• Home
  • »
  • News
  • »
  • trend
  • »
  • Kerala: ಅದೃಷ್ಟ ಅಂದ್ರೆ ಇದೇ: ಇತ್ತ ಸಾಲ ವಸೂಲಾತಿಗೆ ನೋಟಿಸ್ ಬಂದ್ರೆ ಅತ್ತ ಲಾಟರಿ ಕೈ ಹಿಡಿಯಿತು!

Kerala: ಅದೃಷ್ಟ ಅಂದ್ರೆ ಇದೇ: ಇತ್ತ ಸಾಲ ವಸೂಲಾತಿಗೆ ನೋಟಿಸ್ ಬಂದ್ರೆ ಅತ್ತ ಲಾಟರಿ ಕೈ ಹಿಡಿಯಿತು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕೇರಳ ರಾಜ್ಯದಿಂದ ಮಾರಾಟ ಮಾಡಲಾಗುವ ಅಕ್ಷಯ ಲಾಟರಿಯ ಅದೃಷ್ಟ ಲಕ್ಷ್ಮಿ ಆ ವ್ಯಾಪಾರಿಯ ಕೈ ಹಿಡಿದಿದ್ದಳು. ಆ ವ್ಯಾಪಾರಿ ಆ ರಾಜ್ಯ ಲಾಟರಿಯ ಬಂಪರ್ ನಗದು ಪ್ರಶಸ್ತಿಯಾದ 70 ಲಕ್ಷ ರೂಪಾಯಿಗಳ ಒಡೆಯನಾಗಿದ್ದ.

  • Share this:

ಜೀವನ ಎಂಬುದು ಒಮ್ಮೊಮ್ಮೆ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಅಚ್ಚರಿಯ ಪ್ರಯಾಣ ಎಂದರೆ ಸುಳ್ಳಾಗಲಾರದು. ಅದರಲ್ಲೂ ಈ ಅದೃಷ್ಟ (Luck) ಎಂಬುದು ಯಾರಿಗೆ ಹೇಗೆ ಒಲಿಯುತ್ತದೆಯೋ ಯಾರೂ ತಿಳಿಯರು. ಆದರೆ, ಆ ಅದೃಷ್ಟ ಘಟಿಸಿದ ಮೇಲೆ ಎಲ್ಲವೂ ಪವಾಡ ಎಂದೆನಿಸುವುದಲ್ಲದೆ ಬೇರೆ ಏನೂ ಹೇಳಲು ಸಾಧ್ಯವಿಲ್ಲ. ಸದ್ಯ, ಇಂತಹುದ್ದೇ ಒಂದು ಅಚ್ಚರಿ ಪಡುವ, ಅದೃಷ್ಟ ಲಕ್ಷ್ಮಿ ಒಬ್ಬ ಮೀನು ಮಾರಾಟಗಾರನಿಗೆ (Fish Seller) ಸರಿಯಾದ ಸಮಯಕ್ಕೆ ಒಲಿದಿರುವ ಘಟನೆ ಕೇರಳದಿಂದ ವರದಿಯಾಗಿದೆ. ಆತ ಒಬ್ಬ ಮೀನು ಮಾರಾಟಗಾರ. ಬ್ಯಾಂಕ್ ನಿಂದ ಸಾಲ (Bank Loan) ಪಡೆದಿದ್ದ, ಆದರೆ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ಮತ್ತಿನ್ನೇನು, ಬ್ಯಾಂಕ್ ನಿಂದ ಸಾಲ ಹಿಂತಿರುಗಿ ಪಡೆಯಲು ಅವನ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವ ನೋಟಿಸ್ (Notice) ಅವನಿಗೆ ತಲುಪಿತು.


ಇದರಿಂದ ಚಿಂತಾಕ್ರಾಂತನಾದ ಆ ವ್ಯಾಪಾರಿಯ ದುಃಖ ಹೆಚ್ಚು ಸಮಯ ಉಳಿಯಲಿಲ್ಲ. ಕಾರಣ ಕೆಲ ಗಂಟೆಗಳಲ್ಲೇ ಅವನಿಗೆ ಮತ್ತೊಂದು ಅಚ್ಚರಿಯ ವರದಿ ಬಂದಿದೆ.


ಏನದು ವಿಷಯ?
ಈಗ ಬಂದಿದ್ದ ಆ ಶಾಕಿಂಗ್ ನ್ಯೂಸ್ ಅವನು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತ್ತು. ಹೌದು, ಕೇರಳ ರಾಜ್ಯದಿಂದ ಮಾರಾಟ ಮಾಡಲಾಗುವ ಅಕ್ಷಯ ಲಾಟರಿಯ ಅದೃಷ್ಟ ಲಕ್ಷ್ಮಿ ಆ ವ್ಯಾಪಾರಿಯ ಕೈ ಹಿಡಿದಿದ್ದಳು. ಆ ವ್ಯಾಪಾರಿ ಆ ರಾಜ್ಯ ಲಾಟರಿಯ ಬಂಪರ್ ನಗದು ಪ್ರಶಸ್ತಿಯಾದ 70 ಲಕ್ಷ ರೂಪಾಯಿಗಳ ಒಡೆಯನಾಗಿದ್ದ.


ಪೂಕುಂಜುವಿನ ಕಥೆ
ಅಕ್ಟೋಬರ್ 12 ರಂದು ಪೂಕುಂಜು ಎಂದಿನಂತೆ ತಾನು ದಿನವಿಡೀ ಮಾರುವ ಮೀನುಗಳನ್ನು ಖರೀದಿಸಲು ಮೀನು ಮಾರುಕಟ್ಟೆಗೆ ಹೋಗುತ್ತಿದ್ದ. ಹೋಗುವಾಗ ಅವನ ತಲೆಯಲ್ಲಿ ಯಾವ ವಿಚಾರ ಬಂತೋ ಗೊತ್ತಿಲ್ಲ ಅವನು ಅಕ್ಷಯ ಲಾಟರಿ ಟಿಕೆಟ್ ಒಂದನ್ನು ಖರೀದಿಸಿದ. ಈ ಲಾಟರಿಯ ಮೊದಲ ಬಹುಮಾನವೇ 70 ಲಕ್ಷ ರೂಪಾಯಿ ಆಗಿತ್ತು.


ಇದನ್ನೂ ಓದಿ: Nigeria: ಅವಳಿ ಮಕ್ಕಳ ಜನನಕ್ಕೆ ಪ್ರಸಿದ್ಧಿ ಪಡೆದ ನೈಜೀರಿಯಾ, ಇಲ್ಲಿ ನಡೆಯುತ್ತೆ ವಾರ್ಷಿಕ ಹಬ್ಬ


ಆ ದಿನ ಅವನು ತನ್ನ ವ್ಯವಹಾರಗಳನ್ನೆಲ್ಲ ಮುಗಿಸಿ ಮನೆಗೆ ಹೋದಾಗ ಅವನ ತಲೆಗೆ ಬರ ಸಿಡಿಲು ಬಡಿಯುವಂತಹ ಸುದ್ದಿಯೊಂದು ಅವನಿಗಾಗಿ ಕಾದು ಕುಳಿತಿತ್ತು. ಪೂಕುಂಜುವಿನ ಮನೆಗೆ ಬ್ಯಾಂಕ್ ನಿಂದ ಒಂದು ನೋಟಿಸ್ ಬಂದಿತ್ತು. ಅದು ಅವನ ಮನೆಗೆ ಸಂಬಂಧಿಸಿದ್ದಾಗಿತ್ತು, ಏಕೆಂದರೆ ಪೂಕುಂಜು ತಾನು ತೆಗೆದುಕೊಂಡಿದ್ದ ಒಂಭತ್ತು ಲಕ್ಷ ರೂ. ಸಾಲವನ್ನು ಮರಳಿಸಲು ಆಗಿರಲಿಲ್ಲ. ಹಾಗಾಗಿ ಬ್ಯಾಂಕ್ ನಿಂದ ಸಾಲ ವಸೂಲಾತಿಯ ನೋಟಿಸ್ ಅವನ ಮನೆ ಸೇರಿತ್ತು, ಹೀಗೆಂದು ಪೂಕುಂಜು ಸ್ವತಃ ಸುದ್ದಿ ಮಾಧ್ಯಮವೊಂದಕ್ಕೆ ವಿವರಿಸಿದ್ದಾರೆ.


ಇಷ್ಟೆ ಅಲ್ಲ, ಪೂಕುಂಜು ಹೇಳುವಂತೆ ಅವರ ತಂದೆಯೂ ಸಹ ಲಾಟರಿ ಖರೀದಿಸಲು ಸರಿ ಸುಮಾರು ಐದು ಲಕ್ಷ ರೂಪಾಯಿಗಳ ಸಾಲ ಮಾಡಿದ್ದರಂತೆ. ಆದರೆ, ಈ ಬಾರಿ ಪೂಕುಂಜು ಕುಟುಂಬವು ಅದೃಷ್ಟದ ಹಾಸಿಗೆಯಲ್ಲಿ ಕುಳಿತಿದ್ದರು. ಏಕೆಂದರೆ ನೋಟಿಸ್ ಬಂದಿದ್ದ ಕೆಲವು ಗಂಟೆಗಳ ನಂತರ ಪೂಕುಂಜು ಖರೀದಿಸಿದ್ದ ಲಾಟರಿ ಅನ್ನು ಡ್ರಾ ಮಾಡಲಾಯಿತು ಹಾಗೂ ಅದರಲ್ಲಿ ಮೊದಲ ಬಹುಮಾನ ಪೂಕುಂಜು ಅವರು ಖರೀದಿಸಿದ್ದ ಟಿಕೆಟ್​ಗೇ ಬಂದಿತ್ತು,


ನಂಬಿಕೆಯೇ ಬರಲಿಲ್ಲ
ಇನ್ನು, ಪೂಕುಂಜು ಹೆಂಡತಿಯು ಈ ಸಂದರ್ಭದಲ್ಲಿ ಪೂಕುಂಜುವಿನ ಮನಸ್ಥಿತಿ ಬಗ್ಗೆ ವಿವರಿಸಿದ್ದಾರೆ. ಮೊದಲ ಬಾರಿ ಪೂಕುಂಜುವಿನ ಹೆಂಡತಿಗೆ ಪೂಕುಂಜು ಈ ದೊಡ್ಡ ಮೊತ್ತದ ಬಹುಮಾನವನ್ನು ಗೆದ್ದಿರುವ ಬಗ್ಗೆ ಗೊತ್ತಾಗಿ ತನ್ನ ಪತಿಗೆ ಹೇಳಿದಾಗ ಆತ ಇದನ್ನು ನಂಬಲೇ ಇಲ್ಲವಂತೆ. ಈ ಬಗ್ಗೆ ಅವರು, "ನಾನು ಅವನಿಗೆ ಬಹುಮಾನ ಗೆದ್ದಿರುವುದನ್ನು ಹೇಳಿದಾಗ ಅವನು ನಂಬಲೇ ಇಲ್ಲ. ಗೆದ್ದ ಸಂಖ್ಯೆಯನ್ನು ಹಲವು ಬಾರಿ ಲಾಟರಿಯೊಂದಿಗೆ ಹೋಲಿಸಿ ನೋಡುತ್ತಲೇ ಇದ್ದ, ತದನಂತರವೇ ಅದು ನಿಜ ಎಂದು ಗೊತ್ತಾಯಿತು" ಎಂದು ಹೇಳಿದರು.


ಮಗನ ಪ್ರತಿಕ್ರಿಯೆ
ಈ ಜಯದ ಬಗ್ಗೆ ಮಾತನಾಡುವ ಪೂಕುಂಜುವಿನ ಮಗ  "ನಾನು ಇದರಲ್ಲಿ ನಂಬಿಕೆಯೇ ಇಟ್ಟಿರಲಿಲ್ಲ, ಕೆಲವೊಮ್ಮೆ ಲಾಟರಿ ಮಾರುವವರಿಗೆ ಸಹಾಯವಾಗಲಿ ಎಂದು ಟಿಕೆಟ್ ಕೊಳ್ಳುತ್ತಿದ್ದೆನಷ್ಟೆ, ನಾನು ಎಂದಿಗೂ ಗೆದ್ದಿಲ್ಲ, ಆದರೆ ನನ್ನ ನಂಬಿಕೆಯನ್ನು ಇಂದು ನನ್ನ ತಂದೆ ಬದಲಾಯಿಸಿದ್ದಾರೆ" ಎಂದಿದ್ದಾನೆ.


ಇದನ್ನೂ ಓದಿ:  Love Story: 10 ವರ್ಷಗಳ ಬಳಿಕ ಮತ್ತೆ ಒಂದಾದ ಜೋಡಿ! ಇವರ ಲವ್‌ ಸ್ಟೋರಿ ಯಾವ ಸಿನಿಮಾಗಿಂತಲೂ ಕಡಿಮೆಯಿಲ್ಲ!


ಸದ್ಯ ಅವರಿಗೆ ಇಷ್ಟು ದೊಡ್ಡ ಮೊತ್ತ ವರದಾನವಾಗಿದ್ದು ಪೂಕುಂಜು ಅವರ ಪತ್ನಿ ಈ ಬಗ್ಗೆ ಮಾತನಾಡುತ್ತ, "ಮೊದಲು ನಾವು ನಮ್ಮ ಮೇಲಿರುವ ಎಲ್ಲ ಸಾಲವನ್ನು ತೀರಿಸುತ್ತೇವೆ. ತದನಂತರ ನಮ್ಮ ಮಗನಿಗೆ ಉತ್ತಮ ವಿದ್ಯಾಭ್ಯಾಸ ದೊರಕುವಂತೆ ಅನುಕೂಲವಾಗಲು ಬಳಸುತ್ತೇವೆ" ಎಂದು ಹೇಳಿದ್ದಾರೆ.

Published by:Ashwini Prabhu
First published: