Viral Story: ಮಗುವಿಗೆ ಪ್ರೋಟೀನ್​ ಹೆಚ್ಚಾಗಲಿ ಅಂತ ಹುಳಗಳನ್ನು ತಿನ್ನಿಸಿದ ತಾಯಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪ್ರತಿದಿನ ಆಹಾರ ಮತ್ತು ಜೀವನಶೈಲಿಯ ಆದ್ಯತೆಗಳು ಪ್ರಪಂಚದಾದ್ಯಂತ ಬದಲಾಗುತ್ತಲೇ ಇವೆ. ಪ್ರಪಂಚದಲ್ಲಿ ಇತ್ತೀಚಿಗೆ ಸಸ್ಯಹಾರದ ಮೊರೆ ಹೋಗುವವರು ಹೆಚ್ಚಿದ್ದಾರೆ. ಆದರೆ ಇಲ್ಲೊಬ್ಬರು ಕೆನಡಿಯನ್‌ ತಾಯಿಯೊಬ್ಬರು ತನ್ನ ಮಗುವಿಗೆ ಪ್ರೋಟೀನ್‌ ಅಂಶವಿರುವ ಕೀಟವನ್ನು ಆಹಾರವಾಗಿ ನೀಡುತ್ತಿದ್ದಾರೆ.

ಮುಂದೆ ಓದಿ ...
  • Share this:

ಜಗತ್ತು ವಿಶಾಲವಾದಂತೆ, ಪ್ರತಿಯೊಬ್ಬರ ಆಹಾರ (Food) ಕ್ರಮವು ತನ್ನದೇ ಆದ ಹೊಸ ರೂಪವನ್ನು ಪಡೆಯುತ್ತಿದೆ. ಇಂದಿನ ಆಧುನಿಕ ಕಾಲದಲ್ಲಿ ಜಂಕ್‌ ಫುಡ್‌ಗಳು ಜಾಸ್ತಿ ಎನ್ನಬಹುದು. ಎಲ್ಲೆಲ್ಲೂ ಚಾಕಲೇಟ್‌ (Chocolate), ಚಿಪ್ಸ್‌, ಪಿಜ್ಜಾ, ಬರ್ಗರ್‌ ಹೀಗೆ ನಾನಾ ತರಹದ ಆಹಾರಗಳು ನಮ್ಮ ದೈನಂದಿನ ಜೀವನದಲ್ಲಿ ಬೆರೆತು ಹೋಗಿವೆ. ಮಕ್ಕಳ ಆಹಾರ ಕ್ರಮವೂ ಸಂಪೂರ್ಣವಾಗಿ ಜಂಕ್‌ ಫುಡ್‌ (Junk Food) ಮೇಲೆ ಆಧಾರವಾಗಿದೆ.


ಪ್ರತಿದಿನ ಆಹಾರ ಮತ್ತು ಜೀವನಶೈಲಿಯ ಆದ್ಯತೆಗಳು ಪ್ರಪಂಚದಾದ್ಯಂತ ಬದಲಾಗುತ್ತಲೇ ಇವೆ. ಪ್ರಪಂಚದಲ್ಲಿ ಇತ್ತೀಚಿಗೆ ಸಸ್ಯಹಾರದ ಮೊರೆ ಹೋಗುವವರು ಹೆಚ್ಚಿದ್ದಾರೆ. ಇದರಿಂದ ಪರಿಸರ ರಕ್ಷಣೆ ಕೂಡ ಆಗುತ್ತದೆ ಎಂಬ ಕಾಳಜಿಯೂ ಹಲವರಲ್ಲಿ ಇರುವುದಿಂದ ಮಾಂಸಾಹಾರ ತ್ಯಜಿಸಿ, ಸಸ್ಯಹಾರದ ಆಹಾರಗಳಿಗೆ ಬದಲಾಗುತ್ತಿದ್ದಾರೆ.


ಆಹಾರದಲ್ಲಿ ಪ್ರೋಟೀನ್‌ ಅಂಶ ಬಹಳ ಮುಖ್ಯ


ಸಸ್ಯಹಾರದಲ್ಲಿ ಇನು ಕೆಲವರು ಹೆಚ್ಚಿನ ಪ್ರೋಟೀನ್‌ ಅಂಶ ಸೇರಿಸಲು ವಿವಿಧ ರೀತಿಯ ಪ್ರೋಟೀನ್‌ ಮೂಲಗಳನ್ನು ಹುಡುಕುತ್ತಲೇ ಇರುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಆಹಾರ ಬರಹಗಾರರೊಬ್ಬರು ತಮ್ಮ ಮಗುವಿನ ಆಹಾರದಲ್ಲಿ ಪ್ರೋಟೀನ್‌ ಅಗತ್ಯವನ್ನು ಪೂರೈಸಲು ಕ್ರಿಕೆಟ್‌ಗಳು ಎಂಬ ಒಂದು ವಿಧದ ಕೀಟಗಳ ಆಹಾರವನ್ನು ನೀಡಲು ಆರಂಭಿಸಿದ್ದಾರೆ.


ಇದೇನಪ್ಪ ಈ ತಾಯಿ ತನ್ನ ಮಗುವಿಗೆ ಯಾವುದೋ ಕೀಟವನ್ನು ಆಹಾರವಾಗಿ ನೀಡುತ್ತಿದ್ದಾರೆ ಎಂದು ಆಶ್ಚರ್ಯಪಡಬೇಡಿ. ಕೆಲವು ದೇಶಗಳಲ್ಲಿ ಈ ಕೀಟಗಳನ್ನು ತಿನ್ನುತ್ತಾರೆ.


ಇದನ್ನೂ ಓದಿ: ವಿಮಾನದಲ್ಲೂ ಬಹಳ ಗಲೀಜು ಮಾಡ್ತಾರಂತೆ ಪ್ರಯಾಣಿಕರು, ಗಗನಸಖಿಯಿಂದ ರಹಸ್ಯ ಮಾಹಿತಿ ಬಹಿರಂಗ


ಏಕೆಂದರೆ ಕೆಲವು ಕೀಟಗಳಲ್ಲಿ ಪ್ರೋಟೀನ್‌ ಅಂಶ ಹೆಚ್ಚಾಗಿರುವುದರಿಂದ ಅವುಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂದು ಆಹಾರ ವಿಮರ್ಶಕರ ಅಭಿಪ್ರಾಯವಾಗಿದೆ. ಹಾಗಿದ್ರೆ ತಡ ಯಾಕೆ, ಕೆನಡಿಯನ್‌ ತಾಯಿಯೊಬ್ಬರು ತನ್ನ ಮಗುವಿಗೆ ಪ್ರೋಟೀನ್‌ ಅಂಶವಿರುವ ಕೀಟವನ್ನು ಆಹಾರವಾಗಿ ನೀಡುತ್ತಿರುವ ಕಥೆಯನ್ನು ನಾವಿಲ್ಲಿ ತಿಳಿಯೋಣ ಬನ್ನಿ.


ಪ್ರೋಟೀನ್ ಆಹಾರಗಳ ಬದಲಿಗೆ ಕೀಟಗಳು


ಪ್ರೋಟೀನ್‌ ಆಹಾರಕ್ಕೆ ಇಂದಿನ ಕಾಲದಲ್ಲಿ ಹೆಚ್ಚಿನ ವೆಚ್ಚ ತಗುಲುವುದು ಸಾಮಾನ್ಯ. ಆದ್ದರಿಂದ ಪ್ರೋಟೀನ್ ವೆಚ್ಚವನ್ನು ಕಡಿಮೆ ಮಾಡಲು ಕೆನಡಾದ ತಾಯಿಯೊಬ್ಬರು ತನ್ನ ಮಗುವಿಗೆ ಕೀಟಗಳ ಆಹಾರವನ್ನು ನೀಡಲು ಪ್ರಾರಂಭಿಸಿದ್ದಾರೆ.


ಈಗ ಹಿಂದೆಂದಿಗಿಂತಲೂ ಹೆಚ್ಚು ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ರೋಗನಿರೋಧಕ ಶಕ್ತಿಯ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿರುವುದು ಹೆಚ್ಚು ಸಾಮಾನ್ಯವಾಗಿದೆ. ಅದರಲ್ಲೂ ಈ ಕೋವಿಡ್‌ ಬಂದ ನಂತರ ಆರೋಗ್ಯದ ಕಾಳಜಿ ಹೆಚ್ಚು ಎನ್ನಬಹುದು.


ಸುಸ್ಥಿರ ಆರೋಗ್ಯಕ್ಕೆ ಸಸ್ಯಹಾರ ಉತ್ತಮ ಎಂದು ಬಹುತೇಕರು ಸಸ್ಯಹಾರ ತಿನ್ನುವುದನ್ನು ರೂಢಿಸಿಕೊಂಡಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ, ಟಿಫಾನಿ ಲೇಘ್​ ಎಂಬ ಕೆನಡಾದ ಫುಡ್​​ ಬ್ಲಾಗರ್ ಆಗಿರುವ ತಾಯಿಯೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಮಾಡಿದ ಪೋಸ್ಟ್‌ ಸಖತ್‌ ವೈರಲ್‌ ಆಗಿದೆ.


ಸಾಂಕೇತಿಕ ಚಿತ್ರ


ಕಾರಣವೇನು ಗೊತ್ತಾ?


“ಆಕೆಯು ತನ್ನ 18 ತಿಂಗಳ ಮಗಳಿಗೆ ಮಿಡತೆಗಳನ್ನು ತಿನ್ನಲು ನೀಡುತ್ತಿದ್ದೇನೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆಗಳು ನಮ್ಮನ್ನು ತತ್ತರಿಸಿವೆ” ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.


ಆಕೆಯು ತನ್ನ ಮಗುವಿನ ಆಹಾರಕ್ಕೆ ವಾರಕ್ಕೆ $ 250 ರಿಂದ $300 (ಸರಿಸುಮಾರು ರೂ. 25,000) ಸರಕುಗಳ ಮೇಲೆ ಖರ್ಚು ಮಾಡುವ ಕಾರಣ, ಅವಳು ಪ್ರೋಟೀನ್ ಪೂರಕಕ್ಕಾಗಿ ತಮ್ಮ ಮನೆಯ ತೋಟದಲ್ಲಿ ಸಿಗುವ ಪ್ರೋಟೀನ್‌ ಅಂಶವಿರುವ ಮಿಡತೆಗಳನ್ನು ತನ್ನ ಮಗುವಿಗೆ ನೀಡುತ್ತಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ.


ಕೆನಡಾದಲ್ಲಿ ಕೀಟಗಳನ್ನು ತಿನ್ನುವುದು ಬಹಳ ಸಾಮಾನ್ಯ. ಕೀಟಶಾಸ್ತ್ರದ ಪ್ರಕಾರ ಕೀಟಗಳನ್ನು ತಿನ್ನುವುದು ಆರೋಗ್ಯಕರ ಎಂದಿದ್ದಾರೆ ಆಹಾರ ಬರಹಗಾರ್ತಿ.


ಈ ಹಿಂದೆ ನಾನು ಚೇಳು, ಜೇಡ ಸೇರಿದಂತೆ ನಾನಾ ಬಗೆಯ ಕೀಟಗಳನ್ನು ತಿಂದಿದ್ದೆ. ಥೈಲ್ಯಾಂಡ್ ಮತ್ತು ವಿಯೆಟ್ನಾಂನಂತಹ ಸ್ಥಳಗಳಿಗೆ ಭೇಟಿ ನೀಡಿದಾಗ ಇರುವೆಗಳು ಮತ್ತು ಮಿಡತೆಗಳನ್ನು ತಿಂದಿದ್ದೆ ಎಂದು ಟಿಫಾನಿ ಹೇಳಿಕೊಂಡಿದ್ದಾಳೆ.


top videos



    ಟಿಫಾನಿ ಅವರ ಪ್ರಕಾರ, ಅವಳು ತನ್ನ ಶಿಶುವಿನ ಪ್ರೋಟೀನ್ ಪೌಡರ್ ಅಲ್ಲಿ ಮಿಡತೆಗಳ ಪಫ್‌ಗಳನ್ನು ಹಾಕಿ ತನ್ನ ಮಗುವಿಗೆ ನೀಡುತ್ತಾರೆ. ಗೋಮಾಂಸ, ಕೋಳಿ ಅಥವಾ ಹಂದಿಮಾಂಸಕ್ಕಿಂತ ಪ್ರೋಟೀನ್ ಮೂಲಕ್ಕೆ ಕೀಟಗಳನ್ನು ಬಳಸುವುದರಿಂದ ವಾರಕ್ಕೆ $100 ವರೆಗೆ ಉಳಿಸಬಹುದು ಎಂದು ತಮ್ಮ ಅಧ್ಯಯನದಲ್ಲಿ ಬರೆದುಕೊಂಡಿದ್ದಾರೆ.

    First published: