• Home
  • »
  • News
  • »
  • trend
  • »
  • Birds Bungalow: ಪಕ್ಷಿಗಳ ಮೇಲಿನ ಪ್ರೀತಿಗೆ ಲಕ್ಷಾಂತರ ರೂ ವೆಚ್ಚದಲ್ಲಿ ಬಂಗ್ಲೆಯನ್ನೇ ನಿರ್ಮಿಸಿದ ಗುಜರಾತಿನ ವ್ಯಕ್ತಿ!

Birds Bungalow: ಪಕ್ಷಿಗಳ ಮೇಲಿನ ಪ್ರೀತಿಗೆ ಲಕ್ಷಾಂತರ ರೂ ವೆಚ್ಚದಲ್ಲಿ ಬಂಗ್ಲೆಯನ್ನೇ ನಿರ್ಮಿಸಿದ ಗುಜರಾತಿನ ವ್ಯಕ್ತಿ!

ಪಕ್ಷಿಗಳ ಬಂಗಲೆ-ಪಕ್ಷಿಪ್ರೇಮಿ

ಪಕ್ಷಿಗಳ ಬಂಗಲೆ-ಪಕ್ಷಿಪ್ರೇಮಿ

ಗುಜರಾತ್ ಮೂಲದ ಭಗವಾನ್‌ಜೀ 40 ಅಡಿ ಎತ್ತರ ಇರುವ ಪಕ್ಷಿ ಮನೆಯನ್ನು ತಯಾರಿಸಲು ಒಂದಲ್ಲ, ಎರಡಲ್ಲ ಬರೋಬ್ಬರಿ 20 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.

  • Share this:

ಈಗಂತೂ ಬಹುತೇಕರಿಗೆ ಸಾಕು ಪ್ರಾಣಿ ಮತ್ತು ಪಕ್ಷಿಗಳನ್ನು ಕಂಡರೆ ವಿಪರೀತ ಕಿರಿಕಿರಿ(Annoying) ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ, ಆದರೆ ಕೆಲವರು ಮಾತ್ರ ಈ ಸಾಕು ಪ್ರಾಣಿ ಮತ್ತು ಪಕ್ಷಿಗಳನ್ನು(Pets and Birds) ತಮ್ಮ ಮನೆಯಲ್ಲಿಯೇ ತಮ್ಮ ಜೊತೆಗೆ ಇರಿಸಿಕೊಂಡು ಮಕ್ಕಳಂತೆ ಸಾಕುತ್ತಿರುತ್ತಾರೆ.ಕೆಲವರು ಮಾತ್ರ ಪ್ರಾಣಿ ಪಕ್ಷಿಗಳ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿರುತ್ತಾರೆ ಮತ್ತು ಅವುಗಳನ್ನು ತಮ್ಮ ಸ್ವಂತ ಮಕ್ಕಳಿಗಿಂತಲೂ (Children) ಜೋಪಾನವಾಗಿ ಸುರಕ್ಷಿತವಾಗಿ ಕಾಪಾಡುತ್ತಾರೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಇತ್ತೀಚೆಗೆ ನಾವು ಒಂದು ಸುದ್ದಿಯನ್ನು ನೋಡಿದ್ದೆವು, ಅದರಲ್ಲಿ ರಾಜಸ್ಥಾನದ (Rajasthan) ಜೋಧಪುರದ ಸುಭಾಷ್ ನಗರದ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ಹಸು, ಕರುಗಳನ್ನು ಮಗುವಿನಂತೆ ಸಾಕುತ್ತಿದ್ದರು.


ಕೌ ಹೌಸ್ ಎಂದೇ ಫೇಮಸ್
ಅವರ ಮನೆಯು ‘ಕೌ ಹೌಸ್’ ಎಂದೇ ಫೇಮಸ್ ಆಗಿದ್ದು, ಈ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಇದೇ ವಿಚಾರವಾಗಿ ಜನಪ್ರಿಯತೆ ಪಡೆದಿದ್ದಾರೆ. ಹಸುಗಳು ಸಾಕು ಪ್ರಾಣಿಗಳು ಮತ್ತು ಯಾರಿಗೂ ಹಾನಿ ಮಾಡುವುದಿಲ್ಲ ಎಂದು ಸಂಜು ಕನ್ವರ್ ಹೇಳುತ್ತಾರೆ. ಮತ್ತೊಂದೆಡೆ, ಮನೆಯಲ್ಲಿ ಹಸುಗಳನ್ನು ಸಾಕಿದರೆ, ಕಷ್ಟದ ಪರಿಸ್ಥಿತಿಯು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇವರಿಗಿದೆ ಎಂದು ಹೇಳುತ್ತಾರೆ. ಆದ್ದರಿಂದಲೇ ಮನೆಯೊಳಗಡೆ ಇವುಗಳನ್ನು ಮಕ್ಕಳಂತೆ ಸಾಕುತ್ತಿದ್ದೇನೆ ಎನ್ನುತ್ತಾರೆ.


ಪಕ್ಷಿ ಮನೆ


ಇದೇ ರೀತಿಯ ಮತ್ತೊಂದು ನಿದರ್ಶನ ಇಲ್ಲಿದೆ ನೋಡಿ, ಇಲ್ಲೊಬ್ಬರು 75 ವರ್ಷದ ವ್ಯಕ್ತಿಯು ಪಕ್ಷಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಅವುಗಳಿಗಾಗಿ ಭವ್ಯವಾದ ಪಕ್ಷಿ ಮನೆಯನ್ನೇ ಕಟ್ಟಿಸಿದ್ದಾರೆ ನೋಡಿ. ಇವರ ಹೆಸರು ಭಗವಾನ್‌ಜೀ ರೂಪಪಾರಾ. ಇವರು ಸಣ್ಣ ಪಕ್ಷಿ ಮನೆಗಳಿಂದ ಸ್ಫೂರ್ತಿ ಪಡೆದು ಭವ್ಯವಾದ ಪಕ್ಷಿ ಮನೆಯೊಂದನ್ನು ಕಟ್ಟಿಸಿದ್ದಾರೆ.


ಇದನ್ನೂ ಓದಿ: Viral Video : ಮಹಿಳೆಯ ಪರ್ಸ್ ಕಚ್ಚಿಕೊಂಡು ಹಾರಿ ಹೋದ ಹಕ್ಕಿ, ಮುಂದೇನಾಯ್ತು ನೋಡಿ!


20 ಲಕ್ಷ ರೂಪಾಯಿ ಖರ್ಚು
ಗುಜರಾತ್ ಮೂಲದ ಭಗವಾನ್‌ಜೀ 140 ಅಡಿ ಉದ್ದ, 70 ಅಡಿ ಅಗಲ ಮತ್ತು 40 ಅಡಿ ಎತ್ತರ ಇರುವ ಪಕ್ಷಿ ಮನೆಯನ್ನು ತಯಾರಿಸಲು ಒಂದಲ್ಲ, ಎರಡಲ್ಲ ಬರೋಬ್ಬರಿ 20 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಇವರಿಗಿದ್ದಂತಹ ಪಕ್ಷಿ ಪ್ರೀತಿಯಿಂದ ಇವರು ಈ ದೈತ್ಯಾಕಾರದ ಪಕ್ಷಿ ಮನೆಯನ್ನು ಕಟ್ಟಿಸಲು ತನ್ನ ಭೂಮಿ ಮತ್ತು ಸ್ವಂತ ಉಳಿತಾಯದ ಹಣವನ್ನು ಬಳಸಿದ್ದಾರೆ ಎಂದು ಹೇಳಲಾಗುತ್ತಿದೆ. ಪಕ್ಷಿಗಳಿಗೆ ಸುರಕ್ಷಿತ ಆಶ್ರಯ ಒದಗಿಸಲು ಮತ್ತು ಹಾನಿಕಾರಕ ಹವಾಮಾನ ಪರಿಸ್ಥಿತಿಗಳಿಂದ ಅವುಗಳನ್ನು ರಕ್ಷಿಸಲು ಈ ಪಕ್ಷಿ ಮನೆಯನ್ನು ಕಟ್ಟಿಸಲಾಯಿತು ಎಂದು ಇವರು ಹೇಳುತ್ತಾರೆ. ಈ ಪಕ್ಷಿ ಮನೆಯನ್ನು ನದಿ ತೀರದಲ್ಲಿ ನಿರ್ಮಿಸಲಾಯಿತು, ಇದಕ್ಕಾಗಿ 2,500ಕ್ಕೂ ಹೆಚ್ಚು ಮಣ್ಣಿನ ಮಡಕೆಗಳನ್ನು ಕಸ್ಟಮೈಸ್ ಮಾಡಲಾಗಿದೆ.


ವಿಡಿಯೋ ನೋಡಿ:



ಸಾವಿರಾರು ಪಕ್ಷಿಗಳ ವಾಸ
ಯಾವುದೇ ಅತಿಕ್ರಮಣಕಾರರು ಪಕ್ಷಿಗಳಿಗೆ ಹಾನಿ ಮಾಡದಂತೆ ಭಗವಾನ್‌ಜೀ ಖಚಿತಪಡಿಸಿಕೊಂಡು ಮಾಡಿದ್ದಾರೆ. ಪ್ರಕೃತಿ ಪ್ರೇಮಿ ಮತ್ತು ಎಲ್ಲಾ ಜೀವಿಗಳನ್ನು ಸಮಾನವಾಗಿ ಪರಿಗಣಿಸಬೇಕು ಎಂದು ಇವರು ನಂಬುತ್ತಾರೆ. ಈ ಆಶ್ರಯವನ್ನು ಹೊರತುಪಡಿಸಿ, ಈ 75 ವರ್ಷದ ಪಕ್ಷಿ ಪ್ರೇಮಿಯು ಈ ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ಸಹ ಇದೇ ಪಕ್ಷಿ ಮನೆಯಲ್ಲಿ ಒದಗಿಸುತ್ತಾರೆ.


ಇದನ್ನೂ ಓದಿ: Karwar: ಕಡಲತೀರದಲ್ಲಿ ಬಾನಾಡಿಗಳ ಕಲರವ; ಸೀಗಲ್ ಹಕ್ಕಿ ನೋಡಲು ಬರುತ್ತಿದ್ದಾರೆ ಪಕ್ಷಿ ಪ್ರಿಯರು


ಈ ಸಹಾನುಭೂತಿಯುಳ್ಳ ಮಾನವ ಮಾಡಿದ ಸ್ಥಳ ಮತ್ತು ಆಶ್ರಯವನ್ನು ಆನಂದಿಸುತ್ತಿರುವ ಸಾವಿರಾರು ಪಕ್ಷಿಗಳು ಇಲ್ಲಿ ಕಂಡು ಬರುತ್ತವೆ. ಹೀಗೆ ಇಂತಹ ಸಾಕು ಪ್ರಾಣಿ ಮತ್ತು ಪಕ್ಷಿಗಳ ಬಗ್ಗೆ ನಿಜವಾಗಿಯೂ ಕಾಳಜಿ ಹೊಂದಿರುವವರಿಂದಲೇ ಇನ್ನೂ ಪ್ರಾಣಿ ಪಕ್ಷಿಗಳು ನಮ್ಮಲ್ಲಿ ಸುರಕ್ಷಿತವಾಗಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಪಕ್ಷಿ ಮನೆಯೂ ನೋಡಲು ತುಂಬಾನೇ ಆಕರ್ಷಣೀಯವಾಗಿ ಕಾಣಿಸುತ್ತದೆ ಮತ್ತು ಇದರಲ್ಲಿ ಸಾವಿರಾರು ಪಕ್ಷಿಗಳು ಬಂದು ವಾಸಿಸಬಹುದಾಗಿದೆ.

Published by:vanithasanjevani vanithasanjevani
First published: