Viral Video :ಟ್ವಿಟರ್‌ನಲ್ಲಿ ವೈರಲ್ ಆದ ತಾಯಿ ಹಾಗೂ ಮರಿ ಕೋಲ ಬೀರ್‌ಗಳ ಮುದ್ದಾಟ

ಕೋಲ ಬೀರ್‌ಗಳು ಚಿಕ್ಕದಿರಲಿ, ದೊಡ್ಡದಿರಲಿ, ಮಲಗಿರಲಿ , ಎಚ್ಚರವಿರಲಿ ಹೇಗಿದ್ದರೂ ನೋಡಲು ಚೆಂದ. ಸಾಮಾಜಿಕ ಮಾಧ್ಯಮದಲ್ಲಿ ಕೋಲ ಬೀರ್‌ನ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವುದೇ ಅದಕ್ಕೆ ಸಾಕ್ಷಿ.

ಕೋಲಾ ಬೀರ್​

ಕೋಲಾ ಬೀರ್​

 • Share this:

  ಅಮ್ಮ ಕೋಲ ಬೀರ್ ಮತ್ತು ಮರಿ ಕೋಲ ಬೀರ್‌ನ ನಡುವಿನ ಪ್ರೀತಿಯನ್ನು ತೋರಿಸುವ ವಿಡಿಯೋವೊಂದು ಟ್ವಿಟರ್‌ನಲ್ಲಿ ನೆಟ್ಟಿಗರ ಮೆಚ್ಚುಗೆ ಪಡೆಯುತ್ತಿವೆ.  ಕೋಲ ಬೀರ್‌ಗಳು ನಿಜಕ್ಕೂ ಅತ್ಯಂತ ಮುದ್ದಾದ ಪ್ರಾಣಿಗಳು. ಅವುಗಳ ಹೊಳೆವ ಕಂಗಳು, ಮುಗ್ಧ ಮುಖ ಕಂಡು ಮನ ಸೋಲದವರಿಲ್ಲ. ಪೋಲಾರ್ ಕರಡಿ, ಸ್ಲಾತ್ ಕರಡಿ ಮಂತಾದ ಕರಡಿಗಳು ಗೊತ್ತು ಇದ್ಯಾವುದಪ್ಪಾ ಕೋಲ ಬೀರ್ ಅಂತೀರಾ? ಹೆಸರಿನ ಹಿಂದೆ ಬೀರ್ ಎಂದಿದ್ದರೂ, ಅದು ಕರಡಿಯಲ್ಲ! ಅದು ಅಸ್ಟ್ರೇಲಿಯಾದಲ್ಲಿ ಕಂಡು ಬರುವ ಒಂದು ಪ್ರಾಣಿ ಪ್ರಭೇದ. ಸಾಮಾನ್ಯವಾಗಿ ಮರದಲ್ಲಿ ವಾಸಿಸುವ ಇದು ಸಸ್ಯಹಾರಿ. ಅಳಿವಿನಂಚಿನಲ್ಲಿ ಇದ್ದ ಮುದ್ದಾದ ಪ್ರಾಣಿಯ ಸಂತತಿ, ಈಗ ಕೊಂಚ ಸುಧಾರಣೆ ಕಂಡಿದೆಯಂತೆ.


  ಕೋಲ ಬೀರ್‌ಗಳು ಚಿಕ್ಕದಿರಲಿ, ದೊಡ್ಡದಿರಲಿ, ಮಲಗಿರಲಿ , ಎಚ್ಚರವಿರಲಿ ಹೇಗಿದ್ದರೂ ನೋಡಲು ಚೆಂದ. ಸಾಮಾಜಿಕ ಮಾಧ್ಯಮದಲ್ಲಿ ಕೋಲ ಬೀರ್‌ನ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವುದೇ ಅದಕ್ಕೆ ಸಾಕ್ಷಿ. ಕೇವಲ ಎಂಟು ಸೆಕೆಂಡ್ ಅವಧಿಯ ಆ ವಿಡಿಯೋದಲ್ಲಿ , ಕೋಲ ಬೀರ್ ಒಂದು ಕಿಂಬಾ ಎಂಬ ಹೆಸರಿನ ತನ್ನ ಮರಿಯನ್ನು ಎದೆಗೆ ಅಪ್ಪಿಕೊಂಡು ಮರದಲ್ಲಿ ಕುಳಿತುಕೊಂಡಿರುವ ದೃಶ್ಯವಿದೆ. ಈ ವಿಡಿಯೋದಲ್ಲಿ , ಕೋಲ ತನ್ನ ಮರಿಯನ್ನು ಅಕ್ಕರೆಯಿಂದ ಅಪ್ಪಿಕೊಂಡಿರುವ ರೀತಿ , ಮತ್ತು ಮಲಗುವ ಮುನ್ನ ಅದು ಆಕಳಿಸುವ ಪರಿ ನೋಡುಗರ ಮನಸೆಳೆದಿದ್ದು, ಪ್ರತಿಯೊಬ್ಬರೂ ವಾಹ್ ವಾಹ್ ಎನ್ನುತ್ತಿದ್ದಾರೆ.


  ಮೂಲತಃ ಈ ವಿಡಿಯೋವನ್ನು ಆಸ್ಟ್ರೇಲಿಯಾದ ಪ್ರವಾಸೋದ್ಯಮ ಅಧಿಕೃತ ಟ್ವಿಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು. “ಕಳೆದ ಕೆಲವು ತಿಂಗಳುಗಳಿಂದ ಕೋಲ ಜೋಯಿ ಸೀಸನ್ ನಡೆಯುತ್ತಿದೆ # ಆಸ್ಟ್ರೇಲಿಯಾದಲ್ಲಿ. ಇದರಲ್ಲಿರುವ ವಿಡಿಯೋ @NewSouthWales ನಲ್ಲಿರುವ @WILDLIFESydnew ಪ್ರಾಣಿಸಂಗ್ರಹಾಲಯದ ಪ್ರಾಣಿ ಕಿಂಬಾ ಮತ್ತು ಅವಳ ಅಮ್ಮನದ್ದು” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. @Buitengebieden ಅದನ್ನು ಮರು ಟ್ವೀಟ್ ಮಾಡಿದ್ದಾರೆ. ಅವರು ಮಾಡಿದ ಮರು ಟ್ವೀಟ್‍ಗೆ 32,000 ಮೆಚ್ಚುಗೆಗಳು ಬಂದಿವೆ. 7,200 ಮರು ಟ್ವೀಟ್‍ಗಳಾಗಿವೆ. ಅಷ್ಟೇ ಅಲ್ಲ, “ಟ್ವಿಟರ್‌ಗೆ ಇದರ ಅಗತ್ಯವಿದೆ” ಎಂಬ ಅಡಿ ಬರಹವುಳ್ಳ ಈ ಪೋಸ್ಟ್‌ಗೆ ಲೆಕ್ಕವಿಲ್ಲದಷ್ಟು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಪ್ರೀತಿಯ ಮಹಾಪೂರವೇ ಹರಿದು ಬಂದಿದೆ.


  ಅಮ್ಮ ಕೋಲ ಮತ್ತು ಮರಿ ಕೋಲದ ನಡುವಿನ ಪ್ರೀತಿಯನ್ನು ತೋರಿಸುವ ವಿಡಿಯೋವನ್ನು ನೋಡಿ ಬಹಳಷ್ಟು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಕ್ರಿಯೆಗಳ ಸುರಿಮಳೆಯನ್ನು ಸುರಿಸಿದ್ದಾರೆ.


  “ಓಹ್ ಸ್ವೀಟಿ, ಇದು ಎದ್ದೇಳುವ ಸಮಯವಲ್ಲ. . . . . .ಇನ್ನೂ 18 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಮಲಗೋಣ” ಎಂದು ಒಬ್ಬರು ನೆಟ್ಟಿಗರು ಬರೆದರೆ, ಇನ್ನೊಬ್ಬರು “ಎಂಟು ಸೆಕೆಂಡಿನ ವಿಡಿಯೋ ನೋಡುವಾಗ ನಾನು ಶಾಂತನಾಗಿದ್ದೆ” ಎಂದು ಬರೆದುಕೊಂಡಿದ್ದಾರೆ.


  ಇದನ್ನೂ ಓದಿ: Bigg Boss 8 Kannada: ಕಿಚ್ಚ ಸುದೀಪ್ ಎಚ್ಚರಿಕೆ ಕೊಟ್ಟ ನಂತರವೂ ಹಳೇ ಚಾಳಿ ಮುಂದುವರೆಸಿದ ಚಕ್ರವರ್ತಿ ಚಂದ್ರಚೂಡ: ಸಿಟ್ಟಾದ ದಿವ್ಯಾ ಸುರೇಶ್​..!

  “ಜೂಮ್‍ನಲ್ಲಿ ಮಾತನಾಡದಿರುವಾಗ ಮ್ಯೂಟ್ ಮಾಡಿಕೊಳ್ಳಿ” ಎಂದು ಒಬ್ಬ ಬಳಕೆದಾರ ಬರೆದುಕೊಂಡಿದ್ದರೆ, ಇನ್ನೊಬ್ಬ ಬಳಕೆದಾರ “ನಾನಿದನ್ನು ಸ್ವಲ್ಪವಷ್ಟೇ ನೋಡಲು ಸಾಧ್ಯವಾಗಿದ್ದು, ನನಗಿನ್ನೂ ದೀರ್ಘ ಆವೃತ್ತಿಯ ಅಗತ್ಯವಿದೆ” ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು “ಓಹ್ ದೇವರೆ, ಎಷ್ಟು ಸುಂದರ” ಎಂದು ಬರೆದುಕೊಂಡಿದ್ದಾರೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: