Viral Story: ಬೆಂಗಳೂರಿನಿಂದ ಬಿರಿಯಾನಿ ಆರ್ಡರ್ ಮಾಡಿದ ಮುಂಬೈ ಹುಡುಗಿ- ಇದು ಹೇಗೆ ಸಾಧ್ಯ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮುಂಬೈನ ಹುಡುಗಿ ಶುಕ್ರವಾರ 2,500 ರೂಪಾಯಿ ಮೌಲ್ಯದ ಬಿರಿಯಾನಿಯನ್ನು ಆರ್ಡರ್ ಮಾಡಿದ್ದಾರೆ ನೋಡಿ. ಆ ಹುಡುಗಿ ಮುಂಬೈ ನಲ್ಲಿದ್ದು, ಅವಳು ಆ ಬಿರಿಯಾನಿ ಆರ್ಡರ್ ಅನ್ನು ಬೆಂಗಳೂರಿನ ರೆಸ್ಟೋರೆಂಟ್ ನಿಂದ ಬೇಕೆಂದು ಮಾಡಿದ್ದಾಳೆ.

  • Trending Desk
  • 4-MIN READ
  • Last Updated :
  • Bangalore [Bangalore], India
  • Share this:

ಮುಂಬೈ: ಕೆಲವೊಮ್ಮೆ ನಾವು ಬೇರೆ ಯಾವುದೋ ನಗರದಲ್ಲಿ ಇದ್ದು, ಇನ್ನ್ಯಾವುದೋ ನಗರದಲ್ಲಿ(City) ಇದ್ದೇವೆ ಅಂತ ಜೊಮ್ಯಾಟೊದಲ್ಲಿ(Zomato) ನಮ್ಮ ನೆಚ್ಚಿನ ಹೊಟೇಲ್(Hotel) ನಿಂದ ನೆಚ್ಚಿನ ಊಟವನ್ನು ಆರ್ಡರ್(Food Order) ಮಾಡಲು ಹೊರಟಿರುತ್ತೇವೆ. ಆ ಅಪ್ಲಿಕೇಷನ್ ಓಪನ್ ಮಾಡಿದಾಗಲೆ ನಮಗೆ ಅರ್ಥವಾಗುತ್ತೆ ನಾವು ಆ ಹೊಟೇಲ್ ಇರುವ ನಗರದಲ್ಲಿ ಇಲ್ಲ ಅಂತ. ಹೌದು..ಸ್ವಾದಿಷ್ಟ ರುಚಿ ನಮ್ಮನ್ನು ಅಷ್ಟೊಂದು ಮಂತ್ರಮುಗ್ದರನ್ನಾಗಿಸುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಇಲ್ಲೊಂದು ಘಟನೆ ನಡೆದಿದೆ ನೋಡಿ.. ಅದನ್ನು ನೋಡಿ ನೀವು ಒಂದು ಕ್ಷಣ ಆಶ್ಚರ್ಯ ಪಡುವುದಂತೂ ನಿಜ ಅಂತ ಹೇಳಬಹುದು.


ಕಳೆದ ವರ್ಷ ಆಹಾರ ವಿತರಣಾ ಸೇವೆ ಜೊಮ್ಯಾಟೊದಲ್ಲಿ ಬಿರಿಯಾನಿ ಜನರ ಅಚ್ಚುಮೆಚ್ಚಿನದಾಗಿದ್ದು, ದೇಶಾದ್ಯಂತ ನಿಮಿಷಕ್ಕೆ 186 ಆರ್ಡರ್ ಗಳನ್ನು ವಿತರಿಸಲಾಗಿದೆ.


ಮುಂಬೈನ ಮಹಿಳೆಯೊಬ್ಬರು ಶುಕ್ರವಾರ 2,500 ರೂಪಾಯಿ ಮೌಲ್ಯದ ಬಿರಿಯಾನಿಯನ್ನು ಆರ್ಡರ್ ಮಾಡಿದ್ದಾರೆ ನೋಡಿ. ಅಬ್ಬಾ..ಎಷ್ಟೊಂದು ಬಿರಿಯಾನಿ ಆರ್ಡರ್ ಮಾಡಿದ್ದಾರೆ ಅಂತ ನೀವು ಅಂದುಕೊಳ್ಳಬಹುದು. ಆದರೆ ಇಲ್ಲಿ ಇನ್ನೊಂದು ವಿಷಯ ಇದೆ ಆಶ್ಚರ್ಯ ಪಡಿಸುವಂತದ್ದು.


ಇದನ್ನೂ ಓದಿ: Viral Marriage: ತಾಳಿ ಕಟ್ಟುವ ಮುನ್ನವೇ ವಧು ರೂಮಿಗೆ ಬಂದಿದ್ದ ವರನಿಗೆ ಶಾಕ್! ಆ ಒಂದು ಕಾರಣಕ್ಕೆ ಮದುವೆಯೇ ಮುರಿದು ಬಿತ್ತು!


ಬೆಂಗಳೂರಿನಿಂದ ಬಿರಿಯಾನಿ ಆರ್ಡರ್ ಮಾಡಿದ ಮುಂಬೈ ಹುಡುಗಿ


ಆ ಹುಡುಗಿ ಮುಂಬೈ ನಲ್ಲಿದ್ದು, ಅವಳು ಆ ಬಿರಿಯಾನಿ ಆರ್ಡರ್ ಅನ್ನು ಬೆಂಗಳೂರಿನ ರೆಸ್ಟೋರೆಂಟ್ ನಿಂದ ಬೇಕೆಂದು ಮಾಡಿದ್ದಾಳೆ. ಆನಂತರ ಆ ಹುಡುಗಿ ಅದನ್ನು ನೋಡಿಕೊಂಡು "ನಾನು ಬೆಂಗಳೂರಿನಿಂದ 2500 ರೂಪಾಯಿಯ ಬಿರಿಯಾನಿಯನ್ನು ಆರ್ಡರ್ ಮಾಡಿದ್ದೆನಾ?" ಅಂತ ಅಚ್ಚರಿಯ ರೀತಿಯಲ್ಲಿ ಟ್ವಿಟರ್ ನಲ್ಲಿ ಪೋಸ್ಟ್ ಲಗತ್ತಿಸಿ ಕೇಳಿಕೊಂಡಿದ್ದಾಳೆ.


@subiii ಎಂಬ ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ಹೊಂದಿರುವ ಮಹಿಳೆ ತಾನು ಬಿರಿಯಾನಿಯನ್ನು ಆರ್ಡರ್ ಮಾಡಿದ ಪುಟದ ಸ್ಕ್ರೀನ್‌ಶಾಟ್ ಅನ್ನು ಟ್ವೀಟ್ ಮಾಡಿದ್ದಾರೆ ನೋಡಿ. ಸ್ವಲ್ಪ ಸಮಯದ ನಂತರ ಟ್ವೀಟ್ ಮತ್ತು ಆ ಖಾತೆಯನ್ನು ಅಳಿಸಲಾಯಿತು ಬಿಡಿ.
ಆ ಸ್ಕ್ರೀನ್‌ಶಾಟ್ ಪ್ರಕಾರ, ಬೆಂಗಳೂರಿನ ಮೇಘನಾ ಫುಡ್ಸ್ ನಿಂದ ಬಿರಿಯಾನಿಯನ್ನು ಆರ್ಡರ್ ಮಾಡಲಾಗಿದೆ, ಇದನ್ನು ಅನೇಕರು 'ಸೂಪರ್' ಅಂತ ಬರೆದು ಶ್ಲಾಘಿಸಿದ್ದಾರೆ.


ಶನಿವಾರ ಟ್ವೀಟ್ ಮಾಡಿದ ಅವರಿಗೆ, ಆ ಆರ್ಡರ್ ಅವರನ್ನು ಭಾನುವಾರದ ಹೋಗಿ ತಲುಪುತ್ತೆ ಎಂದು ಉಲ್ಲೇಖಿತವಾಗಿರುವುದನ್ನು ಕಾಣಬಹುದು.


ಜೊಮ್ಯಾಟೊ ಟ್ವಿಟ್ಟರ್ ತಂಡವು ತಮಾಷೆಪೂರ್ವಕವಾಗಿ "ಸುಬಿ ಅವರೇ ಆರ್ಡರ್ ನಿಮ್ಮ ಮನೆ ಬಾಗಿಲಿಗೆ ಬಂದ ನಂತರ ನಿಮಗೆ ಸಂತೋಷದ ಹ್ಯಾಂಗೋವರ್ ಇರುತ್ತದೆ. ನಿಮ್ಮ ಆ ಅನುಭವದ ಬಗ್ಗೆ ನಮಗೆ ತಿಳಿಸಿ" ಎಂದು ಬರೆದಿದ್ದಾರೆ.“ಬಿರಿಯಾನಿ ಹೇಗಿತ್ತು? ಬಿರಿಯಾನಿ, ಸಲಾನ್, ಸಲಾಡ್ ಮತ್ತು ಹಪ್ಪಳದ ಫೋಟೋಗಳೊಂದಿಗೆ ಆರ್ಡರ್ ಬಂದ ನಂತರ ಎಲ್ಲವನ್ನೂ ಬರೆದು ಕಳುಹಿಸಿ” ಎಂದು ಟ್ವೀಟ್ ಮಾಡಿದ್ದಾರೆ.


ಸುಬಿ ಅವರ ರೆಸ್ಟೋರೆಂಟ್ ಆಯ್ಕೆಯನ್ನು ಶ್ಲಾಘಿಸಿದ ನೆಟ್ಟಿಗರು


ಅನೇಕರು ಸುಬಿ ಅವರು ಮಾಡಿದ ರೆಸ್ಟೋರೆಂಟ್ ಆಯ್ಕೆಯನ್ನು ಶ್ಲಾಘಿಸಿದರು. "ಮೇಘನಾ ಫುಡ್ಸ್ ಅತ್ಯುತ್ತಮವಾಗಿದೆ" ಎಂದು ಒಬ್ಬ ವ್ಯಕ್ತಿ ಹೇಳಿದರು.


"ಮೇಘನಾ ಅವರ ಬಿರಿಯಾನಿಯನ್ನು ನಿಜವಾಗಿಯೂ ಮಿಸ್ ಮಾಡಿಕೊಳ್ಳುವ ವ್ಯಕ್ತಿಯಾಗಿ, ನಾನು ಈ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ" ಎಂದು ಮತ್ತೊಬ್ಬರು ಬರೆದಿದ್ದಾರೆ.


ಈ ಪೋಸ್ಟ್ 'ಅತ್ಯುತ್ತಮ' ಬಿರಿಯಾನಿಯೊಂದಿಗೆ ನಗರದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿತು, ಕೋಲ್ಕತಾ ಮತ್ತು ಹೈದರಾಬಾದ್ ನಲ್ಲಿ ಸಿಗುವ ಬಿರಿಯನಿಯ ಬಗ್ಗೆ ಸಹ ಅನೇಕರು ಹೇಳಿದರು.


ಏನದು ಜೊಮ್ಯಾಟೊ ಇಂಟರ್ಸಿಟಿ ಲೆಜೆಂಡ್ಸ್?


ಹೌದು.. ಇನ್ನೊಂದು ರಾಜ್ಯದಿಂದ ಈ ರೀತಿಯಾಗಿ ಹೇಗೆ ಆರ್ಡರ್ ಮಾಡಲಾಗಿದೆ ಎಂಬುದರ ಬಗ್ಗೆ ನೀವು ಅನೇಕರು ಗೊಂದಲಕ್ಕೊಳಗಾಗಿರುತ್ತೀರಿ ಅಲ್ಲವೇ?


ಜೊಮ್ಯಾಟೊ 'ಇಂಟರ್ಸಿಟಿ ಲೆಜೆಂಡ್ಸ್' ಸೇವೆಯನ್ನು ನೀಡುತ್ತದೆ, ಇದು ಗ್ರಾಹಕರಿಗೆ ಭಾರತದ ಪ್ರಮುಖ ನಗರಗಳಲ್ಲಿನ ಕೆಲವು ರೆಸ್ಟೋರೆಂಟ್ ಗಳಿಂದ ಆಯ್ದ ಆಹಾರವನ್ನು ಆರ್ಡರ್ ಮಾಡಲು ಅನುವು ಮಾಡಿಕೊಡುತ್ತದೆ.ಈ ಆದೇಶಗಳನ್ನು ತಲುಪಿಸಲು ಕೆಲವು ದಿನಗಳನ್ನು ತೆಗೆದುಕೊಳ್ಳುತ್ತದೆ ... ಆದ್ದರಿಂದ ಅದಕ್ಕೆ ಅನುಗುಣವಾಗಿ ಗ್ರಾಹಕರು ಆರ್ಡರ್ ಮಾಡುತ್ತಾರೆ.


ಜೊಮ್ಯಾಟೊ ಲೆಜೆಂಡ್ಸ್ ಎಂಬುದು ಜೊಮ್ಯಾಟೊದ ಹೊಸ ಕೊಡುಗೆಯಾಗಿದ್ದು, ಮೊಬೈಲ್ ಶೈತ್ಯೀಕರಣ ತಂತ್ರಜ್ಞಾನವನ್ನು ಬಳಸಿಕೊಂಡು ನಗರಗಳಾದ್ಯಂತದ ಪ್ರಸಿದ್ಧ ರೆಸ್ಟೋರೆಂಟ್ ಗಳಿಂದ ಭಾರತದ ಅತ್ಯಂತ ಅಪ್ರತಿಮ ಭಕ್ಷ್ಯಗಳ ವಿತರಣೆಯನ್ನು ಖಚಿತಪಡಿಸುತ್ತದೆ.

Published by:Latha CG
First published: