• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Population: ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಈ ಹಳ್ಳಿಯಲ್ಲಿ ಜನ ಕಾಣೋದೇ ಅಪರೂಪ, ಕಾರಣಗಳೇನು?

Population: ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಈ ಹಳ್ಳಿಯಲ್ಲಿ ಜನ ಕಾಣೋದೇ ಅಪರೂಪ, ಕಾರಣಗಳೇನು?

ಜನವೇ ಇಲ್ಲದ ಜಾಗ

ಜನವೇ ಇಲ್ಲದ ಜಾಗ

ಇದು ವಿಶ್ವದಲ್ಲಿಯೇ ಅತಿ ಹೆಚ್ಚು ಜನರು ಇರುವಂತಹ ಜಾಗವಂತೆ. ಆದರೆ ಈಗ ಅತೀ ಕಡಿಮೆ ಜನರು ವಾಸ ಮಾಡ್ತಾ ಇದ್ದಾರಂತೆ. ಕಾರಣ ಏನು ಗೊತ್ತಾ?

 • Trending Desk
 • 5-MIN READ
 • Last Updated :
 • Kerala, India
 • Share this:
 • published by :

ಜನಸಂಖ್ಯಾ ಸ್ಫೋಟ ಎಂಬುದು ಪ್ರಪಂಚವನ್ನೇ ಕಾಡುವ ಅತಿದೊಡ್ಡ ಸಮಸ್ಯೆಯಾಗಿ ತಲೆದೋರಿದೆ. ಅತಿ ಹೆಚ್ಚು ಜನಸಂಖ್ಯೆ ಇರುವ ದೇಶಗಳಾಗಿ ಗುರುತಿಸಿಕೊಂಡಿದ್ದ ಭಾರತ ಹಾಗೂ ಚೀನಾ ತಮ್ಮ ತಮ್ಮ ಆರ್ಥಿಕ ಸಾಮಾಜಿಕ ಸ್ಥಿತಿಗತಿಗಳಿಂದ ಪ್ರತ್ಯೇಕ ದೇಶಗಳಾಗಿ ಬಿಂಬಿತವಾಗಿವೆ. ಇದೀಗ ಭಾರತ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿಹೆಚ್ಚು ಜನಸಂಖ್ಯೆ (Population) ಇರುವ ದೇಶವಾಗಿ ಹೊರಹೊಮ್ಮಿದೆ. ಆದರೆ ನಮ್ಮ ದೇಶದಲ್ಲಿರುವ ಹಲವಾರು ಪಟ್ಟಣಗಳು ಊರುಗಳಲ್ಲಿ ಯುವಕರಿಲ್ಲ. ಬರೀ ವೃದ್ಧರೇ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಶಾಲೆಗಳಲ್ಲಿ ಮಕ್ಕಳಿಲ್ಲ ಅಲ್ಲೂ ಫಲವತ್ತತೆ ಕೊರತೆ ಎದುರಾಗಿದೆ. ಅತಿ ಹೆಚ್ಚು ಜನಸಂಖ್ಯೆ ಇರುವ ದೇಶವಾಗಿ ಭಾರತ (India) ಗುರುತಿಸಿಕೊಂಡಿದ್ದರೂ ನಮ್ಮ ದೇಶದಲ್ಲೂ ಫಲವತ್ತತೆ ಕುಂಠಿತಗೊಂಡಿರುವ ಪಟ್ಟಣಗಳಿವೆ ಎಂದರೆ ಆಶ್ಚರ್ಯವಾಗುವುದು ಖಂಡಿತ.


ಒಂಟಿಯಾಗಿ ಜೀವನ ನಡೆಸುತ್ತಿರುವ ವೃದ್ಧರೇ ಇಲ್ಲಿನ ಜನಸಂಖ್ಯೆ


ಕೇರಳದ ಕುಂಭನಾಡು ಎಂಬ ಪಟ್ಟಣದಲ್ಲಿ ಹೆಚ್ಚಾಗಿ ವಾಸಿಸುತ್ತಿರುವವರು ವೃದ್ಧರೇ ಎಂದರೆ ಇದು ವರವೇ ಶಾಪವೇ ಎಂಬ ಯೋಚನೆ ಉಂಟಾಗುವುದು ಖಚಿತ. ಇಲ್ಲಿನ ಶಾಲೆಗಳು ಕೂಡ ಅಷ್ಟೊಂದು ಉತ್ತಮ ಸ್ಥಿತಿಯಲ್ಲಿಲ್ಲ. ವಿದ್ಯಾರ್ಥಿಗಳು ಶಾಲೆಗಳಿಗೆ ಆಗಮಿಸುತ್ತಿಲ್ಲ ಇಲ್ಲಿನ ಶಾಲಾ ಉಪಾಧ್ಯಾಯರು ಮಕ್ಕಳನ್ನು ಶಾಲೆಗೆ ಕರೆತರಲು ಒಮ್ಮೊಮ್ಮೆ ಕೈಯಿಂದಲೇ ಹಣ ಖರ್ಚುಮಾಡುವ ದುಸ್ಥಿತಿ ಕೂಡ ಬಂದೊದಗಿದ್ದಿದೆ.


ಶಾಲೆ ಇದ್ದರೂ ವಿದ್ಯಾರ್ಥಿಗಳಿಲ್ಲ


ಈ ಪಟ್ಟಣದಲ್ಲಿರುವ 150 ವರ್ಷಗಳಷ್ಟು ಹಳೆಯದಾದ ಸರಕಾರಿ ಪ್ರಾಥಮಿಕ ಶಾಲೆಯು 14 ವರ್ಷದವರೆಗಿನ ಮಕ್ಕಳಿಗೆ ಶಿಕ್ಷಣ ನೀಡುತ್ತದೆ ಅಂತೆಯೇ ಕುಂಭನಾಡ್ 50 ವಿದ್ಯಾರ್ಥಿಗಳನ್ನೊಳಗೊಂಡಿದೆ.


1980 ರ ದಶಕದಿಂದ ಶಾಲೆಯಲ್ಲಿರುವ ಮಕ್ಕಳ ಸಂಖ್ಯೆ 700 ಕ್ಕಿಂತ ಕಡಿಮೆಯಾಗಿದೆ. ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಪಟ್ಟಣದ ಅಂಚಿನಲ್ಲಿ ವಾಸಿಸುವ ಬಡ ಮತ್ತು ಹಿಂದುಳಿದ ಕುಟುಂಬಗಳಿಂದ ಬಂದವರು. ಏಳನೇ ತರಗತಿಯಲ್ಲಿ ಒಟ್ಟು ಏಳು ವಿದ್ಯಾರ್ಥಿಗಳಿದ್ದಾರೆ. 2016 ರಲ್ಲಿ ಬರೇ ಒಬ್ಬ ವಿದ್ಯಾರ್ಥಿ ಮಾತ್ರ ಇದ್ದನು ಎಂದರೆ ಶಾಲೆಯ ದುಸ್ಥಿತಿಯನ್ನು ಅವಲೋಕಿಸಬಹುದು.


ಶಾಲೆಗೆ ಹೆಚ್ಚಿನ ಮಕ್ಕಳನ್ನು ದಾಖಲಾತಿ ಮಾಡುವುದು ಸವಾಲಿನ ಸಂಗತಿಯಾಗಿದೆ. ಶಾಲೆಯಲ್ಲಿರುವ ಎಂಟು ಶಿಕ್ಷಕರು ಪ್ರತಿ ತಿಂಗಳು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವ ಆಟೋ ರಿಕ್ಷಾಕ್ಕಾಗಿ ರೂ 2,800 ರೂಪಾಯಿಗಳನ್ನು ತಮ್ಮ ಸಂಬಳದಿಂದಲೇ ಪಾವತಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿ ಮನೆಮನೆಗೆ ಭೇಟಿ ನೀಡುವ ಶಿಕ್ಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡುವಂತೆ ವಿನಂತಿಸಿಕೊಳ್ಳುತ್ತಾರೆ.


ಇದನ್ನೂ ಓದಿ: ತಂಗಿಯ ಮದುವೆಗೆ ಅಣ್ಣಂದಿರು ಖರ್ಚು ಮಾಡಿದ ಹಣ ಕೇಳಿದ್ರೆ ಪಕ್ಕಾ ಶಾಕ್​ ಆಗ್ತೀರ! ಇದು ಅಂತಿಂಥಾ ಮ್ಯಾರೇಜ್​ ಅಲ್ಲ


ಸಾಮಾನ್ಯವಾಗಿ ಶಾಲೆಗಳಲ್ಲಿ ಗಿಜಿಗಿಡುವ ಮಕ್ಕಳ ಸದ್ದುಗದ್ದಲ, ಮಕ್ಕಳ ಕೇಕೆ ನಗು, ಕಿರುಚಾಟ ಗದ್ದಲ ಈ ಶಾಲೆಯಲ್ಲಿಲ್ಲ. ನೀರವ ಮೌನ ಮಾತ್ರ ಈ ಶಾಲೆಯ ಕೊಠಡಿಗಳಲ್ಲಿ ಆಲಿಸಬಹುದಾಗಿದೆ.


ಇದಕ್ಕೆ ಕಾರಣ ಈ ಊರಿನಲ್ಲಿ ಮಕ್ಕಳು ಇಲ್ಲದೇ ಇರುವುದಾಗಿದೆ ಎಂದು ಶಾಲಾ ಪ್ರಾಂಶುಪಾಲರಾದ ಜಯದೇವಿ ಆರ್ ತಿಳಿಸುತ್ತಾರೆ. ಸಂಪೂರ್ಣ ಊರಿನಲ್ಲಿಯೇ ಮಕ್ಕಳ ಸಂಖ್ಯೆ ಕಡಿಮೆ ಇದೆ. ಫಲವತ್ತತೆ ಇಳಿಕೆಯಾಗಿದೆ. ಜನಸಂಖ್ಯೆಯೇ ಇಲ್ಲದೇ ಸ್ಥಳವಾಗಿ ಈ ಪಟ್ಟಣ ಕಂಡುಬರುತ್ತದೆ.


ಯುವಕರು ಕೆಲಸ ಅರಸಿಕೊಂಡು ವಿದೇಶದಲ್ಲಿ ನೆಲೆಸಿದ್ದಾರೆ


ಕುಂಭನಾಡು ಪಟ್ಟಣ ಕೇರಳದ ಪಥನಂತಿಟ್ಟ ಜಿಲ್ಲೆಯ ನಡುವೆ ಇದೆ ಇಲ್ಲಿ ಜನಸಂಖ್ಯೆ ಕ್ಷೀಣಿಸುತ್ತಿದ್ದು ಹಾಗೂ ವಯಸ್ಸಾದವರೇ ಇಲ್ಲಿ ವಾಸಿಸುತ್ತಿರುವವರಾಗಿದ್ದಾರೆ.


ಇಲ್ಲಿ ವಾಸಿಸುತ್ತಿರುವ 47% ಜನಸಂಖ್ಯೆಯಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುವವರೇ ಹೆಚ್ಚು. ಕುಂಭನಾಡ್ ಮತ್ತು ಅದರ ಸುತ್ತಲಿನ ಅರ್ಧ-ಡಜನ್ ಹಸಿರು ಹಳ್ಳಿಗಳು ಸುಮಾರು 25,000 ಜನರಿಗೆ ನೆಲೆಯಾಗಿದೆ.


ಇಲ್ಲಿರುವ 11,118 ಮನೆಗಳಲ್ಲಿ ಸುಮಾರು 15% ಮನೆಗಳಿಗೆ ಬೀಗ ಹಾಕಿಕೊಂಡಿರುವುದನ್ನೇ ಕಾಣಬಹುದು. ಏಕೆಂದರೆ ಮಾಲೀಕರು ತಮ್ಮ ಮಕ್ಕಳೊಂದಿಗೆ ವಿದೇಶಕ್ಕೆ ವಲಸೆ ಹೋಗಿದ್ದಾರೆ ಅಥವಾ ಅಲ್ಲಿಯೇ ವಾಸಿಸುತ್ತಿದ್ದಾರೆ ಎಂದು ಸ್ಥಳೀಯ ಗ್ರಾಮ ಸಭೆಯ ಮುಖ್ಯಸ್ಥೆ ಆಶಾ ಸಿಜೆ ಹೇಳುತ್ತಾರೆ. ಇಲ್ಲಿ 20 ಶಾಲೆಗಳಿವೆ, ಆದರೆ ಕೆಲವೇ ವಿದ್ಯಾರ್ಥಿಗಳು ಮಾತ್ರ ಶಾಲೆಗಳಲ್ಲಿ ಓದುತ್ತಿದ್ದಾರೆ.


ಆರ್ಥಿಕ ಸಮಸ್ಯೆ ಇಲ್ಲದೇ ಇದ್ದರೂ ಜನರಿಲ್ಲ


ಒಂದು ಆಸ್ಪತ್ರೆ, ರಾಜ್ಯ-ಚಾಲಿತ ಕ್ಲಿನಿಕ್, 30 ಕ್ಕೂ ಹೆಚ್ಚು ರೋಗನಿರ್ಣಯ ಕೇಂದ್ರಗಳು ಮತ್ತು ಮೂರು ವೃದ್ಧಾಶ್ರಮಗಳು ಇಲ್ಲಿರುವ ವ್ಯವಸ್ಥೆಗಳಾಗಿವೆ.


ಎರಡು ಡಜನ್‌ಗಿಂತಲೂ ಹೆಚ್ಚು ಬ್ಯಾಂಕ್‌ಗಳು - ಅರ್ಧ ಕಿಲೋಮೀಟರ್‌ಗಿಂತ ಕಡಿಮೆ ಒಳಗೆ ಎಂಟು ಶಾಖೆಗಳನ್ನು ಒಳಗೊಂಡಂತೆ ಇಲ್ಲಿ ಕಾಣಬಹುದು.


ಪ್ರಪಂಚದಾದ್ಯಂತ ವಾಸಿಸುವ ಮತ್ತು ಕೆಲಸ ಮಾಡುವ ಪಟ್ಟಣವಾಸಿಗಳಿಂದ ಹಣ ರವಾನೆಯ ವಿಷಯದಲ್ಲಿ ನೋಡುವುದಾದರೆ ಕಳೆದ ವರ್ಷ ವಿದೇಶದಲ್ಲಿ ನೆಲೆಸಿರುವ ಭಾರತೀಯರಿಂದ ಭಾರತಕ್ಕೆ ಬಂದ 100 ಬಿಲಿಯನ್ ಡಾಲರ್ ರವಾನೆಯಲ್ಲಿ ಸುಮಾರು 10% ಕೇರಳಕ್ಕೆ ಬಂದಿದೆ. ರಾಜ್ಯದಲ್ಲಿ ಫಲವತ್ತತೆ ದರಗಳು ಬದಲಿ ಮಟ್ಟಕ್ಕಿಂತ ಕಡಿಮೆಯಾಗಿದೆ. ಕನಿಷ್ಠ 30 ವರ್ಷಗಳಿಂದ ಪ್ರತಿ ಮಹಿಳೆಗೆ 1.7 ರಿಂದ 1.9 ಜನನಗಳು ಸಂಭವಿಸುತ್ತಿವೆ.


ಚಿಕ್ಕ ಕುಟುಂಬಗಳು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುತ್ತವೆ. ಇದು ಯುವಕರು ಅವಕಾಶಗಳಿಗಾಗಿ ದೇಶದ ಒಳಗೆ ಮತ್ತು ಹೊರಗೆ ತ್ವರಿತವಾಗಿ ವಲಸೆ ಹೋಗುವಂತೆ ಮಾಡುತ್ತದೆ, ಈ ಸಮಯದಲ್ಲಿ ಅವರ ಪೋಷಕರು ಮನೆಯಲ್ಲೇ ತಂಗುವಂತಾಗಿದೆ.


ವೃದ್ಧರ ಏಕಾಂಗಿ ಬದುಕು


ಶಿಕ್ಷಣವು ಮಕ್ಕಳನ್ನು ಉತ್ತಮ ಉದ್ಯೋಗ ಮತ್ತು ಜೀವನಕ್ಕಾಗಿ ಹಾತೊರೆಯುವಂತೆ ಮಾಡುತ್ತದೆ ಮತ್ತು ಅವರು ವಲಸೆ ಹೋಗುತ್ತಾರೆ ಎಂದು ಮುಂಬೈ ಮೂಲದ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸೈನ್ಸಸ್‌ನ ಪ್ರೊ.ಕೆ.ಎಸ್ ಜೇಮ್ಸ್ ತಿಳಿಸುತ್ತಾರೆ. ಅವರಲ್ಲಿ ಹಲವಾರು ಜನರು ಏಕಾಂಗಿಯಾಗಿ ವಾಸಿಸುತ್ತಿದ್ದಾರೆ.


ಊರಿನಲ್ಲಿರುವ ಕುಂಬೌಡ್‌ನಲ್ಲಿರುವ ತನ್ನ ಎರಡು ಅಂತಸ್ತಿನ ಕೆಂಪು ಹೆಂಚಿನ ಮನೆಯ ಎತ್ತರದ ಲೋಹದ ಭದ್ರತಾ ಗೇಟ್‌ಗಳ ಹಿಂದೆ, 74 ವರ್ಷದ ಅನ್ನಮ್ಮ ಜೇಕಬ್ ಅವರು ನೆನಪಿಡುವಷ್ಟು ಕಾಲ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ.


ಆಕೆಯ ಪತಿ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್, 1980 ರ ದಶಕದ ಆರಂಭದಲ್ಲಿ ನಿಧನರಾದರು. ಅವರ 50 ವರ್ಷದ ಮಗ ಎರಡು ದಶಕಗಳಿಗೂ ಹೆಚ್ಚು ಕಾಲ ಅಬುಧಾಬಿಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ.


ಅವರ ಪಕ್ಕದ ಮನೆಯಲ್ಲಿ ವಾಸಿಸುತ್ತಿರುವವರ ಮನೆ ಬೀಗ ಹಾಕಿರುವುದು ಕಂಡುಬರುತ್ತದೆ. ಅವರು ತಮ್ಮ ಮಗಳೊಂದಿಗೆ ಬಹ್ರೇನ್‌ನಲ್ಲಿ ವಾಸಿಸುತ್ತಿದ್ದಾರೆ ಇನ್ನು ಮತ್ತೊಬ್ಬರು ತಮ್ಮ ಮನೆಯನ್ನು ವೃದ್ಧ ದಂಪತಿಗೆ ಬಾಡಿಗೆಗೆ ನೀಡಿ ವಿದೇಶದಲ್ಲಿ ಮಗನೊಂದಿಗೆ ನೆಲೆಸಿದ್ದಾರೆ.


ಸಿಸಿಟಿವಿಗಳೇ ಇಲ್ಲಿನ ಮನೆಗಳಿಗೆ ಬೆಂಗಾವಲು


ನೆರೆಹೊರೆಗಳಲ್ಲಿ ಯಾವುದೇ ಮನೆಗಳಲ್ಲಿದೆ ವಾಸಿಸುವವರಿಲ್ಲದೆ ನಿರ್ಜನತೆಯ ಗೂಡಾಗಿದೆ. ಟಪಿಯೋಕಾ, ಬಾಳೆ ಮತ್ತು ತೇಗದ ಮರಗಳ ಸೊಂಪಾದ ಪ್ರಕೃತಿ ನಡುವೆ, ವಿಸ್ತಾರವಾದ ಅಂಗಳಗಳನ್ನು ಹೊಂದಿರುವ ಸುಂದರವಾದ ಮನೆಗಳು ಖಾಲಿಯಾಗಿ ನಿಂತಿವೆ.
ಅಲ್ಲಿ ಯಾರೂ ವಾಸಮಾಡುತ್ತಿಲ್ಲ ಎಂಬ ಗುರುತಾಗಿ ಅಂಗಳದ ತುಂಬೆಲ್ಲಾ ಒಣಗಿದ ಎಲೆಗಳು ಮತ್ತು ಧೂಳು ಆವೃತಗೊಂಡಿದೆ, ಕಾವಲು ನಾಯಿಗಳ ಜಾಗವನ್ನು ಸಿಸಿಟಿವಿ ಕ್ಯಾಮೆರಾಗಳು ಆಕ್ರಮಿಸಿಕೊಂಡಿವೆ.


ಜನರಿಂದ ತುಂಬಿಹೋಗಬೇಕಾಗಿದ್ದ ಊರು ಯಾರೂ ಇಲ್ಲದೆ ನಿರ್ಜನ ಸ್ಥಳವಾಗಿ ಮಾರ್ಪಟ್ಟಿದೆ. ಕುಂಬನಾಡ್‌ನ ಪ್ರದೇಶಗಳು ನಿಜವಾಗಿಯೂ ನಿರ್ಜನವಾಗಿವೆ.


ಇದು ಅನೇಕ ನಿವಾಸಿಗಳು ತೊರೆದ ಪಟ್ಟಣವಾಗಿ ಮಾರ್ಪಟ್ಟಿದೆ. ಮನೆಗಳು ವಾಸಿಸುವವರಿಲ್ಲದೆ ನಿರ್ಜನವಾಗಿದ್ದರೂ ಮನೆಗಳಿಗೆ ನಿಯಮಿತವಾಗಿ ಬಣ್ಣ ಬಳಿಯಲಾಗುತ್ತದೆ, ಮನೆಯಲ್ಲಿ ವಾಸಿಸುವವರು ಯಾವಾಗಲಾದರೂ ಮನೆಗೆ ಬರುತ್ತಾರೆ ಎಂಬ ನಿರೀಕ್ಷೆ ಇಲ್ಲಿದ್ದರೂ ಅವರು ಎಂದಿಗೂ ಬರುವುದಿಲ್ಲ.


ದೊಡ್ಡ ಅಂತಸ್ತಿನ ಮನೆಗಳಿರುವ ಪಟ್ಟಣ


ಇಲ್ಲಿರುವ ಮನೆಗಳೆಲ್ಲಾ ದೊಡ್ಡ ದೊಡ್ಡ ಅಂತಸ್ತಿನ ಮನೆಗಳಾಗಿವೆ. ವಾಸಿಸಲು ಜನರೇ ಇಲ್ಲದ ಊರಿನಲ್ಲಿ ಮಾತ್ರ ಸುಮಾರು ಹತ್ತು ಹದಿನೈದು ಜನ ಆರಾಮವಾಗಿ ತಂಗುವಷ್ಟು ದೊಡ್ಡದಾದ ಮನೆಗಳಿವೆ.


ಇಲ್ಲಿ ಒಬ್ಬಂಟಿಗರಾಗಿ ವಾಸಿಸುತ್ತಿರುವ 74 ರ ಹರೆಯದ ಅನ್ನಮ್ಮ ಕೂಡ ತಮ್ಮ ಒಂಟಿತನವನ್ನೇ ಸಂಗಾತಿಯಾಗಿ ಮಾಡಿಕೊಂಡಿದ್ದಾರೆ. ತಮ್ಮ ಪತಿಯ ನಿಧನದ ನಂತರ ಅನ್ನಮ್ಮ ದೊಡ್ಡ ಅಂತಸ್ತಿನ ಮನೆಯಲ್ಲಿ ಒಂಟಿಯಾಗಿ ಜೀವಿಸುತ್ತಿದ್ದಾರೆ.


ಇದನ್ನೂ ಓದಿ: 3ನೇ ಬಾರಿ ಮದುವೆ ಆಗುತ್ತಿದ್ದ ಗಂಡನ ಚಳಿ ಬಿಡಿಸಿದ ಪತ್ನಿ, ಮದುವೆ ಮನೆಯಲ್ಲಿ ಹೈ-ವೋಲ್ಟೇಜ್ ಡ್ರಾಮಾ


ಮಗ ಹಾಗೂ ಮಗಳು ವಿದೇಶದಲ್ಲಿಯೇ ವಾಸಿಸುತ್ತಿರುವುದರಿಂದ ಹಾಗೂ ಅನ್ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳನ್ನು ಹೊಂದಿರುವುದರಿಂದ ಊರಿನಲ್ಲಿಯೇ ಏಕಾಂಗಿಯಾಗಿ ಜೀವಿಸುತ್ತಿದ್ದಾರೆ.


ಅನ್ನಮ್ಮ ಪಕ್ಕದ ಮನೆಯಲ್ಲಿ ಕೂಡ ಯಾರೂ ವಾಸವಿಲ್ಲ. ಎಲ್ಲರೂ ವಿದೇಶಗಳಲ್ಲಿ ವಾಸಿಸುವವರೇ ಅಲ್ಲಿರುವವರಾಗಿದ್ದಾರೆ. ತಮ್ಮ ಹಿತ್ತಲಿನಲ್ಲಿಯೇ ಹೆಚ್ಚು ಸಮಯ ಕಳೆಯುವ ಅನ್ನಮ್ಮ ಮನೆಯ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿದ್ದಾರೆ.


ಅಪರಾಧಗಳು ಕೂಡ ಕಡಿಮೆ


ಕಡಿಮೆ ಜನಸಂಖ್ಯೆ ಇರುವ ಈ ಊರಿನಲ್ಲಿ ಅಪರಾಧಗಳು ಕೂಡ ಕಡಿಮೆಯೇ ನಡೆಯುತ್ತವೆ. ಇಲ್ಲಿರುವ ಮನೆಗಳಲ್ಲಿ ಹೆಚ್ಚು ವೃದ್ಧರೇ ವಾಸಿಸುವುದರಿಂದ ಅವರು ಯಾರು ಮನೆಗಳಲ್ಲಿ ಹೆಚ್ಚಿನ ಒಡವೆ ನಗದನ್ನು ಇರಿಸುವುದಿಲ್ಲ ಎಂದು ಪೊಲೀಸರು ತಿಳಿಸುತ್ತಾರೆ.


top videos  ಆದರೂ ವೃದ್ಧರೇ ಹೆಚ್ಚು ವಾಸಿಸುತ್ತಿರುವುದರಿಂದ ಅವರನ್ನು ಕಾಪಾಡುವ ಜವಬ್ದಾರಿ ಕೂಡ ತಮ್ಮ ಮೇಲಿದೆ ಎಂದು ಪೊಲೀಸರು ತಿಳಿಸುತ್ತಾರೆ. ಇಲ್ಲಿ ವಾಸಿಸುತ್ತಿರುವವರಿಗೆ ಎಮರ್ಜೆನ್ಸಿ ಅಲರಾಮ್‌ಗಳನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದನ್ನು ಪೊಲೀಸರು ತಿಳಿಸಿಕೊಟ್ಟಿದ್ದಾರೆ. ಹೀಗಾಗಿ ಅವರ ತುರ್ತು ನೆರವಿಗೆ ಬರಲು ನಮಗೆ ಸಾಧ್ಯವಾಗುತ್ತದೆ ಎಂದು ಪೊಲೀಸರು ತಿಳಿಸುತ್ತಾರೆ.

  First published: