Car Accident: ಅಪಘಾತ ನಿಲ್ಲಿಸಲು ಕಿಟಕಿಯೊಳಗೆ ಹಾರಿ ಕಾರು ನಿಲ್ಲಿಸಿದ ಯುವಕ! ವಿಡಿಯೋ ವೈರಲ್
Viral Video: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಅಪಘಾತವಾಗುವುದನ್ನು ತಪ್ಪಿಸುವ ಸಲುವಾಗಿ ಕಾರಿನ ಮುಂಭಾಗದ ಕಿಟಕಿಯ ಮೂಲಕ ಒಳಕ್ಕೆ ಜಿಗಿದ ವ್ಯಕ್ತಿಯೊಬ್ಬರು ಅಪಘಾತವಾಗುವುದನ್ನು ತಪ್ಪಿಸಿರುವ ವೀರೋಚಿತ ಘಟನೆ ಇತ್ತೀಚೆಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Viral Video: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಅಪಘಾತವಾಗುವುದನ್ನು ತಪ್ಪಿಸುವ ಸಲುವಾಗಿ ಕಾರಿನ ಮುಂಭಾಗದ ಕಿಟಕಿಯ ಮೂಲಕ ಒಳಕ್ಕೆ ಜಿಗಿದ ವ್ಯಕ್ತಿಯೊಬ್ಬರು ಅಪಘಾತವಾಗುವುದನ್ನು ತಪ್ಪಿಸಿರುವ ವೀರೋಚಿತ ಘಟನೆ ಇತ್ತೀಚೆಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು (Car) ಅಪಘಾತವಾಗುವುದನ್ನು ತಪ್ಪಿಸುವ ಸಲುವಾಗಿ ಕಾರಿನ ಮುಂಭಾಗದ ಕಿಟಕಿಯ ಮೂಲಕ ಒಳಕ್ಕೆ ಜಿಗಿದ ವ್ಯಕ್ತಿಯೊಬ್ಬರು ಅಪಘಾತವಾಗುವುದನ್ನು (Accident) ತಪ್ಪಿಸಿರುವ ವೀರೋಚಿತ ಘಟನೆ ಇತ್ತೀಚೆಗೆ ಸಿಸಿಟಿವಿ ಕ್ಯಾಮೆರಾದಲ್ಲಿ (CC TV Camera) ಸೆರೆಯಾಗಿದೆ. ಈ ಘಟನೆ ಬ್ರೆಜಿಲ್ (Brazil) ನಲ್ಲಿ ನಡೆದಿದೆ ಎಂದು ತಿಳಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರಿ ವೈರಲ್ ಆಗುತ್ತಿದೆ. ಜನರಲ್ಲಿ ಅಚ್ಚರಿ ಮೂಡಿಸಿ ಎದೆ ಝಲ್ ಎನ್ನುವಂತೆ ಮಾಡುತ್ತದೆ. ವಿಡಿಯೋದಲ್ಲಿ ಕಪ್ಪು ಕಾರು ಒಂದು ಚೌಕಟ್ಟಿಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಕಾರಿನ ಅರ್ಧಭಾಗ ಪಾದಚಾರಿ ಮಾರ್ಗದಲ್ಲಿ ಇರುವುದರಿಂದ ಕಾರು ಚಾಲಕನ ನಿಯಂತ್ರಣ ತಪ್ಪಿದೆ ಎಂದು ತಿಳಿದುಬಂದಿದೆ. ಅಲ್ಲಿಯೇ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು ಕೂಡಲೇ ಓಡಿ ಹೋಗಿ ಮುಂಭಾಗದ ಕಿಟಕಿಯ ಮೂಲಕ ಕಾರಿನ ಒಳಕ್ಕೆ ಹಾರಿದ್ದಾರೆ.
ವಿಡಿಯೋದಲ್ಲಿ ಏನಿದೆ:
r/BeAmazed ಎಂಬ ರೆಡ್ಡಿಟ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಆಗಿದೆ. ಇಬ್ಬರು ಯುವಕರು ಭಯಗೊಂಡು ರಸ್ತೆಯತ್ತ ಓಡಿ ಬರುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಅಷ್ಟರಲ್ಲಿ ಕಾರೊಂದು ಇಳಿಜಾರಿನಿಂದ ಸಾಗುತ್ತಾ ಬರುತ್ತಿರುತ್ತದೆ. ಇದನ್ನು ಕಂಡ ಓರ್ವ ಯುವಕ ಕಾರಿನ ಕಿಟಕಿಯೊಳಗೆ ಹಾರಿ ತಕ್ಷಣ ಹ್ಯಾಂಡ್ ಬ್ರೇಕ್ (Hand Break) ಹಾಕಿದ್ದಾನೆ. ಹೀಗಾಗಿ ಸ್ವಲ್ಪದೂರ ಹೋಗಿ ವಾಹನ ನಿಂತಿದೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಆ ರಸ್ತೆಯಲ್ಲಿ ಯಾವುದೇ ಬೇರೆ ವಾಹನವಾಗಲಿ, ಮಕ್ಕಳು- ಹಿರಿಯರು ಯಾರೂ ಸಾಗುತ್ತಿರಲಿಲ್ಲ. ಹೀಗಾಗಿ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಇನ್ನು ಯುವಕನ ಕಾರ್ಯಕ್ಕೆ ವಿಡಿಯೋ ನೋಡಿದ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದು ಸುಲಭದ ಮಾತಲ್ಲ. ಚಲಿಸುತ್ತಿರುವ ಕಾರಿನೊಳಗೆ ಹಾರಿ ವಾಹನವನ್ನು ನಿಲ್ಲಿಸುವುದು ಸುಲಭದ ಮಾತಲ್ಲ.
ವಿಡಿಯೋ ಬಗ್ಗೆ ವೀಕ್ಷಕರು ಹೇಳಿದ್ದೇನು?
"ಜೀಸಸ್ ಅದು ನಿಜವಾಗಿಯೂ ಅಪಾಯಕಾರಿ". ಕಾರು ಹೇಗೆ ನಿಂತಿತು (ಸ್ಕಿಡ್ಡಿಂಗ್) ಮೂಲಕ ಅವನು ಹ್ಯಾಂಡ್ಬ್ರೇಕ್ ಅನ್ನು ಹೊಡೆದಿದ್ದಾನೆ ಎಂದು ನಾನು ಭಾವಿಸುತ್ತೇನೆ ಮತ್ತು ಕೆಲವು ಕಾರುಗಳಲ್ಲಿ ಅದು ಯಾವಾಗಲೂ ಇರುತ್ತದೆ ಎಂದು ಭಾವಿಸುವುದಿಲ್ಲ ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
"ಈ ಮನುಷ್ಯ ಮುಖ್ಯ ಪಾತ್ರ" ಎಂದು ಟ್ವಿಟ್ಟರ್ (Twitter) ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಇನ್ನೊಬ್ಬರು ಬರೆದಿದ್ದಾರೆ, " ಕಾರು ಚಾಲಕನ ಉಡುಪುಗಳ ಬಗ್ಗೆ ಬರೆದುಕೊಂಡಿದ್ದಾರೆ. "ಇದು ಚಲನಚಿತ್ರದ ದೃಶ್ಯದಂತಿದೆ, ಆದರೆ ಇನ್ನೂ ಹೆಚ್ಚು ಅಪಾಯಕಾರಿ" ಎಂದು ಇನ್ನೊಬ್ಬರು ಬರೆದಿದ್ದಾರೆ.
ವಾಹನಗಳನ್ನು ಪಾರ್ಕ್ ಮಾಡುವಾಗ ಬಹಳ ಎಚ್ಚರಿಕೆ ವಹಿಸುವುದು ಅಗತ್ಯ. ಮುಖ್ಯವಾಗಿ ಇಳಿಜಾರು ಪ್ರದೇಶಗಳಲ್ಲಿ ಇಂತಹ ಜಾಗರೂಕತೆಯನ್ನು ವಹಿಸಬೇಕು. ಆದರೆ ಕೆಲವೊಮ್ಮೆ ಹ್ಯಾಂಡ್ ಬ್ರೇಕ್ (Hand Break) ಹಾಕುವುದಕ್ಕೆ ಮರೆಯುತ್ತಾರೆ. ಇದು ಕೂಡ ಅಂತಹ ಅಜಾಗರೂಕತೆಯಿಂದ ಸಂಭವಿಸಿದ ಘಟನೆಯಾಗಿದೆ. ಆದರೆ ವ್ಯಕ್ತಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.
Published by:Ashwini Prabhu
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ