Viral Video: ಸಾರ್ವಜನಿಕ ಶೌಚಾಲಯದ ಒಳಗಡೆ ಸಿಂಹ! ನಂಬಲ್ಲ ಅಂದ್ರೆ ಈ ವಿಡಿಯೋ ನೋಡಿ

Lion

Lion

ನಾವು ಕಾಡಿನಲ್ಲಿ ಸಫಾರಿಗೆ ಹೋದಾಗಲೇ ಸಿಂಹ ಹುಲಿಗಳನ್ನು ನಮ್ಮ ವಾಹನದ ಹತ್ತಿರ ಬರುವುದನ್ನು ನೋಡಿದರೆ ಹೆದರುತ್ತೇವೆ. ಅಂತಹದರಲ್ಲಿ ಯಾರು ಊಹಿಸದ ಜಾಗದಿಂದ ಸಿಂಹ ಹೊರಬಂದರೆ ಹೇಗಿರುತ್ತೆ ಹೇಳಿ.

  • Trending Desk
  • 3-MIN READ
  • Last Updated :
  • Share this:



    Social Media Viral Video: ಎಲ್ಲೋ ನಮಗಿಂತ ಹತ್ತು ಅಡಿ ದೂರದಲ್ಲಿ ಒಂದು ಸಿಂಹ ಅಥವಾ ಹುಲಿ ಇದ್ದು ಅದರ ಘರ್ಜನೆ ಕೇಳಿದರೆ ಭಯವಾಗುತ್ತದೆ. ಅಂತಹದರಲ್ಲಿ ಯಾರು ಊಹಿಸದ ಜಾಗದಿಂದ ಒಂದು ದೈತ್ಯ ಸಿಂಹವೊಂದು ಹಾಗೆ ಹೊರ ಬಂದರೆ ನೋಡಿದವರಿಗೆ ಹೇಗಾಗುತ್ತದೆ ಎನ್ನುವುದು ನಾವು ಊಹಿಸಿಕೊಳ್ಳುವುದಕ್ಕೂ ಭಯವಾಗುತ್ತದೆ. ಇಲ್ಲಿ ಅಂತಹದೇ ಒಂದು ಭಯಾನಕ ಎನಿಸುವ ಘಟನೆಯಲ್ಲಿ ಸಾರ್ವಜನಿಕ ಶೌಚಾಲಯದಿಂದ ನಿಧಾನವಾಗಿ ಒಂದು ಸಿಂಹ ಹೊರಬರುವ ವೀಡಿಯೋ ಸೆರೆ ಹಿಡಿಯಲಾಗಿದ್ದು, ಈಗ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರಿಗೆ ಭಯ ಹುಟ್ಟಿಸಿದೆ. ಇದನ್ನು ನೋಡಿದ ಯಾರಾದರೂ ಒಮ್ಮೆ ಶೌಚಾಲಯಕ್ಕೆ ಹೋಗುವ ಮುನ್ನ ಒಳಗೆ ಏನಿದೆ ಎನ್ನುವುದನ್ನು ಪರಿಶೀಲಿಸಿಕೊಂಡು ಹೋಗುವುದಂತೂ ಗ್ಯಾರಂಟಿ.


    ನಾವು ಕಾಡಿನಲ್ಲಿ ಸಫಾರಿಗೆ ಹೋದಾಗಲೇ ಸಿಂಹ ಹುಲಿಗಳನ್ನು ನಮ್ಮ ವಾಹನದ ಹತ್ತಿರ ಬರುವುದನ್ನು ನೋಡಿದರೆ ಹೆದರುತ್ತೇವೆ. ಅಂತಹದರಲ್ಲಿ ಯಾರು ಊಹಿಸದ ಜಾಗದಿಂದ ಸಿಂಹ ಹೊರಬಂದರೆ ಹೇಗಿರುತ್ತೆ ಹೇಳಿ.


    ವೈಲ್ಡ್ ಲೆನ್ಸ್ ಎಕೋ ಫೌಂಡೇಶನ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಈ 1 ನಿಮಿಷದ ವಿಡಿಯೋವನ್ನು ತಮ್ಮ ಸಫಾರಿ ವಾಹನದಲ್ಲಿ ಕುಳಿತುಕೊಂಡು ಯಾರೋ ಪ್ರವಾಸಿಗರು ರೆಕಾರ್ಡ್ ಮಾಡಿದ್ದು, ಅವರು ಕುಳಿತ ವಾಹನ ಸಾರ್ವಜನಿಕ ಶೌಚಾಲಯ ಸಮೀಪಿಸುತ್ತಿದ್ದಂತೆ, ಸಿಂಹವು ನಿಧಾನವಾಗಿ ಒಳ್ಳೆ ರಾಜನಂತೆ ಬಾಗಿಲಿನಿಂದ ಹೊರಬಂದು ಸ್ವಲ್ಪ ಸಮಯದವರೆಗೆ ಸುತ್ತ ಮುತ್ತಲೂ ನೋಡಿ ಹಾಗೆ ಹೊರ ನಡೆದಿರುವುದನ್ನು ನಾವೆಲ್ಲಾ ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋವನ್ನು ಅಕ್ಟೋಬರ್ 2ರಂದು ಹಂಚಿಕೊಳ್ಳಲಾಗಿದ್ದು, ಬಹುಬೇಗನೆ ವೈರಲ್ ಆಗಿದೆ.


    ಈ ವಿಡಿಯೋದಲ್ಲಿ ಸಫಾರಿ ಕಾರಿನೊಳಗೆ ಹಾಜರಿದ್ದ ಜನರಿಂದ ಹಲವಾರು ಆಶ್ಚರ್ಯಕರ ಮಾತುಗಳನ್ನು ಇಲ್ಲಿ ಕೇಳಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬೇಗನೆ ವೈರಲ್ ಆಗಿದ್ದು, ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿದೆ ಎಂದು ಹೇಳಬಹುದು.


    ಈ ವಿಡಿಯೋ ಹಂಚಿಕೊಂಡು ಅದಕ್ಕೆ "ಶೌಚಾಲಯಗಳು ಯಾವಾಗಲೂ ಮಾನವರಿಗೆ ಸುರಕ್ಷಿತವಲ್ಲ, ಕೆಲವೊಮ್ಮೆ ಅದನ್ನು ಇತರರೂ ಬಳಸಬಹುದು" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.


    ಇದನ್ನು ಓದಿ: Facebook Love: ಫೇಸ್​ಬುಕ್​ನಲ್ಲಿ ಡಾಕ್ಟರ್ ಜೊತೆ ಲವ್, ಈಗ ಮನೆ ಎದುರು ತರಕಾರಿ ವ್ಯಾಪಾರ!


    ಈ ವಿಡಿಯೋವನ್ನು ಈಗಾಗಲೇ 17,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಅನೇಕರು ಇದನ್ನು ಇಷ್ಟಪಟ್ಟಿದ್ದಾರೆ. ಸಾರ್ವಜನಿಕ ಶೌಚಾಲಯದಿಂದ ಸಿಂಹವೊಂದು ಹೀಗೆ ಹೊರಬರುವ ಅಸಾಮಾನ್ಯ ದೃಶ್ಯ ನೋಡಿ ಅನೇಕ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಇತರರು ಈ ರೀತಿಯಾಗಿ ಪ್ರಾಣಿಗಳು ಶೌಚಾಲಯದ ಒಳಗೆ ಹೋದರೆ, ಕಾಡಿನ ಸಫಾರಿಯ ಸಮಯದಲ್ಲಿ ಬಂದಂತಹ ಪ್ರವಾಸಿಗರು ಯಾವುದೇ ರೀತಿಯ ಸಾರ್ವಜನಿಕ ಶೌಚಾಲಯ ಬಳಸುವುದನ್ನು ಖಂಡಿತವಾಗಿಯೂ ನಿಲ್ಲಿಸುತ್ತಾರೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.


    ಇದನ್ನು ಓದಿ: Adult video: ಮಕ್ಕಳನ್ನು ಶಾಲೆಗೆ ಕಳಿಸಿ ಮನೆಯಲ್ಲಿ ನೀಲಿ ಚಿತ್ರ ಶೂಟ್ ಮಾಡ್ತಿದ್ರಂತೆ ಈ ದಂಪತಿ











    ಈ ವಿಡಿಯೋ ನೋಡಿದ ನೆಟ್ಟಿಗರೊಬ್ಬರು “ಇಲ್ಲಿ ನನಗೆ ತುಂಬಾ ಇಷ್ಟವಾದ ಸಂಗತಿ ಎಂದರೆ, ಈ ಸಿಂಹ ಎಂಥಾ ಬುದ್ದಿವಂತ ಪ್ರಾಣಿ ನೋಡಿ, ಗಂಡಸರ ಶೌಚಾಲಯದಿಂದ ಹೊರಬರುತ್ತಿದೆ” ಎಂದು ಬರೆದರೆ, ಇನ್ನೊಬ್ಬ ಬಳಕೆದಾರರು “ಪ್ರಕೃತಿಯ ಕರೆ” ಎಂದು ಚಿಕ್ಕದಾಗಿ ಬರೆದಿದ್ದಾರೆ. ಮತ್ತೊಬ್ಬರು “ಗಂಡಸರ ಶೌಚಾಲಯದಿಂದ ಹೊರ ಬರುತ್ತಿದೆ ಸರಿಯಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು