• Home
  • »
  • News
  • »
  • trend
  • »
  • Karva Chauth Viral Video: ಪ್ರೇಯಸಿ ಜೊತೆ ಕರ್ವಾ ಚೌತ್ ಶಾಪಿಂಗ್, ಬೀದಿಯಲ್ಲೇ ಗಂಡನ ಗ್ರಹಚಾರ ಬಿಡಿಸಿದ ಪತ್ನಿ! ವೈರಲ್ ವಿಡಿಯೋ ಇಲ್ಲಿದೆ ನೋಡಿ

Karva Chauth Viral Video: ಪ್ರೇಯಸಿ ಜೊತೆ ಕರ್ವಾ ಚೌತ್ ಶಾಪಿಂಗ್, ಬೀದಿಯಲ್ಲೇ ಗಂಡನ ಗ್ರಹಚಾರ ಬಿಡಿಸಿದ ಪತ್ನಿ! ವೈರಲ್ ವಿಡಿಯೋ ಇಲ್ಲಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕರ್ವಾ ಚೌತ್ ಗಂಡನ ಆಯುಷ್ಯ, ಆರೋಗ್ಯ, ಶ್ರೇಯೋಭಿವೃದ್ಧಿಗಾಗಿ ಹೆಂಡತಿಯರು ಮಾಡುವ ವೃತ. ಆದರೆ ಇಲ್ಲೊಬ್ಬ ಭೂಪ ಕರ್ವಾ ಚೌತ್ ದಿನವೇ ತನ್ನ ಪ್ರೇಯಸಿ ಜೊತೆ ಸಿಕ್ಕಿಬಿದ್ದು, ಹೆಂಡತಿಯಿಂದ ಬೀದಿಯಲ್ಲೇ ಹೊಡೆತ ತಿಂದಿದ್ದಾನೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

ಮುಂದೆ ಓದಿ ...
  • News18 Kannada
  • Last Updated :
  • Ghaziabad, India
  • Share this:

ಗಾಜಿಯಾಬಾದ್, ಉತ್ತರ ಪ್ರದೇಶ: ಕರ್ವಾ ಚೌತ್ ಹಬ್ಬದ (Karva Chauth Festival) ಬಗ್ಗೆ ನೀವೆಲ್ಲ ಕೇಳಿರುತ್ತೀರಿ. ಉತ್ತರ ಭಾರತದ (North India) ಬಹುತೇಕ ರಾಜ್ಯಗಳಲ್ಲಿ ಆಚರಿಸುವ ಜನಪ್ರಿಯ ಹಬ್ಬಗಳಲ್ಲಿ ಕರ್ವಾ ಚೌತ್ ಕೂಡ ಒಂದು. ಗಂಡನ (Husband) ಆಯುಷ್ಯ, ಆರೋಗ್ಯ (Health) ವೃದ್ಧಿಯಾಗಲಿ ಅಂತ ದಕ್ಷಿಣ ಭಾರತದ ರಾಜ್ಯಗಳಲ್ಲಿ (South Indian States) ಹೆಂಡತಿಯರು (Wives) ಮಾಡುವ ಭೀಮನ ಅಮಾವಾಸ್ಯೆ (Bhimana Amavasye), ವಟ ಸಾವಿತ್ರಿ ವೃತದಂತೆ (Vata Savitri Vrith) ಕರ್ವಾ ಚೌತ್ ಕೂಡ ಆಚರಿಸಲ್ಪಡುತ್ತದೆ. ಗಂಡನ ಶ್ರೇಯೋಭಿವೃದ್ಧಿಗಾಗಿ ಹೆಂಡತಿಯರು ಈ ರೀತಿಯ ವೃತ ಮಾಡುತ್ತಾರೆ. ಆದರೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ (Ghaziabad) ಭೂಪನೊಬ್ಬ ಕರ್ವಾ ಚೌತ್ ದಿನವೇ ಹೆಂಡತಿಯಿಂದ ಬೀದಿಯಲ್ಲೇ ಹೊಡೆತ ತಿಂದಿದ್ದಾನೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.


ಗರ್ಲ್ ಫ್ರೆಂಡ್ ಜೊತೆ ಗಂಡನ ಕರ್ವಾ ಚೌತ್ ಶಾಪಿಂಗ್


ಕರ್ವಾ ಚೌತ್ ಹಬ್ಬದ ಸಂದರ್ಭದಲ್ಲಿ ಈಗಾಗಲೇ ಮದುವೆಯಾದ ವ್ಯಕ್ತಿಯೊಬ್ಬ ತನ್ನ ಗೆಳತಿಯೊಂದಿಗೆ ಹೆಂಡತಿ ಕೈಯಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇಂಥದ್ದೊಂದು ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಪ್ರೇಯಸಿ ಜೊತೆ ಕರ್ವಾ ಚೌತ್ ಶಾಪಿಂಗ್ ಮಾಡುತ್ತಿದ್ದ ಗಂಡನಿಗೆ ಹೆಂಡತಿಯೇ ಜನನಿಬಿಡ ಮಾರುಕಟ್ಟೆಯಲ್ಲಿ ಮನಸ್ಸೋ ಇಚ್ಛೆ ಥಳಿಸಿದ್ದಾಳೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆ ಮತ್ತು ಗಂಡನ ಫೈಟ್ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಗಂಡ ಹೆಂಡತಿ ಫೈಟ್


ಮಾಹಿತಿಯ ಪ್ರಕಾರ, ಮಹಿಳೆಯೊಬ್ಬರು ಗುರುವಾರ ಘಾಜಿಯಾಬಾದ್‌ನಲ್ಲಿ ತನ್ನ ಪತಿ ಇನ್ನೊಬ್ಬ ಮಹಿಳೆಯೊಂದಿಗೆ ಶಾಪಿಂಗ್ ಮಾಡುತ್ತಿದ್ದುದನ್ನು ನೋಡಿ ಕರ್ವಾ ಚೌತ್ ದಿನದಂದು ಅವನನ್ನು ಕೆಟ್ಟದಾಗಿ ಥಳಿಸಿದ್ದಾಳೆ. ಈ ಸಂಪೂರ್ಣ ದೃಶ್ಯ ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.


ಇದನ್ನೂ ಓದಿ: Family Fight: ಹೆಂಡ್ತಿ ಯಾಕ್ ಹಿಂಗ್ ಕಾಡ್ತಿ ಅಂತ 80 ಅಡಿ ಮರವೇರಿದ ಗಂಡ! ಒಂದು ತಿಂಗಳಾದ್ರೂ ಕೆಳಕ್ಕೆ ಬರಲೇ ಇಲ್ಲ!


ಗಂಡನ ಜೊತೆ ಪ್ರೇಯಸಿಗೂ ಬಿತ್ತು ಏಟು!


ಹೆಂಡತಿ ಮತ್ತು ಅವಳ ತಾಯಿ ಕರ್ವಾ ಚೌತ್‌ ಹಬ್ಬಕ್ಕಾಗಿ ಕೆಲವು ಸಾಮಗ್ರಿಗಳನ್ನು ಖರೀದಿಸಲು ಮಾರುಕಟ್ಟೆಗೆ ಬಂದಿದ್ದರು. ಈ ವೇಳೆ ಆಕೆಯ ಗಂಡ ಹಾಗೂ ಆತನ ಪ್ರೇಯಸಿ ಶಾಪಿಂಗ್ ಮಾಡುತ್ತಾ ಇರುವುದನ್ನು ಆಕೆ ನೋಡಿದ್ದಾಳೆ. ಕೂಡಲೇ ಆಕೆ ತನ್ನ ಗಂಡನ ಶರ್ಟ್ ಕಾಲರ್ ಹಿಡಿದು ಥಳಿಸಿದ್ದಾಳೆ. ಇದನ್ನು ನೋಡಿದ ಜನರು ಸುತ್ತಲೂ ಜಮಾಯಿಸಿದ್ದಾರೆರು. ಆ ವ್ಯಕ್ತಿಯ ಗೆಳತಿ ಮೊದಲು ಆತಂಕ, ಭಯದಲ್ಲಿ ಸುಮ್ಮನೆ ನಿಂತಿದ್ದಾಳೆ. ಬಳಿಕ ಅವನಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದಾಳೆ. ಈ ವೇಳೆ ಆಕೆಗೂ ಈ ಮಹಿಳೆ ಜೋರಾಗಿ ಥಳಿಸಿದ್ದಾಳೆ.


ಪೊಲೀಸರಿಗೆ ದೂರು ನೀಡಿ, ಗಂಡನನ್ನು ತೊರೆದು ಹೋದ ಪತ್ನಿ


ಈ ಘಟನೆಯ ನಂತರ, ಪತ್ನಿ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದಾರೆಳೆ. ಸದ್ಯ ದೂರು ಪಡೆದ ಪೊಲೀಸರು ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ವರದಿಗಳ ಪ್ರಕಾರ, ಪತಿಯೊಂದಿಗೆ ಜಗಳವಾಡಿದ ನಂತರ ಹೆಂಡತಿ ಗಂಡನನ್ನು ತೊರೆದು, ತವರು ಮನೆಗೆ ತನ್ನ ಹೆತ್ತವರೊಂದಿಗೆ ವಾಸಿಸಲು ಹೋಗಿದ್ದಾಳೆ.


ಇದನ್ನೂ ಓದಿ: Meat: ನಾನ್‌ ವೆಜ್‌ ತಿಂದು ಹೊಟ್ಟೆ ತುಂಬಿಸಿಕೊಂಡ್ರೆ ಬೆಡ್‌ ರೂಮ್‌ನಲ್ಲಿ ಉಪವಾಸ! ಗಂಡಸರಿಗೆ ಹೆಂಗಸರ ಖಡಕ್ ವಾರ್ನಿಂಗ್


ಜನಪ್ರಿಯ ಹಬ್ಬ ಕರ್ವಾ ಚೌತ್


ಕರ್ವಾ ಚೌತ್ ಜನಪ್ರಿಯ ಹಿಂದೂ ಹಬ್ಬವಾಗಿದ್ದು, ವಿವಾಹಿತ ಮಹಿಳೆಯರು ತಮ್ಮ ಗಂಡನ ಸುರಕ್ಷತೆ ಮತ್ತು ದೀರ್ಘಾಯುಷ್ಯಕ್ಕಾಗಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ವಿವಾಹಿತ ಮಹಿಳೆಯರು ಕರ್ವಾ ಚೌತ್ ಆಚರಣೆಗಳ ಭಾಗವಾಗಿ ವರ್ಣರಂಜಿತ ವಿನ್ಯಾಸಗಳಲ್ಲಿ ಮೆಹಂದಿಯನ್ನು ಹಚ್ಚಿಕೊಳ್ಳುತ್ತಾರೆ. ಕರ್ವಾ ಚೌತ್ ಅನ್ನು ಕೃಷ್ಣ ಪಕ್ಷದ ನಾಲ್ಕನೇ ದಿನದಂದು ಅಥವಾ ಹಿಂದೂ ಕ್ಯಾಲೆಂಡರ್ ತಿಂಗಳ ಕಾರ್ತಿಕದಲ್ಲಿ ಆಚರಿಸಲಾಗುತ್ತದೆ. ಇದನ್ನು ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ.

Published by:Annappa Achari
First published: