Viral Video: ಮೊಸಳೆ ಜೊತೆ ಮೇಯರ್ ಮದುವೆ! ಅದ್ಧೂರಿ ಕಲ್ಯಾಣೋತ್ಸವಕ್ಕೆ ಸಾಕ್ಷಿಯಾದ ಜನ

ಕತ್ತೆ ಮದುವೆ, ನಾಯಿ ಮದುವೆ, ಕೋತಿ ಮದುವೆ, ಕೋಳಿ ಮದುವೆ, ಮರದ ಮದುವೆ ಬಗ್ಗೆ ಗೊತ್ತೇ ಇದೆ. ಇತ್ತೀಗಷ್ಟೇ ಯುವಕನೊಬ್ಬ ಮೇಕೆ ಜೊತೆ ಮದುವೆಯಾಗಿದ್ದ. ಇತ್ತ ಗುಜರಾತ್‌ನಲ್ಲಿ ಯುವತಿಯೊಬ್ಬಳು ತನ್ನನ್ನೇ ತಾನು ಮದುವೆಯಾಗಿ ಸುದ್ದಿಯಾಗಿದ್ದಳು. ಇದೀಗ ಇಲ್ಲಿ ಮೇಯರ್ ಒಬ್ಬರು ಮೊಸಳೆಯನ್ನು ಮದುವೆಯಾಗಿದ್ದಾರೆ!

ಮೊಸಳೆ ಜೊತೆ ಮೇಯರ್ ಮದುವೆ

ಮೊಸಳೆ ಜೊತೆ ಮೇಯರ್ ಮದುವೆ

  • Share this:
ಮೆಕ್ಸಿಕೋ: ಜಗತ್ತಿನಲ್ಲಿ ಎಂತೆಂಥಾ ವಿಚಿತ್ರ ಆಚರಣೆಗಳು (Strange Rituals), ಸಂಪ್ರದಾಯಗಳು (Traditions) ಇರುತ್ತವೆ. ಈ ಸಂಪ್ರದಾಯ, ಆಚರಣೆಯ ಹೆಸರಲ್ಲಿ ವಿಚಿತ್ರ, ವಿಶಿಷ್ಟ ಹಾಗೂ ವಿಶೇಷ ರೀತಿಯ ಮದುವೆಗಳು (Weddings) ನಡೆಯುತ್ತಲೇ ಇರುತ್ತವೆ. ಹಿಂದೆ ಕತ್ತೆ (Donkey) ಮದುವೆ, ನಾಯಿ (Dog) ಮದುವೆ, ಕೋತಿ (Monkey) ಮದುವೆ, ಕೋಳಿ ಮದುವೆ, ಮರದ (Tree) ಮದುವೆ ಆಗಿದ್ದರ ಬಗ್ಗೆ ನಮಗೆ ಗೊತ್ತೇ ಇದೆ. ಇತ್ತೀಗಷ್ಟೇ ಯುವಕನೊಬ್ಬ ಮೇಕೆ (Goat) ಜೊತೆ ಮದುವೆಯಾಗಿದ್ದ. ಇತ್ತ ಗುಜರಾತ್‌ನಲ್ಲಿ (Gujrat) ಯುವತಿಯೊಬ್ಬಳು ತನ್ನನ್ನೇ ತಾನು ಮದುವೆಯಾಗಿ ಸುದ್ದಿಯಾಗಿದ್ದಳು. ಇದೀಗ ಇಂಥದ್ದೇ ವಿಚಿತ್ರ ಮದುವೆಯೊಂದು ಮೆಕ್ಸಿಕೋದಲ್ಲಿ (Mexico) ನಡೆದಿದೆ. ಇಲ್ಲಿ ಮೇಯರ್ (Mayor) ಒಬ್ಬರು ಮೊಸಳೆಯನ್ನು (Crocodile) ಮದುವೆಯಾಗಿದ್ದಾರೆ. ಈ ವಿಶಿಷ್ಟ ಮದುವೆಯ ಫೋಟೋ (Photo), ವಿಡಿಯೋಗಳು (Video) ವೈರಲ್ (Viral) ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ಈ ಬಗ್ಗೆ ನೆಟ್ಟಿಗರು (Netizens) ಜಾಲಾಡುತ್ತಿದ್ದಾರೆ.

ಮೊಸಳೆ ಮದುವೆಯಾದ ಮೇಯರ್

ಮೆಕ್ಸಿಕೋದಲ್ಲಿ ವಿಚಿತ್ರ ರೀತಿಯ ಮದುವೆಯೊಂದು ನಡೆದಿದೆ. ಇಲ್ಲಿನ ಸ್ಯಾನ್ ಪೆಡ್ರೊ ಹುವಾಮೆಲುಲಾ ಪ್ರಾಂತ್ಯದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಎಂಬುವರು ಏಳು ವರ್ಷದ ಹೆಣ್ಣು ಮೊಸಳೆ ಅಲಿಗೇಟರ್ ಅನ್ನು ವಿವಾಹವಾಗಿದ್ದಾರೆ. ಆಚರಣೆಯು ಮೊಸಳೆಯನ್ನು ನವ ವಧುವಿನಂತೆ ಮದುವೆಯ ಬಿಳಿ ಡ್ರೆಸ್ ಮತ್ತು ಇತರ ವರ್ಣರಂಜಿತ ಉಡುಪುಗಳಲ್ಲಿ ಅಲಂಕಾರ ಮಾಡಲಾಗಿತ್ತು. ಆದರೆ ಇದು ಬಾಯಿ ತೆರೆು ಕಚ್ಚದಂತೆ ಅದರ ಬಾಯನ್ನು ಬಟ್ಟೆ ಹಾಗೂ ಇತರೇ ವಸ್ತುಗಳಿಂದ ಬಿಗಿಯಾಗಿ ಕಟ್ಟಲಾಗಿತ್ತು. ಈ ಹೆಣ್ಣು ಮೊಸಳೆಗೆ ಮುತ್ತಿಟ್ಟು ಮೇಯರ್ ಅವರು ಅದನ್ನು ಪತ್ನಿಯನ್ನಾಗಿ ಸ್ವೀಕರಿಸಿದ್ದಾರೆ.ಶತಮಾನಗಳಿಂದಲೂ ನಡೆದುಕೊಂಡು ಬಂದ ಆಚರಣೆ

ಅಂದಹಾಗೆ ಇದು ಆ ಪ್ರಾಂತ್ಯದಲ್ಲಿ ಶತ ಶತಮಾನಗಳಿಂದ ನಡೆದುಕೊಂಡು ಬಂದ ಆಚರಣೆಯಂತೆ. ಒಕ್ಸಾಕಾ ರಾಜ್ಯದ ಚೊಂಟಾಲ್ ಮತ್ತು ಹುವಾವ್ ಸ್ಥಳೀಯ ಸಮುದಾಯಗಳಲ್ಲಿ ಈ ಸಂಪ್ರದಾಯವು ಶತಮಾನಗಳ ಹಿಂದಿನ ಹಿಸ್ಪಾನಿಕ್ ಕಾಲದ ಪದ್ಧತಿ ನಡೆದುಕೊಂಡು ಬಂದಿದೆ. ಅದನ್ನೇ ಈಗ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಮುಂದುವರೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Goat Marriage: ಡೌರಿ ಕೊಟ್ಟು ಹೆಣ್ಣು ಮೇಕೆಯನ್ನು ಮದುವೆಯಾದ ಭೂಪ! ಕಾರಣ ಕೇಳಿದ್ರೆ ಬಿದ್ದೂ ಬಿದ್ದೂ ನಗ್ತೀರಿ

ಮಳೆಗಾಗಿ ಪ್ರಕೃತಿಯನ್ನು ಒಲಿಸಿಕೊಳ್ಳಲು ಮೊಸಳೆ ಮದುವೆ

ಅಂದಹಾಗೆ ಪ್ರಕೃತಿಯ ಅನುಗ್ರಹಕ್ಕಾಗಿ ಇದು ಪ್ರಾರ್ಥನೆಯ ಪದ್ಧತಿಯಾಗಿದೆ. ಅವರ ಪ್ರಕಾರ ಮೊಸಳೆಯು ಭೂಮಿ ತಾಯಿ ಪ್ರತಿನಿಧಿಸುವ ದೇವತೆ ಎಂದು ನಂಬಲಾಗಿದೆ ಮತ್ತು ಮೇಯರ್‌ನೊಂದಿಗಿನ ಅವಳ ವಿವಾಹವು ಮಾನವರು ದೈವಿಕವಾಗಿ ಸೇರುವುದನ್ನು ಸಂಕೇತಿಸುತ್ತದೆಯಂತೆ.

ವಧುವಿನಂತೆ ಹೆಣ್ಣು ಮೊಸಳೆ ಮರಿಗೆ ಅಲಂಕಾರ

ಹೆಣ್ಣು ಮೊಸಳೆಗೆ ಮದುವೆಗೂ ಒಂದು ದಿನ ಮೊದಲು ದೀಕ್ಷಾಸ್ನಾನ ಮಾಡಿಸಲಾಯಿತು. ತರುವಾಯ, ಮರುದಿನ ಅದನ್ನು ನವ ವಧುವಿನಂತೆ ಅಲಂಕರಿಸಲಾಯಿತು. ಮದುವೆಯ ಬಿಳಿ ಡ್ರೆಸ್ ಮತ್ತು ಇತರ ವರ್ಣರಂಜಿತ ಉಡುಪುಗಳಲ್ಲಿ ಅಲಂಕಾರ ಮಾಡಲಾಗಿತ್ತು. ಬಳಿಕ ತಲೆಗೆ ಹೂವಿನ ಕೀರಿಟ ಇಟ್ಟು ಸಿಂಗರಿಸಲಾಯ್ತು. ಬಳಿಕ ಜನರು ಹಾಡುವ ಮತ್ತು ನೃತ್ಯ ಮಾಡುವ ಮತ್ತು ಸಾಂಪ್ರದಾಯಿಕ ಹಾಡುಗಳನ್ನು ನುಡಿಸುವ ಮೂಲಕ ಸಂಭ್ರಮದಿಂದ ಪಟ್ಟಣದಲ್ಲಿ  ಮೆರವಣಿಗೆ ಮಾಡಲಾಯಿತು..

ಇದನ್ನೂ ಓದಿ: Beard Boys: ಗಡ್ಡ ಬಿಟ್ಟ ಗಂಡಸಿಗೆ ಡಿಮ್ಯಾಂಡಿಲ್ಲ ಡಿಮ್ಯಾಂಡು! ಇಲ್ಲಿ ಗಡ್ಡಪ್ಪಂದಿರ ಮದ್ವೆಗೆ ಹೆಣ್ಣೇ ಕೊಡೋದಿಲ್ಲ!

ಅದ್ಧೂರಿ ಮದುವೆಗೆ ಸಾಕ್ಷಿಯಾದ ಜನ

ಈ ವಿಶಿಷ್ಟ ಮದುವೆಯನ್ನು ಬಹಳ ಸಂಭ್ರಮ ಹಾಗೂ ಅದ್ಧೂರಿಯಾಗಿ ನೆರವೇರಿಸಲಾಯಿತು. ಹಬ್ಬದ ರೀತಿಯಲ್ಲಿ ಕಹಳೆ ಮತ್ತು ಡೋಲು ಮೊಳಗುತ್ತಿದ್ದಂತೆ ಸ್ಥಳೀಯರು ವಧುವನ್ನು ತಮ್ಮ ತೋಳುಗಳಲ್ಲಿ ಹೊತ್ತು ಮದುವೆ ಮಂಟಪಕ್ಕೆ ತಂದಿದ್ದಾರೆ. ಬಳಿಕ ಮೇಯರ್ ಅದನ್ನು ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದಾರೆ. ಇದೀಗ ಈ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
Published by:Annappa Achari
First published: