• Home
 • »
 • News
 • »
 • trend
 • »
 • Marriage Cancel: ಮದುವೆ ಮನೆಯಲ್ಲಿ 'ಕೋಳಿ' ಜಗಳ! ಸ್ನೇಹಿತರಿಗೆ ಚಿಕನ್ ಬಡಿಸಿಲ್ಲ ಅಂತ ತಾಳಿ ಕಟ್ಟಲ್ಲ ಎಂದ ವರ!

Marriage Cancel: ಮದುವೆ ಮನೆಯಲ್ಲಿ 'ಕೋಳಿ' ಜಗಳ! ಸ್ನೇಹಿತರಿಗೆ ಚಿಕನ್ ಬಡಿಸಿಲ್ಲ ಅಂತ ತಾಳಿ ಕಟ್ಟಲ್ಲ ಎಂದ ವರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಲ್ಲರೂ ಸಂಭ್ರಮಿಸಬೇಕಾಗಿದ್ದ ಮದುವೆ ಮನೆಯಲ್ಲಿ ‘ಕೋಳಿ’ ಜಗಳ ನಡೆದಿದೆ! ಅಂದರೆ ಚಿಕನ್ಗಾಗಿ ಹುಡುಗ ಹಾಗೂ ಹುಡುಗಿ ಕಡೆಯವರು ಕಿತ್ತಾಡಿದ್ದಾರೆ. ಚಿಕನ್ ಬಡಿಸಿಲ್ಲ ಎಂಬ ಕಾರಣಕ್ಕೆ ಮದುವೆಯೇ ರದ್ದಾಗಿದೆ!

 • News18 Kannada
 • 3-MIN READ
 • Last Updated :
 • Telangana, India
 • Share this:

ತೆಲಂಗಾಣ: ಮದುವೆ (Marriage) ಅಂದ್ರೆ ಗಂಡು (Boy), ಹೆಣ್ಣಿನ (Girl) ನಡುವೆ ಹೊಂದಾಣಿಕೆ ಇದ್ರೆ ಅಷ್ಟೇ ಸಾಕಾಗೋದಿಲ್ಲ, ಆ ಗಂಡು ಹಾಗೂ ಹೆಣ್ಣಿನ ಕುಟುಂಬದ (Family) ನಡುವೆಯೂ ಹೊಂದಾಣಿಕೆ ಇರಬೇಕು. ಇಲ್ಲವಾದರೆ ಆಗಬಾರದ್ದು ಆಗುತ್ತೆ ಎನ್ನೋದಕ್ಕೆ ಈ ಘಟನೆಯೇ ಉದಾಹರಣೆ. ಮದುವೆ ಮನೆಯಲ್ಲಿ ಹಿಂದಿನಿಂದಲೂ ಗಂಡಿನ ಕಡೆಯವರು ಅಂದ್ರೆ ಏನೋ ಒಂದು ಗತ್ತು, ಗೈರತ್ತು ಇರುತ್ತೆ. ಅವರ ಊಟ, ಉಪಚಾರದಲ್ಲಿ ಯಾವುದೂ ಕಡಿಮೆಯಾಗಬಾರದು ಅನ್ನೋದು ಇರುತ್ತೆ. ನಮ್ಮ ಮಗಳು (Daughter) ನಗು ನಗುತ್ತಾ ಆ ಮನೆ ಸೇರಬೇಕು ಅಂತ ಎಲ್ಲಾ ಹೆಣ್ಣು ಹೆತ್ತವರೂ ಕನಸು ಕಾಣುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಗಂಡಿನ ಕಡೆಯವರು ಚಿಕ್ಕ ಚಿಕ್ಕ ಸಮಸ್ಯೆಗಳನ್ನೇ (Problems) ದೊಡ್ಡದು ಮಾಡ್ತಾರೆ. ಹೀಗೆ ಮಾಡಲು ಹೋಗಿ ಇಲ್ಲೊಂದು ಮದುವೆಯೇ ರದ್ದಾಗಿದೆ (Marriage Cancel). ಆಗಿದ್ದಿಷ್ಟೇ, ಮದುವೆ ಮನೆಯಲ್ಲಿ ವರನ ಸ್ನೇಹಿತರಿಗೆ (groom's friends) ಚಿಕನ್ ಊಟ (chicken meal) ಬಡಿಸಿಲ್ಲವಂತೆ! ಇದೇ ಕಾರಣಕ್ಕೆ ನನಗೆ ಮದುವೆ ಬೇಡ, ನಾನು ಮದ್ವೆಯಾಗಲ್ಲ ಅಂತ ವರ ಪಟ್ಟು ಹಿಡಿದಿದ್ದಾನೆ. ಹೀಗಾಗಿ ಮದುವೆ ಕ್ಯಾನ್ಸಲ್ ಆಗಿದ್ದು, ವಧು (Bride) ಪೊಲೀಸ್ ಠಾಣೆ (Police Station) ಮೆಟ್ಟಿಲೇರಿದ್ದಾಳೆ.


ಮದುವೆ ಮನೆಯಲ್ಲಿ ‘ಕೋಳಿ’ ಜಗಳ!


ಎಲ್ಲರೂ ಸಂಭ್ರಮಿಸಬೇಕಾಗಿದ್ದ ಮದುವೆ ಮನೆಯಲ್ಲಿ ‘ಕೋಳಿ’ ಜಗಳ ನಡೆದಿದೆ! ಅಂದರೆ ಚಿಕನ್‌ಗಾಗಿ ಹುಡುಗ ಹಾಗೂ ಹುಡುಗಿ ಕಡೆಯವರು ಕಿತ್ತಾಡಿದ್ದಾರೆ. ಚಿಕನ್ ಬಡಿಸಿಲ್ಲ ಎಂಬ ಕಾರಣಕ್ಕೆ ಮದುವೆಯೇ ರದ್ದಾಗಿದೆ!


ನಾನ್‌ವೆಜ್ ಅಡುಗೆ


ಚಿಕನ್ ಬಡಿಸಿಲ್ಲ ಎಂಬ ಕಾರಣಕ್ಕೆ ಮದುವೆಯೇ ರದ್ದು!


ಹೌದು ಚಿಕನ್ ಊಟ ಹಾಕಿಲ್ಲ ಎಂಬ ಕಾರಣ್ಕಕೆ ಮದುವೆಯೇ ರದ್ದಾದ ಘಟನೆ ತೆಲಂಗಾಣ ರಾಜ್ಯದ ಜೀಡಿಮೆಟ್ಲ್ ಎಂಬಲ್ಲಿ ನಡೆದಿದೆ. ತೆಲಂಗಾಣದ ವರನಿಗೆ ಬಿಹಾರ ಮೂಲದ ಹುಡುಗಿ ಜೊತೆ ಮದುವೆ ನಿಶ್ಚಯವಾಗಿತ್ತು. ಎರಡೂ ಕುಟುಂಬಗಳು ಒಪ್ಪಿ ಮದುವೆ ನಿಶ್ಚಯ ಮಾಡಿದ್ದರು. ಹೈದರಾಬಾದ್‌ನ ಜೀಡಿಮೆಟ್ಲಾ ಉಪ ಪ್ರದೇಶವಾದ ಶಹಪುರನಗರದಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಚಿಕನ್ ಬಡಿಸಿಲ್ಲ ಎಂಬ ಕಾರಣಕ್ಕೆ ಮದುವೆ ರದ್ದಾಗಿದೆ!


ಇದನ್ನೂ ಓದಿ: Men Will Be Men: ಹಾಡು ಹೇಳಿಯೇ 19ರ ಹುಡುಗಿಯ ಮನಗೆದ್ದ 70ರ ಅಜ್ಜ! ಮನೆಯವರ ವಿರೋಧದ ನಡುವೆ ಪ್ರೇಮವಿವಾಹ!


ಮದುವೆಗೂ ಮುನ್ನ ಔತಣಕೂಟ


ಶಹಪುರನಗರದ ಕಲ್ಯಾಣ ಮಂಟಪದಲ್ಲಿ ಇಂದು ಮದುವೆ ನಡೆಯಬೇಕಿತ್ತು. ವರನು ಜಗದ್ಗಿರಿಗುಟ್ಟದ ರಿಂಗ್‌ಬಸ್ತಿ ಮೂಲದವರಾಗಿದ್ದು, ವಧು ಬಿಹಾರದ ಮಾರ್ವಾಡಿ ಕುಟುಂಬಕ್ಕೆ ಸೇರಿದವಳು. ಮದುವೆಗೂ ಮುನ್ನ ತೆಲಂಗಾಣದ ಶಹಪುರ್‌ನಗರದಲ್ಲಿ ವಿವಾಹಪೂರ್ವ ಪಾರ್ಟಿ ಆಯೋಜಿಸಿದ್ದರು. ಈ ಸಂದರ್ಭ ಶಾಪುರನಗರದ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ರಾತ್ರಿ ಔತಣ ಕೂಟ ಏರ್ಪಡಿಸಲಾಗಿತ್ತು.


ನಾನ್‌ವೆಜ್ ಊಟ


ನಾನ್‌ವೆಜ್ ಅಡುಗೆ ಮಾಡದ್ದಕ್ಕೆ ಆಕ್ಷೇಪ


ವಧು ಬಿಹಾರದ ಮಾರ್ವಾಡಿ ಕುಟುಂಬದವರಾಗಿರುವುದರಿಂದ ವಿಶೇಷವಾಗಿ ಸಸ್ಯಹಾರಿ ಖಾದ್ಯಗಳು, ಸಿಹಿ ತಿನಿಸುಗಳನ್ನು ಮಾಡಿಸಿದ್ದರು. ಹೀಗಾಗಿ ನಾನ್‌ವೆಜ್‌ ಇಲ್ಲ ಅಂತ ಅತಿಥಿಗಳಲ್ಲಿ ಅಸಮಾಧಾನದ ಗೊಣಗಾಟ ಪ್ರಾರಂಭವಾಯಿತು. ಈ ವೇಳೆ ಮದುಮಗನ ಗೆಳೆಯರು ಡೈನಿಂಗ್ ಹಾಲ್ ಗೆ ಬಂದರು. ಚಿಕನ್ ಅಡುಗೆ ಬೇಕೇ ಬೇಕು ಅಂತ ಹುಡುಗಿ ಮನೆಯವರ ಜೊತೆ ವಾಗ್ವಾದ ನಡೆಸಿದರು. ಚಿಕನ್ ಇಲ್ಲದ ಊಟ ಬೇಡ ಅಂತ ಊಟ ಮಾಡದೇ ಎದ್ದು ಹೋದ ಗೆಳೆಯರು, ವರನ ಹತ್ತಿರ ಈ ಬಗ್ಗೆ ಕಂಪ್ಲೇಂಟ್ ಮಾಡಿದ್ರು.


ಇದನ್ನೂ ಓದಿ: Viral Story: ಪ್ರೇಮಿಗಾಗಿ ಗಡಿ ದಾಟಿ ಬಂದ 83ರ ಅಜ್ಜಿ! ಆಕೆಯನ್ನು ಮದ್ವೆಯಾದ ಹುಡುಗನ ವಯಸ್ಸು 28!


ಪೊಲೀಸ್ ಠಾಣೆ ಮೆಟ್ಟಿಲೇರಿದ ಕೇಸ್


ರಾತ್ರಿ ಊಟ ಮಾಡದೆ ಸ್ನೇಹಿತರು ಹೊರಟಿದ್ದನ್ನು ನೋಡಿದ ವರ ಮತ್ತು ಆತನ ಮನೆಯವರು ವಧುವಿನ ಮನೆಯವರ ಬಳಿ ಈ ವಿಚಾರವನ್ನು ಪ್ರಸ್ತಾಪಿಸಿದರು. ನಾನು ಮದುವೆ ಆಗುವುದಿಲ್ಲ ಅಂತ ವರ ಪಟ್ಟು ಹಿಡಿದಿದ್ದಾನಂತೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ವಧುವಿನ ಮನೆಯವರು ಜೀಡಿಮೆಟ್ಲ ಪೊಲೀಸ್ ಠಾಣೆಗೆ ತೆರಳಿದ್ದಾರೆ.  ಪೊಲೀಸರು ಎರಡೂ ಕುಟುಂಬದವರನ್ನು ಠಾಣೆಗೆ ಕರೆಸಿ ಮಾತನ್ನಾಡಿದ್ದಾರೆ.

Published by:Annappa Achari
First published: