ಝೂಗಳಿಗೆ (Zoo) ಹೋದಾಗ ಅಲ್ಲಿ ನಿಮಗೆ ಪ್ರಾಣಿಗಳ ಜೊತೆ ಏನಾದರೂ ಆಟ ಆಡೋಣ ಅಂತ ಅನಿಸುತ್ತಾ? ಅವುಗಳಿಗೆ ಆಹಾರವನ್ನು ನೀಡಬೇಕು ಅಂತ ಅನಿಸುತ್ತಾ? ಇವೆಲ್ಲಾ ಅನಿಸೋದು ಸಾಮಾನ್ಯ ಬಿಡಿ. ಇದರಲ್ಲೇನು ತಪ್ಪಿಲ್ಲ. ಆದರೆ ಕೆಲ ಪುಂಡರು ಇರುತ್ತಾರೆ ಎಂದಿಗೂ ಇನ್ನೊಬ್ಬರಿಗೆ ಅಥವಾ ಇನ್ನೊಂದು ಜೀವಿಗೆ ಹಿಂಸೆಯನ್ನು ಕೊಡುತ್ತಾ ಇರುತ್ತಾರೆ. ಅದರಲ್ಲಿ ಏನೋ ಸುಖ (Happy) ಪಡೆಯುತ್ತಾರೆ. ಬೀದಿಯಲ್ಲಿ ತನ್ನ ಪಾಡಿಗೆ ತಾನು ಹೋಗುತ್ತಿರವ ನಾಯಿಗೆ ಕಲ್ಲು ಹೊಡೆಯುವುದು, ಅದಕ್ಕೆ ಏನಾದರೂ ತೊಂದರೆಗಳನ್ನು ಕೊಡುವುದರಲ್ಲಿ ಖುಷಿಯನ್ನು ಕಾಣುವ ವ್ಯಕ್ತಿಗಳು ನಮ್ಮ ಸುತ್ತಮುತ್ತ ಇದ್ದಾರೆ. ಹೀಗೆ ಮಾಡುವುದು ಒಂದಲ್ಲಾ ಒಂದು ದಿನ ತಿರುಗೇಟು ಬಿದ್ದೇ ಬೀಳುತ್ತದೆ. ಇದೇ ರೀತಿಯಾದ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಾ ಇದೆ.
ಹೌದು. ಯಾವ ಪ್ರಾಣಿಯಾದ್ರೂ ಸುಮ್ಮನಿದ್ರೂ ಕೋತಿ ಸುಮ್ಮನೆ ಇರೋದಿಲ್ಲ ಬಿಡಿ. ಏನಾದರೂ ಕಿತಾಪತಿ ಮಾಡುತ್ತಲೇ ಇರುತ್ತದೆ. ಎಷ್ಟೇ ಆದರೂ ಮಂಗನಿಂದ ಮಾನವ ಅಲ್ವಾ? ಹಾಗಾಗಿ ಈ ಕೋತಿ ಮತ್ತು ಅದರ ಜಾತಿಗೆ ಸೇರಿದ ಪ್ರಾಣಿಗಳ ತುಂಟಾಟ ನೋಡುವುದೇ ಚೆಂದ, ಏನ್ ಅಂತೀರಾ?
ಇದನ್ನೂ ಓದಿ: ಮೇಕಪ್ಗೆ ದುಡ್ಡು ಕೊಡದ ಗಂಡನ ಜೊತೆ ಬಾಳಲಾರೆ! ಡಿವೋರ್ಸ್ಗಾಗಿ ಕೋರ್ಟ್ ಮೆಟ್ಟಿಲೇರಿದ ಹೆಂಡತಿ!
ಇಲ್ಲೊಬ್ಬ ವ್ಯಕ್ತಿ ಝೂಗೆ ತೆರಳಿದ್ದಾನೆ. ಆತ ಈ ಗೋರಿಲ್ಲಾಗೆ ಏನೋ ತೊಂದರೆ ಕೊಟ್ಟಿರಬೇಕು ಅದಕ್ಕೆ ಅದು ಸುಮ್ಮನೆ ಇರುತ್ತಾ? ಅವನ ತಲೆಕೂದಲನ್ನು ಹಿಡಿದುಕೊಂಡು ಚೆನ್ನಾಗಿ ಎಳೆಯುತ್ತಿದೆ. ಈ ವಿಡಿಯೋ ಅಂತೂ ಸಖತ್ ವೈರಲ್ ಆಗಿದೆ. ಹೌದು, ನಾವು ಪ್ರಾಣಿಗಳನ್ನು ನೋಡಲು ಹೋದಾಗ ಸುಮ್ಮನೆ ದೂರದಿಂದ ನೋಡಿ, ಮಾತನಾಡಿಸಿ ಬರಬೇಕೇ ಹೊರತು ಅವುಗಳ ಪ್ರಪಂಚಕ್ಕೆ ಯಾವುದೇ ರೀತಿಯಾದ ಹಾನಿಗಳನ್ನು ಆಗುವ ರೀತಿ ಮಾಡಲಬಾರದು. ಇದರಿಂದ ನಮಗೇ ಹಾನಿ ಆಗುವುದು ಎಂಬುದಕ್ಕೆ ತಕ್ಕ ಸಾಕ್ಷಿ ಇಲ್ಲಿದೆ ನೋಡಿ.
whosunilgrover ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ 119K ಲೈಕ್ಸ್ ಬಂದಿದೆ, ಹಾಗೆಯೇ ನಾನಾರೀತಿಯ ಕಮೆಂಟ್ಗಳು ಕೂಡ ಬಂದಿದೆ. ಪ್ರಾಣಿಗಳಿಗೆ ತೊಂದರೆ ಕೊಡುವುದನ್ನು ಬಿಡಿ ಎಂಬ ಕಮೆಂಟ್ಗೆ ಬಾರೀ ಲೈಕ್ಸ್ ಬಂದಿದೆ.
View this post on Instagram
ಆ ವ್ಯಕ್ತಿ ಅದೆಷ್ಟೇ ಆ ಗೋರಿಲ್ಲವಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟರೂ ಕೂಡ ಅದು ಬಿಡೋದೇ ಇಲ್ಲ. ತನ್ನ ಬೋನ್ ಒಳಗಿನಿಂದೇ ಆತನ ಕೂದಲನ್ನು ಹಿಡಿದು ಎಳೆಯುತ್ತದೆ. ಈ ವಿಡಿಯೋವನ್ನು ನೋಡಿದ್ರೆ ನಿಮಗೇ ಗೊತ್ತಾಗುತ್ತೆ. ಹೀಗಾಗಿ ಇನ್ನುಮುಂದೆ ಆದ್ರೂ ಈ ರೀತಿಯಾಗಿ ಪ್ರಾಣಿಗಳಿಗೆ ಹಿಂಸೆ ಮಾಡೋದನ್ನು ಆದಷ್ಟು ತಪ್ಪಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ