ಸಂಬಂಧಗಳ ನಡುವಿನ ಬದುಕು ಸುಂದರವಾದ ಪ್ರಪಂಚವಾಗಿರುತ್ತದೆ (World). ಅಲ್ಲಿ ಮಾತೃ ವಾತ್ಸಲ್ಯ,ಅಪ್ಪನ ಭಯ, ಅಜ್ಜಿಯ ಮಮತೆ, ಅಜ್ಜನ ಪ್ರೀತಿ, ಅಕ್ಕನ ಕಾಳಜಿ, ಅಣ್ಣನ ರಕ್ಷಣೆ (Safety) ಹೀಗೆ ಅನೇಕ ರೀತಿಯ ಬಂಧನಗಳ (Relationship) ಬೆಸುಗೆಯಿರುತ್ತದೆ. ಈ ಬೆಸುಗೆ ಎಲ್ಲರ ಜೀವನದ (Life) ಮೊದಲ ಸಂತೋಷವಾಗಿರುತ್ತದೆ (Happiness) . ಯಾರೂ ಕೂಡ ಈ ರೀತಿಯ ಸಂಬಂಧಗಳ ಹೊರತಾಗಿ ಜೀವಿಸಲು ಸಾಧ್ಯವಿಲ್ಲ. ಇತ್ತೀಚಿಗೆ ಇದಕ್ಕೆ ಪೂರಕ ಎಂಬಂತೆ ಪುಟ್ಟ ಅಣ್ಣ (Brother) ತಂಗಿಯ (Sister) ನಡುವಿನ ಪ್ರೀತಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ ಮತ್ತು ನೋಡುಗರ ಕಣ್ಣಲ್ಲಿ ಆನಂದಭಾಷ್ಪ ತರಿಸಿದೆ.
ಅಣ್ಣ ತಂಗಿ ನಡುವಿನ ಸಂಬಂಧ ಅದು ರಕ್ಷಣೆ ಮತ್ತು ಭದ್ರತೆಯ ಭರವಸೆಯಾಗಿರುತ್ತದೆ. ಸಹೋದರಿಯ ಕಾವಲುಗಾರ ನಂತಿರುವ ಅಣ್ಣ ಆಕೆಗೆ ಸದಾ ಬೆಂಬಲಿಗನಾಗಿರುತ್ತಾನೆ. ಆಕೆಯ ಸುರಕ್ಷತೆಯ ಬಗ್ಗೆ ಸದಾ ಚಿಂತಿಸುತ್ತಿರುತ್ತಾನೆ.
ಇದನ್ನೂ ಓದಿ: Heart Warming: ವಿಮಾನ ಹತ್ತಿದ ಪೋಷಕರು ಪೈಲಟ್ ಮಗನ ನೋಡಿ ಭಾವುಕ! ಚಂದದ ವಿಡಿಯೋ ಈಗ ವೈರಲ್
ತಂಗಿಯನ್ನು ಬೆನ್ನ ಮೇಲೆ ಕೂರಿಸಿಕೊಂಡು ಸಾಗಿದ ಬಾಲಕ
ಮಳೆಯಿಂದಾಗಿ ಎಲ್ಲಾ ಕಡೆಯಲ್ಲೂ ನೀರು ತುಂಬಿಕೊಂಡು ನಡೆದಾಡುವುದು ಕಷ್ಟಕರವಾಗಿದೆ. ಅದರಲ್ಲೂ ಶಾಲೆಗೆ ಹೋಗುವ ಸಣ್ಣ ಮಕ್ಕಳಂತು ಮಳೆಯಲ್ಲಿ ಹೋಗಿ ಬರುವುದು ಹರಸಾಹಸ ಮಾಡಿದಂತೆ. ಇದೀಗ ಶಾಲೆಗೆ ಹೋಗಿ ಬರುವ ಸಂದರ್ಭದಲ್ಲಿ ರಸ್ತೆಯಲ್ಲಿ ತುಂಬಿರುವ ನೀರನ್ನು ಕಂಡು ಅದರಲ್ಲಿ ತನ್ನ ತಂಗಿಗೆ ರಸ್ತೆ ದಾಟಲು ಸಾಧ್ಯವಿಲ್ಲ ಎಂದು ತಿಳಿದ ಅಣ್ಣ ಆಕೆಯನ್ನು ತನ್ನ ಮೇಲೆ ಕೂರಿಸಿಕೊಂಡು ಸಾಗುವ ದೃಶ್ಯ ವೈರಲ್ ಆಗಿದೆ.
भाई और बहन पृथ्वी का सबसे खूबसूरत और शुद्ध रिश्ता है... pic.twitter.com/OiTH4djEIo
— उम्दा_पंक्तियां (@umda_panktiyan) July 13, 2022
"ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವು ಅತ್ಯಂತ ಸುಂದರವಾದ ಮತ್ತು ಶುದ್ಧವಾದುದು" ಎಂದು ವೀಡಿಯೋಗೆ ಶೀರ್ಷಿಕೆಯನ್ನು ನೀಡಿದ್ದಾರೆ.
ನೆಟ್ಟಿಗರ ಕಣ್ಣಲ್ಲಿ ಆನಂದ ಭಾಷ್ಪ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದ ಈ ವೀಡಿಯೋವನ್ನು ಗಮನಿಸಿದ ನೆಟ್ಟಿಗರು ಈ ಅಣ್ಣ ತಂಗಿಯ ಪ್ರೀತಿಯನ್ನು ಕಂಡು ಬೆರಗಾಗಿದ್ದಾರೆ ಮತ್ತು ಅವರ ಮನಸು ಕರಗಿ ಆನಂದ ಭಾಷ್ಪ ಸುರಿಸಿದ್ದಾರೆ. ಕಮೆಂಟ್ನಲ್ಲಿ ಪ್ರೀತಿ, ಹೃದಯ ಮತ್ತು ಕಾಳಜಿಯ ಈಮೋಜಿಗಳ ಮೂಲಕ ತಮ್ಮ ಭಾವನೆಯನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ.
ರಕ್ಷಾ ಬಂಧನಕ್ಕೆ ಹೊಸ ಛಾಯೆ
ರಕ್ಷಾಬಂಧನ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ರೀತಿಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ರಕ್ಷಾಬಂಧನದ ಸಂಭ್ರಮಕ್ಕೆ ಹೊಸ ಛಾಯೆಯನ್ನು ನೀಡುತ್ತಿದೆ. ಅಣ್ಣ ತಂಗಿಯ ಬಂಧನವನ್ನು ಇನ್ನಷ್ಟು ಗಟ್ಟಿಗೊಳಿಸುವ ರಕ್ಷಾಬಂಧನವು ಅಣ್ಣ ತಂಗಿಯರ ನಡುವಿನ ಜವಬ್ದಾರಿಯನ್ನು ಅವರಿಗೆ ನೆನಪಿಸುವ ದಿನವಾಗಿದೆ.
ಇದನ್ನೂ ಓದಿ: Viral Video: ಮೆಟ್ರೋದಲ್ಲಿ ಫ್ರೀ ಎಂಟರ್ಟೈನ್ಮೆಂಟ್ ಕೊಟ್ಟ ಹುಡುಗಿ! ಜನ ಖುಷಿ ಪಡಲಿಲ್ಲ
ಒಬ್ಬ ಅಣ್ಣ ತಂಗಿಗೆ ದಿನದ ಇಪ್ಪತ್ತಾಲ್ಕು ಗಂಟೆಯು ಲಭ್ಯವಿರುವ ಸಹಾಯವಾಣಿಯಂತೆ ಕಾವಲುಗಾರನಾಗಿರುತ್ತಾನೆ. ಅವಳ ಗೌರವಕ್ಕೆ ಧಕ್ಕೆ ಬರದಂತೆ ಆಕೆಯನ್ನು ಕಾಪಾಡುವವನಾಗಿರುತ್ತಾನೆ. ಆಕೆಯ ಖುಷಿಗಾಗಿ ದುಡಿಯುವ ಅವನು ಉತ್ತಮ ಕಾಯಕನಾಗಿರುತ್ತಾನೆ. ಹೀಗೆ ಅಣ್ಣ ತಂಗಿಯ ಬಂಧನ ಅದು ಭದ್ರತೆಯ ಸುಭದ್ರ ಕೋಟೆಯಾಗಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ