Viral Video : ಟ್ರೆಂಡ್​ ಅನುಕರಿಸಲು ಹೋದರೆ ಹೀಗೆ ಆಗೋದು..!

ಇಲ್ಲೊಬ್ಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ನೋಡಿದ ಟ್ರೆಂಡ್​ನ್ನು ಅನುಕರಿಸಲು ಹೋಗಿ ಅನಾಹುತ ಮಾಡಿಕೊಂಡಿದ್ದಾನೆ. ಕುದಿಯುವ ನೀರಿನ ಜೊತೆ ಸರಸವಾಡಲು ಹೋಗಿ ಅಪಾಯ ಮಾಡಿಕೊಂಡಿದ್ದಾನೆ. ಕುದಿಯುವ ನೀರಿನೊಂದಿಗೆ ದುಸ್ಸಾಹಸ ಮಾಡಲು ಹೋದ ಆ ವ್ಯಕ್ತಿ ಕ್ರಿಸ್ ಕೀಗರ್.

Latha CG | news18
Updated:February 6, 2019, 2:25 PM IST
Viral Video : ಟ್ರೆಂಡ್​ ಅನುಕರಿಸಲು ಹೋದರೆ ಹೀಗೆ ಆಗೋದು..!
ಅನಾಹತ ಮಾಡಿಕೊಂಡ ವ್ಯಕ್ತಿ
Latha CG | news18
Updated: February 6, 2019, 2:25 PM IST
'ಏನೋ ಮಾಡಲು ಹೋಗಿ ಏನೋ ಆಯ್ತು ಎಂಬುದಕ್ಕೆ' ಈ ಘಟನೆ ಅತ್ಯುತ್ತಮ ಉದಾಹರಣೆ. ಕೆಲವೊಮ್ಮೆ ತಮಾಷೆ ಮಾಡಲು ಹೋಗಿ ದುರಂತ ಸಂಭವಿಸಿಬಿಡುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಟ್ರೆಂಡಿಂಗ್​ ವಿಡಿಯೋಗಳು ಹೆಚ್ಚು ವೈರಲ್​ ಆಗುತ್ತಿವೆ. ಅವುಗಳನ್ನು ನೋಡಿ ಎಂಜಾಯ್​ ಮಾಡಿದರೆ ತೊಂದರೆ ಇಲ್ಲ. ಆದರೆ ಅನುಕರಿಸಲು ಹೋದಾಗ ಯಡವಟ್ಟುಗಳು ಆಗುತ್ತವೆ.

ಇಲ್ಲೊಬ್ಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ನೋಡಿದ ಟ್ರೆಂಡ್​ನ್ನು ಅನುಕರಿಸಲು ಹೋಗಿ ಅನಾಹುತ ಮಾಡಿಕೊಂಡಿದ್ದಾನೆ. ಕುದಿಯುವ ನೀರಿನ ಜೊತೆ ಸರಸವಾಡಲು ಹೋಗಿ ಅಪಾಯ ಮಾಡಿಕೊಂಡಿದ್ದಾನೆ. ಕುದಿಯುವ ನೀರಿನೊಂದಿಗೆ ದುಸ್ಸಾಹಸ ಮಾಡಲು ಹೋದ ಆ ವ್ಯಕ್ತಿ ಕ್ರಿಸ್ ಕೀಗರ್.



ಸೊನ್ನೆಗಿಂತ ಕಡಿಮೆ ಡಿಗ್ರಿ ಸೆಲ್ಸಿಯಸ್ ವಾತಾವರಣದಲ್ಲಿ ಕುದಿಯುವ ನೀರನ್ನು ಒಂದು ಬೌಲ್‍ನಿಂದ ಮೇಲಕ್ಕೆ ಚಿಮ್ಮಿಸುತ್ತಾ, ಹಾಗೆ ಹಿಂದಕ್ಕೆ ಬಾಗುತ್ತಾ, ಚಿಮ್ಮುವ ಆ ನೀರಿನಿಂದ ಅರ್ಧ ವೃತ್ತಾಕಾರದ ರಚನೆ ಮೂಡಿಸುವುದು ಹಾಗೂ ಅಷ್ಟರಲ್ಲಿ ಆ ಕುದಿಯುವ ನೀರು ತಂಪಾಗಿದ್ದನ್ನು ಅನುಭವಿಸುವುದೊಂದು ಟ್ರೆಂಡ್ ಆಗಿತ್ತು. ಆದರೆ ಆತ ಹಾಗೆ ಮಾಡಿದ ನೀರು ಆತನ ಮೊಣಕಾಲಿನ ಹಿಂಭಾಗದ ಮೇಲೆ ಬಿಸಿಯಾಗಿಯೇ ಬಿದ್ದಿದೆ.

ವೈರಲ್​ ವಿಡಿಯೋ | ಈ ಕ್ಯೂಟ್​ ಬೇಬಿ ಕ್ಯೂಟ್​ನೆಸ್​ಗೆ ಫಿದಾ ಆಗದವರೇ ಇಲ್ಲ..!

ಇದು ಟ್ರೆಂಡ್​ ಫಾಲೋ ಮಾಡುವ ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಎಚ್ಚರಿಕೆಯ ಗಂಟೆ ಎಂದರೂ ತಪ್ಪಿಲ್ಲ. ಟ್ರೆಂಡ್​ ನೋಡಿ ಖುಷಿ ಪಡಿ, ಆದರೆ ಪ್ರಯತ್ನಿಸಲು ಹೋಗಬೇಡಿ, ಹೋದರೆ ಇಂತಹ ಅನಾಹುತಗಳಾಗುತ್ತವೆ ಎಂಬ ಪಾಠವನ್ನು ಈ ವಿಡಿಯೋ ಹೇಳುತ್ತಿದೆ.

First published:February 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ