Viral Video: ಮೊಸಳೆ ಜೊತೆ ಮನುಷ್ಯನ ಅನುಬಂಧ! ವೈರಲ್ ವಿಡಿಯೋ ನೋಡಿ ದಂಗಾದ ನೆಟ್ಟಿಗರು

ಮೊಸಳೆ ಜೊತೆ ಆಟವಾಡುತ್ತಿರುವ ವ್ಯಕ್ತಿಯ ದೃಶ್ಯ

ಮೊಸಳೆ ಜೊತೆ ಆಟವಾಡುತ್ತಿರುವ ವ್ಯಕ್ತಿಯ ದೃಶ್ಯ

ಮೊಸಳೆ ಜೊತೆ ವ್ಯಕ್ತಿಯೊಬ್ಬ ಮುದ್ದಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಆದರೆ ಈ ವೀಡಿಯೋ ನೋಡಿ ನೆಟ್ಟಿಗರು ಆಶ್ಚರ್ಯಗೊಳ್ಳುವುದು ಮಾತ್ರವಲ್ಲದೆ ಭಯಭೀತರಾಗಿದ್ದಾರೆ.

  • Share this:

ಸಾಕು ಪ್ರಾಣಿಗಳು (Pets) ಎಂದಾಗ ಎಲ್ಲರಿಗೂ ಮೊದಲು ನೆನಪಿಗೆ ಬರೋದೆ ನಾಯಿ, ಬೆಕ್ಕು. ಅಲ್ಲದೆ ಮೀನು ಕೆಲವೊಂದು ಪಕ್ಷಿಗಳನ್ನು ನೆನಪಿಸಿಕೊಳ್ಳತ್ತೇವೆ . ಆದರೆ ಭಯಾನಕವಾದ (Danger) ಮೊಸಳೆಯೊಂದು (Crocodile) ಮನುಷ್ಯನೊಂದಿಗೆ (Man) ಉತ್ತಮ ಒಡನಾಟ ಹೊಂದಿರುವುದನ್ನು ಊಹಿಸಿಕೊಳ್ಳುವುದು ಸ್ವಲ್ಪ ಕಷ್ಷವೆ. ಆದರೆ ಇದಕ್ಕೆ ವಿರುದ್ಧ ಎಂಬಂತೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮೊಸಳೆಯೊಂದಿಗೆ ಮನುಷ್ಯನ ಒಡನಾಟದ (Relationship) ವೀಡಿಯೋ ಸಖತ್ತಾಗಿ ವೈರಲ್  (Viral Video) ಆಗುತ್ತಿದೆ. ಅಲ್ಲದೆ ಇದನ್ನು ನೋಡಿದ ನೆಟ್ಟಿಗರು (Netizens) ಆಶ್ಚರ್ಯಚಕಿತರಾಗಿದ್ದಾರೆ.


ಮೊಸಳೆ ಭಯಾನಕ ಪ್ರಾಣಿಗಳಲ್ಲಿ ಒಂದಾಗಿದೆ. ಇದನ್ನು ಕಂಡ ಕ್ಷಣವೆ ಜನರು ಒಮ್ಮೆಗೆ ಭಯಭೀತರಾಗುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮೊಸಳೆಯೊಂದಿಗೆ ಆಟವಾಡುತ್ತಿದ್ದಾನೆ. ಇದು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿದೆ.


ಇದನ್ನೂ ಓದಿ: Snake Video: ಪ್ರೀತಿಯೋ, ಜಗಳವೋ! ಸುರುಳಿ ಸುತ್ತಿಕೊಂಡ ಹಾವುಗಳ ವಿಡಿಯೋ ವೈರಲ್


ಮೊಸಳೆಗೆ ಆಹಾರ ತಿನ್ನಿಸುತ್ತಿರುವ ವ್ಯಕ್ತಿ
ವೈರಲ್ ಆಗುತ್ತಿರುವ ವೀಡಿಯೋವನ್ನು ಗಮಿಸಿದಂತೆ, ವ್ಯಕ್ತಿಯು ತನ್ನ ಹತ್ತಿರಕ್ಕೆ ಬಂದ ಮೊಸಳೆಗೆ ಯಾವುದೇ ಭಯವಿಲ್ಲದೆ ತನ್ನ ಎರಡು ಕಾಲುಗಳ ಮಧ್ಯೆ ಇರಿಸಿ ಸ್ವಲ್ಪ ಹೊತ್ತು ಅದರ ಜೊತೆ ಆಟವಾಡಿ ನಂತರ ಅದಕ್ಕೆ ಆಹಾರ ತಿನ್ನಿಸುತ್ತಿರುವುದನ್ನು ನೋಡಬಹುದಾಗಿದೆ.



ವ್ಯಕ್ತಿಯೊಂದಿಗೆ  ಬಹುಕಾಲದ ಸ್ನೇಹಿತನಂತೆ ವರ್ತಿಸಿದ ಮೊಸಳೆ
ವೀಡಿಯೋ ಗಮನಿಸಿದಂತೆ ಕೆರೆ ಅಂತೆ ಕಾಣುವ ನೀರಿನಲ್ಲಿರುವ ಮೊಸಳೆ ಆ ವ್ಯಕ್ತಿಯ ಬಳಿಗೆ ಯಾವುದೇ ರೀತಿಯಾದ ಭಯವಿಲ್ಲದೆ ಬಂದಿದೆ. ಮತ್ತು ಆ ವ್ಯಕ್ತಿ ತನ್ನ ಎರಡು ಕಾಲುಗಳ ಮಧ್ಯೆ ಮೊಸಳೆಯನ್ನು ಇರಿಸಿದಾಗಲೂ ಮೊಸಳೆ  ವ್ಯಕ್ತಿಯೊಂದಿಗೆ ಅನೇಕ ವರ್ಷಗಳಿಂದ ಒಡನಾಟವಿದ್ದಂತೆ ವರ್ತಿಸಿದೆ.


ವ್ಯಕ್ತಿಯು ಮೊಸಳೆ ಮಾಂಸದ ತುಣುಕುಗಳನ್ನು ಆಹಾರವನ್ನಾಗಿ ನೀಡುತ್ತಾನೆ ಮತ್ತು ಅದನ್ನು ಸೇವಿಸಿದ ಮೊಸಳೆ ನಂತರ ಮತ್ತೆ ಅಲ್ಲಿಂದ ತೆರಳಿ ನೀರಿನೊಳಗೆ ಸೇರಿಕೊಳ್ಳುತ್ತದೆ.


ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೋ
ಮೊಸಳೆ ಮತ್ತು ಮಾನವನ ನಡುವಿನ ಈ ಸಂಪರ್ಕದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಗಿ ವೈರಲ್ ಆಗುತ್ತಿದೆ. ಇದನ್ನು ಟ್ವಿಟ್ಟರ್ ನಲ್ಲಿ ಮೊದಲು ಹಂಚಿಕೊಳ್ಳಲಾಗಿದೆ. ಪಿಜೆನ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪಲೋಡ್ ಮಾಡಿದ್ದಾರೆ. ಈ ವೀಡಿಯೋ ನಂತರ ತುಂಬಾನೇ ಸದ್ದು ಮಾಡುತ್ತಿದೆ. ಸುಮಾರು 4.5 ಮಿಲಿಯನ್ ಗಿಂತಲೂ ಅಧಿಕ ವೀಕ್ಷಣೆ ಪಡೆದಿದೆ. ಮತ್ತು ಸುಮಾರು 4,775 ಕ್ಕಿಂತಲೂ ಅಧಿಕ ಮಂದಿ ರಿ ಟ್ವೀಟ್ ಮಾಡಿದ್ದಾರೆ.


ಮೊಸಳೆ ಮತ್ತು ವ್ಯಕ್ತಿಯ ನಡುವಿನ ಅನುಬಂಧಕ್ಕೆ ಅಚ್ಚರಿಗೊಂಡ ನೆಟ್ಟಿಗರು
ಮೊಸಳೆ ಮತ್ತು ವ್ಯಕ್ತಿಯ ನಡುವಿನ ಈ ರೀತಿಯಾದ ಅನುಬಂಧನವನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಅಲ್ಲದೆ ಅನೇಕ ರಿತಿಯಾದ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ನೋಡಲು ಕೂಡ ಸಾಧ್ಯವಿಲ್ಲ ಅಷ್ಟು ಭಯಾನಕವಾಗಿದೆ ಎಂದರು.


ಇನ್ನೂ ಕೆಲವರು ಮೊಸಳೆಗಳು ತುಂಬಾ ಅಪಾಯಕಾರಿಯಾದುದು ಎಂದಿದ್ದಾರೆ. ಅಲ್ಲದೆ ಇಂತಹ ಪ್ರಾಣಿಗಳು ಒಳ್ಳೆಯ ರೀತಿಯಾಗಿ ವರ್ತಿಸಿದರೂ ಇವುಗಳಿಂದ ಅಪಾಯ ತಪ್ಪಿದ್ದಲ್ಲ ಎಂದಿದ್ದಾರೆ.


ಇದನ್ನೂ ಓದಿ: Elephant Viral Video: ಪ್ರಾಣ ಉಳಿಸಿಕೊಳ್ಳಲು ಪರದಾಡಿದ ಮೂಕಪ್ರಾಣಿ, ರಭಸದ ನೀರಿನ ವಿರುದ್ಧ ಕೊನೆಗೂ ಗೆದ್ದ ಬೀಗಿದ ಆನೆ!


ಒಟ್ಟಾರೆ ಭಯಾನಕವಾದ ಈ ವೀಡಿಯೋವನ್ನುನೋಡಿದ ನೆಟ್ಟಿಗರು ಆಶ್ಚರ್ಯಗೊಂಡದ್ದು ಮಾತ್ರವಲ್ಲದೆ ಭಯಭೀತರಾಗಿದ್ದಾರೆ ಅಲ್ಲದೆ ಆ ವ್ಯಕ್ತಿಯ ಧೈರ್ಯಕ್ಕೆ ಬೆರಗಾಗಿದ್ದಾರೆ. ಆದರೆ ಮನುಷ್ಯನ ಜೊತೆ ಇಂತಹ ಪ್ರಾಣಿಗಳ ಒಡನಾಟದಿಂದ ಅವುಗಳಿಗೂ ಮಾನವರಂತೆ ಭಾವನೆಗಳಿವೆ, ಸ್ಪಂದಿಸುವ ಗುಣಗಳಿವೆ, ಮನುಷ್ಯರೊಡನೆ ಬೆರೆಯುವ ಮನಸ್ಸಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದಾಗಿದೆ.

Published by:Nalini Suvarna
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು