Viral Video: ಮುನಿಸಿಕೊಂಡ ನಾಯಿಯನ್ನು ಖುಷಿಪಡಿಸಿದ ಕೀಟ! ಈ ಕ್ಯೂಟ್ ವಿಡಿಯೋ ನೀವೂ ನೋಡಿ

ಕೀಟವೊಂದು ತನಗಿಂತ ದೊಡ್ಡ ಪ್ರಾಣಿಯೊಂದು ಮುನಿಸಿಕೊಂಡು ಕೂತಾಗ, ಅದನ್ನು ಗಮನಿಸಿ, ಅದನ್ನು ನಗಿಸಲು ಪ್ರಯತ್ನ ಮಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲದಿದ್ದರೆ, ನೀವು ಈ ವಿಡಿಯೋ ನೋಡಲೇಬೇಕು...

ನಾಯಿ ಮತ್ತು ಮ್ಯಾಂಟಿಸ್ ಕೀಟ

ನಾಯಿ ಮತ್ತು ಮ್ಯಾಂಟಿಸ್ ಕೀಟ

  • Share this:
ಅನೇಕ ಬಾರಿ ಈ ಪ್ರಾಣಿಗಳು (Animal) ಮತ್ತು ಚಿಕ್ಕ ಚಿಕ್ಕ ಕೀಟಗಳು ತಮ್ಮ ಆಕರ್ಷಕ ವರ್ತನೆಗಳಿಂದಾಗಿ ಜನರನ್ನು ಮೆಚ್ಚಿಸುತ್ತವೆ. ಮನುಷ್ಯರಂತೆ, ಪ್ರಾಣಿಗಳು ಮತ್ತು ಕೀಟಗಳು (Insects) ಸಹ ಇತರರ ಬಗ್ಗೆ ಕಾಳಜಿ ಮತ್ತು ಪ್ರೀತಿಯನ್ನು ಹೊಂದಿರುತ್ತವೆ. ಅದನ್ನು ಅವುಗಳು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸುತ್ತವೆ. ಮನುಷ್ಯರು ಕಷ್ಟದಲ್ಲಿರುವಾಗ ಅವರನ್ನು ಸಂತೈಸಬಲ್ಲ ಕೆಲವು ಸ್ನೇಹಿತರನ್ನು (Friends) ಹೊಂದಿರುತ್ತಾರೆ. ಮನುಷ್ಯರು ಮಾತಿನ ರೂಪದಲ್ಲಿ ಅದನ್ನು ವ್ಯಕ್ತಪಡಿಸಿದರೆ, ಪ್ರಾಣಿಗಳು ಸನ್ನೆಯ ರೂಪದಲ್ಲಿ ಭಾವನೆಗಳನ್ನೂ ವ್ಯಕ್ತಪಡಿಸುತ್ತವೆ. ಒಟ್ಟಿನಲ್ಲಿ ಈ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಣಿಗಳ ಮಾತು ಕೀಟಗಳ ವಿಡಿಯೋ ನೋಡುವುದು ಎಂದರೆ ಕಣ್ಣಿಗೆ ಒಂದು ಹಬ್ಬವಿದ್ದಂತೆ.

ಮನುಷ್ಯರಂತೆ ಪ್ರಾಣಿಗಳಿಗೂ ಕಾಳಜಿ ಪ್ರೀತಿ ಇರುತ್ತೆ 
ಇಲ್ಲೊಂದು ಕೀಟವು ಒಂದು ಅದಕ್ಕಿಂತ ದೊಡ್ಡ ಪ್ರಾಣಿ ಮುನಿಸಿಕೊಂಡು ಕೂತಾಗ, ಅದನ್ನು ಗಮನಿಸಿ ಅದನ್ನು ನಗಿಸಲು ಪ್ರಯತ್ನ ಮಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲದಿದ್ದರೆ, ನೀವು ಈ ವಿಡಿಯೋ ನೋಡಲೇಬೇಕು. ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಶಿವನಕುದುರೆ ಅಂತೆ ಕಾಣುವ ಹುಳವೊಂದು (ಈ ಕಿಟಕ್ಕೆ ಇಂಗ್ಲೀಷ್ ನಲ್ಲಿ ಮ್ಯಾಂಟಿಸ್ ಅಂತ ಕರೆಯುತ್ತಾರೆ) ಅಸಮಾಧಾನಗೊಂಡ ನಾಯಿಯನ್ನು ನಗಿಸಲು ತನ್ನ ತೆಳುವಾದ ಕೈ ಕಾಲುಗಳಿಂದ ಏನಲ್ಲಾ ಕಸರತ್ತುಗಳನ್ನು ಮಾಡಿದೆ ನೀವೇ ನೋಡಿ.

ಇದನ್ನೂ ಓದಿ: Mermaid: ಮತ್ಸ್ಯಕನ್ಯೆಯಾಗಿ ಗುರುತಿಸಿಕೊಂಡು ತಿಂಗಳಿಗೆ 6 ಲಕ್ಷ ರೂಪಾಯಿ ದುಡಿಯುತ್ತಿದ್ದಾಳೆ ಈಕೆ!

ವಿಡಿಯೋದಲ್ಲಿ ಏನಿದೆ ನೋಡಿ
ಈ ಚಿಕ್ಕ ಕೀಟವು ಆ ನಾಯಿಯ ಮುಖದ ಮುಂದೆ ಹೋಗಿ ನಿಂತು ತನ್ನ ಕೈಗಳನ್ನು ಎತ್ತಿಕೊಂಡು ಡ್ಯಾನ್ಸ್ ಮಾಡಿದ ಹಾಗೆ ಇದೇ ಅದು. ಅದು ಡ್ಯಾನ್ಸ್ ಮಾಡುವಾಗ ಈ ವಿಡಿಯೋ ಪ್ರಾರಂಭವಾಗುತ್ತಿದ್ದಂತೆ ದುಃಖಿತ ನಾಯಿ ನೆಲದ ಮೇಲೆ ವಿಶ್ರಾಂತಿ ಪಡೆಯುತ್ತಿರುವುದನ್ನು ನಾವು ನೋಡಬಹುದು. ಈ ಕೀಟವು ತನ್ನ ಕಾಲುಗಳು ಮತ್ತು ಕೈಗಳನ್ನು ವಿವಿಧ ದಿಕ್ಕುಗಳಲ್ಲಿ ಬೀಸುವ ಮೂಲಕ ನಾಯಿಯನ್ನು ಹುರಿದುಂಬಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ ನಾಯಿ ಜಪ್ಪಯ್ಯ ಎಂದರೂ ನೆಲ ಬಿಟ್ಟು ಮೇಲೆ ಎದ್ದೇಳಲು ಸಿದ್ಧವಿಲ್ಲ.



ವಿಡಿಯೋ ಸಿಕ್ಕಾಪಟ್ಟೆ ವೈರಲ್
ಈ ವಿಡಿಯೋವನ್ನು ಬುಯಿಟೆಂಗೆಬಿಡೆನ್ ಶನಿವಾರ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. "ನಾಯಿ ಕೀಟದ ಆಟದಿಂದ ಪ್ರಭಾವಿತವಾಗಿಲ್ಲ" ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಇದನ್ನು ಹಂಚಿಕೊಂಡಾಗಿನಿಂದಲೂ ಈ ಪೋಸ್ಟ್ 3.8 ಮಿಲಿಯನ್ ವೀಕ್ಷಣೆಗಳನ್ನು ಮತ್ತು 1.1 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಇದನ್ನು ಕೇವಲ ಒಂದೇ ದಿನದಲ್ಲಿ 15,000 ಕ್ಕೂ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ಟ್ವಿಟರ್ ಬಳಕೆದಾರರಿಂದ ಹಲವಾರು ಹಾಸ್ಯಭರಿತ ಕಾಮೆಂಟ್ ಗಳನ್ನು ಸಹ ಸ್ವೀಕರಿಸಿದೆ.

ಇದನ್ನೂ ಓದಿ:  Viral Video: ಮಲಗಿರುವ ಸಿಂಹಿಣಿಯನ್ನು ಕೆಣಕಿದ ಸಿಂಹ; ಬಳಿಕ ಏನಾಯ್ತು? ಈ ವಿಡಿಯೋ ನೋಡಿ

"ನಾನು ... ನನ್ನ ಆರ್ಡರ್ ಅನ್ನು ನೀಡಲು ಬಾರ್ ಅಟೆಂಡರ್ ನ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತೇನೆ" ಎಂದು ಬಳಕೆದಾರರೊಬ್ಬರು ಹಾಸ್ಯವಾಗಿ ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು "ನಾಯಿ ಈ ರೀತಿಯ ಆಟಗಳಿಂದ ಖುಷಿ ಪಡುವುದಿಲ್ಲ, ಅದಕ್ಕೆ ಸಾಸೇಜ್ ಮಾಂಸ ಇಟ್ಟರೆ ಖುಷಿಯಾಗುತ್ತಿತ್ತು" ಅಂತ ಕಾಮೆಂಟ್ ಮಾಡಿದ್ದಾರೆ. ಮೂರನೆಯ ಬಳಕೆದಾರರು ಸರಳವಾಗಿ "ಅತ್ಯಂತ ಕೂಲ್ ಆದ ಕೀಟ ಇದು" ಅಂತ ಕಾಮೆಂಟ್ ಮಾಡಿದ್ದಾರೆ.

ಏನಿದು ಮ್ಯಾಂಟಿಸ್?
ಇಂಗ್ಲೀಷ್ ನಲ್ಲಿ ಮ್ಯಾಂಟಿಸ್ ಎಂದು ಕರೆಯಲ್ಪಡುವ ನಿಧಾನವಾಗಿ ಚಲಿಸುವ ಈ ಕೀಟಗಳಿಗೆ ಮುಂದೆ ಮತ್ತು ಹಿಂದೆ ದೊಡ್ಡ ತೆಳ್ಳಗಿನ ಕಾಲುಗಳಿರುತ್ತವೆ ಮತ್ತು ದೇಹದ ಭಾಗ ಸ್ವಲ್ಪ ಮೇಲೆ ಇರುತ್ತದೆ. ಅವು ಮೇಲೆ ದೊಡ್ಡ ಎರಡು ಕೈಗಳನ್ನು ಹೊಂದಿದ್ದು, ಇವು ಜೀವಂತ ಕೀಟಗಳನ್ನು ಮಾತ್ರ ತಿನ್ನುತ್ತವೆ. ಆದ್ದರಿಂದ ಈ ಜೀವಂತ ಕೀಟಗಳನ್ನು ಹಿಡಿಯಲು ತಮ್ಮ ಮುಂಗಾಲುಗಳನ್ನು ಬಳಸುತ್ತವೆ.
Published by:Ashwini Prabhu
First published: