• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Viral Love Story: ಹುಡುಗಿ ಹಾರ್ಟಲ್ಲಿ ಬಲಗಾಲಿಡಲು ಹುಡುಗನ ಶತಪ್ರಯತ್ನ! ಯುವ ಪ್ರೇಮಿಯ ಪ್ರಯತ್ನಕ್ಕೆ ನೆಟ್ಟಿಗರ ಮೆಚ್ಚುಗೆ

Viral Love Story: ಹುಡುಗಿ ಹಾರ್ಟಲ್ಲಿ ಬಲಗಾಲಿಡಲು ಹುಡುಗನ ಶತಪ್ರಯತ್ನ! ಯುವ ಪ್ರೇಮಿಯ ಪ್ರಯತ್ನಕ್ಕೆ ನೆಟ್ಟಿಗರ ಮೆಚ್ಚುಗೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ತಾನು ಇಷ್ಟಪಟ್ಟ ಹುಡುಗಿಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಯಾವುದೇ ಹುಡುಗನಿಗೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಹುಡುಗಿಯರು ಕೂಡ ತಮ್ಮ ಮನಸ್ಸಿಗೆ ಇಷ್ಟಪಟ್ಟವರು ಹೇಗಿರುತ್ತಾರೆ ಅವರ ಬಗ್ಗೆ ತಿಳಿದುಕೊಳ್ಳುವ ಹುರುಪಿನಲ್ಲಿರುತ್ತಾರೆ. ಆದರೆ ಇಲ್ಲೊಬ್ಬ ಟ್ವಿಟರ್​ನಲ್ಲಿ ಹುಡುಗಿಯ ಮನಸ್ಸನ್ನು ಗೆಲ್ಲು ಮಾಡಿದ ಮೆಸೇಜ್ ನೋಡಿದ್ರೆ ನಿಮ್ಗೇ ಅಚ್ಚರಿಯಾಗುತ್ತೆ. ಇದನ್ನು ಆಕೆಯೂ ತನ್ನ ಅಕೌಂಟ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ನೆಟ್ಟಿಗರು ಸಹ ಅವನನ್ನು ಶ್ಲಾಘಿಸಿದ್ದಾರೆ.

ಮುಂದೆ ಓದಿ ...
 • Share this:

ಇಂದಿನ ದಿನಗಳಲ್ಲಿ ಹುಡುಗರು ಹುಡುಗಿಯರನ್ನು (Boys and Girls) ಪಟಾಯಿಸಲು ಸಾಕಷ್ಟು ಗಿಮಿಕ್‌ಗಳನ್ನು ನಡೆಸುತ್ತಿರುತ್ತಾರೆ. ಅಂತೆಯೇ ಸಾಮಾಜಿಕ ತಾಣಗಳನ್ನು (Social Media) ಬಳಸಿಕೊಂಡು ಹುಡುಗಿಯರ ಮನಮೆಚ್ಚಿಸುವ ಟ್ರಿಕ್​ಗಳನ್ನು ಹುಡುಕುತ್ತಿರುತ್ತಾರೆ. ಒಮ್ಮೊಮ್ಮೆ ಈ ಟೀಕೆಗಳು ಪ್ರಶಂಸನೀಯವಾಗಿದ್ದರೆ ಮತ್ತೆ ಕೆಲವೊಮ್ಮೆ ಹೇಸಿಗೆ ಹುಟ್ಟಿಸುವಂತೆ ಕೂಡ ಇರುತ್ತದೆ. ಫ್ಲರ್ಟಿಂಗ್ ಮಾಡುವ ಭರದಲ್ಲಿ ಒಮ್ಮೊಮ್ಮೆ ಮಾತುಗಳು ಅತಿರೇಕಕ್ಕೆ ಹೋಗುವುದೂ ಇದ್ದೇ ಇದೆ. ಸೋಶಿಯಲ್​ ಮೀಡಿಯಾಗಳು ಇತ್ತೀಚಿನ ಯುವಕರಿಗೆ ಒಂದು ಮನರಂಜನಾ (Entertainment Media) ಮಾಧ್ಯಮವಾಗಿಬಿಟ್ಟಿದೆ. ಈ ಮೂಲಕ ಜನರನ್ನು ನಗಿಸಲು ಏನಾದರೊಂದು ಮಾಡುತ್ತಿರುತ್ತಾರೆ.


ಏಕೆಂದರೆ ಇಂದಿನ ದಿನಗಳಲ್ಲಿ ಆನ್‌ಲೈನ್‌ಗಳನ್ನು ಹೆಚ್ಚಿನ ಯುವಕರು ಯುವತಿಯರು ದುರ್ಬಳಕೆ ಮಾಡುತ್ತಿರುವುದು ಹೆಚ್ಚಾಗಿದೆ. ಪ್ರೀತಿಗಿಂತ ಹೆಚ್ಚು ಅಲ್ಲಿ ಕಾಮವೇ ಮುನ್ನಲೆಯಲ್ಲಿರುತ್ತದೆ. ಈ ದೃಷ್ಟಿಯಲ್ಲಿ ಅವರು ಒಬ್ಬರಿಗೊಬ್ಬರು ಮಾಡಿಕೊಳ್ಳುವ ಕಾಮೆಂಟ್‌ಗಳು ಕೂಡ ಅಸಹ್ಯವಾಗಿರುತ್ತವೆ.


ಇಷ್ಟಪಟ್ಟ ಮೇಲೆ ಒಬ್ಬರನ್ನೊಬ್ಬರು ತಿಳಿದುಕೊಳ್ಳುವ ತವಕ


ತಾನು ಇಷ್ಟಪಟ್ಟ ಹುಡುಗಿಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಯಾವುದೇ ಹುಡುಗನಿಗೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಹುಡುಗಿಯರು ಕೂಡ ತಮ್ಮ ಮನಸ್ಸಿಗೆ ಇಷ್ಟಪಟ್ಟವರು ಹೇಗಿರುತ್ತಾರೆ ಅವರ ಬಗ್ಗೆ ತಿಳಿದುಕೊಳ್ಳುವ ಹುರುಪಿನಲ್ಲಿರುತ್ತಾರೆ. ಹೀಗೆ ತಮ್ಮ ತಮ್ಮ ಮನಮೆಚ್ಚಿದವರ ಬಗ್ಗೆ ತಿಳಿದುಕೊಳ್ಳುವ ತವಕವಿರುವ ಯುವಕ ಯುವತಿಯರು ಬೇರೆ ಬೇರೆ ರೀತಿಯಲ್ಲಿ ಸಂದೇಶಗಳನ್ನು ಕಳುಹಿಸುವ ಮೂಲಕ ಪರಸ್ಪರರ ಮನಗೆಲ್ಲಲು ನೋಡುತ್ತಾರೆ.


ಇದನ್ನೂ ಓದಿ: ನಾಯಿಗೆ ಮರುಜನ್ಮ ನೀಡಿದ ChatGPT! ಇಡೀ ವೈದ್ಯಲೋಕವನ್ನೇ ಅಚ್ಚರಿಗೊಳಿಸಿದ ಟೆಕ್ನಾಲಜಿ


ಮನದ ಭಾವನೆಯನ್ನು ಸುಂದರವಾಗಿ ವ್ಯಕ್ತಪಡಿಸಿದ ಪ್ರೇಮಿ


ಇದೇ ರೀತಿ ಟ್ವಿಟರ್‌ನಲ್ಲಿ ತನಗೆ ಬಂದಿರುವ ಸಂದೇಶವೊಂದನ್ನು ಹಂಚಿಕೊಂಡಿರುವ ವೈಷ್ಣವಿ ಎಂಬಾಕೆ ತನ್ನ ಬಗ್ಗೆ ತಿಳಿಯಲು ಅಪರಿಚಿತ ವ್ಯಕ್ತಿಯೊಬ್ಬ ಮಾಡಿದ ಅತ್ಯಂತ ಸುಂದರವಾದ ಕಾಮೆಂಟ್ ಒಂದನ್ನು ಹಂಚಿಕೊಂಡಿದ್ದಾರೆ. ಕಾವ್ಯಾತ್ಮಕವಾಗಿ ಹಾಗೂ ವಿಭಿನ್ನ ರೀತಿಯಲ್ಲಿ ಆತ ವೈಷ್ಣವಿಯವರ ಗಮನ ಸೆಳೆಯಲು ಪ್ರಯತ್ನಿಸಿದ್ದು ಇದು ನಿಜಕ್ಕೂ ವಿಶೇಷವಾದುದು ಎಂದು ವೈಷ್ಣವಿಯವರೇ ಸ್ವತಃ ಅವರಿಬ್ಬರ ನಡುವಿನ ಕಾಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ.


ಟ್ವಿಟರ್​ನಲ್ಲಿ ಬಂದ ಮೆಸೇಜ್​


ಪ್ರೀತಿ ಪೂರ್ವಕವಾಗಿ ತನ್ನ ಮನಗೆಲ್ಲಲು ಬಂದ ಅಪರಿಚಿತನ ಸಂದೇಶವನ್ನು ಹಂಚಿಕೊಂಡಿರುವ ವೈಷ್ಣವಿಯವರು ಆತನ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.


ಬಳಕೆದಾರರು ಇಷ್ಟಪಟ್ಟ ಕಾಮೆಂಟ್ ಆದರೂ ಏನು?


ಆತ ವೈಷ್ಣವಿಗೆ ಕಳುಹಿಸಿರುವ ಸಂದೇಶವನ್ನು ವೈಷ್ಣವಿಯವರು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿಕೊಂಡಿದ್ದು ಬಳಕೆದಾರರು ಆತನ ಬುದ್ಧಿವಂತಿಕೆಯನ್ನು ಹೊಗಳಿದ್ದಾರೆ. ಆತ ವೈಷ್ಣವಿಗೆ ಮಾಡಿದ ಸಂದೇಶದಲ್ಲಿ ನಿಮ್ಮ ಫೋಟೋಗಳನ್ನು ಬೇರೊಂದು ಖಾತೆ ಬಳಸಿಕೊಳ್ಳುತ್ತಿದೆ ಎಂಬುದಾಗಿ ಕಳುಹಿಸಿದ್ದಾನೆ.ಹೀಗೂ ಹುಡುಗಿಯರ ಮನ ಗೆಲ್ಲಬಹುದು


ಇದರಿಂದ ಕೊಂಚ ವಿಚಲಿತರಾದ ವೈಷ್ಣವಿ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಆತ ನಿಮ್ಮ ಫೋಟೋಗಳನ್ನು ನಾಸಾ ಬಳಸಿಕೊಳ್ಳುತ್ತಿದೆ ಎಂಬುದಾಗಿ ತಿಳಿಸಿದ್ದು ನೀವು ಈ ಭೂಮಿಯವರಲ್ಲ ಬೇರೆ ಲೋಕದವರು ಎಂದು ತಿಳಿಸುತ್ತಾ, ನಾಸಾದ ಖಾತೆಯು ಹಂಚಿಕೊಂಡಿರುವ ಕೆಲವೊಂದು ಅಪರೂಪದ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡು ವೈಷ್ಣವಿಯರನ್ನು ಇಂಪ್ರೆಸ್ ಮಾಡಲು ನೋಡಿದ್ದಾನೆ.


ಈ ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ವೈಷ್ಣವಿ ಆ ವ್ಯಕ್ತಿಯ ಕಾವ್ಯಾತ್ಮಕ ಶೈಲಿಗೆ ಮನಸೋತಿದ್ದಾರೆ. ಅಂತೂ ಇಂತು ನನ್ನನ್ನು ಆತ ವಿಚಲಿತಗೊಳಿಸಿದ್ದಾನೆ ಎಂದು ವೈಷ್ಣವಿ ಬರೆದುಕೊಂಡಿದ್ದಾರೆ ಹಾಗೂ ಆತನ ಕಾಮೆಂಟ್‌ಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.


ಬಳಕೆದಾರರ ಮನಗೆದ್ದ ಕಾಮೆಂಟ್‌ಗಳು


ಈತನ ಸಂದೇಶಗಳು ವೈಷ್ಣವಿಯವರನ್ನು ಮಾತ್ರವಲ್ಲದೆ ಟ್ವಿಟರ್‌ನ ಇನ್ನಿತರ ಬಳಕೆದಾರರ ಮನಗೆಲ್ಲುವಲ್ಲಿ ಕೂಡ ಯಶಸ್ವಿಯಾಗಿದೆ. ಅಂತೆಯೇ ತುಂಬಾ ಸುಂದರವಾಗಿ ಹುಡುಗಿಯನ್ನು ಪಟಾಯಿಸಲು ನೋಡಿದ್ದಾನೆ ಎಂಬರ್ಥದಲ್ಲಿ ಬಳಕೆದಾರರು ಆತನ ಬೆನ್ನು ತಟ್ಟಿದ್ದಾರೆ.


ಈತ ಎಲ್ಲಿ ಸಿಗುತ್ತಾನೆ ಎಂದು ನೇರವಾಗಿ ಕೇಳಿರುವ ಬಳಕೆದಾರರು


ವೈಷ್ಣವಿ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ಗೆ ಕೆಲವರು ತಮಾಷೆಯ ಎಮೋಜಿ ಕಳುಹಿಸಿ ಇದು ತುಂಬಾನೇ ಚೆನ್ನಾಗಿದೆ ಎಂದು ಉತ್ತರಿಸಿದ್ದು, ಇನ್ನು ಕೆಲವರು ಅಪರೂಪದಲ್ಲಿ ಅಪರೂಪ ಎಂದು ಹೊಗಳಿದ್ದಾರೆ.


top videos  ಆತ ನಿಜಕ್ಕೂ ಲೆಜೆಂಡ್ ಎಂದು ಇನ್ನು ಕೆಲವರು ಕಾಮೆಂಟ್ ಮಾಡಿದ್ದರೆ, ಇನ್ನು ಕೆಲವರು ಹುಡುಗಿಯರೊಂದಿಗೆ ಹೇಗೆ ವ್ಯವಹರಿಸಬೇಕೆಂಬ ಜ್ಞಾನ ಹೊಂದಿದ್ದಾನೆ. ಅಂತೆಯೇ ಚಿತ್ರವಿಚಿತ್ರವಾಗಿ ಕಾಮೆಂಟ್ ಮಾಡುವ ಬದಲು ವಿಧೇಯತೆಯಿಂದ ಒಬ್ಬ ಹುಡುಗಿಯನ್ನು ಮೆಚ್ಚಿಸಿದ್ದಾನೆ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ಇಂತಹವರನ್ನು ನನಗೆ ಸಿಗಬಹುದೇ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ ಪ್ರಶ್ನಿಸಿದ್ದಾರೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು