Viral News: ಈ ನಾಯಿ 'ಸಲಿಂಗಕಾಮಿ'ಯಂತೆ! ಯಾರಿಗೂ ಬೇಡದ ಶ್ವಾನವನ್ನು ಸಾಕುತ್ತಿದ್ದಾರೆ 'ಗೇ' ದಂಪತಿ!

ಇದು ವಿಚಿತ್ರ ಸ್ಟೋರಿಯಾದರೂ ನೀವಿದನ್ನು ನಂಬಲೇ ಬೇಕು. ಆ ನಾಯಿ ಗೇ ಅಂತ ಅದರ ಮಾಲೀಕರು ಅದನ್ನು ಹೊರ ಹಾಕಿದ್ದರಂತೆ. ಅದರ ಉಸಾಬರಿ ನಮಗ್ಯಾಕೆ ಅಂತ ಎಲ್ಲರೂ ಸುಮ್ಮನಿದ್ದರು. ಆಗ ಅದರ ರಕ್ಷಣೆಗೆ ಬಂದವರೇ ಈ ಗೇ ದಂಪತಿ. ಮುಂದೇನಾಯ್ತು ಅಂತ ನೀವೇ ಓದಿ...

ಸಲಿಂಗಕಾಮಿ ನಾಯಿಯನ್ನು ದತ್ತು ಪಡೆದ ಗೇ ದಂಪತಿ

ಸಲಿಂಗಕಾಮಿ ನಾಯಿಯನ್ನು ದತ್ತು ಪಡೆದ ಗೇ ದಂಪತಿ

 • Share this:
  ನಾಯಿಗಳನ್ನು (Dogs) ಮಕ್ಕಳಂತೆ ಪ್ರೀತಿಸುವವರ ಕಥೆ ಒಂದೆಡೆಯಾದರೆ, ತಮ್ಮ ಅಗತ್ಯಕ್ಕೆ ಅಥವಾ ಶೋಕಿಗೆ (Show Up) ನಾಯಿಗಳನ್ನು ಸಾಕಿ, ಅಗತ್ಯ ತೀರಿದಾಗ ಅಥವಾ ಸಾಕಲು ಸಾಧ್ಯವಾಗದಾಗ ಮತ್ತು ನಾನಾ ಕಾರಣಗಳಿಂದಾಗಿ ಆ ನಾಯಿಗಳನ್ನು ಬೀದಿ ಪಾಲು ಮಾಡುವವರ ಕಥೆ ಇನ್ನೊಂದೆಡೆ ಜಗತ್ತಿನಲ್ಲಿ ಅಂತಹ ಮನುಷ್ಯತ್ವವಿಲ್ಲದ ನಾಯಿ ಮಾಲೀಕರ (Owner) ಸಂಖ್ಯೆಯೂ ಕಡಿಮೆಯೇನಿಲ್ಲ. ಇದೀಗ ಅಂತದ್ದೇ ಮಾಲೀಕರಿಂದ ತ್ಯಜಿಸಲ್ಪಟ್ಟ ನಾಯಿಯ ಕಥೆಯೊಂದು ವೈರಲ್ (Viral) ಆಗಿದೆ. ಸಲಿಂಗಕಾಮಿ (Homosexual) ಎಂಬ ಕಾರಣಕ್ಕೆ ಮಾಲೀಕರಿಂದ ತ್ಯಜಿಸಲ್ಪಟ್ಟು, ನಿರಾಶ್ರಿತ ಪ್ರಾಣಿಗಳ ಸಂಸ್ಥೆಗೆ ಸೇರಿದ್ದ ಗಂಡು ನಾಯಿಯೊಂದನ್ನು ಅಮೆರಿಕಾದ (America) ‘ಗೇ’ (Gay) ಜೋಡಿಯೊಂದು ದತ್ತು (Adopt) ಪಡೆದಿದೆ.

  ಸಲಿಂಗಕಾಮಿ ನಾಯಿ!

  ಫೆಸ್ಕೋ ಎಂಬ ಹೆಸರಿನ ಆ ನಾಯಿಯು, ಸಲಿಂಗಕಾಮದ ವರ್ತನೆ ತೋರಿಸಿತು ಎಂಬ ಕಾರಣಕ್ಕಾಗಿ ಮಾಲೀಕರಿಂದ ತ್ಯಜಿಸಲ್ಪಟ್ಟಿದೆ ಎಂಬುದನ್ನು ಕೇಳಿದಾಗ, ಸ್ಟೀವ್ ನಿಕೋಲಸ್ ಮತ್ತು ಆತನ ‘ಗೇ’ ಸಂಗಾತಿ ಜಾನ್ ವಿನ್‍ಗೆ ಆ ನಾಯಿಯ ಬಗ್ಗೆ ತುಂಬಾ ಮರುಕವುಂಟಾಯಿತು. “ಇದು, ನಾನು ಯಾವತ್ತೂ ಕೇಳಿರದ ಅತ್ಯಂತ ಮೂರ್ಖ ಸಂಗತಿಗಳಲ್ಲಿ ಒಂದು. ಅದು ಕೇವಲ ಸಹಜ ವರ್ತನೆ” ಎಂದು ನಿಕೋಲಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

  ನಾಟಕಕಾರನ ನೆನಪಿಗಾಗಿ ನಾಯಿಗೆ ಹೆಸರು!

  ಫೆಸ್ಕೋಗೆ ಅದರ ಹೊಸ ಮಾಲೀಕರಾದ ಸ್ಟೀವ್ ನಿಕೋಲಸ್ ಮತ್ತು ಜಾನ್ ವಿನ್, ಜನಪ್ರಿಯ ಐರಿಷ್ ನಾಟಕಕಾರ ಮತ್ತು ‘ಗೇ’ ಕೂಡ ಆಗಿದ್ದ ಆಸ್ಕರ್ ವೈಲ್ಡೆ ಅವರ ನೆನಪಿನಲ್ಲಿ, ಅದಕ್ಕೆ ಆಸ್ಕರ್ ಎಂದು ಮರುನಾಮಕರಣ ಮಾಡಿದ್ದಾರೆ. ಫೆಸ್ಕೋಗೆ ಐದು ವರ್ಷ ವಯಸ್ಸು. ನಾಯಿಯ ದತ್ತಿಗೆ ಸಂಬಂಧಿಸಿದ ಈ ಸಂತಸದ ವಿಷಯವನ್ನು, ಸ್ಟ್ಯಾನ್ಲಿ ಕೌಂಟಿ ಅನಿಮಲ್ ಪ್ರೊಟೆಕ್ಟಿವ್ ಸರ್ವಿಸಸ್ ತನ್ನ ಫೇಸ್‍ಬುಕ್ ಖಾತೆಯಲ್ಲಿ ಘೋಷಣೆ ಮಾಡಿದೆ.

  ಇದನ್ನೂ ಓದಿ: Pet Care: ಬೇಸಿಗೆಯಲ್ಲಿ ಸಾಕು ಪ್ರಾಣಿಗಳ ಆರೈಕೆಗೆ ಹೇಗೆ? ಇಲ್ಲಿವೆ ಓದಿ 5 ಸಲಹೆ

   ವೈರಲ್ ಆದ ನಾಯಿ ದತ್ತು ಪಡೆದ ಕಥೆ

  ಅದರ ಹಿಂದಿನ ಮಾಲೀಕರು ಈ ನಾಯಿಯನ್ನು ನೋಡಿಕೊಂಡಿಲ್ಲ. ಫೆಸ್ಕೋಗೆ ಹಾರ್ಟ್‍ವರ್ಮ್ ಕಾಯಿಲೆ ಇದೆ ಮತ್ತು ಹಿಂದಿನ ಮಾಲೀಕರು ಅದಕ್ಕೆ ಚಿಕಿತ್ಸೆ ಕೊಡಿಸಿಲ್ಲ ಎಂದು ನಿಕೋಲಸ್ ಹೇಳಿದ್ದಾರೆ. ಫೆಸ್ಕೋ ಒಂದು ಒಳ್ಳೆಯ ನಾಯಿಯಂತೆ ಕಾಣುತ್ತದೆ. ಅದು ನೀಡುವ ಎಲ್ಲಾ ಆಜ್ಞೆಗಳನ್ನು ಚಾಚೂ ತಪ್ಪದೆ ಪಾಲಿಸುತ್ತದೆ. ನಾಯಿಗಳು, ತಮ್ಮ ಪ್ರಾಬಲ್ಯವನ್ನು ತೋರಿಸಲು ತಮ್ಮದೇ ಲಿಂಗದ ನಾಯಿಗಳ ಜೊತೆ ಮೈಥುನ ನಡೆಸುವತ್ತವೆ ಎನ್ನುತ್ತಾರೆ ತಜ್ಞರು. ಇದೀಗ ಫೆಸ್ಕೊ ಅನುಭವಿಸಿದ ಕಷ್ಟ ಮತ್ತು ಅದರ ದತ್ತಿನ ಈ ಕಥೆ ವೈರಲ್ ಆಗಿದೆ.

  ನಾಯಿ ದತ್ತು ಪಡೆದ ಗೇ ದಂಪತಿ

  “ಈ ಫೆಸ್ಕೋ, ಮತ್ತೊಂದು ಗಂಡು ನಾಯಿಯ ಜೊತೆ ಮೈಥುನ ನಡೆಸಿತು ಎಂಬ ಕಾರಣಕ್ಕಾಗಿ ಹಿಂದಿನ ಮಾಲೀಕರಿಂದ ತ್ಯಜಿಸಲ್ಪಟ್ಟಿದೆ. ಈ ವಾರ, ಅದು ಸ್ಟೀವ್ ನಿಕೋಲಾಸ್ ಮತ್ತು ಅವರ ಗಂಡ ಜಾನ್ ವಿನ್ ಅವರಿಂದ ದತ್ತು ಪಡೆಯಲ್ಪಟ್ಟಿದೆ. ದಂಪತಿ, ಆಸ್ಕರ್ ವೈಲ್ಡ್ ಅವರ ನೆನಪಿನಲ್ಲಿ ನಾಯಿಗೆ ಆಸ್ಕರ್ ಎಂದು ಮರುನಾಮಕರಣ ಮಾಡಿದ್ದಾರೆ. ಆತ ಮತ್ತು ಆತನ ಹೊಸ ಮಾಲೀಕರಿಗೆ 14/10 ಎಂದು ಹೇಳಿ ವಿರೇಟ್ ಡಾಗ್ಸ್ ಎಂಬ ಸಂಸ್ಥೆಯು ತನ್ನ ಟ್ವಿಟ್ಟರ್ ಖಾತೆಯಲ್ಲಿ, ಆ ನಾಯಿ ತನ್ನ ಹೊಸ ಮಾಲೀಕನ ಜೊತೆ ಇರುವ ಫೋಟೋ ಸಮೇತ ಪೋಸ್ಟ್ ಒಂದನ್ನು ಹಂಚಿಕೊಂಡಿದೆ.

  ನಿರಾಶ್ರಿತ ಪ್ರಾಣಿ ಶಿಬಿರದಲ್ಲಿದ್ದ ನಾಯಿ

  ಫೆಸ್ಕೋದ ಮಾಲೀಕರು, ಅದು ‘ಗೇ’ ಎಂಬ ಕಾರಣ ನೀಡಿ, ಯೂಎಸ್‍ನ ನಿರಾಶ್ರಿತ ಪ್ರಾಣಿಗಳ ಸಂಸ್ಥೆಯೊಂದರಲ್ಲಿ ಅದನ್ನು ಬಿಟ್ಟು ಹೋಗಿದ್ದರು. ಮಾಧ್ಯಮ ವರದಿ ಒಂದರ ಪ್ರಕಾರ, ಸ್ಟ್ಯಾನ್ಲಿ ಕೌಂಟಿ ಅನಿಮಲ್ ಪ್ರೊಟೆಕ್ಟಿವ್ ಸರ್ವಿಸಸ್, ಫೆಸ್ಕೋ ಎಂಬ ಹೆಸರಿನ ಈ ಗಂಡು ನಾಯಿ, ಮತ್ತೊಂದು ಗಂಡು ನಾಯಿಯ ಜೊತೆ ಮೈಥುನ ಮಾಡಿತು ಎಂಬ ಕಾರಣಕ್ಕಾಗಿ ತನ್ನ ಮಾಲೀಕರಿಂದ ತ್ಯಜಿಸಲ್ಪಟ್ಟಿದೆ ಎಂದು ತನ್ನ ಫೇಸ್‍ಬುಕ್ ಖಾತೆಯಲ್ಲಿ ಒಂದು ಪೋಸ್ಟನ್ನು ಹಂಚಿಕೊಂಡಿತ್ತು.

  ಇದನ್ನೂ ಓದಿ: Viral Video: ಪುಟ್ಟ ಕಂದಮ್ಮಗಳ ಜೊತೆ ನಾಯಿ ಮರಿ ತುಂಟಾಟ! ಮಿಸ್ ಮಾಡದೇ ಈ ವಿಡಿಯೋ ನೋಡಿ ಖುಷಿಪಡಿ

  ಈ ಬಗ್ಗೆ ತಜ್ಞರು ಹೇಳುವುದೇನು?

  ಆದರೆ, ನಾಯಿಗಳು ತಮ್ಮ ಪ್ರಾಬಲ್ಯವನ್ನು ತೋರಿಸಲು ಬಯಸಿದಾಗ ಇಂತಹ ವರ್ತನೆಯನ್ನು ತೋರುತ್ತವೆ ಎಂದು ಹೇಳುತ್ತಾರೆ ತಜ್ಞರು. ಫೆಸ್ಕೋಗೆ ಖಾಯಂ ಪೋಷಕರು ಸಿಗುವ ವರೆಗೆ, ಅದರ ಆರೈಕೆ ಮಾಡುವಂತೆ, ನಿರಾಶ್ರಿತ ಪ್ರಾಣಿಗಳ ಸಂಸ್ಥೆಯು, ಸ್ಥಳೀಯ ಪ್ರಾಣಿ ಸಂಸ್ಥೆಯನ್ನು ಕೇಳಿಕೊಂಡಿತ್ತು. ಮಾಲೀಕರಿಂದ ತ್ಯಜಿಸಲ್ಪಟ್ಟ ಫೆಸ್ಕೋನ ಕಥೆ ವೈರಲ್ ಆಗಿದ್ದೇ ತಡ, ಹಲವಾರು ಪ್ರಾಣಿ ಪ್ರಿಯರು ಫೆಸ್ಕೋ ಪರವಾಗಿ ಧ್ವನಿ ಎತ್ತಿದರು. ಅಂತಿಮವಾಗಿ ಫೆಸ್ಕೋಗೆ , ಸಹೃದಯ ‘ಗೇ’ ದಂಪತಿಯ ಆಶ್ರಯ, ಜೊತೆಗೆ ಹೊಸ ಹೆಸರು ದೊರಕಿತು.
  Published by:Annappa Achari
  First published: