• Home
  • »
  • News
  • »
  • trend
  • »
  • Viral Video: ಅಮ್ಮನೊಂದಿಗೆ ಸಂಸ್ಕೃತ ಶ್ಲೋಕ ಪಠಿಸುವ ಕಂದಮ್ಮ! ಆಧುನಿಕ ಅಭಿಮನ್ಯುವಿನ ವಿಡಿಯೋ ನೀವೂ ನೋಡಿ

Viral Video: ಅಮ್ಮನೊಂದಿಗೆ ಸಂಸ್ಕೃತ ಶ್ಲೋಕ ಪಠಿಸುವ ಕಂದಮ್ಮ! ಆಧುನಿಕ ಅಭಿಮನ್ಯುವಿನ ವಿಡಿಯೋ ನೀವೂ ನೋಡಿ

ಅಮ್ಮನೊಂದಿಗೆ ಶ್ಲೋಕ ಹೇಳುವ ಪುಟಾಣಿ

ಅಮ್ಮನೊಂದಿಗೆ ಶ್ಲೋಕ ಹೇಳುವ ಪುಟಾಣಿ

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ತಾಯಿ ಸಂಸ್ಕೃತ ಶ್ಲೋಕ ಹೇಳುತ್ತಿದ್ದಂತೆ, ಅದನ್ನು ಪುಟ್ಟ ಮಗು ಗಮನಿಸುತ್ತದೆ. ಬಳಿಕ ತಾಯಿ ಜೊತೆಗೆ ತಾನೂ ದನಿಗೂಡಿಸುತ್ತದೆ!

  • Share this:

ಮಕ್ಕಳ (Children) ಪಾಲಿಗೆ ಮನೆಯೇ ಮೊದಲ ಪಾಠಶಾಲೆ (Home is the first school), ತಾಯಿಯೇ ಮೊದಲ ಗುರು (Mother is the first teacher) ಅಂತಾರೆ. ಆಗ ತಾನೇ ಜಗತ್ತು ನೋಡುವ ಮಕ್ಕಳು ತಾಯಿಯನ್ನು ನೋಡುತ್ತಲೇ ಎಲ್ಲವನ್ನೂ ಕಲಿಯುತ್ತಾರೆ. ಒಳ್ಳೆಯದ್ದೋ, ಕೆಟ್ಟದ್ದೋ ಗೊತ್ತಿಲ್ಲ, ಆದರೆ ತಾಯಿಯಿಂದಲೇ ಎಲ್ಲವನ್ನೂ ತಿಳಿದುಕೊಳ್ಳುತ್ತಾರೆ. ಇಲ್ಲೀಗ ಪುಟ್ಟ ಮಗುವೊಂದು (Small Child) ತಾಯಿಯನ್ನು (Mother) ನೋಡಿ ಸಂಸ್ಕೃತ ಶ್ಲೋಕ (Sanskrit Shloka) ಹೇಳುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ವಿಡಿಯೋ ಭಾರೀ ವೈರಲ್ (Video Viral) ಆಗಿದೆ. ತಾಯಿ ಸಂಸ್ಕೃತ ಮಂತ್ರ (mantras) ಹೇಳುತ್ತಿದ್ದರೆ ಮಗುವೂ ಅದಕ್ಕೆ ದನಿಗೂಡಿಸುತ್ತದೆ. ಈ ವಿಡಿಯೋ ನೋಡಿ ನೆಟ್ಟಿಗರು ಸಂತಸ ಹಂಚಿಕೊಳ್ಳುತ್ತಿದ್ದು, ಈ ಮಗುವನ್ನು ‘ಆಧುನಿಕ ಅಭಿಮನ್ಯು’ (Modern Abhimanyu) ಅಂತ ಕೊಂಡಾಡುತ್ತಿದ್ದಾರೆ.


ಸಂಸ್ಕೃತ ಶ್ಲೋಕ ಪಠಿಸುವ ಪುಟ್ಟ ಮಗು


ಐಪಿಎಸ್​​ ಅಧಿಕಾರಿ ರಾಜೇಶ್​ ಹಿಂಗಾಂಕರ್​ ಎಂಬುವರು ಮಗುವೊಂದು ತನ್ನ ತಾಯಿಯೊಂದಿಗೆ ಸಂಸ್ಕೃತ ಶ್ಲೋಕ ಪಠಿಸುವ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ತಾಯಿ ಸಂಸ್ಕೃತ ಶ್ಲೋಕ ಹೇಳುತ್ತಿದ್ದಂತೆ, ಅದನ್ನು ಮಗು ಗಮನಿಸುತ್ತದೆ. ಬಳಿಕ ತಾಯಿ ಜೊತೆಗೆ ತಾನೂ ದನಿಗೂಡಿಸುತ್ತದೆ.



ಗರ್ಭಿಣಿಯಾಗಿದ್ದಾಗ ಶ್ಲೋಕ ಹೇಳುತ್ತಿದ್ದ ತಾಯಿ


ಪ್ರಾಥಮಿಕ ಮಾಹಿತಿ ಪ್ರಕಾರ ಮಗು ತಾಯಿಯ ಹೊಟ್ಟೆಯಲ್ಲಿದ್ದಾಗ ಇದನ್ನ ಕಲಿತಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಗರ್ಭಿಣಿಯಾಗಿದ್ದ ತಾಯಿ ಪ್ರತಿ ನಿತ್ಯ ಸಂಸ್ಕೃತ ಶ್ಲೋಕ ಪಠಣೆ ಮಾಡುತ್ತಿದ್ದರು ಎನ್ನಲಾಗಿದೆ.


ಇದನ್ನೂ ಓದಿ: Monkeypox: ಮಕ್ಕಳನ್ನೂ ಕಾಡುತ್ತಿದೆ ಮಂಕಿಪಾಕ್ಸ್, ಅಂಬೆಗಾಲಿಡುವ ಮಗುವಲ್ಲೂ ಪತ್ತೆಯಾಯ್ತು ಸೋಂಕು!


 ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್


ಈ ವಿಡಿಯೋ ಸಾವಿರಾರು ಜನರಿಂದ ವೀಕ್ಷಣೆಗೊಳಗಾಗಿದ್ದು, ಅನೇಕ ರೀತಿಯ ಅಭಿಪ್ರಾಯ ಸಹ ಹಂಚಿಕೊಂಡಿದ್ದಾರೆ. ಮಗು ಸಂಸ್ಕೃತ ಶ್ಲೋಕ ಹೇಳುವ ರೀತಿಗೆ ಜನ ಮನಸೋತಿದ್ದಾರೆ. ಮಗುವನ್ನು ಕಲಿಯುಗದ ಅಭಿಮನ್ಯು ಎಂದು ಕರೆಯುತ್ತಿದ್ದಾರೆ.


“ಅಭಿಮನ್ಯು ಮೇಲೆ ನಂಬಿಕೆ ಇರದಿದ್ದರೆ ಈ ವಿಡಿಯೋ ನೋಡಿ”


ಮಹಾಭಾರತದಲ್ಲಿ ಅಭಿಮನ್ಯು ಚಕ್ರವ್ಯೂಹ ವಿದ್ಯೆಯನ್ನು ತನ್ನ ತಾಯಿಯ ಗರ್ಭದಲ್ಲೇ ಕಲಿತ ವಿಧಾನದಲ್ಲಿ ಯಾರಿಗಾದರೂ ನಂಬಿಕೆ ಇಲ್ಲದಿದ್ದರೆ, ಕಲಿಯುಗದಲ್ಲಿ ಈ ವೀಡಿಯೊವನ್ನು ಖಂಡಿತವಾಗಿ ನೋಡಿ. ಪುಂಸವನ ಸಂಸ್ಕಾರದ ಮಹತ್ವವೇನು ಅಂತ ಇದರಲ್ಲೇ ತಿಳಿಯುತ್ತದೆ ಅಂತ ಟ್ವೀಟ್ ಮಾಡಿರುವ ಐಪಿಎಸ್​​ ಅಧಿಕಾರಿ ರಾಜೇಶ್​ ಹಿಂಗಾಂಕರ್ ಬರೆದುಕೊಂಡಿದ್ದಾರೆ.


ಪುಂಸವನ ಸಂಸ್ಕಾರ ಎಂದರೇನು?


ಹಿಂದೂ ಧರ್ಮದಲ್ಲಿ ಯಾವುದೇ ಮಗುವಿಗೆ 16 ಸಂಸ್ಕಾರಗಳನ್ನು ಪೂರ್ಣಗೊಳಿಸುವ ಕ್ರಮ ಇದೆ. ಅವುಗಳಲ್ಲಿ ಒಂದು ಪುಂಸವನ ಸಂಸ್ಕಾರ. ಪುಂ ಎಂದರೆ ಪುರುಷ. ಸವನ ಎಂದರೆ ಪ್ರಸವಿಸುವುದು. ತಾಯಿ 3 ತಿಂಗಳ ಗರ್ಭಿಣಿಯಾಗಿದ್ದಾಗ ಮಗುವಿನ ಪೋಷಕರು ಇದನ್ನು ಮಾಡುತ್ತಾರೆ. ಆರೋಗ್ಯವಂತ ಮಗುವಿನ ಪ್ರಾಪ್ತಿಗಾಗಿ ಇದನ್ನು ಮಾಡಲಾಗುತ್ತದೆ ಮತ್ತು ಮಹಿಳೆಯು ಮಗುವಿನೊಂದಿಗೆ ಮಾತನಾಡುವ ಈ ಮಂತ್ರವನ್ನು ತಾಯಿಯು ಪುಂಸವನ ಸಂಸ್ಕಾರದಲ್ಲಿ ಕೇಳುತ್ತಾಳೆ ಇದರಿಂದ ಮಗು ಅದನ್ನು ಕಲಿಯಬಹುದು ಎನ್ನಲಾಗುತ್ತದೆ.


ಇದನ್ನೂ ಓದಿ: Boy Death: 2ನೇ ವರ್ಷದ ಹುಟ್ಟುಹಬ್ಬವೇ ಕೊನೆಯಾಯ್ತು, ಸ್ವಿಮ್ಮಿಂಗ್ ಪೂಲ್‌ ಬಳಿ ಪಾರ್ಟಿ ಮಾಡುವಾಗಲೇ ದುರಂತ!


ಅಭಿಮನ್ಯುವಿನ ಕಥೆ ಏನು?


ಅಭಿಮನ್ಯು ಶ್ರೀಕೃಷ್ಣನ ತಂಗಿ ಹಾಗೂ ಅರ್ಜುನನ ಪತ್ನಿಯಾದ ಸುಭದ್ರೆಯ ಮಗ. ಅಭಿಮನ್ಯು ಸುಭದ್ರೆಯ ಗರ್ಭದಲ್ಲಿದ್ದಾಗ ಆಕೆಯನ್ನು ರಥದಲ್ಲಿ ಕರೆದೊಯ್ಯುವ ಸಂದರ್ಭದಲ್ಲಿ ಶ್ರೀಕೃಷ್ಣ ಚಕ್ರವ್ಯೂಹವನ್ನು ಪ್ರವೇಶಿಸುವ ವಿಧಾನವನ್ನು ವಿವರಿಸುತ್ತಿರುತ್ತಾನೆ. ಆದರೆ ಶ್ರೀ ಕೃಷ್ಣನ ವಿವರಣೆಯನ್ನು ಕೇಳುತ್ತಾ ಸುಭ್ರದ್ರೆ ನಿದ್ದೆಗೆ ಜಾರುತ್ತಾಳೆ, ಇದನ್ನು ಅರಿಯದ ಕೃಷ್ಣನಿಗೆ ತನ್ನ ವಿವರಣೆಗೆ "ಹೂಂ"ಎನ್ನುತ್ತಿರುವುದು ಮಾತ್ರ ಕೇಳಿಸುತ್ತಿರುತ್ತದೆ.  ಚಕ್ರವ್ಯೂಹ ಪ್ರವೇಶದ ಬಗ್ಗೆ ಹೇಳಿ ಮುಗಿಸಿ ತಿರುಗಿನ ಕೃಷ್ಣನಿಗೆ ಸುಭದ್ರೆ ಗಾಢ ನಿದ್ದೆ ಮಾಡುತ್ತಿರುವುದು ಕಾಣುತ್ತದೆ. ಹಾಗೆಯೇ ಅಷ್ಟು ಸಮಯವೂ ಹೂಂ ಎನ್ನುತ್ತಿದ್ದದ್ದು ಸುಭದ್ರಯ ಗರ್ಭದಲ್ಲಿದ್ದ ಮಗು ಎಂದು ತಿಳಿಯುತ್ತದೆ. ತಕ್ಷಣವೇ ತನ್ನ ವಿವರಣೆಯನ್ನು ನಿಲ್ಲಿಸಿದ ಆದರೆ ಚಕ್ರವ್ಯೂಹದಿಂದ ಹೊರಬರುವ ವಿಧಾನವನ್ನು ಮಾತ್ರ ಹೇಳಲಿಲ್ಲ. ಪರಿಣಾಮವಾಗಿ ಕುರುಕ್ಷೇತ್ರದ ಯುದ್ಧದಲ್ಲಿ ಚಕ್ರವ್ಯೂಹವನ್ನು ಪ್ರವೇಶಿಸಿ ಹೊರಬರಲಾಗದೇ ಮೃತನಾಗುತ್ತಾನೆ.

Published by:Annappa Achari
First published: