ಶ್ವಾನಗಳು (Dogs) ನಿಯತ್ತಿನ ಪ್ರಾಣಿ. ಮನುಷ್ಯರು ಮತ್ತು ಶ್ವಾನಗಳ ನಡುವಿನ ಸಂಬಂಧವು ಸ್ನೇಹಿತರಂತೆ ಇರುತ್ತದೆ. ಕೆಲವರಂತೂ ಶ್ವಾನಗಳನ್ನು ತಮ್ಮ ಮಕ್ಕಳಂತೆ ಸಾಕುತ್ತಾರೆ ಮತ್ತು ನಾಯಿಗಳು ಸಹ ಮನುಷ್ಯರೊಂದಿಗೆ ಬೆರೆಯುತ್ತವೆ. ಇತ್ತೀಚಿನ ದಿನಗಳಲ್ಲಿ ಬೀದಿ ಶ್ವಾನಗಳ (Street Dog) ದಾಳಿ ಪ್ರಕರಣಗಳು ಹೆಚ್ಚುತ್ತಲೇ ಇವೆ. ನಾಯಿಗಳ ದಾಳಿಯಿಂದಾಗಿ ಟೆಕ್ಸಾಸ್ (Texas) ನಿವಾಸಿ ಜಾಕ್ವೆಲಿನ್ ಡ್ಯುರಾಂಡ್ (22) ಎಂಬಾಕೆಗೆ ಸಾವಿನ ಕದ ತಟ್ಟಿ ಬಂದಿದ್ದಾಳೆ. ಜಾಕ್ವೆಲಿನ್ ಮೇಲೆ ಎರಡು ನಾಯಿಗಳು ದಾಳಿ ಮಾಡಿದ್ದವು. ಇದರ ನಂತರ, ಜಾಕ್ವೆಲಿನ್ ಮುಖವನ್ನು (Face) ಗುರುತಿಸಲಾಗಲಿಲ್ಲ. ಈಗ ಈ ಅಪಘಾತದಿಂದ ಚೇತರಿಸಿಕೊಂಡ ನಂತರ ಆಕೆ ಜನರ ಮುಂದೆ ತನ್ನ ಮುಖವನ್ನು ತೋರಿಸಲು ನಿರ್ಧರಿಸಿದ್ದಾಳೆ.
ಕಳೆದ ವರ್ಷ ಕ್ರಿಸ್ಮಸ್ ಸಮಯದಲ್ಲಿ, ಟೆಕ್ಸಾಸ್ ನಿವಾಸಿಗಳಾದ ಜಸ್ಟಿನ್ ಮತ್ತು ಆಶ್ಲೇ ಬಿಷಪ್ ಅವರ ಎರಡು ನಾಯಿಗಳನ್ನು ನೋಡಿಕೊಳ್ಳಲು ಜಾಕ್ವೆಲಿನ್ ಅವರನ್ನು ಕರೆಯಲಾಯಿತು. ಈ ಕುಟುಂಬ ರಜೆಗೆಂದು ಹೊರ ಹೋಗಿದ್ದರು. ನಾಯಿಗಳನ್ನು ಪಂಜರದಲ್ಲಿ ಇರಿಸಲಾಗಿದೆ ಎಂದು ಜಾಕ್ವೆಲಿನ್ಗೆ ತಿಳಿಸಲಾಯಿತು, ಆದರೆ ಅವಳು ಮನೆಗೆ ಪ್ರವೇಶಿಸಿದಾಗ ನಾಯಿಗಳು ಸ್ವಚ್ಛಂದವಾಗಿ ತಿರುಗಾಡುತ್ತಿದ್ದವು. ಜಾಕ್ವೆಲಿನ್ನನ್ನು ನೋಡಿದಂತೆ ಆಕೆಯ ಮೇಲೆ ಶ್ವಾನವು ಹಲ್ಲೆ ನಡೆಸಿ ಆಕೆಯ ಮುಖಕ್ಕೆ ಕಚ್ಚಿದೆ.
ಡಲ್ಲಾಸ್ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದ ಜಾಕ್ವೆಲಿನ್ ಜರ್ಮನ್ ಶೆಫರ್ಡ್ ಮಿಕ್ಸ್ ಲೂಸಿ ಮತ್ತು ಪಿಟ್ಬುಲ್ ಮಿಕ್ಸ್ ಬೆಂಡರ್ ಅನ್ನು ಅವಳು ನೋಡಿಕೊಳ್ಳಬೇಕಾಗಿತ್ತು. ಆದರೆ ಜಾಕ್ವೆಲಿನ್ನನ್ನು ನೋಡಿದ ನಾಯಿಗಳು ಆಕೆಯ ಮೇಲೆ ದಾಳಿ ಮಾಡಿದವು. ನಾಯಿಗಳು ಜಾಕ್ವೆಲಿನ್ ಮುಖವನ್ನು ಎಂಟುನೂರು ಬಾರಿ ಕಚ್ಚಿವೆ. ಅಷ್ಟೇ ಅಲ್ಲ, ಆಕೆಯ ಮೂಗು ಮತ್ತು ಕಿವಿ ಸಂಪೂರ್ಣ ಹರಿದು ಹಾಕಿವೆ. ಈ ಘಟನೆಯಿಂದ ಜಾಕ್ವೆಲಿನ್ ಮುಖದ ಮಾಂಸ ನೇತಾಡುತ್ತಿತ್ತು. ತಾನು ಇನ್ನು ಮುಂದೆ ಬದುಕುವುದಿಲ್ಲ ಎಂದು ಆಖೆಗೆ ಮನವರಿಕೆಯಾಗಿತ್ತು.
ಇದನ್ನೂ ಓದಿ: Dog perfumes: ಈ ಮಹಿಳೆಗೆ ಅದೆಂಥಾ ಶ್ವಾನ ಪ್ರೀತಿ! ನಾಯಿಗೆಂದೇ ಫರ್ಪ್ಯೂಮ್ ತಯಾರಿಸಿದ್ದಾಳೆ ಈಕೆ
ಜಾಕ್ವೆಲಿನ್ಗೆ ಶ್ವಾನಗಳು ದಾಳಿ ಮಾಡುತ್ತಿದ್ದಂತೆಯೇ ಕೂಗು ಕೇಳಿದ ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ. ರಕ್ಷಣಾ ತಂಡ ಅಲ್ಲಿಗೆ ಹೋದಾಗ ಜಾಕ್ವೆಲಿನ್ ಹರಿದ ಬಟ್ಟೆಯಲ್ಲಿ ಬಿದ್ದಿದ್ದಳು. ಆಕೆಯ ಮೈಮೇಲೆ ಬಟ್ಟೆ ಇರಲಿಲ್ಲ. ಇಡೀ ಕೋಣೆ ರಕ್ತದಿಂದ ಕೂಡಿತ್ತು. ಆಕೆಯ ಕಣ್ಣುಗಳ ಕೆಳಗಿದ್ದ ಎಲ್ಲಾ ಮಾಂಸವನ್ನು ನಾಯಿಗಳು ಅಗಿಯುತ್ತಿದ್ದವು.
ಇದನ್ನೂ ಓದಿ: World’s tallest model: ಸಂಗಾತಿ ಬೇಕಾಗಿದೆ! ಜಗತ್ತಿನ ಅತಿ ಎತ್ತರದ ಈ ಮಾಡೆಲ್ ಇಂಥಾ ಹುಡುಗರನ್ನು ಇಷ್ಟ ಪಡುತ್ತಾಳೆ!
ಈ ಘಟನೆಗೆ ಸಂಬಂಧಿಸಿದಂತೆ, ಶ್ವಾನದ ಮಾಲೀಕರು ಇಬ್ಬರೂ ಎಂದಿಗೂ ಇವುಗಳು ಇಷ್ಟೊಂದು ಆಕ್ರಮಣಕಾರಿಯಾಗಿರಲಿಲ್ಲ ಎಂದು ಹೇಳಿದ್ದಾರೆ. ಅವರ ಮಕ್ಕಳೂ ಕೂಡ ನಾಯಿಗಳ ಜೊತೆ ಆಟವಾಡುತ್ತಿದ್ದರು ಆದರೆ ಮನೆಯ ಹೊರಗಿನ ಎಚ್ಚರಿಕೆಯ ಬೋರ್ಡ್ ನೋಡಿದ ನಂತರವೇ ಈ ನಾಯಿಗಳು ಆಕ್ರಮಣಕಾರಿ ಎಂದು ತಿಳಿದಂತೆ ತೋರುತ್ತದೆ. ಈ ದಾಳಿಯ ನಂತರ ಜಾಕ್ವೆಲಿನ್ ಬದುಕುವುದೇ ಕಷ್ಟವೆಂಬಂತೆ ಇತ್ತು, ಆದರೀಗ ವೈದ್ಯರ ಸಮ್ಮುಖದಿಂದ ಆಕೆ ಆರೋಗ್ಯವಾಗಿದ್ದಾಳೆ. ಇದೀಗ ಜಾಕ್ವೆಲಿನ್ ತಮ್ಮ ಚಿತ್ರಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ