ಅವರು ಸಂಪೂರ್ಣವಾಗಿ ತಬ್ಬಿಬ್ಬಾಗಿದ್ದಾರೆ. ಉತ್ತರ ಭಾಗದ ಪವರ್ ಗ್ರಿಡ್ ಅವರಿಗೆ ಕಳುಹಿಸಿದ ಚೆಕ್‌ನ ಫೋಟೋವನ್ನು ಹ್ಯೂಸ್ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಇದನ್ನೂ ಓದಿ: Islandನಲ್ಲಿರುವ ಈ 12 ಬೆಡ್‍ರೂಮ್‍ ಬಂಗಲೆಗೆ ಹೊಸ ಓನರ್ ಬೇಕಂತೆ..! ನೀವೂ ಟ್ರೈ ಮಾಡ್ತೀರಾ ನೋಡಿ

  ಟ್ವಿಟ್ಟರ್‌ನಲ್ಲಿ ಆ ಚೆಕ್‌ನ ಫೋಟೋವನ್ನು ಹಂಚಿಕೊಂಡು ಅವರು “ನಾನು ಈ ಚೆಕ್ ಅನ್ನು ಬ್ಯಾಂಕ್‌ಗೆ ಹಾಕುವ ಮೊದಲು ನಿಮಗೆ ತೋರಿಸುತ್ತಿದ್ದೇನೆ, ನೀವು ಇದನ್ನು ಭರಿಸಬಹುದು ಎಂದು ನಿಮಗೆ ಖಚಿತವಿದೆಯೇ" ಎಂದು ಉತ್ತರ ಭಾಗದ ಪವರ್ ಗ್ರಿಡ್ ಅವರಿಗೆ ಕೇಳಿದ್ದಾರೆ.

  ವಿದ್ಯುತ್ ಶಕ್ತಿ ಪೂರೈಕೆದಾರರಿಂದ ತಪ್ಪಾದ ಚೆಕ್‌ಗಳನ್ನು ಪಡೆದ ಏಕೈಕ ಗ್ರಾಹಕ ಹ್ಯೂಸ್ ಅಲ್ಲ ಎಂದು ತಿಳಿದು ಬಂದಿದೆ. ಉತ್ತರ ಪವರ್ ಗ್ರಿಡ್ ತಮ್ಮ 75 ಗ್ರಾಹಕರಿಗೆ ಈ ರೀತಿಯ ತಪ್ಪು ಮೊತ್ತದ ಚೆಕ್‌ಗಳನ್ನು ಕಳುಹಿಸಿದ ನಂತರ ವಿಷಯ ತಿಳಿದು ಕ್ಷಮೆಯಾಚಿಸಿದೆ ಎಂದು ವರದಿಗಳು ತಿಳಿಸಿವೆ.

  ಹ್ಯೂಸ್ ಪಡೆದ ಪರಿಹಾರದ ಚೆಕ್‌ನಲ್ಲಿ 2324252080110 ಹೀಗೆ ಬರೆದಿತ್ತು. ಇದನ್ನು ಪದಗಳಲ್ಲಿ ಎರಡು ಟ್ರಿಲಿಯನ್ ಮುನ್ನೂರ ಇಪ್ಪತ್ತನಾಲ್ಕು ಬಿಲಿಯನ್ ಇನ್ನೂರಾ ಐವತ್ತೆರಡು ಮಿಲಿಯನ್ ಎಂಬತ್ತು ಸಾವಿರದ ಒಂದು ನೂರ ಹತ್ತು ಎಂದು ಹೇಳಬಹುದಾಗಿದೆ.

  ಬ್ಯಾಂಕ್‌ಗೆ ಚೆಕ್ ಹಾಕುವಂತೆ ಸಲಹೆ

  ಹ್ಯೂಸ್ ಅವರ ಟ್ವೀಟ್‌ಗೆ ಕೆಲವರು ಪ್ರತಿಕ್ರಿಯಿಸಿ, ಅದೇ ಮೌಲ್ಯದ ಚೆಕ್‌ಗಳನ್ನು ಪಡೆದ ಬೇರೆ ಜನರನ್ನು ಸಹ ನಾವು ನೋಡಿದ್ದೇವೆ ಎಂದು ಹೇಳಿದರು. ಇದನ್ನು ನೋಡಿದ ಸಾಮಾಜಿಕ ಮಾಧ್ಯಮದ ಬಳಕೆದಾರರು “ಹ್ಯೂಸ್ ಆ ಚೆಕ್ ಅನ್ನು ಬ್ಯಾಂಕ್‌ನಲ್ಲಿ ಹಾಕಬೇಕಿತ್ತು” ಎಂದು ಹೇಳಿದ್ದಾರೆ.

  "ಈ ಚೆಕ್ ಅನ್ನು ಬ್ಯಾಂಕ್ ನಲ್ಲಿ ಹಾಕಿ. ನಂತರ ಅವರು ಮರುಪಾವತಿ ವಿನಂತಿಗಳನ್ನು ಲಿಖಿತವಾಗಿ ಸಲ್ಲಿಸಬೇಕಾಗಿತ್ತು ಮತ್ತು ಅದನ್ನು ಪ್ರಕ್ರಿಯೆಗೊಳಿಸಲು 28 ದಿನಗಳವರೆಗೆ ಕಾಯಬೇಕು ಎಂದು ಅವರಿಗೆ ತಿಳಿಸಿ ಮತ್ತು 1 ಪ್ರತಿಶತ ಅಡ್ಮಿನ್ ಶುಲ್ಕವನ್ನು ಪಾವತಿಸಿ ಎಂದು ಹೇಳಬಹುದಿತ್ತು" ಎಂದು ಇನ್ನೊಬ್ಬರು ಬರೆದಿದ್ದಾರೆ.

  ಇದನ್ನೂ ಓದಿ: Viral News: 6 ಕೆಲಸಗಳನ್ನು ಒಟ್ಟಿಗೆ ಮಾಡುತ್ತಿರುವ ಭೂಪ- ನೆಟ್ಟಿಗರು ಫುಲ್ Confuse

  ಧನ್ಯವಾದ ತಿಳಿಸಿದ ಸಂಸ್ಥೆ

  ಉತ್ತರ ಪವರ್ ಗ್ರಿಡ್ ಟ್ವೀಟ್‌ಗೆ ಉತ್ತರಿಸಿ ತಮ್ಮ ತಪ್ಪನ್ನು ಎತ್ತಿ ತೋರಿಸಿದ್ದಕ್ಕಾಗಿ ಹ್ಯೂಸ್‌ಗೆ ಧನ್ಯವಾದ ಅರ್ಪಿಸಿದರು. "ಇದನ್ನು ನಮ್ಮ ಗಮನಕ್ಕೆ ತಂದಿದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು. ದಯವಿಟ್ಟು ವಿಳಾಸ ಮತ್ತು ಪೋಸ್ಟ್ ಕೋಡ್ ಸೇರಿದಂತೆ ನಿಮ್ಮ ಸಂಪರ್ಕ ವಿವರಗಳನ್ನು ನಮಗೆ ಕಳುಹಿಸಿ, ಇದರಿಂದ ನಾವು ಈ ತಪ್ಪನ್ನು ಸರಿಪಡಿಸಬಹುದು" ಎಂದು ಅವರು ಬರೆದಿದ್ದಾರೆ.
  Published by:Annappa Achari
  First published: