Bride Photoshoot: ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಕೇರಳ ವಧುವಿನ ಫೋಟೋಶೂಟ್! ವಿಡಿಯೋ ಇಲ್ಲಿದೆ

ಇತ್ತೀಚಿನ ವಧುಗಳು ತುಂಬಾ ಜಾಣರು ಅಂತ ಹೇಳಬಹುದು, ಏಕೆಂದರೆ ಅವರು ಅವರ ಫೋಟೋಶೂಟ್ ಗಳಲ್ಲಿ ಒಂದು ತೀಮ್ ಇರುವಂತಹ ಫೋಟೋಶೂಟ್ ಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇಲ್ಲೊಬ್ಬ ಕೇರಳದ ವಧು ನೋಡಿ ಹೇಗೆ ತಮ್ಮ ಫೋಟೋಶೂಟ್ ಅನ್ನು ಒಂದು ಸ್ಮರಣೀಯ ಸಂದರ್ಭವಾಗಿಸಲು ಸಾರ್ವಜನಿಕರ ಒಂದು ಸಮಸ್ಯೆಯನ್ನು ತಮ್ಮ ಫೋಟೋಶೂಟ್ ನಲ್ಲಿ ಎತ್ತಿ ತೋರಿಸಿದ್ದಾರೆ.

ವಧುವಿನ ಫೋಟೋಶೂಟ್

ವಧುವಿನ ಫೋಟೋಶೂಟ್

  • Share this:
ಮೊದಲೆಲ್ಲಾ ಹುಡುಗ (Boy) ಮತ್ತು ಹುಡುಗಿಯ (Girl) ಮನೆಯವರು ಪರಸ್ಪರ ಮದುವೆ (Marriage) ಸಂಬಂಧವನ್ನು ಒಪ್ಪಿದರೆ, ನೇರವಾಗಿ ಮಾತುಕತೆಯ ನಂತರ ನಿಶ್ಚಿತಾರ್ಥ ಮಾಡಿ ಮುಗಿಸಿ, ಕೆಲವೇ ದಿನಗಳಲ್ಲಿ ಮದುವೆ ಸಹ ಮಾಡಿ ಮುಗಿಸುತ್ತಿದ್ದರು. ಆದರೆ ಈಗ ಕಾಲ ತುಂಬಾನೇ ಬದಲಾಗಿದೆ. ಮೊದಲು ಹುಡುಗ ಹುಡುಗಿ ನೋಡಿ ಮೆಚ್ಚಿಕೊಂಡ ಮೇಲೆ ಮನೆಯವರು ಮೆಚ್ಚಿಕೊಳ್ಳುತ್ತಾರೆ. ನಂತರ ಸಹ ನಿಶ್ಚಿತಾರ್ಥ (Engagement) ಮತ್ತು ಮದುವೆಯ ಮುಂಚೆ ತುಂಬಾ ಕಾರ್ಯಕ್ರಮಗಳು ಬಾಕಿ ಇರುತ್ತವೆ. ನಿಶ್ಚಿತಾರ್ಥ ಆದ ನಂತರದಲ್ಲಿ ಹುಡುಗ ಮತ್ತು ಹುಡುಗಿ ತಮಗೆ ಇಷ್ಟವಾದ ಸ್ಥಳಕ್ಕೆ ಹೋಗಿ ವಿವಿಧ ರೀತಿಯಲ್ಲಿ ಇಬ್ಬರು ಕ್ಯಾಮೆರಾಗೆ ಪೋಸ್ ನೀಡುವುದರ ಮೂಲಕ ‘ಪ್ರಿವೆಡ್ಡಿಂಗ್ ಫೋಟೋಶೂಟ್’ (Pre Wedding Photoshoot) ಅಂತ ಮಾಡಿಸಿಕೊಳ್ಳುತ್ತಾರೆ.

ಇದು ಇಷ್ಟಕ್ಕೆ ಮುಗೀತು ಅಂತ ತಿಳಿಯಬೇಡಿ.. ಇದರ ನಂತರ ವಧು ತನಗೆ ಇಷ್ಟವಾದ ಸೀರೆ ಮತ್ತು ಸಾಂಪ್ರದಾಯಿಕ ಉಡುಗೆಯಲ್ಲಿ ತನಗೆ ಬೇಕಾದ ಅಥವಾ ಇಷ್ಟವಾದ ಸ್ಥಳಕ್ಕೆ ಹೋಗಿ ಫೋಟೋಶೂಟ್ ಸಹ ಮಾಡಿಸಿಕೊಳ್ಳುತ್ತಾರೆ.

ಇತ್ತೀಚಿನ ವಧುಗಳು ತುಂಬಾ ಜಾಣರು ಅಂತ ಹೇಳಬಹುದು, ಏಕೆಂದರೆ ಅವರು ಅವರ ಫೋಟೋಶೂಟ್ ಗಳಲ್ಲಿ ಒಂದು ತೀಮ್ ಇರುವಂತಹ ಫೋಟೋಶೂಟ್ ಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇಲ್ಲೊಬ್ಬ ಕೇರಳದ ವಧು ನೋಡಿ ಹೇಗೆ ತಮ್ಮ ಫೋಟೋಶೂಟ್ ಅನ್ನು ಒಂದು ಸ್ಮರಣೀಯ ಸಂದರ್ಭವಾಗಿಸಲು ಸಾರ್ವಜನಿಕರ ಒಂದು ಸಮಸ್ಯೆಯನ್ನು ತಮ್ಮ ಫೋಟೋಶೂಟ್ ನಲ್ಲಿ ಎತ್ತಿ ತೋರಿಸಿದ್ದಾರೆ.

ವಧುವಿನ ಫೋಟೋಶೂಟ್ ನಲ್ಲಿ ಸಾಮಾಜಿಕ ಕಳಕಳಿ ಅಡಗಿದೆ
ಹೌದು.. ಕೇರಳದ ವಧು ಅವರಿರುವ ಸ್ಥಳದಲ್ಲಿರುವ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳ ಸಮಸ್ಯೆಯನ್ನು ಎತ್ತಿ ತೋರಿಸುವ ಮೂಲಕ ತನ್ನ ಮದುವೆಗೂ ಮುಂಚೆಯ ಫೋಟೋಶೂಟ್ ಅನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ ಮತ್ತು ಒಂದು ಸಾಮಾಜಿಕ ಕಳಕಳಿಯನ್ನು ಸಹ ಇಲ್ಲಿ ಮೆರೆದಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ವಧು ಮತ್ತು ಮದುವೆಯ ಛಾಯಾಗ್ರಾಹಕರನ್ನು ಒಳಗೊಂಡ ಒಂದು ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದೆ. ಕೆಂಪು ಸೀರೆಯುಟ್ಟ ಮದುವಣಗಿತ್ತಿ ತನ್ನ ಸೀರೆಯ ಸೆರಗನ್ನು ಸ್ವಲ್ಪ ಮೇಲೆ ಎತ್ತಿಕೊಂಡು ರಸ್ತೆ ಗುಂಡಿಗಳಿಂದ ತುಂಬಿರುವ ರಸ್ತೆಯನ್ನು ಮೆಲ್ಲಗೆ ದಾಟುತ್ತಿರುವುದನ್ನು ಇದರಲ್ಲಿ ನಾವು ನೋಡಬಹುದು.

ವಿಡಿಯೋ ಹೇಗಿದೆ ನೋಡಿ?
ವಿಡಿಯೋದಲ್ಲಿ, ವಧುವು ಸಂಪೂರ್ಣವಾಗಿ ಕೆಸರು ನೀರಿನಿಂದ ತುಂಬಿರುವ ಅನೇಕ ಗುಂಡಿಗಳ ಮಧ್ಯೆದಲ್ಲಿ ಮಿಕ್ಕಿರುವ ರಸ್ತೆಯ ಮೇಲೆ ಸಾಕಷ್ಟು ಜೋಪಾನದಿಂದ ನಡೆಯುತ್ತಿದ್ದಾಳೆ. ಈ ಕ್ಲಿಪ್ ನಲ್ಲಿ ವಾಹನಗಳು ಹಾದು ಹೋಗುವುದನ್ನು ಸಹ ತೋರಿಸಲಾಗಿದೆ, ಆದರೆ ಇವು ರಸ್ತೆಯಲ್ಲಿರುವ ಗುಂಡಿಯನ್ನು ತಪ್ಪಿಸಿಕೊಂಡು ಹೋಗುವುದಕ್ಕೆ ಮಾತ್ರ ಸಾಧ್ಯವಾಗುತ್ತಿಲ್ಲ ಅಂತ ಹೇಳಬಹುದು. ಒಬ್ಬ ಛಾಯಾಗ್ರಾಹಕನು ವಧುವಿನ ಫೋಟೋಗಳನ್ನು ಸ್ವಲ್ಪ ದೂರದಿಂದ ಸೆರೆಹಿಡಿಯುವುದನ್ನು ನೋಡಬಹುದು.

ಇದನ್ನೂ ಓದಿ:  Teacher and Children: ಶಿಕ್ಷಕಿಯ ಚಿತ್ರ ಬಿಡಿಸಿದ ಪುಟಾಣಿಗಳು; ಮುಗ್ಧ ಮನಸ್ಸಿನ ಕ್ರಿಯಾತ್ಮಕತೆಗೆ ಭೇಷ್ ಎಂದ ನೆಟ್ಟಿಗರು

ವಿಡಿಯೋ ಸಿಕ್ಕಾಪಟ್ಟೆ ವೈರಲ್
ಈ ಫೋಟೋಶೂಟ್ ನಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳು ಮತ್ತು ವಿಡಿಯೋವನ್ನು ಆರೋ ವೆಡ್ಡಿಂಗ್ ಕಂಪನಿಯು ತನ್ನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದೆ. ವಿಡಿಯೋದ ಜೊತೆಗೆ "ರಸ್ತೆಯ ಮಧ್ಯದಲ್ಲಿ ವಧುವಿನ ಫೋಟೋಶೂಟ್" ಎಂದು ಶೀರ್ಷಿಕೆ ಸಹ ನೀಡಲಾಗಿದೆ. ಈ ವಿಡಿಯೋವನ್ನು ಸೆಪ್ಟೆಂಬರ್ 11 ರಂದು ಹಂಚಿಕೊಳ್ಳಲಾಗಿದೆ ಮತ್ತು ಇಲ್ಲಿಯವರೆಗೆ, ಕ್ಲಿಪ್ ಇನ್‌ಸ್ಟಾಗ್ರಾಮ್ ನಲ್ಲಿ 4.3 ಮಿಲಿಯನ್ ವೀಕ್ಷಣೆಗಳು ಮತ್ತು ಮೂರು ಲಕ್ಷಕ್ಕಿಂತಲೂ ಹೆಚ್ಚು ಲೈಕ್ ಗಳನ್ನು ಸಹ ಇದು ಗಳಿಸಿದೆ.
ನೆಟ್ಟಿಗರಂತೂ ಈ ವಧುವಿನ ಸೃಜನಶೀಲತೆಯಿಂದ ತುಂಬಾನೇ ಪ್ರಭಾವಿತರಾಗಿದ್ದಾರೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಕೇರಳದ ರಸ್ತೆ ಪರಿಸ್ಥಿತಿಗಳನ್ನು ಗೇಲಿ ಮಾಡಿದರು. "ರಸ್ತೆಯ ಮೇಲೆ ಅಲ್ಲ, ಕೊಳದಲ್ಲಿ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಮತ್ತೊಬ್ಬರು "ಒಳ್ಳೆಯ ರಸ್ತೆ" ಎಂದು ಕಾಮಿಡಿ ಮಾಡಿದ್ದಾರೆ. "ಇದು ರಸ್ತೆಯೇ? ನೀವು ಕೆಲವು ಮರಿ ಮೀನುಗಳನ್ನು ಖರೀದಿಸಿದರೆ, ನೀವು ಮೀನು ಸಾಕಣೆಯನ್ನು ಇಲ್ಲಿಯೇ ಪ್ರಾರಂಭಿಸಬಹುದು" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  Viral Video: ವಾವ್! ಈ ವೃದ್ದ ದಂಪತಿಗಳಲ್ಲಿರುವ ಪ್ರೀತಿ ಒಮ್ಮೆ ನೋಡಿ; ಇವರ ಪ್ರೀತಿಗೆ ನೆಟ್ಟಿಗರು ಫಿದಾ

ರಸ್ತೆಗಳನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿದ ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್ ಸೋಮವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ಎಚ್ಎಐ) ಪ್ರಸ್ತುತ ರಿಯಾಯಿತಿದಾರರ ಮೂಲಕ ಅಥವಾ ಹೊಸ ಗುತ್ತಿಗೆದಾರರ ಮೂಲಕ ತಮ್ಮ ನಿಯಂತ್ರಣದಲ್ಲಿರುವ ಪ್ರತಿಯೊಂದು ರಸ್ತೆಯನ್ನು ಸರಿಪಡಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗುಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
Published by:Ashwini Prabhu
First published: