Viral Resume: ಲಿಂಕ್ಡ್‌ಇನ್‌ನಲ್ಲಿ ಮೋಜಿನ ರೆಸ್ಯೂಮೆ ಹಂಚಿಕೊಂಡ ಮಾರ್ಕೆಟಿಂಗ್ ಅಧಿಕಾರಿ; ರೆಸ್ಯೂಮೆ ಅಂದ್ರೆ ಇದಪ್ಪಾ ಅಂದ್ರು ನೆಟ್ಟಿಗರು

ನೇಮಕಾತಿ ಪೋರ್ಟಲ್‌ಗಳಲ್ಲಿ ರೆಸ್ಯೂಮೆ ರಚಿಸುವಾಗ ಯಾರಾದರೂ ಕೂಡ ತಮ್ಮ ಸಾಧನೆಗಳನ್ನು ಅದು ಚಿಕ್ಕದಾಗಿರಲಿ ದೊಡ್ಡದಾಗಿರಲಿ ಪ್ರಸ್ತಾಪ ಮಾಡಿಯೇ ಮಾಡುತ್ತಾರೆ. ಪೋಡಿಯಾದಲ್ಲಿ ಮುಖ್ಯ ಮಾರ್ಕೆಟಿಂಗ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಲೆನ್ ಮಾರ್ಕಿಡಾನ್ ಪ್ರತಿಯೊಬ್ಬರ ಜೀವನದಲ್ಲಿ ಸರ್ವೇ ಸಾಮಾನ್ಯವಾಗಿರುವ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಉದ್ಯೋಗ ಹುಡುಕಾಟ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಸಮಾನ್ಯ ಪ್ರೊಫೈಲ್ ಹೊಂದಲು ನಿರ್ಧರಿಸಿದ್ದಾರೆ ಅದು ಹೇಗಿದೆ ನೋಡಿ.

ಮೋಜಿನ ರೆಸ್ಯೂಮೆ ಹಂಚಿಕೊಂಡ ಮಾರ್ಕೆಟಿಂಗ್ ಅಧಿಕಾರಿ

ಮೋಜಿನ ರೆಸ್ಯೂಮೆ ಹಂಚಿಕೊಂಡ ಮಾರ್ಕೆಟಿಂಗ್ ಅಧಿಕಾರಿ

  • Share this:

ಸರಿಯಾದ ಉದ್ಯೋಗ ಹುಡುಕಾಡುವುದು ಇಂದಿನ ದಿನಗಳಲ್ಲಿ ಪ್ರಯಾಸದ ಕೆಲಸ ಇದಕ್ಕೆ ಮುಖ್ಯವಾಗಿ ನಿಮ್ಮ ಪ್ರೊಫೈಲ್ ನೇಮಕಾತಿ (Recruitment) ಮಾಡುವವರನ್ನು ಆಕರ್ಷಣೀಯಗೊಳಿಸಬೇಕು ಅದಕ್ಕಾಗಿ ಲಿಂಕ್ಡ್‌ಇನ್, ನೌಕರಿ ಮೊದಲಾದ ನೇಮಕಾತಿ ಪೋರ್ಟಲ್‌ಗಳಲ್ಲಿ ಆಕರ್ಷಕವಾಗಿ ನಿಮ್ಮ ರೆಸ್ಯೂಮೆಯನ್ನು (Resume) ದಾಖಲಿಸಬೇಕಾಗುತ್ತದೆ. ಇನ್ನು ಇಂತಹ ಪೋರ್ಟಲ್‌ಗಳಲ್ಲಿ ರೆಸ್ಯೂಮೆ ರಚಿಸುವಾಗ ಯಾರಾದರೂ ಕೂಡ ತಮ್ಮ ಸಾಧನೆಗಳನ್ನು ಅದು ಚಿಕ್ಕದಾಗಿರಲಿ ದೊಡ್ಡದಾಗಿರಲಿ ಪ್ರಸ್ತಾಪ ಮಾಡಿಯೇ ಮಾಡುತ್ತಾರೆ. ಪೋಡಿಯಾದಲ್ಲಿ (Podia) ಮುಖ್ಯ ಮಾರ್ಕೆಟಿಂಗ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಲೆನ್ ಮಾರ್ಕಿಡಾನ್ ಪ್ರತಿಯೊಬ್ಬರ ಜೀವನದಲ್ಲಿ ಸರ್ವೇ ಸಾಮಾನ್ಯವಾಗಿರುವ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಉದ್ಯೋಗ ಹುಡುಕಾಟ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಸಮಾನ್ಯ ಪ್ರೊಫೈಲ್ (Profile) ಹೊಂದಲು ನಿರ್ಧರಿಸಿದ್ದಾರೆ


ಗಮನ ಸೆಳೆಯುತ್ತಿರುವ ಲಿಂಕ್ಡ್‌ಇನ್ ಪ್ರೊಫೈಲ್
ಲೆನ್ ಮಾರ್ಕಿಡಾನ್ ಲಿಂಕ್ಡ್‌ಇನ್ ಪ್ರೊಫೈಲ್ ಸರಿಯಾದ ಕಾರಣಗಳಿಗಾಗಿ ಇದೀಗ ಗಮನ ಸೆಳೆಯುತ್ತಿದೆ. ಅವರ ಪ್ರೊಫೈಲ್ ತೆರೆದ ಕೂಡಲೇ ಅವರ ಪ್ರೊಫೈಲ್ ಚಿತ್ರ ಹಾಗೂ ವಿವರವಿರುವ ಮಾಹಿತಿಯನ್ನು ನೋಡುತ್ತೀರಿ ಪೋಡಿಯಾದಲ್ಲಿ ಮುಖ್ಯ ಮಾರ್ಕೆಟಿಂಗ್ ಅಧಿಕಾರಿಯಾಗಿ ಲೆನ್ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಅವರ ಎಕ್ಸ್‌ಪೀರಿಯನ್ಸ್ ವಿಭಾಗದತ್ತ ಸ್ಕ್ರಾಲ್ ಮಾಡಿದಾಗ ಅವರ ಪ್ರೊಫೈಲ್ ಏಕೆ ಆಸಕ್ತಿದಾಯಕವಾಗಿದೆ ಎಂಬುದು ನಿಮಗೆ ಅರಿವಾಗುತ್ತದೆ.


ಪೋಡಿಯಾದಲ್ಲಿನ ತಮ್ಮ ಉದ್ಯೋಗ ವಿವರಗಳನ್ನು ನಮೂದಿಸಿಕೊಂಡಿರುವ ಲೆನ್ ಮಾರ್ಕಿಡಾನ್ ನಂತರದಲ್ಲಿ, ಜುಲೈ 2004 ರಿಂದ ಇಂದಿನ ದಿನಾಂಕದವರೆಗೆ ಫೇಸ್‌ಬುಕ್‌ನಲ್ಲಿ ಜಾಹೀರಾತು ಟಾರ್ಗೆಟ್ ಎಂಬುದಾಗಿ ಬರೆದಿರುವುದು ಗಮನ ಸೆಳೆಯುತ್ತದೆ. ಇನ್ನೂ ಆಕರ್ಷಕವಾಗಿರುವುದು ಇದರ ವಿವರಣೆಯಾಗಿದೆ.


@edu ಇಮೇಲ್ ವಿಳಾಸವನ್ನು ಹೊಂದುವ ಮೂಲಕ ನನ್ನ ಅನುಭವಕ್ಕಾಗಿ ಆರಂಭಿಕ ಬಳಕೆದಾರನೆಂದು ನೇಮಕಗೊಂಡಿರುವೆ. 2006 ಮಾರ್ಚ್‌ನಲ್ಲಿ ಮ್ಯಾಡ್‌ನೆಸ್ ಬ್ರಾಕೆಟ್ ಅಭಿನಯಕ್ಕಾಗಿ ಫೇಸ್‌ಬುಕ್ ಬೀನಿ ಪ್ರಶಸ್ತಿಯನ್ನು ಗೆದ್ದುಕೊಂಡಿರುವೆ. ನಿರಂತರವಾಗಿ F500 ಬ್ರ್ಯಾಂಡ್‌ಗಳಾದ ಸ್ಯಾಮ್‌ಸಂಗ್, ಪ್ರೊಟೆಕ್ಟರ್ ಹಾಗೂ ಗೇಂಬಲ್ ಮತ್ತು ವೆರಿಜೋನ್‌ಗಳಿಂದ ರಿಟಾರ್ಗೆಟ್ ಆಗಿರುವೆ. ಹೀಗೆ ಫೇಸ್‌ಬುಕ್‌ನಲ್ಲಿ ತಮ್ಮ ಚಟುವಟಿಕೆಗಳನ್ನು ಹಾಸ್ಯತ್ಮಕವಾಗಿ ಲೆನ್ ಬರೆದುಕೊಂಡಿದ್ದಾರೆ.


ಹಾಸ್ಯ ಲೇಪಿತ ಅನುಭವ ವಿವರಗಳು
ಲೆನ್‌ನ ಅನುಭವ ವಿವರಗಳು ಇಲ್ಲಿದೆ ಕೊನೆಯಾಗುವುದಿಲ್ಲ. ಮುಂದಿನ ವಿವರಣೆಯು 2008 ಫೆಬ್ರವರಿಯಿಂದ ಇಲ್ಲಿಯವರೆಗೆ ಅಮೆಜಾನ್‌ನ ಪ್ರೈಮ್ ಮೆಂಬರ್ ಆಗಿರುವೆ, ಅವರು ಎಷ್ಟು ಸಮಯದವರೆಗೆ ಸಬ್‌ಸ್ಕ್ರಿಪ್ಶನ್ ಅನ್ನು ಖರೀದಿಸಿದರು ಎಂಬುದರ ಕುರಿತು ಬಳಕೆದಾರರಿಗೆ ಅನನ್ಯ ರೀತಿಯಲ್ಲಿ ಹೇಳುತ್ತದೆ.


ಇದನ್ನೂ ಓದಿ: YouTubers Village: ಈ ಊರಿನ ಜನರೆಲ್ಲ ಯೂಟ್ಯೂಬರ್ಸ್​; ಎಲ್ರದ್ದೂ ಒಂದೊಂದು ಚಾನಲ್! ಸರ್ಕಾರಿ ಕೆಲಸವೂ ಬೇಡ್ವಂತೆ

ಏಳು ವರ್ಷಗಳಲ್ಲಿ ಆರ್ಡರ್ ವಾಲ್ಯೂಮ್ ಅನ್ನು 823% ನಷ್ಟು ಹೆಚ್ಚಿಸಲಾಗಿದೆ. ವೈವಿಧ್ಯಮಯ ಉತ್ಪನ್ನಗಳ ಕ್ಯಾಟಲಾಗ್ ಅನ್ನು ಸಂಶೋಧಿಸಲಾಗಿದೆ, ಸಿಂಪಲ್‌ಹ್ಯೂಮನ್ ಬ್ಯಾಗ್ ಲೈನರ್‌ಗಳಿಂದ ಕ್ಯಾಟ್ ಫುಡ್‌ವರೆಗೆ ವಿಭಾಗಗಳನ್ನು ವಿಸ್ತರಿಸಲಾಗಿದೆ. ರಿವ್ಯೂ ಪೋರ್ಟಲ್ ಬಳಸಿಕೊಂಡು ಉತ್ಪನ್ನ ಗುಣಮಟ್ಟದ ಬಗೆಗೆ ನಿಯಮಿತವಾಗಿ ವರದಿ ಮಾಡುತ್ತೇನೆ ಇದು ಪ್ರೈಮ್ ಸದಸ್ಯರಾಗಿ ಅವರು ಏನು ಮಾಡುತ್ತಾರೆ ಎಂಬುದನ್ನು ಉಲ್ಲೇಖಿಸುತ್ತದೆ.


ಉದ್ಯೋಗ ಪ್ರೊಫೈಲ್‌ನಲ್ಲಿ ಹಾಸ್ಯಾತ್ಮಕ ವಿವರಗಳು
ಇದಿಷ್ಟೇ ಅಲ್ಲದೆ ಮಾರ್ಕಿಡಾನ್ ನೆಟ್‌ಫ್ಲಿಕ್ಸ್ ಮತ್ತು ಆ್ಯಪಲ್‌ನಂತಹ ಸ್ಟ್ರೀಮಿಂಗ್ ಸೈಟ್‌ನ ತಮ್ಮ ಬಳಕೆಯನ್ನು ಮೋಜಿನ ರೀತಿಯಲ್ಲಿ ಬರೆದುಕೊಂಡಿದ್ದಾರೆ. ಒಬ್ಬ ಸಾಮಾನ್ಯ ತಮ್ಮ ನಿತ್ಯಜೀವನದಲ್ಲಿ ಏನೆಲ್ಲಾ ಮಾಡುತ್ತಾನೆ ಎಂಬುದನ್ನೇ ಮಾರ್ಕಿಡಾನ್ ತಮ್ಮ ಲಿಂಕ್ಡ್‌ಇನ್ ರೆಸ್ಯೂಮೆಯಲ್ಲಿ ಉಲ್ಲೇಖಿಸಿದ್ದಾರೆ. ಆ್ಯಪಲ್‌ನಲ್ಲಿ ತಾವು ದೃಢೀಕರಿಸದ ಜೀನಿಯಸ್ ಆಗಿದ್ದು ರಿಮೋಟ್ ಟೆಕ್ ಬೆಂಬಲವನ್ನು ದೇಶದ ಹಿರಿಯ ನಾಗರಿಕರಿಗೆ ನೀಡುತ್ತಿದ್ದೇನೆ ಎಂಬುದಾಗಿ ಬರೆದುಕೊಂಡಿದ್ದಾರೆ ಇನ್ನು ನೆಟ್‌ಫ್ಲಿಕ್ಸ್‌ನಲ್ಲಿ ಖಾತೆ ಮ್ಯಾನೇಜರ್ ಆಗಿರುವ ಮಾರ್ಕಿಡಾನ್ 5 ಕುಟುಂಬ ಸದಸ್ಯರ ಖಾತೆಗಳ ನಿರ್ವಹಣೆ ಪಾವತಿಯ ಹೊಣೆ ಹೊತ್ತಿರುವುದಾಗಿ ಉಲ್ಲೇಖಿಸಿದ್ದಾರೆ.


ಇನ್ನು ತಾವು ಈಗಾಗಲೇ ವೀಕ್ಷಿಸಿದ ಚಲನಚಿತ್ರಗಳ ವಿಮರ್ಶಕರೂ ಆಗಿದ್ದಾರೆ ಎಂಬುದಾಗಿ ನಮೂದಿಸಿದ್ದಾರೆ. ಒಟ್ಟಿನಲ್ಲಿ ಮಾರ್ಕಿಡಾನ್ ನೀಡಿರುವ ಈ ಎಲ್ಲಾ ಮಾಹಿತಿ ಒಬ್ಬ ಸಾಮಾನ್ಯನ ಜೀವನದಲ್ಲಿ ಆತ ಮಾಡುವ ಚಟುವಟಿಕೆಗಳ ಕುರಿತಾಗಿದೆ. ಇದೊಂದು ರೀತಿಯ ಉಲ್ಲಾಸಮಯ ಉದ್ಯೋಗ ಅನುಭವ ಎಂಬುದಾಗಿ ನೆಟ್ಟಿಗರು ಹೊಗಳಿದ್ದು, ಸಾಮಾಜಿಕ ತಾಣದಲ್ಲಿ ಕೂಡ ಈ ರೆಸ್ಯೂಮೆ ಅತ್ಯಂತ ಹೆಚ್ಚಿನ ಲೈಕ್ಸ್ ಮತ್ತು ಶೇರ್‌ಗಳಿಗೆ ಕಾರಣವಾಗಿದೆ.


ಇದನ್ನೂ ಓದಿ: Baby Name: ಪಕೋಡಾ ಎಂದು ಮಗುವಿಗೆ ಹೆಸರಿಟ್ಟ ಬ್ರಿಟನ್ ದಂಪತಿ! ಭಾರತೀಯ ತಿಂಡಿ ಅಂದ್ರೆ ಅಷ್ಟೆಲ್ಲ ಇಷ್ಟವಂತೆ!

ನಾನು ಇದುವರೆಗೆ ನೋಡಿದ್ದರಲ್ಲಿ ಅತ್ಯಂತ ಉತ್ತಮ ವಿಷಯ ಇದಾಗಿದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದು, ಮಾರ್ಕಿಡಾನ್ ಒಬ್ಬ ಪ್ರತಿಭಾವಂತ ಎಂದು ಇನ್ನೊಬ್ಬ ಬಳಕೆದಾರರು ಕೊಂಡಾಡಿದ್ದಾರೆ.

Published by:Ashwini Prabhu
First published: