Islandನಲ್ಲಿರುವ ಈ 12 ಬೆಡ್‍ರೂಮ್‍ ಬಂಗಲೆಗೆ ಹೊಸ ಓನರ್ ಬೇಕಂತೆ..! ನೀವೂ ಟ್ರೈ ಮಾಡ್ತೀರಾ ನೋಡಿ

Island: 2.5 ಮಿಲಿಯನ್ ಡಾಲರ್‌ಗಿಂತ ತುಸು ಹೆಚ್ಚು ದರವನ್ನು ಈ ಆಸ್ತಿಗೆ ನಿಗದಿ ಮಾಡಲಾಗಿದೆ. ರಿಯಲ್ ಎಸ್ಟೇಟ್ ಏಜೆನ್ಸಿ ಹೇಳುವ ಪ್ರಕಾರ, ಈ ಆಸ್ತಿಯು 2 ಮಿಲಿಯನ್ ಡಾಲರ್‌ಗಿಂತಲೂ ಮೀರಿದ ವ್ಯವಹಾರ ಹೊಂದಿದ್ದು, ಖರೀದಿದಾರರು ಖಂಡಿತಾ ಲಾಭವನ್ನು ನಿರೀಕ್ಷಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪರ್ವತಗಳಿಂದ ಆವೃತವಾದ ಒಂದು ಸುಂದರ ದ್ವೀಪದಲ್ಲಿ (Island) ಕಾಲ ಕಳೆಯುವ ಕ್ಷಣಗಳನ್ನು ಕಲ್ಪಿಸಿಕೊಂಡರೆ ಎಂತವರಿಗಾದರೂ ಖುಷಿಯಾಗದಿರದು. ಇನ್ನು ಆ ದ್ವೀಪದಲ್ಲಿ ಬಂಗಲೆಯಲ್ಲಿ (mansion) ವಾಸ ಮಾಡುವ ಅವಕಾಶ ಸಿಕ್ಕಿದರೆ ? ಜೊತೆಗೆ ಆ ಬಂಗಲೆಯಿಂದ ಆದಾಯವೂ ಬರುವಂತಿದ್ದರೆ? ಕೈಯಲ್ಲಿ ಸಾಕಷ್ಟು ದುಡ್ಡಿರುವವರಂತೂ ಇದನ್ನು ಆಹಾ , ಎಷ್ಟು ಒಳ್ಳೆಯ ಕನಸು (dream) ಎನ್ನಬಹುದು. ಅಂತಹ ಕನಸು ಯಾರಿಗಾದರೂ ಇದ್ದರೆ, ಅದನ್ನು ನನಸಾಗಿಸುವ ಅವಕಾಶವಿದೆ ! ಆದರೆ ಇಲ್ಲಲ್ಲ, ದೂರದ ಸ್ಕಾಟ್‍ಲ್ಯಾಂಡ್‍ನಲ್ಲಿ.

ಸ್ಕಾಟ್‍ಲ್ಯಾಂಡ್‍ನ ದ್ವೀಪ ಒಂದರಲ್ಲಿರುವ, ಒಂದು ಅತಿಥಿ ಗೃಹ, ಪಬ್ ಮತ್ತು ರೆಸ್ಟೋರೆಂಟ್ ನಿರ್ವಹಣೆಗೆ ಒಬ್ಬ ಹೊಸ ವ್ಯವಸ್ಥಾಪಕರು ಬೇಕಾಗಿದ್ದಾರಂತೆ. ಅತ್ಯುತ್ತಮ ಸ್ಕಾಟಿಷ್ ಆತಿಥ್ಯವನ್ನು ನೀಡುವ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳುವ ಅಪರೂಪದ ಅವಕಾಶ ಇದಾಗಿದೆ ಎನ್ನುತ್ತಿದ್ದಾರೆ ಇದರ ರಿಯಲ್ ಎಸ್ಟೇಟ್ ಏಜೆಂಟ್. ಈ ಹಳೆಯ ಬಂಗಲೆ, ಕಾರ್ಬೋಸ್ಟ್ ಎಂಬ ಸಣ್ಣ ಹಳ್ಳಿಯಲ್ಲಿದ್ದು, ಸ್ಕಾಟ್‍ಲ್ಯಾಂಡ್ ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ಸ್ಕಾಟ್‍ಲ್ಯಾಂಡ್ ಅತ್ಯಂತ ದೊಡ್ಡ ಮತ್ತು ಪ್ರತಿಷ್ಟಿತ ಪ್ರಾಪರ್ಟಿ ಸರ್ವಿಸ್ ಸಂಸ್ಥೆ ಆಗಿರುವ ಗ್ರಹಮ್ + ಸಿಬ್ಬಾಲ್ಡ್‌ನ ಏಜೆಂಟ್ ಪೀಟರ್ ಸೇಮೋರ್ ಅವರು ಹೇಳುವ ಪ್ರಕಾರ, “ ಇದು ಸ್ಕಾಟ್‍ಲ್ಯಾಂಡ್‍ನ ದ್ವೀಪ ಸಂಸ್ಥೆಗಳಲ್ಲಿ ಒಂದಾಗಿದೆ. ಸ್ಕಾಟಿಷ್ ಜಾನಪದ ವಾತವರಣದಲ್ಲಿರುವ ಆನಂದದಾಯಕ ಸಾರ್ವಜನಿಕ ಮನೆ ಎಂದು ಪರಿಗಣಿಸಲ್ಪಟ್ಟಿದೆ.”

ಇದನ್ನೂ ಓದಿ: 6 ಕೆಲಸಗಳನ್ನು ಒಟ್ಟಿಗೆ ಮಾಡುತ್ತಿರುವ ಭೂಪ- ನೆಟ್ಟಿಗರು ಫುಲ್ Confuse

“ಜಾನಪದ ಸಂಗೀತ, ಉತ್ತಮ ಆರೋಗ್ಯಕರ ಆಹಾರ ಮತ್ತು ಕೆಲವು ಪಾನೀಯಗಳುಳ್ಳ ಸ್ಕಾಟಿಷ್ ಆತಿಥ್ಯವನ್ನು ಆಸ್ವಾದಿಸಲು ಬಯಸಿ ಬರುವ ಪರ್ವತಾರೋಹಿಗಳು, ವಾಕರ್‌ಗಳು ಮತ್ತು ಸಂದರ್ಶಕರು ಸೇರುವ ಒಂದು ಜನಪ್ರಿಯ ಜಾಗ ಇದಾಗಿದೆ” ಎಂದು ಅವರು ಹೇಳಿದ್ದಾರೆ.

“ಒಂದು ಅದ್ಭುತ ಜಾಗದಿಂದ ಲಾಭಗಳು” ಎಂದು ಈ ಆಸ್ತಿಯ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಈ ದ್ವೀಪದ ಇತಿಹಾಸದ ಕಾರಣದಿಂದ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ, ಆ ಕಾರಣಕ್ಕಾಗಿ ಇದೊಂದು ಅಭಿವೃದ್ಧಿ ಹೊಂದುವ ವ್ಯಾಪಾರವಾಗಿದೆ.

ಈ ಬಂಗಲೆಯಲ್ಲಿ ಒಟ್ಟು 12 ಮಲಗುವ ಕೋಣೆಗಳಿದ್ದು, 5 ಮಲಗುವ ಕೋಣೆಗಳ ಬಂಕ್‍ಹೌಸ್, ಒಂದು ವಿಕಲಚೇತನರ ಬಂಕ್‍ರೂಮ್‍ಗಳನ್ನು ಒಳಗೊಂಡಿದೆ. ಆರು ಮಲಗುವ ಕೋಣೆಗಳುಳ್ಳ ಅತಿಥಿಗೃಹ ಮತ್ತು ಮ್ಯಾನೇಜರ್ ಫ್ಲ್ಯಾಟ್ ಕೂಡ ಇಲ್ಲಿದೆ. ಇಲ್ಲಿ ಕೇವಲ ಪ್ರವಾಸಿಗರಿಗೆ ಅತ್ಯುತ್ತಮ ಸೇವೆ ನೀಡುವುದು ಖಚಿತ. ಅಷ್ಟೇ ಅಲ್ಲ, ಈ ಬಂಗಲೆಯಲ್ಲಿ ಕೆಲಸ ಮಾಡುವ ವ್ಯಕ್ತಿಗೂ ಕೂಡ ವಸತಿಯ ವ್ಯವಸ್ಥೆ ಇದೆ.

2.5 ಮಿಲಿಯನ್ ಡಾಲರ್‌ಗಿಂತ ತುಸು ಹೆಚ್ಚು ದರವನ್ನು ಈ ಆಸ್ತಿಗೆ ನಿಗದಿ ಮಾಡಲಾಗಿದೆ. ರಿಯಲ್ ಎಸ್ಟೇಟ್ ಏಜೆನ್ಸಿ ಹೇಳುವ ಪ್ರಕಾರ, ಈ ಆಸ್ತಿಯು 2 ಮಿಲಿಯನ್ ಡಾಲರ್‌ಗಿಂತಲೂ ಮೀರಿದ ವ್ಯವಹಾರ ಹೊಂದಿದ್ದು, ಖರೀದಿದಾರರು ಖಂಡಿತಾ ಲಾಭವನ್ನು ನಿರೀಕ್ಷಿಸಬಹುದು.

ಈ ಆತಿಥ್ಯ ಕ್ಷೇತ್ರದ ಆಸ್ತಿಯ ಭವಿಷ್ಯದ ಬೆಳವಣಿಗೆಯ ನಿರ್ವಹಣೆ ಮತ್ತು ಸ್ಥಾಪನೆ, ಅದರ ಹೊಸ ಮಾಲೀಕರು ಎದುರಿಸಲಿರುವ ಸವಾಲುಗಳಲ್ಲಿ ಒಂದಾಗಿದೆ ಎಂದು ಪೀಟರ್ ಸೇಮೋರ್ ಹೇಳಿದ್ದು, “ಆತಿಥ್ಯ ಕ್ಷೇತ್ರವು ಅಪಾಯಕಾರಿ ವ್ಯವಹಾರ“ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅದೇನೇ ಇದ್ದರೂ, “ಇದೊಂದು ದೃಢವಾದ ಉದ್ಯಮವಾಗಿದೆ. ಇದು ಮೌಲ್ಯಗಳ ಮೇಲೆ ಪರಿಣಾಮ ಬೀರಿಲ್ಲ, ಹಸಿವನ್ನು ತಗ್ಗಿಸಿಲ್ಲ. ವಾಸ್ತವದಲ್ಲಿ, ಅದು ವಲಯದಲ್ಲಿ ಹೊಸ ಚೈತನ್ಯವನ್ನು ನೀಡಿದೆ” ಎಂಬುದನ್ನು ನಮಗೆ ಕೋವಿಡ್ -19 ಸಾಂಕ್ರಮಿಕವು ಕಲಿಸಿದೆ ಎಂದು ಹೇಳುತ್ತಾರೆ ಅವರು.

ಇದನ್ನೂ ಓದಿ: ಔಷಧಗಳಿಂದ ಕಲುಷಿತಗೊಳ್ಳುತ್ತಿವೆ ವಿಶ್ವದ ನದಿಗಳು- ಎಚ್ಚರಿಸಿದ ವಿಜ್ಞಾನಿಗಳು

ದ್ವೀಪಗಳಲ್ಲಿ ಆತಿಥ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಾಪಾರ ಮಾಡಲು ಅಲ್ಲಿನ ಜನ ಬಹಳ ಆಸಕ್ತಿಯನ್ನು ತೋರುತ್ತಿದ್ದಾರೆ. ವಾಯುವ್ಯ ಇಂಗ್ಲೆಂಡ್‍ನ ಕುಂಬ್ರಿಯಾದಲ್ಲಿ , ಭೂಮಾಲೀಕರಿಗೆ ಸಣ್ಣ ದ್ವೀಪದ ಪಬ್ ಅನ್ನು ನಡೆಸಲು ನೀಡಿರುವ ಜಾಹಿರಾತಿಗೆ ನೂರಾರು ಜನರು ಆಸಕ್ತಿ ತೋರಿಸಿದ್ದಾರೆ ಎಂದು ಇತ್ತಿಚೆಗೆ ವರದಿಯಾಗಿದೆ.
Published by:Sandhya M
First published: