ರಸ್ತೆಯಲ್ಲಿ (Road) ನಡೆಯುವಾಗ ನಾವು ಸದಾ ಜಾಗೃತರಾಗಿರಬೇಕು. ಏಕೆಂದರೆ ಯಾವಾಗ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ರಸ್ತೆ ಅಪಘಾತಗಳ (Accident) ಅನೇಕ ವಿಡಿಯೋಗಳನ್ನು ನೀವು ನೋಡಿರಬೇಕು. ಕೆಲವು ವಿಡಿಯೋಗಳಲ್ಲಿ, ಭೀಕರ ಅಪಘಾತಗಳಿಂದಲೂ ಅನೇಕ ಜೀವಗಳನ್ನು ಉಳಿಸಿರುವುದನ್ನು ನೀವು ನೋಡಿರಬಹುದು. ಅದೃಷ್ಟ ಚೆನ್ನಾಗಿತ್ತು ಅಂದರೆ ಎಂತಹ ಮರಣ ಬಾವಿಗೆ ಬಿದ್ರೂ ಹೊರಗೆ ಬರಬಹುದು. ಇಂತಹ ಅನೇಕ ಉದಾಹರಣೆಗಳು ನಮ್ಮ ಜೀವನದಲ್ಲೂ ಸಾಕಷ್ಟು ಬಾರಿ ಆಗಿರುತ್ತದೆ. ಜಸ್ಟ್ ಮಿಸ್ (Just miss) ಮಗ ಇಲ್ಲಾಂದ್ರೆ ಹೊಗೆನೇ ಅಂತ ಅದೆಷ್ಟೋ ಬಾರಿ ನಾವೇ ಮಾತಾಡಿಕೊಂಡಿರುತ್ತೇವೆ. ಈ ರೀತಿಯ ಅನೇಕ ವೈರಲ್ ವಿಡಿಯೋಗಳನ್ನು (Viral Video) ನಾವು ನೋಡುತ್ತೇವೆ ಅಲ್ವಾ?
ಹೀಗಿರುವಾಗ ಇಲ್ಲೊಂದು ಘಟನೆ ನಡೆದಿದೆ. ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ ಈ ವಿಡಿಯೋ. ಇದನ್ನು ನೋಡ್ತಾ ಇದ್ರೇ ನೀವೇ ಪಕ್ಕಾ ಹೇಳ್ತೀರ ಅದೃಷ್ಟ ಅಂದ್ರೆ ಇವನದ್ದೇ ಅಂತ. ಈ ವಿಡಿಯೋದಲ್ಲಿರುವ ವ್ಯಕ್ತಿಗೂ ಅದೇ ಸಂಭವಿಸಿದೆ. ಕೆಲವೇ ಸೆಕೆಂಡುಗಳಲ್ಲಿ ಅವನ ಜೀವ ಉಳಿಯುತ್ತದೆ. ಇಲ್ಲದಿದ್ದರೆ ಆತನಿಗೆ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮೊದಲು ಈ ವಿಡಿಯೋ ನೋಡಿ.
ಇದನ್ನೂ ಓದಿ: ಜೀವರಕ್ಷಣೆಗೆ ಅಂತ ನೀವು ಸೇವಿಸುವ ಮಾತ್ರೆಗಳು ನಕಲಿಯಂತೆ! ಡ್ರಗ್ಸ್ ಕಂಪನಿ ಮೇಲೆ ಕಣ್ಣಿಟ್ಟ ಇಲಾಖೆ
ಈ ವೈರಲ್ ವಿಡಿಯೋ ವಿದೇಶದಿಂದ ಬಂದಿದೆ. ಇದರಲ್ಲಿ ಯುವಕನೊಬ್ಬ ಮರದ ಕೆಳಗೆ ಛತ್ರಿ ಹಿಡಿದು ನಿಂತಿದ್ದಾನೆ, ಅವನಿಗೆ ಒಂದು ರೀತಿಯ ಶಬ್ದ ಕೇಳುತ್ತದೆ. ತಲೆ ಎತ್ತಿ ನೋಡಿದಾಗ ಮರ ಬೀಳುವ ಹಂತದಲ್ಲಿದೆ. ನಂತರ ಅವನು ಒಂದು ಸೆಕೆಂಡ್ ತಡ ಮಾಡದೆ ಓಡಿಹೋಗಲು ಪ್ರಯತ್ನಿಸುತ್ತಾನೆ. ಓಡಲು ಪ್ರಯತ್ನಿಸಿದಾಗ ದಢಕ್ಕೆನೆ ಜಾರಿ ಬೀಳುತ್ತಾನೆ. ಅದೇ ಸಮಯಕ್ಕೆ ಮರದ ಕೊಂಬೆಯು ಬೀಳುತ್ತದೆ. ಜಸ್ಟ್ 3 ಇಂಚುವಿನ ಅಂತರದಲ್ಲಿ ಕೊಂಬೆ ಬೀಳುತ್ತದೆ. ಅದೃಷ್ಟವಶಾತ್ ಈ ಯುವಕನ ಮೇಲೆ ಮರ ಬಿದ್ದಿಲ್ಲ. ಆದರೆ ಪಕ್ಕಕ್ಕೆ ಹೋಗದಿದ್ದರೆ ಈ ಯುವಕನಿಗೆ ಏನಾಗುತ್ತಿತ್ತು ಎಂಬುದನ್ನು ವಿಡಿಯೋದಲ್ಲಿ ನೋಡಬಹುದು.
ಅಲ್ಲದೆ, ದಟ್ಟವಾದ ಮರದ ಕೊಂಬೆಯೊಂದು ಅವರ ಹೊಟ್ಟೆಯ ಸಮೀಪವೇ ಬಿದ್ದಿದೆ. ಆ ಕೊಂಬೆ ಅವನ ತಲೆಯ ಮೇಲೆ ಬಿದ್ದಿದ್ದರೆ, ಅದು ತುಂಬಾ ವಿದ್ರಾವಕ ಆಗ್ತಾ ಇತ್ತು. ವೈರಲ್ ಆಗಿರುವ ಈ ವಿಡಿಯೋ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ವ್ಯಕ್ತಿಯ ಅದೃಷ್ಟಕ್ಕೆ ಜನರು ಬೆರಗಾಗಿದ್ದಾರೆ. ಕಣ್ಣು ಹಾಕೋದು ಬೇಡ. ಪಾಪಾ ಬದುಕಿದೆ ಬಡ ಜೀವ ಎನ್ನುವ ಹಾಗೆ ಆ ವ್ಯಕ್ತಿ ಇದ್ದಾನೆ.
ಯಮರಾಜನಿಗೆ ಇವತ್ತು ರಜೆ ಸಿಕ್ಕಿರಬೇಕು ಅಂತಲೂ ಹಲವರು ಹೇಳುತ್ತಾರೆ. ಈ ವೀಡಿಯೋ ನೋಡಿದ ನಂತರ ನಿಮಗೂ ಅದೇ ಅನಿಸುವುದು ಖಂಡಿತ. ಆದರೆ ಈ ವ್ಯಕ್ತಿಯ ಹತ್ತಿರ ಇದ್ದ ನಾಯಿ ಏನಾಯಿತು ಎಂಬುದು ತಿಳಿದುಬಂದಿಲ್ಲ. ಈ ವೀಡಿಯೊವನ್ನು ಟ್ವಿಟರ್ ಖಾತೆ @BornAKang ಮೂಲಕ ಹಂಚಿಕೊಂಡಿದ್ದಾರೆ. 2 ಮಿಲಿಯನ್ಗಳಷ್ಟು ಲೈಕ್ಸ್ ಬಂದಿದೆ ಸಾವಿರಾರು ಕಮೆಂಟ್ಗಳು ಬಂದಿದೆ.
How you dive into harms way pic.twitter.com/scH40KfSHT
— Lance🇱🇨 (@BornAKang) December 28, 2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ