ಭಾರತ-ಇಂಗ್ಲೆಂಡ್: ಕ್ರಿಕೆಟ್ ಕಾಶಿ ಲಾರ್ಡ್ಸ್​​​ ಮೈದಾನದಲ್ಲಿ ಪ್ರೇಮ ನಿವೇದನೆ: ಹುಡುಗಿ ರಿಯಾಕ್ಷನ್ ಹೇಗಿತ್ತು..?

 • News18
 • Last Updated :
 • Share this:
  ನ್ಯೂಸ್ 18 ಕನ್ನಡ

  ಲಂಡನ್ (ಜುಲೈ. 15): ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗುತ್ತದೆ ಎಂಬ ಮಾತಿದೆ. ಆದರೆ ಕ್ರಿಕೆಟ್ ಮೈದಾನದಲ್ಲೇ ವಿವಾಹ ನಿಶ್ಚಯವಾದ ಘಟನೆಯೊಂದು ನಡೆದಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್​​ ಮೈದಾನದಲ್ಲಿ ನಿನ್ನೆ ನಡೆದ ಇಂಗ್ಲೆಂಡ್ ಹಾಗೂ ಭಾರತ ನಡುವಣ ಪಂದ್ಯ ವೀಕ್ಷಣೆಗೆ ಬಂದಿದ್ದ ನವಜೋಡಿ, ಗ್ಯಾಲರಿಯಲ್ಲೇ ಪ್ರಪೋಸ್ ಮಾಡಿ ಮದುವೆ ಆಗಲು ನಿರ್ಧರಿಸಿದ್ದಾರೆ.

  ಪಂದ್ಯ ನಡೆಯುತ್ತಿದ್ದ ವೇಳೆ 24ನೇ ಓವರ್​ ಆಗುವಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಯುವಕನೊಬ್ಬ ಯುವತಿಯೊಂದಿಗೆ ಮಾತನಾಡುವ ದೃಶ್ಯ ಕಂಡುಬಂತು. ಇದೇ ವೇಳೆ ಯುವಕ ಮಂಡಿಯೂರಿ ಯುವತಿಗೆ ಪ್ರೇಮ ನಿವೇದನೆ ಮಾಡಿದ್ದು ಉಂಗುರವನ್ನೂ ತೊಡಿಸಿದ್ದಾನೆ. ಇದಕ್ಕೆ ಯುವತಿ ಕೂಡ ಗ್ರೀನ್ ಸಿಗ್ನಲ್ ನೀಡಿದ್ದು, ಮದುವೆಗೆ ಅಸ್ತು ಎಂದಿದ್ದಾಳೆ. ಈ ಎಲ್ಲಾ ದೃಶ್ಯಗಳನ್ನು ಕ್ಯಾಮೆರಾ ಕಣ್ಣು ಸೆರೆ ಹಿಡಿದಿದೆ. ಅಲ್ಲದೆ ಮೈದನಾದ ದೊಡ್ಡ ಪರದೆಯ ಮೇಲೂ ತೋರಿಸಲಾಗಿದ್ದು, 'Decision Pending' ಎಂಬ ಅಡಿ ಬರಹ ಎಲ್ಲರ ಗಮನ ಸೆಳೆಯಿತು.

     ಸದ್ಯ ಈ ಯುವಜೋಡಿ ವಿಶ್ವದಾದ್ಯಂತ ಫೇಮಸ್ ಆಗಿದ್ದು, ಇವರಿಬ್ಬರ ಪ್ರೇಮ ಪ್ರಸಂಗ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

      

  First published: