ಕೆಲಸ ಕೊಡಿ ಎಂದ ನಿರಾಶ್ರಿತನಿಗೆ ಬಂತು 200ಕ್ಕೂ ಅಧಿಕ ಆಫರ್​!


Updated:July 31, 2018, 10:11 AM IST
ಕೆಲಸ ಕೊಡಿ ಎಂದ ನಿರಾಶ್ರಿತನಿಗೆ ಬಂತು 200ಕ್ಕೂ ಅಧಿಕ ಆಫರ್​!

Updated: July 31, 2018, 10:11 AM IST
ಕೆಲಸಕ್ಕಾಗಿ ಅಲೆದು ಸುಸ್ತಾಗಿದ್ದ ಸಿಲಿಕಾನ್​ ವಾಲಿಯ ಯುವಕನೊಬ್ಬ ಪೆಟ್ರೋಲ್​ ಬಂಕ್​ ಮುಂದೆ ಕೆಲಸಕೊಡಿ ಎಂದು ಬೋರ್ಡ್​ ಹಿಡಿದು ತನ್ನ ಸ್ವವಿವರ ಪತ್ರ(ರೆಸ್ಯೂಮ್​)ನ್ನು​ ಲಗತ್ತಿಸಿ ನಿಂತಿದ್ದ ಪೋಸ್ಟ್​ ವೈರಲ್​ ಆಗಿದೆ.

ಟೆಕ್ಸಾಸ್​ನ ಎ&ಎಂ ವಿಶ್ವವಿದ್ಯಾಲಯದಲ್ಲಿ ವೆಬ್​ ಡೆವಲಪರ್​ ಪದವಿ ಪಡೆದಿದ್ದ ನಿರಾಶ್ರಿತ ಯುವಕ 26 ವರ್ಷದ ಡೇವಡ್​ ಕ್ಯಾಸರಸ್​ ಎಂಬಾತ ಕೆಲಸಕ್ಕಾಗಿ ಅಲೆಯುತ್ತಿದ್ದ. ಎಲ್ಲೂ ಕೆಲಸ ಸಿಗದೇ ಕೊನೆಗೆ ತನ್ನ ರೆಸ್ಯೂಮ್​ನ್ನು ಲಗತ್ತಿಸಿ ನಾನು ನಿರಾಶ್ರಿತ, ಉದ್ಯೋಗದ ಹಸಿವಿದೆ, ನನ್ನ ರೆಸ್ಯೂಮೆಯನ್ನು ನೋಡಿ ಎಂದು ಬೋರ್ಡ್​ವೊಂದನ್ನು ಹಾಕಿಕೊಂಡು ಪೆಟ್ರೋಲ್​ ಬಂಕ್​ ಮುಂದೆ ನಿಂತಿದ್ದಾನೆ. ಈ ಚಿತ್ರವನ್ನು ಸೆರೆಹಿಡಿದ ಜಾಸ್ಮಿನ್​ ಸ್ಕೋಫೀಲ್ಡ್​ ಈತನಿಗೆ ಸಹಾಯ ಮಾಡುವಂತೆ ಕೋರಿ ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.ಈ ಪೋಸ್ಟ್​ ಮಾಡಿದ ಕೆಲವೇ ಕ್ಷಣಗಳಲ್ಲಿ ವೈರಲ್​ ಆಗಿದ್ದು ಅನೇಕರು ಆತನನ್ನು ಸಂಪರ್ಕಿಸಿದ್ದಾರೆ, ಮತ್ತೆ ಕೆಲವರು ಸಿಲಿಕಾನ್​ ವಾಲಿಯಲ್ಲಿ ಜೀವನ ನಡೆಸುವುದು ಎಷ್ಟು ಕಷ್ಟದ ವಿಚಾರ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.
Loading...


ಗಿಸೆಲ್​ ಆಡಮೆ ಎಂಬವರು ಈತನ ರೆಸ್ಯೂಮ್​ನ್ನು ತನ್ನ ತಂದೆಯ ಕಂಪನಿಗೆ ರವಾನಿಸಿದ್ದು ಕೆಲಸ ನೀಡುವಂತೆ ಹೇಳಿರುವುದಾಗಿ ಬರೆದುಕೊಂಡಿದ್ದಾರಂತೆ. ಸಣ್ಣಪುಟ್ಟ ಕಂಪನಿಗಳಲ್ಲದೇ ಗೂಗಲ್​, ನೆಟ್​ಫ್ಲಿಕ್ಸ್​ನಿಂದಲೂ ಈತನಿಗೆ ಕರೆಬಂದಿದ್ದು, ಒಟ್ಟಾರೆ 200ಕ್ಕೂ ಅಧಿಕ ಕೆಲಸದ ಆಫರ್​ಗಳು ಈತನಿಗೆ ಬಂದಿದೆ ಎಂದು ನ್ಯೂಯಾರ್ಕ್​ ಪೋಸ್ಟ್​ ವರದಿ ಮಾಡಿದೆ.ಡೀವಿಡ್​ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಮಾಹಿತಿ ಪ್ರಕಾರ, ಕ್ಯಾಲಿಫೋರ್ನಿಯಾಗೆ ಪ್ರಯಾಣ ಬೆಳೆಸುವ ಮುನ್ನ ಈತ ಈ ಹಿಂದೆ ಆಸ್ಟಿನ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದನಂತೆ, ಆದರೆ ಸಿಲಿಕಾನ್​ ವ್ಯಾಲಿಯಲ್ಲಿ ಎಲ್ಲೂ ಕೆಲಸ ಸಿಗದೆ ನಿರಾಶ್ರಿತನಾಗಿ ಅಂತಿಮವಾಗಿ ತನ್ನ ಕಾರಿನಲ್ಲೇ ವಾಸ ಮಾಡತೊಡಗಿದ್ದಾನೆ.ಸದ್ಯ ಈತನಿಗೆ ಬಂದಿರುವ ಕೆಲಸದ ಆಫರ್​ಗಳಿಂದ ಆತನ ಜೀವನೇ ಬದಲಾಗಿದ್ದು, ಡೇವಿಡ್​ ಕುರಿತು ಕಾಳಜಿ ತೋರಿಸಿದ ಜಾಸ್ಮಿನ್​ಗೂ ಪ್ರಶಂಸೆ ವ್ಯಕ್ತವಾಗಿದೆ.
First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ