• Home
 • »
 • News
 • »
 • trend
 • »
 • Air India: ಕುಡಿದ ಮತ್ತಿನಲ್ಲಿ ವಿಮಾನದಲ್ಲಿ ಮಹಿಳೆಯರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ! ಏನಿದು ಘಟನೆ ನೋಡಿ

Air India: ಕುಡಿದ ಮತ್ತಿನಲ್ಲಿ ವಿಮಾನದಲ್ಲಿ ಮಹಿಳೆಯರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ! ಏನಿದು ಘಟನೆ ನೋಡಿ

ಏರ್​​ಇಂಡಿಯಾ ವಿಮಾನ

ಏರ್​​ಇಂಡಿಯಾ ವಿಮಾನ

ನ್ಯೂಯಾರ್ಕ್ -ದೆಹಲಿ ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್ ನಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಫುಲ್ ವೈರಲ್ ಆಗಿದೆ

 • Trending Desk
 • 5-MIN READ
 • Last Updated :
 • Share this:

  ಇತ್ತೀಚಿಗಂತೂ ಈ ವಿಮಾನಗಳಲ್ಲಿ (Airplane) ನಡೆಯುತ್ತಿರುವ ಅಹಿತಕರವಾದ ಘಟನೆಗಳ ವಿಡಿಯೋಗಳೇ ನಮಗೆ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ನೋಡಲು ಸಿಗುತ್ತಿವೆ ಅಂತ ಹೇಳಬಹುದು. ಇಲ್ಲಿಯೂ ಸಹ ಮತ್ತೊಂದು ಅಹಿತಕರವಾದ ಘಟನೆಯೊಂದು ನಡೆದಿದೆ ನೋಡಿ. ಇದು ನಿನ್ನೆ ಮೊನ್ನೆಯ ಘಟನೆಯಲ್ಲ ಬಿಡಿ, ಇದು ನಡೆದಿದ್ದು ನವೆಂಬರ್ 26 ರಂದು ಅಂತ ವರದಿಗಳು ಹೇಳುತ್ತಿವೆ. ನ್ಯೂಯಾರ್ಕ್ -ದೆಹಲಿ ಏರ್ ಇಂಡಿಯಾ (Air India) ವಿಮಾನದ ಬ್ಯುಸಿನೆಸ್ ಕ್ಲಾಸ್ ನಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಲಾಗಿದೆ ಮತ್ತು ಪುರುಷ ಪ್ರಯಾಣಿಕನನ್ನು 'ನೋ ಫ್ಲೈ' (No Fly) ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡುವ ಆಂತರಿಕ ಸಮಿತಿಯನ್ನು ಏರ್ ಇಂಡಿಯಾ ರಚಿಸಿದೆ ಎಂದು ಏರ್ ಇಂಡಿಯಾವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.


  ವಿಮಾನವು ಜಾನ್ ಎಫ್. ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಜೆಎಫ್‌ಕೆ) ದಿಂದ ನವದೆಹಲಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.


  ಪುರುಷ ಪ್ರಯಾಣಿಕನನ್ನು ನೋ-ಫ್ಲೈ ಪಟ್ಟಿಯಲ್ಲಿ ಸೇರಿಸುವ ವಿಷಯವನ್ನು ಸರ್ಕಾರಿ ಸಮಿತಿಯು ಪರಿಗಣಿಸುತ್ತಿದೆ ಮತ್ತು ನಿರ್ಧಾರಕ್ಕಾಗಿ ಕಾಯಲಾಗುತ್ತಿದೆ ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.


  ಇದನ್ನೂ ಓದಿ: ಇವು ಪ್ರಪಂಚದ ಅತಿ ದೊಡ್ಡ ಗ್ರಂಥಾಲಯಗಳು, ನಿಮಗೆ ಯಾವ ಪುಸ್ತಕ ಬೇಕಿದ್ರೂ ಇಲ್ಲಿ ಸಿಗುತ್ತೆ!


  ಘಟನೆಯ ಬಗ್ಗೆ ವರದಿಯನ್ನು ಕೋರಿದ ನಾಗರಿಕ ವಿಮಾನಯಾನ ಮಹಾನಿರ್ದೇಶಕರು


  ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಏರ್ ಇಂಡಿಯಾದಿಂದ ವರದಿಯನ್ನು ಕೋರಿದ್ದಾರೆ ಮತ್ತು ನಿರ್ಲಕ್ಷ್ಯ ತೋರುವವರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ವಿಮಾನದಲ್ಲಿನ ತನ್ನ ಭಯಾನಕ ಅನುಭವವನ್ನು ನೆನಪಿಸಿಕೊಂಡು ಮಹಿಳೆ ಟಾಟಾ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಬರೆದ ಪತ್ರವನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.


  ಏರ್​​ಇಂಡಿಯಾ ವಿಮಾನ


  ವರದಿಯಾಗಿರುವಂತೆ, ಕ್ಯಾಬಿನ್ ಸಿಬ್ಬಂದಿಯನ್ನು ಎಚ್ಚರಿಸಿದೆ ಆದರೆ ವಿಮಾನವು ದೆಹಲಿಯಲ್ಲಿ ಇಳಿದ ನಂತರ ಪ್ರಯಾಣಿಕನು ಮುಕ್ತವಾಗಿ ನಡೆದುಕೊಂಡು ಹೋಗಿದ್ದಾನೆ ಎಂದು ಅವಳು ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಅತ್ಯಂತ ಆಘಾತಕಾರಿ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸಿಬ್ಬಂದಿಯು ಸಕ್ರಿಯವಾಗಿಲ್ಲ ಎಂದು ದೂರುದಾರರು ಬರೆದಿದ್ದಾರೆ.


  ಘಟನೆ ಎಷ್ಟು ಆಘಾತಕಾರಿಯಾಗಿದೆ ನೋಡಿ..


  ಸುದ್ದಿ ಮಾಧ್ಯಮವೊಂದು ವರದಿ ಮಾಡಿರುವಂತೆ, ಈ ಘಟನೆ ಎಐ -102 ವಿಮಾನದಲ್ಲಿ ನಡೆದಿದೆ. ಊಟ ಮಾಡಿದ ಸ್ವಲ್ಪ ಸಮಯದ ನಂತರ ಎಲ್ಲಾ ಲೈಟ್ ಗಳನ್ನು ಆಫ್ ಮಾಡಲಾಯಿತು. ಆಗ ಆ ವ್ಯಕ್ತಿ ತನ್ನ ಪ್ಯಾಂಟ್ ಜಿಪ್ ಅನ್ನು ಬಿಚ್ಚಿ ಮಹಿಳಾ ಪ್ರಯಾಣಿಕರಿರುವ ಸೀಟಿನ ಬಳಿ ಕುಡಿದ ಅಮಲಿನಲ್ಲಿ ಬಂದರು ಅಂತ ದೂರಿನಲ್ಲಿ ತಿಳಿಸಲಾಗಿದೆ. ಮೂತ್ರವಿಸರ್ಜನೆ ಮಾಡಿದ ನಂತರ, ಆ ವ್ಯಕ್ತಿಯು ಎಲ್ಲಿಯೂ ಹೋಗದೆ ತನ್ನ ಗುಪ್ತಾಂಗವನ್ನು ಹಾಗೆಯೇ ಬಹಿರಂಗಪಡಿಸುತ್ತ ನಿಂತನು. ಇತರ ಪ್ರಯಾಣಿಕರು ಅವನನ್ನು ಹೊರಡಲು ಹೇಳಿದಾಗ ಮಾತ್ರ ಅವನು ಅಲ್ಲಿಂದ ಹೋದನು.


  ಮಹಿಳೆಯ ಬಟ್ಟೆ, ಬೂಟು ಮತ್ತು ಬ್ಯಾಗ್ ಮೂತ್ರದಲ್ಲಿ ಒದ್ದೆಯಾಗಿವೆ. ಕೂಡಲೇ ವಿಮಾನದಲ್ಲಿನ ಸಿಬ್ಬಂದಿಗಳು ಮಹಿಳೆಗೆ ಹೊಸ ಬಟ್ಟೆಗಳನ್ನು ನೀಡಿದರು ಮತ್ತು ಆ ಮೂತ್ರದಿಂದ ಒದ್ದೆಯಾದ ಸೀಟಿನ ಮೇಲೆ ಹಾಳೆಗಳನ್ನು ಹಾಕಿದರು. ಮಹಿಳೆಯ ಔಪಚಾರಿಕ ದೂರನ್ನು ಡಿಸೆಂಬರ್ 28 ರಂದು ಪೊಲೀಸರೊಂದಿಗೆ ಏರ್ ಇಂಡಿಯಾ ಹಂಚಿಕೊಂಡಿದ್ದು, ನಂತರ ಐಪಿಸಿಯ ಸೆಕ್ಷನ್ 354, 294, 509, 510 ಮತ್ತು ಏರ್ ಕ್ರಾಫ್ಟ್ಸ್ ಕಾಯ್ದೆಯ 23 ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.


  ಏರ್​​ಇಂಡಿಯಾ ವಿಮಾನ


  ನಂತರ ಪೊಲೀಸರು ಆ ಮಹಿಳೆಯನ್ನು ಸಂಪರ್ಕಿಸಲು ಪ್ರಯತ್ನಿಸಿದರು, ಆದರೆ ಅವಳು ತನ್ನ ದೂರನ್ನು ಏರ್ ಇಂಡಿಯಾಗೆ ನೀಡಿದ್ದೇನೆ ಎಂದು ಹೇಳಿ, ಅದನ್ನು ತನ್ನ ಮೂಲ ದೂರಾಗಿ ಬಳಸಬೇಕೆಂದು ಅವರು ಹೇಳಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


  ಈ ಘಟನೆಯ ಬಗ್ಗೆ ಏರ್ ಇಂಡಿಯಾ ಹೇಳಿದ್ದೇನು ನೋಡಿ..


  ಈ ಬಗ್ಗೆ ವಿವರವಾದ ಹೇಳಿಕೆ ನೀಡಿರುವ ಏರ್ ಇಂಡಿಯಾ, "ನ್ಯೂಯಾರ್ಕ್-ದೆಹಲಿ ವಿಮಾನದಲ್ಲಿ ಪ್ರಯಾಣಿಕನೊಬ್ಬ ಅಗೌರವದಿಂದ ವರ್ತಿಸಿದ ಘಟನೆಯನ್ನು ಏರ್ ಇಂಡಿಯಾ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾನೂನು ಜಾರಿ ಏಜೆನ್ಸಿಗಳು ಮತ್ತು ನಿಯಂತ್ರಣ ಪ್ರಾಧಿಕಾರಗಳಿಗೆ ಸಹಾಯ ಮಾಡಲು ಏರ್ ಇಂಡಿಯಾ ಬದ್ಧವಾಗಿದೆ.


  ಈಗಾಗಲೇ ಏರ್ ಇಂಡಿಯಾ ಆ ಪ್ರಯಾಣಿಕನನ್ನು 30 ದಿನಗಳವರೆಗೆ ನಿಷೇಧಿಸಿದೆ ಮತ್ತು ಮುಂದಿನ ಕ್ರಮಕ್ಕಾಗಿ ಈ ವಿಷಯವನ್ನು ಡಿಜಿಸಿಎಗೆ ವರದಿ ಮಾಡಿದೆ" ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. "ಏರ್ ಇಂಡಿಯಾದ ಸಿಬ್ಬಂದಿಯ ಲೋಪದೋಷಗಳ ಬಗ್ಗೆ ತನಿಖೆ ನಡೆಸಲು ಮತ್ತು ಪರಿಸ್ಥಿತಿಯನ್ನು ತ್ವರಿತವಾಗಿ ಪರಿಹರಿಸಲು ವಿಳಂಬವಾಗಲು ಕಾರಣವಾದ ನ್ಯೂನತೆಗಳನ್ನು ಪರಿಹರಿಸಲೆಂದು ನಾವು ಆಂತರಿಕ ಸಮಿತಿಯನ್ನು ರಚಿಸಿದ್ದೇವೆ.


  ತನಿಖೆ ಮತ್ತು ವರದಿ ಮಾಡುವ ಪ್ರಕ್ರಿಯೆಯಲ್ಲಿ ನಾವು ನೊಂದ ಪ್ರಯಾಣಿಕರ ಕುಟುಂಬದೊಂದಿಗೆ ನಿಯಮಿತ ಸಂಪರ್ಕದಲ್ಲಿದ್ದೇವೆ" ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

  Published by:Prajwal B
  First published: