ಏರ್ ಕಂಡೀಷನರ್​ಗೆ ಹಣ ಹಾಕುವ ಬದಲು ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ ತಂಪಾದ ಗಾಳಿ ಪಡೆಯಿರಿ..!

ಬೇಸಿಗೆ ಬಂತೆಂದರೆ ಏರ್ ಕಂಡೀಷನರ್​ಗಳ ಬೆಲೆ ಗಗನಕ್ಕೇರುತ್ತವೆ. ಅದನ್ನು ಖರೀದಿಸಲಾಗದವರಿಗಾಗಿ ಮನೆಯಲ್ಲೇ ಸಿಗುವ ವಸ್ತುಗಳಿಂದ ತಂಪಾದ ಗಾಳಿ ಪಡೆಯುವ ಐಡಿಯಾ ಒಂದನ್ನು ಓರ್ವ ವ್ಯಕ್ತಿ ಕಂಡು ಹಿಡಿದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಏರ್​ ಕಂಡೀಷನರ್​ಗೆ ಬೇಸಿಗೆ ಕಾಲದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರುತ್ತದೆ. ಇದನ್ನು ಬಡವರು ಕೊಳ್ಳುವುದು ಅಸಾಧ್ಯವೇ. ಏಕೆಂದರೆ ಅದರ ಬೆಲೆ ಅಷ್ಟೊಂದು ದುಬಾರಿ ಇರುತ್ತದೆ. ಇದೀಗ ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿಕೊಂಡು ಎಸಿ ಮಾಡುವುದು ಹೇಗೆ ಎಂದು ಒಬ್ಬ ವ್ಯಕ್ತಿ ತೋರಿಸಿಕೊಟ್ಟಿದ್ದು, ಆ ವಿಡಿಯೋ ಇದೀಗ ವೈರಲ್ ಆಗಿದೆ. ವರದಿಗಳ ಪ್ರಕಾರ, ಇಂಗ್ಲೆಂಡ್, ವೇಲ್ಸ್‌ನ ಕೆಲವು ಭಾಗಗಳು ಬೇಸಿಗೆಯ ತಾಪಕ್ಕೆ ತತ್ತರಿಸಿವೆ. ಬ್ರಿಟನ್‍ನಲ್ಲೂ ವರ್ಷದಲ್ಲೇ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಬ್ರಿಟನ್‍ ಕೆಲವು ಭಾಗಗಳಲ್ಲಿ ಅತಿ ಹೆಚ್ಚು ಶಾಖ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ವರದಿಗಳ ಪ್ರಕಾರ, ವೇಲ್ಸ್‌ನ ಹೆಚ್ಚಿನ ಭಾಗಗಳು ಹಾಗೂ ನೈಋತ್ಯ ಇಂಗ್ಲೆಂಡಿನ ಎಲ್ಲಾ ಭಾಗಗಳು ಮತ್ತು ದಕ್ಷಿಣ ಹಾಗೂ ಮಧ್ಯ ಇಂಗ್ಲೆಂಡ್‍ನ ಕೆಲವು ಭಾಗಗಳಲ್ಲೂ ಶಾಖದ ಬಿಸಿ ತಟ್ಟಲಿದೆ ಎಂದು ಹೇಳಿತ್ತು.

ಹಾಗಾಗಿ ಇಲ್ಲಿನ ಪ್ರತಿಯೊಬ್ಬರ ಮನೆಯಲ್ಲೂ ಜನರು ಫ್ಯಾನ್‍ಗಳು, ಕೂಲರ್‌ಗಳು ಹಾಗೂ ಏರ್​ ಕಂಡೀಷನರ್​ಗಳನ್ನು ಬಳಸಿಕೊಂಡು ಮನೆಯಲ್ಲಿನ ತಾಪಮಾನ ತಗ್ಗಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಈ ಮಧ್ಯೆ ಕೂಲರ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಅದೇ ರೀತಿಯಲ್ಲಿ ವಿದ್ಯುತ್ ಬಳಕೆ ಸಹ ಹೆಚ್ಚಾಗುತ್ತಿದೆಯಂತೆ.

ds


@sam.southall02 ಎಂಬುವರ ಐಡಿಯಾವನ್ನು ನೀವೂ ಫಾಲೋ ಮಾಡುವ ಮೂಲಕ ನಮ್ಮ ಬೇಡಿಕೆಯ ಜೊತೆಗೆ ತಂಪನ್ನು ಸಹ ಪಡೆಯಬಹುದು. ಸ್ಯಾಮ್ ಒಂದು ಎಸಿ ಘಟಕ ತೆರೆದಿದ್ದು, ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ಎಸಿ ತಯಾರು ಮಾಡಿದ್ದಾರೆ.

ಮೊದಲು ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಬೇಕು. ನಂತರ ಫ್ರಿಡ್ಜ್​ನಲ್ಲಿಟ್ಟ ನೀರಿನ ಬಾಟಲಿಯನ್ನು ತೆಗೆದುಕೊಳ್ಳಬೇಕು. ನಂತರ ಆ ಹೆಪ್ಪುಗಟ್ಟಿದ ನೀರನ್ನು ಮೇಜಿನ ಫ್ಯಾನ್‍ ಹಿಂದೆ ಇಡಬೇಕು. ಈ ಎಲ್ಲಾ ವಿಧಾನಗಳನ್ನು ಟಿಕ್‌ಟಾಕ್‌ ವಿಡಿಯೋ ಮೂಲಕ ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಕೈಯಲ್ಲಿ ಮತ್ತೊಂದು ಸಿನಿಮಾ: ಅಭಿಮಾನಿಗಳಿಗೆ ಸಿಕ್ತು ಸಿಹಿ ಸುದ್ದಿ..!

ಸಾಮಾನ್ಯ ಕೋಣೆಯ ಗಾಳಿಗೆ ಹೋಲಿಸಿದರೆ ಈ ಫ್ಯಾನ್‍ನಿಂದ ಬರುವ ಗಾಳಿಯು ಹೆಚ್ಚು ತಂಪಾಗಿರುತ್ತದೆ. ಆದರೆ ಒಂದು ನ್ಯೂನತೆಯೆಂದರೆ ಬಾಟಲಿಗಳಲ್ಲಿ ಹೆಚ್ಚು ಹೆಪ್ಪುಗಟಿದ ನೀರನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಸಾಧ್ಯವಿಲ್ಲ. ಹಾಗಾಗಿ ಇನ್ನಿತರೆ ಪರ್ಯಾಯ ತಂಪಿನ ವಸ್ತುಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಅದೇನೇ ಇರಲಿ ಹೆಚ್ಚಿನ ಶಾಖದ ಸಂದರ್ಭದಲ್ಲಿ ಎಸಿ ಬದಲಾಗಿ ಆರಾಮವಾಗಿ ಬಳಸಬಹುದು ಎಂದು ಒಪ್ಪಿಕೊಂಡಿದ್ದಾರೆ.

ಮುಚ್ಚಿದ ಕೋಣೆಯಲ್ಲಿರುವ ಫ್ಯಾನ್ ಕೋಣೆಯನ್ನು ಬಿಸಿಮಾಡುತ್ತದೆ. ಏಕೆಂದರೆ ಫ್ಯಾನ್ ಮೋಟಾರ್ ಹೆಚ್ಚು ಬಳಕೆಯಾದರೆ ಅದೂ ಶಾಖವನ್ನು ಉತ್ಪಾದಿಸುತ್ತದೆ. ಆದ್ದರಿಂದ ಕೋಲ್ಡ್ ಬಾಟಲ್ ಅಲ್ಪಾವಧಿಯ ಪರಿಣಾಮವಾಗಿದೆ ಎಂದು ಬಳಕೆದಾರರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Bigg Boss Kannada 8 Elimination: ಮಧ್ಯರಾತ್ರಿ ನಡೆದ ಎಲಿಮಿನೇಷನ್​ನಲ್ಲಿ ಬಿಗ್ ಬಾಸ್​ ಮನೆಯಿಂದ ಹೊರ ನಡೆದ ಸ್ಪರ್ಧಿ ಇವರೇ..!

ಇನ್ನು ಟಿಕ್‍ಟಾಕ್‍ನಲ್ಲಿ @thatpropertyguy ಎಂಬ ವ್ಯಕ್ತಿಯೂ ಇದೇ ರೀತಿ ಸೂಚಿಸಿದ್ದಾರೆ ಎಂದು ಬಳಕೆದಾರರೊಬ್ಬರು ಹೇಳಿದ್ದರು.

ಅಂದರೆ ಇವರ ಪ್ರಕಾರ, ಮನೆಯಲ್ಲಿನ ಪರದೆಗಳನ್ನು ಮುಚ್ಚಬೇಕು. ನಂತರ ಕೋಣೆಯ ಫ್ಯಾನ್‍ನ ಹಿಂದೆ ಬೌಲ್‍ನಲ್ಲಿ ಐಸ್ ಕ್ಯೂಬ್ಸ್, ನೀರನ್ನು ತುಂಬಿಸಿ ಇಡಬೇಕು. ಇದು ತಂಪಾದ ಗಾಳಿ ಪ್ರಸಾರ ಮಾಡುತ್ತದೆ ಎಂದು ಹೇಳಿದ್ದಾರೆ.(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
First published: