World Record: ವಿಶ್ವ ದಾಖಲೆ ಸೃಷ್ಟಿಸಿದ ಈ ವ್ಯಕ್ತಿ ಎಂತಹ ಸಾಹಸ ಮಾಡಿದ್ದಾರೆ ಗೊತ್ತೇ..? ನೋಡಿದರೆ ಮೈ ಜುಮ್ಮೆನ್ನುತ್ತೆ..!

ರಾಫೆಲ್ ಜುಗ್ನೋ ಬ್ರಿಡಿ ಎಂಬ ವ್ಯಕ್ತಿಯು ಮಾಡಿದ್ದು ಸಾಮಾನ್ಯವಾದ ಸಾಹಸವಲ್ಲ ಬಿಡಿ, ಈತ ಗಾಳಿಯಲ್ಲಿ ಹಾರಾಡುವ ಎರಡು ಬಿಸಿ ಗಾಳಿಯ ಬಲೂನ್‌ಗಳ ನಡುವೆ ಕಟ್ಟಿದ ಹಗ್ಗದ ಮೇಲೆ ನಡೆಯುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.

ರಾಫೆಲ್ ಜುಗ್ನೋ ಬ್ರಿಡಿ

ರಾಫೆಲ್ ಜುಗ್ನೋ ಬ್ರಿಡಿ

  • Share this:
ಕೆಲವರಿಗೆ ಸಾಧಾರಣವಾದದ್ದು ಮತ್ತು ಬಹುತೇಕರು ಮಾಡುತ್ತಿರುವ ಕೆಲಸವನ್ನು ಮಾಡಲು ಆಗುವುದೇ ಇಲ್ಲ, ಏಕೆಂದರೆ ಅವರಿಗೆ ಏನಾದರೊಂದು ವಿಭಿನ್ನವಾಗಿ ಮಾಡಬೇಕು ಮತ್ತು ತಮ್ಮನ್ನು ಲಕ್ಷಾಂತರ ಜನ ಗುರುತಿಸುವ ಹಾಗೆ ಆಗಬೇಕು ಎಂಬ ಗುರಿ ಇರುತ್ತದೆ. ಇಂತಹ ಗುರಿಯನ್ನು ಇಟ್ಟುಕೊಂಡು ಮುನ್ನಡೆಯುವವರು ಜೀವನದಲ್ಲಿ (Life) ಎಂತಹ ಸಾಹಸಕ್ಕೂ ಕೈ ಹಾಕುತ್ತಾರೆ ಮತ್ತು ತಮ್ಮ ಪ್ರಾಣದ ಬಗ್ಗೆ ಕಿಂಚಿತ್ತೂ ಸಹ ಆಲೋಚಿಸುವುದಿಲ್ಲ. ಇಲ್ಲೊಬ್ಬ ವ್ಯಕ್ತಿ ಸಹ ಇದೇ ಗುಂಪಿಗೆ ಸೇರಿದವರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (Guinness World RecordWorld Records) ಸ್ವತಃ ಅವರೇ ಸಾಮಾಜಿಕ ಮಾಧ್ಯಮವಾದ (Social media) ಇನ್‌ಸ್ಟಾಗ್ರಾಮ್‌ನಲ್ಲಿ (Instagram) ವಿಶ್ವ ದಾಖಲೆ ಮಾಡಿದ ಜನರ ಸಾಹಸಮಯ ಮತ್ತು ಆಶ್ಚರ್ಯವಾಗುವಂತಹ, ಆಘಾತವಾಗುವಂತಹ ಮತ್ತು ವಿಸ್ಮಯವೆನಿಸುವ ವಿಡಿಯೋಗಳನ್ನು ಆಗಾಗ್ಗೆ ಹಂಚಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಇಷ್ಟು ದಿನಗಳವರೆಗೆ ನೋಡಿದ ವಿಡಿಯೋಗಳನ್ನು ಮರೆಸುವಂತೆ ಇದೆ ಈ ಹೊಸ ವಿಡಿಯೋ ಅಂತ ಹೇಳಬಹುದು. ಇದನ್ನು ನೋಡಿದರೆ ನಿಮಗೆ ಮೈ ಜುಮ್ಮೆನ್ನುವುದಂತೂ ಗ್ಯಾರಂಟಿ.

ರಾಫೆಲ್ ಜುಗ್ನೋ ಬ್ರಿಡಿ ವಿಶ್ವ ದಾಖಲೆ:

ರಾಫೆಲ್ ಜುಗ್ನೋ ಬ್ರಿಡಿ ಎಂಬ ವ್ಯಕ್ತಿಯು ಮಾಡಿದ್ದು ಸಾಮಾನ್ಯವಾದ ಸಾಹಸವಲ್ಲ ಬಿಡಿ, ಈತ ಗಾಳಿಯಲ್ಲಿ ಹಾರಾಡುವ ಎರಡು ಬಿಸಿ ಗಾಳಿಯ ಬಲೂನ್‌ಗಳ ನಡುವೆ ಕಟ್ಟಿದ ಹಗ್ಗದ ಮೇಲೆ ನಡೆಯುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇದನ್ನು ಕೇಳೋದಕ್ಕೆ ಭಯವಾಗುತ್ತಲ್ಲ, ಈ ವಿಡಿಯೋ ನೋಡಿ ಎಂತಹ ಸಾಹಸ ಎಂದು ತಿಳಿಯುತ್ತದೆ.


6,236 ಅಡಿ ಎತ್ತರದಲ್ಲಿ ನಡಿಗೆ:

"ರಾಫೆಲ್ ಜುಗ್ನೊ ಬ್ರಿಡಿ ಅವರ 1,901 ಮೀ ಎಂದರೆ ಸರಿ ಸುಮಾರು 6,236 ಅಡಿ ಎತ್ತರದ ಸ್ಲಾಕ್‌ಲೈನ್ ನಡಿಗೆ" ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವಿಡಿಯೋವನ್ನು ಪೋಸ್ಟ್ ಮಾಡುವಾಗ ಶೀರ್ಷಿಕೆಯೊಂದನ್ನು ಬರೆದಿದ್ದಾರೆ. ಈ ಕ್ಲಿಪ್‌ನಲ್ಲಿ ರಾಫೆಲ್ ಬಹಳ ಜಾಗರೂಕತೆಯಿಂದ ಒಂದು ಬಿಸಿ ಗಾಳಿಯ ಬಲೂನ್‌ನಿಂದ ಇನ್ನೊಂದು ಬಿಸಿ ಗಾಳಿಯ ಬಲೂನ್ ಇರುವುದರ ಕಡೆಗೆ ತಲುಪಲು ಅನೇಕ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ತೋರಿಸುತ್ತದೆ. ಸಂಸ್ಥೆ, ತಮ್ಮದೇ ಆದ ಪೋಸ್ಟ್ ಗೆ ಉತ್ತರಿಸುವಾಗ ಇನ್ನೂ ಕೆಲವು ಮಾಹಿತಿಯನ್ನು ಸಹ ಹಂಚಿಕೊಂಡಿದೆ.

ಇದನ್ನೂ ಓದಿ: Smallest car: 1 ಲೀಟರ್​​ಗೆ​ 37 Km ಮೈಲೇಜ್​! ವಿಶ್ವದ ಅತಿ ಚಿಕ್ಕ ಕಾರಿನಲ್ಲಿ ಪ್ರಪಂಚ ಸುತ್ತುತ್ತಿದ್ದಾನೆ ಈತ

ಗಿನ್ನಿಸ್ ದಾಖಲೆ ಬರೆದ ರಾಫೆಲ್ :

ಈ ಧೈರ್ಯಶಾಲಿ ಸಾಧನೆಯು ರಾಫೆಲ್ ಅವರು ಪುರುಷರ ವಿಭಾಗದಲ್ಲಿ ಅತ್ಯಧಿಕ ಹೈಲೈನ್ ಮೇಲೆ ನಡೆದ ಮತ್ತು ಫ್ರೀ ಸೋಲೋ ಎಂದರೆ ಏಕವ್ಯಕ್ತಿ ವಿಭಾಗದಲ್ಲಿ (ಐಎಸ್ಎ-ವೆರಿಫೈಡ್) ದಾಖಲೆಯ ಬಿರುದನ್ನು ಗಳಿಸಿದ್ದಾರೆ ಎಂದು ಅವರು ಬರೆದಿದ್ದಾರೆ.

ಈ ಕುರಿತು ರಾಫೆಲ್ ಅಭಿಪ್ರಾಯ:

ಬ್ರೆಜಿಲ್‌ನ ಸಾಂಟಾ ಕ್ಯಾಟರಿನಾದ ಪ್ರಯಾ ಗ್ರ್ಯಾಂಡೆಯ ಮೇಲೆ 25 ಸೆಂ.ಮೀ ದೂರವನ್ನು ಬರಿಗಾಲಿನಲ್ಲಿ ಬ್ರಿಡಿ ನಡೆದದ್ದು, ಇದು ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ಎರಡು ಪಟ್ಟು ಎತ್ತರವಿದೆ. ಗಾಳಿಯಲ್ಲಿ ಅಷ್ಟು ಎತ್ತರದಲ್ಲಿ ನನಗೆ ಸಿಗುವಂತಹ ತೇಲಾಡುವ ಮತ್ತು ಸ್ವಾತಂತ್ರ್ಯದ ಭಾವನೆಯು ಯಾವಾಗಲೂ ನನ್ನ ಸಾಹಸಕ್ಕೆ ದೊಡ್ಡ ಪ್ರೇರಣೆಯಾಗಿವೆ. ಎರಡೂ ಬಲೂನ್‌ಗಳ ಕೊನೆಯ ಬಿಂದುಗಳ ನಡುವೆ ನಿರಂತರವಾಗಿ ನಡೆದುಕೊಂಡು ಹೋಗುವ ಅನುಭವವನ್ನು ಪದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ" ಎಂದು ಅವರು ಹೇಳಿದರು.

ಇದನ್ನೂ ಓದಿ: Longest Car: ಜಗತ್ತಿನ ಅತೀ ಉದ್ದದ ಕಾರಿನಲ್ಲಿದೆ ಸ್ವಿಮ್ಮಿಂಗ್ ಪೂಲ್, ಹೆಲಿಪ್ಯಾಡ್

ಇದು ನಂಬಲು ಅಸಾಧ್ಯ ಎನ್ನುತ್ತಿದ್ದಾರೆ ನೆಟ್ಟಿಗರು:

ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋವನ್ನು ಎರಡು ದಿನಗಳ ಹಿಂದೆ ಪೋಸ್ಟ್ ಮಾಡಲಾಗಿದೆ. ಇದನ್ನು ಹಂಚಿಕೊಂಡಾಗಿನಿಂದ, ಈ ವಿಡಿಯೋ ಕ್ಲಿಪ್ 76,000 ಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿದೆ ಮತ್ತು ವಿವಿಧ ಕಾಮೆಂಟ್‌ಗಳನ್ನು ಸಹ ನೆಟ್ಟಿಗರು ಪೋಸ್ಟ್ ಮಾಡಿದ್ದಾರೆ.

ಈ ಮೈ ಜುಮ್ಮೆನಿಸುವ ವಿಸ್ಮಯಕಾರಿ ಸಾಹಸದ ವಿಡಿಯೋ ನೋಡಿದ ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು "ಈಗ ಇದು ದಾಖಲೆಯಾಗಿದೆ" ಎಂದು ಬರೆದಿದ್ದಾರೆ. "ಈ ದೇವರೇ ಇದನ್ನು ನೋಡಿಯೇ ನನ್ನ ಎರಡು ಕಾಲುಗಳು ಜುಮ್ಮೆನ್ನುತ್ತಿವೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. "ಈಗ ಇದು ಗಮನಾರ್ಹವಾದ ವಿಶ್ವ ದಾಖಲೆಯಾಗಿದೆ" ಎಂದು ಮೂರನೆಯವರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಇದನ್ನು ನೋಡಿದವರು "ನಂಬಲು ಅಸಾಧ್ಯ" ಎಂದು ಕಾಮೆಂಟ್ ಮಾಡಿದ್ದಾರೆ.
Published by:shrikrishna bhat
First published: