Family Fight: ಹೆಂಡ್ತಿ ಯಾಕ್ ಹಿಂಗ್ ಕಾಡ್ತಿ ಅಂತ 80 ಅಡಿ ಮರವೇರಿದ ಗಂಡ! ಒಂದು ತಿಂಗಳಾದ್ರೂ ಕೆಳಕ್ಕೆ ಬರಲೇ ಇಲ್ಲ!

ಗಂಡ ಹೆಂಡತಿ ಜಗಳ ಉಂಡು ಮಲಗುವತನಕ ಅಂತಾರೆ. ಆದ್ರೆ ಇಲ್ಲಿ ಗಂಡ ಹೆಂಡತಿ ಉಂಡು, ಮಲಗಿ ಎದ್ದ ಮೇಲೂ ಜಗಳ ಮುಂದುವರೆಸುತ್ತಿದ್ರು. ಕೊನೆಗೆ ಹೆಂಡತಿ ಕಿರುಕುಳ ತಾಳಲಾರದೇ ಗಂಡ ನಾಪತ್ತೆಯಾದ. ಬಳಿಕ ಪತ್ತೆಯಾಗಿದ್ದು 1 ತಿಂಗಳ ಬಳಿಕ, ಅದೂ ಮನೆ ಮುಂದಿರುವ 80 ಅಡಿ ಎತ್ತರದ ಮರದ ಮೇಲೆ! ಆದ್ರೆ ಆತ ಮರ ಹತ್ತಿಕೊಂಡು ನಮ್ಮನ್ನೆಲ್ಲ ನೋಡ್ತಾನೆ ಅಂತ ಅಕ್ಕಪಕ್ಕದ ಮಹಿಳೆಯರು ದೂರಿದ್ದಾರಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉತ್ತರ ಪ್ರದೇಶ: ಸರಸ ಮತ್ತು ವಿರಸ ಎರಡು ಸಮರಸದಂತಿದ್ದರೆ ಮಾತ್ರ ಅದು ಸಂಸಾರ. ಇಲ್ಲಾಂದ್ರೆ ಜೈಲು (Jail) ಎನ್ನುವುದು ಹಿರಿಯರ ಅನುಭವದ ಮಾತು. ಗಂಡ (Husband) ಹೆಂಡತಿ (Wife) ಜಗಳ (Clash) ಉಂಡು ಮಲಗುವತನಕ ಅಂತಾರೆ. ಆದ್ರೆ ಇಲ್ಲಿ ಗಂಡ ಹೆಂಡತಿ ಉಂಡು, ಮಲಗಿ ಎದ್ದ ಮೇಲೂ ಜಗಳ ಮುಂದುವರೆಸುತ್ತಿದ್ರು. ಕೊನೆಗೆ ಹೆಂಡತಿ ಕಿರುಕುಳ (Torcher) ತಾಳಲಾರದೇ ಗಂಡ ನಾಪತ್ತೆಯಾದ (Missing). ಒಂದಲ್ಲ ಎರಡಲ್ಲ ಬರೋಬ್ಬರಿ 1 ತಿಂಗಳು ಅಂದರೆ 30 ದಿನದ ಬಳಿಕ ಪತ್ತೆಯಾದ. ಅದು ಎಲ್ಲಿ ಗೊತ್ತಾ? ಮನೆ ಮುಂದಿರುವ 80 ಅಡಿ ಎತ್ತರದ ಮರದ (Tree) ಮೇಲೆ! ಇದೇನಪ್ಪಾ ವಿಚಿತ್ರ ಕಥೆ ಅಂತೀರಾ? ಹಾಗಿದ್ರೆ ಈ ಸ್ಟೋರಿ ಓದಿ…

80 ಅಡಿ ಎತ್ತರದ ತಾಳೆ ಮರ ಹತ್ತಿ ಕುಳಿತ ವ್ಯಕ್ತಿ

ಉತ್ತರ ಪ್ರದೇಶದ ಲಕ್ನೋದ ಹಳ್ಳಿಯೊಂದರಲ್ಲಿ 42 ವರ್ಷ ಸಂಸಾರಸ್ಥ ವ್ಯಕ್ತಿಯೊಬ್ಬ ಹೆಂಡತಿಯೊಂದಿಗೆ ಜಗಳ ಆಡಿ ಮನೆ ಮುಂದಿನ ತಾಳೆ ಮರದ ಮೇಲೆ ಹತ್ತಿದ್ದಾನೆ. ಅದು ಬರೋಬ್ಬರಿ 80 ಅಡಿ ಎತ್ತರದ ಮರದ ಮೇಲೆ ಹತ್ತಿ ಕುಳಿತಿದ್ದಾನೆ.

ಮರವೇರಿ ಕುಳಿತಿದ್ದ ರಾಮ್ ಪ್ರವೇಶ್


ಈ ವಿಚಿತ್ರ ವ್ಯಕ್ತಿ ಯಾರು?

42 ವರ್ಷದ ರಾಮ್ ಪ್ರವೇಶ್ ಎಂಬಾತನೇ ತಾಳೆ ಮರ ಏರಿ ಕುಳಿತ ವ್ಯಕ್ತಿ. ಈತ ಮನೆ ಮುಂದಿದ್ದ 80 ಅಡಿ ಎತ್ತರದ ತಾಳೆ ಮರದ ಮೇಲೆ ಕುಳಿತಿದ್ದಾನೆ. ಅದೂ ಒಂದಲ್ಲ, ಎರಡಲ್ಲ ಬರೋಬ್ಬರಿ 1 ತಿಂಗಳುಗಳ ಕಾಲ ಅದೇ ಮರದ ಮೇಲೆ ರಾಮ್ ಪ್ರವೇಶ್ ಕುಳಿತಿದ್ದಾನೆ. ಇದನ್ನು ಕಂಡ ಕುಟುಂಬಸ್ಥರು, ಸ್ನೇಹಿತರು ಮತ್ತು ಸ್ಥಳೀಯರು ಕೆಳಕ್ಕೆ ಇಳಿದು ಬರುವಂತೆ ವಿವಿಧ ರೀತಿಯಲ್ಲಿ ಹೇಳಿದ್ದಾರೆ, ಮನವಿ ಮಾಡಿದ್ದಾರೆ. ಆದರೆ ಅದ್ಯಾವುದಕ್ಕೂ ಮಣಿಯದ ರಾಮ್ ಪ್ರವೇಶ್ ಮರದಿಂದ ಕೆಳಕ್ಕೆ ಇಳಿಯಲೂ ಇಲ್ಲ, ಮನೆಗೆ ವಾಪಸ್ ಬರಲೂ ಇಲ್ಲ.

ಇದನ್ನೂ ಓದಿ: Halwa: ಹಲ್ವಾ ತಿನ್ನುವಾಗ ಹುಷಾರ್! ಆಸೆಯಿಂದ ತಿಂದ ಸ್ವೀಟ್ ಪ್ರಾಣವನ್ನೇ ತೆಗೆಯಿತು!

ಹೆಂಡತಿಗೆ ಹೆದರಿ 1 ತಿಂಗಳಿನಿಂದ ಮರದಲ್ಲೇ ವಾಸ

ರಾಮ್ ಪ್ರಸಾದ್ ಈ ವಿಚಿತ್ರ ವರ್ತನೆಗೆ ಕಾರಣ ಆತನ ಹೆಂಡತಿ. ಹೌದು, ಆತನ ಹೆಂಡತಿ ಗಂಡನಿಗೆ ಬೈಯ್ಯುವುದು, ಹೊಡೆಯುವುದು ಮಾಡುತ್ತಿದ್ದಳಂತೆ. ಅಲ್ಲದೇ ಪ್ರತಿನಿತ್ಯ ವಿನಾಕಾರಣ ಗಂಡನ ಜೊತೆ ಯಾವುದಾದರೊಂದು ಕಿರಿಕ್ ತೆಗೆದು, ಮಾನಸಿಕ ಹಿಂಸೆ ಕೊಡುತ್ತಿದ್ದಳಂತೆ. ಇದೇ ಕಾರಣಕ್ಕೆ ಆಕೆಯ ಕಿರುಕುಳ ತಾಳಲಾರದೇ, ಆಕೆಯಿಂದ ತಪ್ಪಿಸಿಕೊಳ್ಳಲು ಈತ 1 ತಿಂಗಳ ಕಾಲ 80 ಅಡಿ ಎತ್ತರದ ತಾಳೆ ಮರ ಏರಿ ಕುಳಿತಿದ್ದಾನೆ.

ಮರದ ಮೇಲಕ್ಕೇ ಊಟ-ತಿಂಡಿ ಸಪ್ಲೈ

ಇನ್ನು ಕಳೆದ ಆರು ತಿಂಗಳಿನಿಂದ ರಾಮ್ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎಂದು ತಿಳಿದು ಬಂದಿದೆ. ಕಳೆದ 30 ದಿನಗಳಿಂದ ಆತ ಮರ ಏರಿ ಕುಳಿತಿದ್ದು. ಅವನ ಆಹಾರ ಮತ್ತು ಅಗತ್ಯ ವಸ್ತುಗಳ ಸೇವನೆಗಾಗಿ, ಕುಟುಂಬಸ್ಥರು ಆಹಾರ ಪದಾರ್ಥಗಳು ಮತ್ತು ನೀರನ್ನು ಕಟ್ಟಿ, ಹಗ್ಗದಿಂದ ಮೇಲಕ್ಕೆ ಕಳಿಸುತ್ತಿದ್ದಾರಂತೆ.

ಇದನ್ನೂ ಓದಿ: Fake University: ದೇಶದಲ್ಲಿದೆ 21 ಫೇಕ್ ಯುನಿವರ್ಸಿಟಿ! ಕರ್ನಾಟಕದಲ್ಲೂ ಇದೆ ನಕಲಿ ವಿಶ್ವವಿದ್ಯಾಲಯ!

ಅಕ್ಕ ಪಕ್ಕದ ಮಹಿಳೆಯರಿಂದ ರಾಮ್ ಪ್ರವೇಶ್ ಮೇಲೆ ಆರೋಪ

ಇದು ಆತ ಹೇಳಿದ ಕಥೆಯಾದರೆ, ಅಕ್ಕಪಕ್ಕದ ಮಹಿಳೆಯರು ಆತನಿಗೆ ಹಿಡಿಶಾಪ ಹಾಕಿದ್ದಾರೆ. ಈತ ಮರದ ಮೇಲೆ ಹತ್ತಿ ಕುಳಿತು, ಪಕ್ಕದ ಮನೆಗಳ ಜನರ ಖಾಸಗಿತನಕ್ಕೆ ಧಕ್ಕೆ ತರುತ್ತಿದ್ದಾನೆ ಅಂತ ಸ್ಥಳೀಯರು ಆರೋಪಿಸಿದ್ದಾರೆ. ಅದರಲ್ಲೂ ಮಹಿಳೆಯರು ಆತನ ಮೇಲೆ ದೂರಿನ ಸುರಿಮಳೆಗೈದಿದ್ದು. ಆತ ಮರದ ಮೇಲೆ ಕುಳಿತು ನಮ್ಮ ಖಾಸಗಿ ಕೆಲಸಗಳನ್ನು ನೋಡುತ್ತಾನೆ ಅಂತ ಬೈಯ್ದಿದ್ದಾರಂತೆ.
Published by:Annappa Achari
First published: