Painful Punishment: ವಿವಾಹಿತ ಮುಸ್ಲಿಂ ಮಹಿಳೆಗೆ ಪರ ಪುರುಷನೊಂದಿಗೆ ಸಂಬಂಧ.. ಜನರ ಸಮ್ಮುಖದಲ್ಲೇ ಸಿಕ್ತು ಘನಘೋರ ಶಿಕ್ಷೆ!

Painful Punishment: ಇಲ್ಲೊಂದು ಮುಸ್ಲಿಂ ದೇಶದಲ್ಲಿ ವಿವಾಹಿತ ಮಹಿಳೆಗೆ ನೀಡಿದ ಶಿಕ್ಷೆ ಮಾತ್ರ ಘನಘೋರವಾಗಿದೆ. ಆಕೆಯ ಶಿಕ್ಷೆ ಅನುಭವಿಸುತ್ತಲೇ ಪ್ರಜ್ಞೆತಪ್ಪಿದ್ದಾಳೆ. 

ಶಿಕ್ಷೆ ಅನುಭವಿಸುತ್ತಿರುವ ಮಹಿಳೆ

ಶಿಕ್ಷೆ ಅನುಭವಿಸುತ್ತಿರುವ ಮಹಿಳೆ

  • Share this:
    ಮುಸ್ಲಿಂ ರಾಷ್ಟ್ರಗಳು (muslim countries) ತಮ್ಮದೇ ಆದ ನೀತಿ, ನಿಯಮವನ್ನು ಪಾಲಿಸುತ್ತಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ಕೊಡುತ್ತದೆ. ಮಹಿಳೆಯರಾಗಲಿ ಪುರುಷರಾಗಲಿ ತಪ್ಪಿತಸ್ಥನಿಗೆ ಶಿಕ್ಷೆ ಕಟ್ಟಿಟ್ಟಬುತ್ತಿ. ಹಾಗಾಗಿ ಅಲ್ಲಿನ ವಾಸಿಗಳು ತ ತಪ್ಪಿತಸ್ಥರಿಗೆ ನೀಡುವ ಶಿಕ್ಷೆಯನ್ನು ಕಂಡು ಜೀವನದಲ್ಲಿ ಯಾವುದೇ ತಪ್ಪು ಮಾಡದೆ ಇರಲು ಬಯಸುತ್ತಾರೆ. ಆದರೆ ತಪ್ಪು ಆಗದ ಜಾಗವಿಲ್ಲ. ಮನುಷ್ಯನಾದವನು ತಪ್ಪು ಮಾಡೇ ಮಾಡುತ್ತಾನೆ. ಅದರಂತೆ ಶಿಕ್ಷೆ ಕೂಡ ಅನುಭವಿಸುತ್ತಾನೆ. ಆದರೆ ಇಲ್ಲೊಂದು ಮುಸ್ಲಿಂ ದೇಶದಲ್ಲಿ ವಿವಾಹಿತ ಮಹಿಳೆಗೆ ನೀಡಿದ ಶಿಕ್ಷೆ ಮಾತ್ರ ಘನಘೋರವಾಗಿದೆ. ಆಕೆಯ ಶಿಕ್ಷೆ ಅನುಭವಿಸುತ್ತಲೇ ಪ್ರಜ್ಞೆತಪ್ಪಿದ್ದಾಳೆ. 

    ಇಂಡೋನೇಷ್ಯಾದಲ್ಲಿ (indonesia) ಈ ಘಟನೆ ನಡೆದಿದ್ದು, ವಿವಾಹಿತ ಮುಸ್ಲಿಂ ಮಹಿಳೆ ಪರಪುರುಷನೊಂದಿಗೆ ಸಂಬಂಧದಲ್ಲಿದ್ದಳು. ಆದರೆ ಈ ವಿಚಾರ ಗೊತ್ತಾಗುತ್ತಿದ್ದಂತೆ ಆ ದೇಶ ಆಕೆಗೆ ಭೀಕರ ಶಿಕ್ಷೆ ವಿಧಿಸಿದೆ. ಜನರ ಸಮ್ಮುಖದಲ್ಲೇ ಚಾಟೀ ಏಟು ನೀಡಲಾಗಿದೆ. ನೋವಿನಿಂದ ಅಚರುತ್ತಿದ್ದ ಮಹಿಳೆಗೆ ಚಾಟಿ ಏಟು ತಿನ್ನುತ್ತಿದ್ದಂತೆಯೇ ಮೂರ್ಛೆ ಹೋಗಿದ್ದಾಳೆ. ಶಿಕ್ಷೆಯ ಅವಧಿ ಮುಗಿಯುವವರೆಗೂ ಆಕೆ ಚಾಟಿಯೇಟು ತಿಂದಿದ್ದಾಳೆ. ಪರಿಣಾಮ ಆಕೆಯ ಜೀವ ಹಾರಿ ಹೋಗಿದೆ.‘

    ಷರಿಯಾ ಕಾನೂನಿನ ಅಡಿಯಲ್ಲಿ ಶಿಕ್ಷೆ

    ಇಂಡೋನೇಷ್ಯಾದ ಬಂದಾ ಆಚೆ ನಗರದ ವಿವಾಹಿತ ಮಹಿಳೆ ಇನ್ನೊಬ್ಬ ಪುರುಷನೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದಕ್ಕಾಗಿ ಮಹಿಳೆಗೆ ಕ್ರೂರವಾಗಿ ಶಿಕ್ಷೆ ವಿಧಿಸಲಾಗಿದೆ. ಮಹಿಳೆಯ ಜೊತೆಗೆ ಪರಪುರುಷನಿಗೂ ಥಳಿಸಲಾಗಿದೆ. ಷರಿಯಾ ಕಾನೂನಿನಡಿಯಲ್ಲಿ ನೀಡಲಾದ ಈ ಶಿಕ್ಷೆಯನ್ನು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನೀಡಲಾಗಿದೆ.

    ಒಂದರ ಹಿಂದೆ ಒಂದರಂತೆ ಚಾಟಿ ಏಟು!

    ಮಹಿಳೆ ಬಿಳಿ ಇಸ್ಲಾಮಿಕ್ ಉಡುಪು ಧರಿಸಿದ್ದಳು. ಇದಾದ ಬಳಿಕ ಆಕೆಯನ್ನು ನೆಲದ ಮೇಲೆ ಕೂರುವಂತೆ ಹೇಳಿದಾಗ ಮತ್ತೊಬ್ಬ ಮಹಿಳೆ ಆಕೆಯ ಮೇಲೆ ಒಂದರ ಹಿಂದೆ ಒಂದರಂತೆ 17 ಚಾಟಿಯೇಟು ಬಾರಿಸಿದ್ದಾಳೆ. ಈ ಸಂದರ್ಭದಲ್ಲಿ, ತಪ್ಪಿತಸ್ಥ ಮಹಿಳೆ ಕಿರುಚಾಡುತ್ತಲೇ ಇದ್ದಳು, ಆದರೆ ಯಾರೂ ಅವಳ ಸಹಾಯಕ್ಕೆ ಬರಲಿಲ್ಲ. ನೋವಿನಿಂದಾಗಿ ಮಹಿಳೆ ಕೆಲಕಾಲ ಪ್ರಜ್ಞೆ ತಪ್ಪಿ ಬಿದ್ದಿದ್ದಳು.

    ಇದನ್ನು ಓದಿ:Women give birth till 65: ವಯಸ್ಸು 65 ಆದ್ರೂ ಆರಾಮಾಗಿ ಮಕ್ಕಳನ್ನು ಹೆರುತ್ತಾರೆ..ಯಾರಿವರು?

    ತಪ್ಪಿತಸ್ಥರಿಗೆ ಶಿಕ್ಷೆ ಆಗೋದು ಪಕ್ಕಾ!

    ಇಂಡೋನೇಷಿಯಾದ ಪ್ರಾಂತ್ಯ ಅಚೆ ಷರಿಯಾ ಕಾನೂನನ್ನು ಅನುಸರಿಸುತ್ತಾ ಬಂದಿದೆ. ಈ ಕಾನೂನಿನಲ್ಲಿ, ಪುರುಷೇತರ ಮತ್ತು ಸಲಿಂಗಕಾಮಿಯೊಂದಿಗೆ ಲೈಂಗಿಕತೆ ಹೊಂದಿದ್ದಕ್ಕಾಗಿ ಕ್ರೂರ ಶಿಕ್ಷೆಯ ವಿಧಿಸುವ ಅವಕಾಶವಿದೆ. ಸಲಿಂಗಕಾಮದಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ 150 ಮಂದಿಯಿಂದ ಸಾರ್ವಜನಿಕವಾಗಿ ಥಳಿಸಲಾಗುತ್ತದೆ. ಶಿಕ್ಷೆ ಪೂರ್ಣಗೊಳ್ಳುವ ಮೊದಲೇ ತಪ್ಪಿತಸ್ಥ ಆಸ್ಪತ್ರೆ ಅಥವಾ ಸಾವನ್ನಪ್ಪುತ್ತಾನೆ. 2018 ರಲ್ಲಿ, ಸ್ಥಳಿಯ ಸರ್ಕಾರವು ಶಿಕ್ಷೆಯ ಈ ಶಿಕ್ಷೆಯನ್ನು ಸಾರ್ವಜನಿಕವಾಗಿ ಕೊನೆಗೊಳಿಸುವುದಾಗಿ ಹೇಳಿತ್ತು, ಆದರೆ ಇಲ್ಲಿಯವರೆಗೆ ಕಾರ್ಯಕ್ಕೆ ಮುಂದಾಗಿಲ್ಲ.

    ಇದನ್ನು ಓದಿ: Phone Blast: ಪ್ಯಾಂಟ್‌ ಜೇಬಿನಲ್ಲಿ ಸ್ಫೋಟಗೊಂಡ OnePlus Nord 2..! ಪರಿಹಾರ ಒದಗಿಸಲು ಮುಂದಾದ ಕಂಪನಿ

    ಸಾವನ್ನಪ್ಪಿದ ತಪ್ಪಿತಸ್ಥ

    ಈ ವರ್ಷದ ಜೂನ್‌ನಲ್ಲಿ ಒಬ್ಬ ವ್ಯಕ್ತಿ ಕೂಡ ಕ್ರೂರ ಶಿಕ್ಷೆಯನ್ನು ಎದುರಿಸಬೇಕಾಯಿತು. ಅವರು ವಿವಾಹಪೂರ್ವ ಲೈಂಗಿಕತೆಯ ಆರೋಪವನ್ನು ಹೊಂದಿದ್ದರು, ಇದನ್ನು ಷರಿಯಾ ಕಾನೂನಿನಲ್ಲಿ ಅಪರಾಧ ಎಂದು ಕರೆಯಲಾಗುತ್ತದೆ. ವ್ಯಕ್ತಿಗೆ ಸಾರ್ವಜನಿಕವಾಗಿ 100 ಚಾಟಿ ಶಿಕ್ಷೆ ವಿಧಿಸಲಾಯಿತು. ಶಿಕ್ಷೆ ಪೂರ್ಣಗೊಳ್ಳುವ ಮುನ್ನವೇ ಪ್ರಜ್ಞೆ ತಪ್ಪಿ ಬಿದ್ದಿದ್ದರೂ ಇದಾದ ಬಳಿಕವೂ ಅಧಿಕಾರಿಗಳಿ ಶಿಕ್ಷೆಯನ್ನು ನಿಲ್ಲಿಸಲಿಲ್ಲ. ಕೊನೆಗಾತ ಸಾವನ್ನಪ್ಪಿದ.
    Published by:Harshith AS
    First published: