Dream Job: ಜನರೊಂದಿಗೆ ಒಡನಾಟ ಮಾಡೋದೇ ಇವರ ಕೆಲಸ ಅಂತೆ! ಅದರಲ್ಲೇ ನಡೆಯತ್ತೆ ಸಂಪಾದನೆ

ಟೋಕಿಯೋದಲ್ಲಿ ಶೋಜಿ ಮೊರಿಮೊಟೊ ಎಂಬ ವ್ಯಕ್ತಿಯೂ ಯಾವ ಕೆಲಸವನ್ನು ಮಾಡದೇ ಸಾಕಷ್ಟು ಹಣವನ್ನು ಗಳಿಸುತ್ತಿದ್ದಾರೆ. ಅದು ಹೇಗೆ ಎಂಬುದರ ಕುರಿತು ಈ ಲೇಖನದಲ್ಲಿ ಸವಿಸ್ತಾರವಾಗಿ ತಿಳಿಯೋಣ ಬನ್ನಿ.

ಶೋಜಿ ಮೊರಿಮೊಟೊ

ಶೋಜಿ ಮೊರಿಮೊಟೊ

  • Share this:
ಟೋಕಿಯೊ: ಪ್ರತಿಯೊಬ್ಬರಿಗೂ ಅವರವರ ಕನಸಿನ ಕೆಲಸ (work) ಇದ್ದೆ ಇರುತ್ತದೆ. ನಾನು ಮಾಡಿದರೆ ಇದೇ ಕೆಲಸ ಮಾಡಬೇಕು. ಇಷ್ಟೆ ಸಂಬಳವನ್ನು ಪಡೆಯಬೇಕು. ಹೀಗೆ ಅನೇಕ ಉದ್ಯೋಗ ಕನಸುಗಳು ಇರುತ್ತವೆ. ಹಾಗೆಯೇ ಟೋಕಿಯೋದಲ್ಲಿ (Tokyo) ಶೋಜಿ ಮೊರಿಮೊಟೊ ಎಂಬ ವ್ಯಕ್ತಿಯೂ ಯಾವ ಕೆಲಸವನ್ನು ಮಾಡದೇ ಸಾಕಷ್ಟು ಹಣವನ್ನು ಗಳಿಸುತ್ತಿದ್ದಾರೆ. ಅದು ಹೇಗೆ ಎಂಬುದರ ಕುರಿತು ಈ ಲೇಖನದಲ್ಲಿ ಸವಿಸ್ತಾರವಾಗಿ ತಿಳಿಯೋಣ ಬನ್ನಿ. ಈ ಕೆಲಸವನ್ನೇ ಅವರು ತಮ್ಮ ಕನಸಿನ ಕೆಲಸ (Dream Work) ಎಂದು ಕರೆಯುತ್ತಾರೆ. 38 ವರ್ಷ ವಯಸ್ಸಿನ ಟೋಕಿಯೊ ನಿವಾಸಿಯು ಗ್ರಾಹಕರೊಂದಿಗೆ ಸರಳವಾಗಿ ಓಡಾಡಿಕೊಂಡು ಇರಲು ಅವರು ತೆಗೆದುಕೊಳ್ಳುವ ಹಣ (Money) ಬರೋಬ್ಬರಿ ಗಂಟೆಗೆ 10,000 ಯೆನ್ ಅಂದರೆ ಭಾರತದ ರೂಪಾಯಿಗಳಲ್ಲಿ ಸುಮಾರು ರೂ. 5,600 ಆಗುತ್ತದೆ.

ಏನೂ ಕೆಲಸ ಮಾಡದೆ ಹಣ ಗಳಿಸ್ತಾರಂತೆ ಈ ವ್ಯಕ್ತಿ!
ಈ ಕೆಲಸದ ಬಗ್ಗೆ ಅವರ ಮಾತುಗಳಲ್ಲಿಯೇ ಕೇಳುವುದಾದರೆ "ಮೂಲತಃ, ನಾನು ನನ್ನನ್ನೇ ಕೆಲವು ಗಂಟೆಗಳಿಗೆ ಬಾಡಿಗೆಗೆ ಕೊಟ್ಟುಕೊಳ್ಳುತ್ತೇನೆ. ಗ್ರಾಹಕರು ಎಲ್ಲಿಗೆ ಬರಬೇಕೆಂದು ಬಯಸುತ್ತಾರೋ ನಾನು ಅಲ್ಲಿಗೆ ಹೋಗುತ್ತೇನೆ. ಆದರೆ ನನ್ನ ಕೆಲಸ ಅಲ್ಲಿಗೆ ಹೋದ ಮೇಲೆ ಅತಿಥಿಗಳ ತರಹ ಇದ್ದು ಸುಮ್ಮನೆ ಎದ್ದು ಬರುವುದು ಮಾತ್ರವೇ ಆಗಿರುತ್ತದೆ. ನಾನು ನಿರ್ದಿಷ್ಟವಾಗಿ ಅಲ್ಲಿ ಯಾವುದೇ ಕೆಲಸವನ್ನು ಮಾಡದಿರುವುದು ನನ್ನ ಕೆಲಸ. ಕಳೆದ ನಾಲ್ಕು ವರ್ಷಗಳಲ್ಲಿ ನಾನು ಸುಮಾರು 4,000 ಸೆಷನ್‌ಗಳನ್ನು ನಿರ್ವಹಿಸಿದ್ದೇನೆ." ಎಂದು ಮೊರಿಮೊಟೊ ಅವರು ಸುದ್ದಿ ವೆಬ್‌ಸೈಟ್‌ ರಾಯಿಟರ್ಸ್‌ಗೆ ತಿಳಿಸಿದರು.ನೋಡಲು ಸುಮಾರಾಗಿರುವ ಮೊರಿಮೊಟೊ ಅವರು ಈಗ ಟ್ವಿಟ್ಟರ್‌ನಲ್ಲಿ ಸುಮಾರು ಕಾಲು ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಅಲ್ಲಿಯೇ ಅವರು ಹೆಚ್ಚಿನ ಗ್ರಾಹಕರನ್ನು ಕಂಡುಕೊಳ್ಳುತ್ತಾರೆ. ಸರಿಸುಮಾರು ಹಳೆಯ ಗ್ರಾಹಕರಲ್ಲಿನ ಕಾಲು ಭಾಗದಷ್ಟು ಜನರು ಪುನರಾವರ್ತಿತ ಗ್ರಾಹಕರಾಗಿದ್ದಾರೆ. ಅವರನ್ನು 270 ಬಾರಿ ಪುನರಾವರ್ತಿತ ಗ್ರಾಹಕರು ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ.

ಅಂಥದ್ದೇನಿರಬಹುದು? 
ಹಾಗಿದ್ರೆ ಅವರ ಕೆಲಸವು ಏನು ಎಂದು ನಿಮಗೆ ಇನ್ನು ಅರ್ಥವಾಗಿಲ್ಲವಾ. ಬನ್ನಿ ಅದನ್ನು ತಿಳಿಯೋಣ. ಅವರ ಕೆಲಸವು ಗ್ರಾಹಕರ ಸ್ನೇಹಿತರ ಹಾಗೆ ಇಂತಿಷ್ಟು ಸಮಯ ಅವರ ಜೊತೆ ಇದ್ದು ಬರುವುದು ಆಗಿರುತ್ತದೆ. ಅವರು ಉದ್ಯಾನವನಕ್ಕೆ ಕರೆದರೆ ಅಲ್ಲಿಗೆ ಹೋಗುವುದು, ಚರ್ಚ್‌ಗಳಿಗೆ ಹೋಗಬೇಕೆಂದರೆ ಅವರ ಜೊತೆ ಹೋಗುವುದು, ಹೀಗೆ ಅವರ ಜೊತೆಯಾಗಿ ಹೋಗುವುದು ಸುಮ್ಮನೆ ಕೂತು ಬರುವುದು ಇಷ್ಟೆ ಅವರ ಕೆಲಸವಾಗಿರುತ್ತದೆ.

ಇದನ್ನೂ ಓದಿ: Dog Teeth: ಅಬ್ಬಬ್ಬಾ! ನಾಯಿಯ ಹಲ್ಲು ಕ್ಲೀನ್ ಮಾಡಿಸಲು 5 ಲಕ್ಷ ಪಾವತಿಸಿದ್ರು!ಗ್ರಾಹಕರು ಕರೆದ ಕಡೆ ಹೋಗುವ ಕೆಲಸ ಎಂದ ತಕ್ಷಣ ನೀವು ಯೋಚಿಸೋ ರೀತಿಯೇ ಬೇರೆ ಇರುತ್ತದೆ ಅಲ್ಲವೇ? ಆದರೆ ಅಂತಹ ಲೈಂಗಿಕ ಕರೆಗಳ ವಿನಂತಿಗಳಿಗೆ ಅವರು ಇಲ್ಲ ಎಂದೆ ಹೇಳುತ್ತಾರೆ.

ಇದೇ ನೋಡಿ ಒಡನಾಟದ ವ್ಯವಹಾರ ಅಂದ್ರೆ 
ಕಳೆದ ವಾರ, ಮೊರಿಮೊಟೊ ಅವರು ಸೀರೆಯನ್ನು ಧರಿಸಿದ 27 ವರ್ಷದ ಡೇಟಾ ವಿಶ್ಲೇಷಕಿ ಅರುಣಾ ಚಿದಾ, ಅವರ ಎದುರು ಕುಳಿತು ಚಹಾ ಮತ್ತು ಕೇಕ್‌ಗಳ ಬಗ್ಗೆ ವಿರಳ ಸಂಭಾಷಣೆ ನಡೆಸಿದರು. ಚಿದಾ ಅವರು ಭಾರತೀಯ ಉಡುಪನ್ನು ಸಾರ್ವಜನಿಕವಾಗಿ ಧರಿಸಲು ಬಯಸಿದ್ದರು ಆದರೆ ಸ್ನೇಹಿತರ ಮುಂದೆ ಮುಜುಗರಕ್ಕೆ ಒಳಗಾಗುತ್ತೇನೆ ಎಂದು ಭಯ ಪಟ್ಟುಕೊಂಡು ಚಿಂತಿಸುತ್ತಿದ್ದರು. ಆಗ ಅವರಿಗೆ ಸಹಾಯದ ಹಸ್ತ ಚಾಚಿದ್ದೇ ಈ ಮೊರಿಮೊಟೊ. ಆದ್ದರಿಂದ ಅವಳು ತನ್ನ ಒಡನಾಟಕ್ಕಾಗಿ ಮೊರಿಮೊಟೊ ಅವರನ್ನು ಆಯ್ಕೆ ಮಾಡಿದ್ದಳು.

A Japanese person gets paid Rs 5000 to just accompany with people stg asp

ಇದನ್ನೂ ಓದಿ: Money Transfer: ಆನ್‌ಲೈನ್‌ನಲ್ಲಿ ಹಣ ವರ್ಗಾಹಿಸುವವರೇ ಎಚ್ಚರ!

"ನನ್ನ ಸ್ನೇಹಿತರೊಂದಿಗೆ, ನಾನು ಸೀರೆ ಧರಿಸಿ ಮನರಂಜಿಸಬೇಕು ಎಂದುಕೊಂಡಿದ್ದೆ. ಅದಕ್ಕೆ ನಾನು ಮೊರಿಮೊಟೊ ಸಹಾಯ ಪಡೆದೆ. ಆದರೆ ಬಾಡಿಗೆ ವ್ಯಕ್ತಿಯಾಗಿರುವ ಮೊರಿಮೊಟೊ ಅವರ ಜೊತೆ ಗ್ರಾಹಕರು ಚಾಟ್‌ ಮಾಡುವ ಅಗತ್ಯವಿಲ್ಲ” ಎಂದು ಅವರು ಹೇಳಿದರು. ಒಡನಾಟದ ವ್ಯವಹಾರವು ಈಗ ಮೊರಿಮೊಟೊ ಅವರ ಏಕೈಕ ಆದಾಯದ ಮೂಲವಾಗಿದೆ. ಆ ಆದಾಯದಿಂದಲೇ ಅವನು ತನ್ನ ಹೆಂಡತಿ ಮತ್ತು ಮಗುವನ್ನು ಸಾಕುತ್ತಿದ್ಧಾನೆ. ಅವರು ಎಷ್ಟು ಸಂಪಾದಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದರೂ, ಅವರು ದಿನಕ್ಕೆ ಒಬ್ಬ ಅಥವಾ ಇಬ್ಬರೂ ಗ್ರಾಹಕರನ್ನು ಪಡೆಯುತ್ತೇನೆ ಎಂದು ಹೇಳಿದರು.
Published by:Ashwini Prabhu
First published: