• Home
  • »
  • News
  • »
  • trend
  • »
  • Viral Video: ಪುಟ್ಟ ಮಗು ಶವವನ್ನು ಹೆಗಲ ಮೇಲೆ ಹೊತ್ತ ವ್ಯಕ್ತಿ! ಸರ್ಕಾರಿ ಆಸ್ಪತ್ರೆಯಲ್ಲೂ ಬಡಜನರಿಗಿಲ್ಲ ಸವಲತ್ತು!

Viral Video: ಪುಟ್ಟ ಮಗು ಶವವನ್ನು ಹೆಗಲ ಮೇಲೆ ಹೊತ್ತ ವ್ಯಕ್ತಿ! ಸರ್ಕಾರಿ ಆಸ್ಪತ್ರೆಯಲ್ಲೂ ಬಡಜನರಿಗಿಲ್ಲ ಸವಲತ್ತು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಗುವಿನ ಶವ ಮನೆಗೆ ಸಾಗಿಸೋದಕ್ಕೆ ಆ್ಯಂಬುಲೆನ್ಸ್‌ ಕೊಡದೇ ಆಸ್ಪತ್ರೆ ಸಿಬ್ಬಂದಿ ಸತಾಯಿಸಿದ್ದಾರೆ. ಕೊನೆಗೆ ಆ ಮನೆಯ ವ್ಯಕ್ತಿಯೇ ಹೆಗಲ ಮೇಲೆ ಶವ ಹೊತ್ತು ಸಾಗಿದ್ದಾನೆ. ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ನಡೆದ ಈ ಮನಕಲಕುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • Share this:

ಭೋಪಾಲ್, ಮಧ್ಯಪ್ರದೇಶ: ಇಂದಿನ ಆಧುನಿಕ ಯುಗದಲ್ಲಿ ಎಲ್ಲಾ ರೀತಿಯ ವೈದ್ಯಕೀಯ ವ್ಯವಸ್ಥೆಯೂ (Medical System) ಇದೆ. ಆದರೆ ಅವೆಲ್ಲ ಬರೀ ಹಣವಂತರಿಗೆ (Rich) ಎನ್ನುವಂತಾಗಿದೆ. ಹೀಗಾಗಿ ಉತ್ತಮ ವೈದ್ಯಕೀಯ ಸವಲತ್ತುಗಳು (medical facilities) ಬಡವರಿಗೂ ಸಿಗಲಿ ಅಂತ ಸರ್ಕಾರವೇನೋ ಸರ್ಕಾರಿ ಆಸ್ಪತ್ರೆಗಳಲ್ಲಿ (Government Hospital) ಉಚಿತ ವೈದ್ಯಕೀಯ ಸೌಲಭ್ಯದ ವ್ಯವಸ್ಥೆ ಮಾಡಿದೆ. ಆದರೆ ಅದು ಎಲ್ಲಾ ಬಡವರಿಗೂ ಸಿಗುತ್ತಿಲ್ಲ ಎಂಬುದಕ್ಕೆ ಈ ಒಂದು ಘಟನೆಯೇ ನಿದರ್ಶನ. ಇಲ್ಲಿ ಬಡ ಕುಟುಂಬದ ಕಂದಮ್ಮ (Child) ಸರ್ಕಾರಿ ಆಸ್ಪತ್ರೆಗೆ ಬರುವ ಮುನ್ನವೇ ಕೊನೆಯುಸಿರೆಳೆದಿದೆ. ಆದರೆ ಮಗುವಿನ ಶವ ಮನೆಗೆ ಸಾಗಿಸೋದಕ್ಕೆ ಆ್ಯಂಬುಲೆನ್ಸ್‌ (Ambulance) ಕೊಡದೇ ಆಸ್ಪತ್ರೆ ಸಿಬ್ಬಂದಿ ಸತಾಯಿಸಿದ್ದಾರೆ. ಕೊನೆಗೆ ಅವಲ ಮನೆಯ ವ್ಯಕ್ತಿಯೇ ಹೆಗಲ ಮೇಲೆ ಶವ ಹೊತ್ತು ಸಾಗಿದ್ದಾನೆ. ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ (Madhya Pradesh's Bhopal) ನಡೆದ ಈ ಮನಕಲಕುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಅಪಘಾತದಲ್ಲಿ ಮೃತಪಟ್ಟ ಪುಟ್ಟ ಬಾಲಕಿ


ಮಧ್ಯ ಪ್ರದೇಶದಲ್ಲಿ ಅಪಘಾತದಲ್ಲಿ ನಾಲ್ಕು ವರ್ಷದ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದಳು. ಆದರೆ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಆಕೆ ಪ್ರಾಣ ಬಿಟ್ಟಿದ್ದಾಳೆ. ಬಳಿಕ ಆಕೆಯ ದೇಹವನ್ನು ಛತ್ತರ್‌ಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ಅಲ್ಲಿಂದ ಆಕೆಯ ಮೃತದೇಹವನ್ನು ಹಳ್ಳಿಗೆ ಕೊಂಡೊಯ್ಯಬೇಕಾಗಿತ್ತು. ಆದರೆ ಪುನಃ ಬಾಲಕಿಯ ಮೃತ ದೇಹ ಮನೆಗೆ ಸಾಗಿಸಲು ಸರ್ಕಾರಿ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಸಿಗಲಿಲ್ಲ ಎನ್ನಲಾಗಿದೆ.


ಬಾಲಕಿ ಶವ ಹೆಗಲ ಮೇಲೆ ಹೊತ್ತ ವ್ಯಕ್ತಿ


ಮೃತದೇಹ ಹೆಗಲ ಮೇಲೆ ಹೊತ್ತು ಸಾಗಿದ ವ್ಯಕ್ತಿ


ಪುಟ್ಟ ಬಾಲಕಿ ತನ್ನ ಗ್ರಾಮದಲ್ಲಿ ಸಾವನ್ನಪ್ಪಿದ್ದು, ಬಾಲಕಿಯ ಮೃತದೇಹವನ್ನು ಭುಜದ ಮೇಲೆ ಹೊತ್ತು ಆ ವ್ಯಕ್ತಿ ಆಂಬುಲೆನ್ಸ್ ಗಾಗಿ ಹುಡುಕುತ್ತಾ ಅಲೆದಿದ್ದಾರೆ. ಇತ್ತ ಸರ್ಕಾರಿ ಶವ ವಾಹನವೂ ಸಿಗದೆ ಖಾಸಗಿ ವಾಹನವೂ ಸಿಗದೆ ಆ ವ್ಯಕ್ತಿ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಬಂದು ತನ್ನ ಗ್ರಾಮಕ್ಕೆ ಬಸ್ ಹತ್ತಿದ್ದಾರೆ. ಆತನ ಬಳಿ ಬಸ್ ಟಿಕೆಟ್‌ಗೆ ಬೇಕಾದಷ್ಟು ಹಣವೂ ಇರಲಿಲ್ಲ. ಇನ್ನೊಬ್ಬ ಪ್ರಯಾಣಿಕರು ಟಿಕೆಟ್ ಹಣ ನೀಡಿ ಅವರಿಗೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ.



ಇದನ್ನೂ ಓದಿ: Notice To Hanuman: ಜಾಗ ಒತ್ತುವರಿ ಮಾಡ್ಕೊಂಡಿದ್ದಾನಂತೆ ಆಂಜನೇಯ! 10 ದಿನಗಳೊಳಗೆ ಖಾಲಿ ಮಾಡುವಂತೆ ನೋಟಿಸ್!


ಸಬೂಬು ಹೇಳುತ್ತಿರುವ ಆರೋಗ್ಯ ಸಿಬ್ಬಂದಿ


ಇನ್ನು ಈ ಘಟನೆ ಬಗ್ಗೆ ತಿಳಿದ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಪ್ರಕರಣದಲ್ಲಿ ವೈದ್ಯರ ಪಾತ್ರ ಏನಿಲ್ಲ ಅಂತ  ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ ಲಖನ್ ತಿವಾರಿ ಹೇಳಿದ್ದಾರೆ. ಮೃತ ದೇಹಗಳನ್ನು ಸಾಗಿಸಲು ವ್ಯವಸ್ಥೆ ಮಾಡುವುದು ನಗರಾಭಿವೃದ್ಧಿ ಇಲಾಖೆಯ ಕೆಲಸವಾಗಿದೆ. “ಆಸ್ಪತ್ರೆ ಮತ್ತು ಅದರ ವೈದ್ಯರನ್ನು ಇದಕ್ಕೆ ಎಳೆಯಬೇಡಿ ಎಂದು ನಾನು ಜನರನ್ನು ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.


ಆ್ಯಂಬುಲೆನ್ಸ್‌ಗಾಗಿ 5 ಸಾವಿರ ಕೇಳಿದ ಸಿಬ್ಬಂದಿ


ಸಾವನ್ನಪ್ಪಿರುವ ಮಗುವಿನ ದೇಹವನ್ನು ದಂಪತಿ ತಮ್ಮ ಬೈಕ್‌ನ ಸೈಡ್ ಬಾಕ್ಸ್​ನಲ್ಲಿರಿಸಿ ತಂದಿರುವ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿನಲ್ಲಿ ನಡೆದಿದೆ. ಮೃತಪಟ್ಟ ಮಗುವಿನ ದೇಹ ಸಾಗಿಸಲು ಆ್ಯಂಬುಲೆನ್ಸ್ ನೀಡಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ. 5 ಸಾವಿರ ಕೊಟ್ಟರೆ ಆ್ಯಂಬುಲೆನ್ಸ್ ಕೊಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: Weirdest Law: ಹಸು ಸೆಗಣಿ ಹಾಕಿದ್ರೂ ಕೊಡಬೇಕು ಟ್ಯಾಕ್ಸ್! ವಿಚಿತ್ರ ಕಾನೂನಿನಿಂದ ರೈತರು ಕಂಗಾಲು


ಮಗುವಿನ ಶವ ಹೊತ್ತು ತಂದ ತಾಯಿ


ಮಗುವಿನ ಮೃತದೇಹ ಬೈಕ್‌ ಬಾಕ್ಸ್‌ನಲ್ಲಿ ಸಾಗಾಟ


ಹೀಗಾಗಿ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ ಕಾರಣ ಈ ದಂಪತಿ ಮಗುವಿನ ದೇಹವನ್ನು ಬೈಕ್‌ನ ಸೈಡ್ ಬಾಕ್ಸ್‌ ಹಾಕಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಸಹಾಯ ಮಾಡುವಂತೆ ಮನವಿ ಮಾಡಲು ಬಂದಿದ್ದಾರೆ. ಈ ಘಟನೆ ವಿಡಿಯೋ ಕೂಡ ವೈರಲ್ ಆಗಿದೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು