ಅಮಿರ್ ಖಾನ್ (Amir Khan) ಮತ್ತು ಕರೀನಾ ಕಪೂರ್ (Kareena Kapoor) ಅವರ ಅಭಿನಯದ ಸಾರ್ವಕಾಲಿಕ ಹಿಟ್ ಚಿತ್ರ ‘3 ಈಡಿಯಟ್ಸ್’ (3 Idiots) ನೋಡಿದ್ದರೆ, ಅದರಲ್ಲಿನ ಒಂದು ದೃಶ್ಯ ಮಾತ್ರ ನಿಮ್ಮ ಕಣ್ಣಿಗೆ ಕಟ್ಟಿದ ಹಾಗೆ ಇರುತ್ತದೆ. ಆ ಚಿತ್ರದಲ್ಲಿ ತನ್ನ ಸ್ನೇಹಿತನ ತಂದೆಗೆ ತೀರ ಹುಷಾರಿಲ್ಲದೆ ಇದ್ದಾಗ, ಆಮಿರ್ ಖಾನ್ (ರಾಂಚೋ) ಮತ್ತು ಕರೀನಾ ಕಪೂರ್ (ಪಿಯಾ) ರಾಜು ಅವರ ಅನಾರೋಗ್ಯ ಪೀಡಿತ ತಂದೆಯನ್ನು ತಮ್ಮ ಸ್ಕೂಟರ್ ನಲ್ಲಿ ಮಧ್ಯೆ ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯುವ ಚಿತ್ರ ಸಿನಿ ಪ್ರೇಕ್ಷಕರನ್ನು ಭಾವುಕರನ್ನಾಗಿ ಮಾಡದೆ ಇರದು.
ಚಿತ್ರದ ದೃಶ್ಯ ಈಗ ನಿಜವಾಗಿಯೇ ನಡೆದಿದೆ ನೋಡಿ
ಹೌದು, ‘3 ಈಡಿಯಟ್ಸ್' ಚಿತ್ರದ ಈ ಅಪ್ರತಿಮ ದೃಶ್ಯವನ್ನು ಯಾರು ತಾನೇ ಮರೆಯಲು ಸಾಧ್ಯ ಹೇಳಿ? ಬ್ಲಾಕ್ ಬಸ್ಟರ್ ಚಲನಚಿತ್ರ ಬಿಡುಗಡೆಯಾದ ಒಂದು ದಶಕದ ನಂತರ, ಐಕಾನಿಕ್ ದೃಶ್ಯವು ಅಂತಿಮವಾಗಿ ನಿಜ ಜೀವನದ ನಿರೂಪಣೆಯನ್ನು ಪಡೆದುಕೊಂಡಿದೆ ನೋಡಿ. ಈ ನಿಜ ಜೀವನದ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಸಹ ಆಗುತ್ತಿದೆ.
ಇಬ್ಬರು ಸ್ನೇಹಿತರು ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯನ್ನು ರಾಂಚೋ ಮತ್ತು ಪಿಯಾ ಅವರಂತೆ ಸ್ಕೂಟರ್ ನಲ್ಲಿ ಕರೆದೊಯ್ಯುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವೀಡಿಯೋದಲ್ಲಿಯೂ ಸಹ ಚಿತ್ರದ ದೃಶ್ಯದಂತೆ ಒಬ್ಬ ವೃದ್ಧ ರೋಗಿಯನ್ನು ಮಧ್ಯೆ ಕೂರಿಸಿಕೊಂಡು ಇಬ್ಬರು ಸ್ಕೂಟರ್ ಸವಾರಿ ಮಾಡುತ್ತಿರುವುದನ್ನು ಕಾಣಬಹುದು.
ರಸ್ತೆಯಲ್ಲಿ ಹೋಗುತ್ತಿರುವಾಗ ಈ ಅಪರೂಪದ ದೃಶ್ಯ ಕಣ್ಣಿಗೆ ಬಿದ್ದಿದೆಯಂತೆ..
ಇನ್‌ಸ್ಟಾಗ್ರಾಮ್ ಬ್ಲಾಗರ್ ಶಾಲು ಕಶ್ಯಪ್ ಅವರು ಹಾಗೆಯೇ ಒಂದು ರಸ್ತೆಯ ಮೇಲೆ ಹೋಗುತ್ತಿರುವಾಗ ಈ ತುಂಬಾನೇ ಅಪರೂಪವಾದ ದೃಶ್ಯ ಅವರ ಕಣ್ಣಿಗೆ ಬಿದ್ದಿದೆ, ಕೂಡಲೇ ಅವರು ಈ ದೃಶ್ಯಗಳನ್ನು ತಮ್ಮ ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
View this post on Instagram
ಈ ವಿಡಿಯೋವನ್ನು ಹಂಚಿಕೊಂಡ ಶಾಲು ಕಶ್ಯಪ್, "3 ಈಡಿಯಟ್ಸ್ ಚಿತ್ರದ ದೃಶ್ಯ ಈಗಷ್ಟೇ ನಿಜವಾಗಿದೆ, ಆಲ್ ಈಸ್ ವೆಲ್!" ಅಂತ ಅದಕ್ಕೆ ಶೀರ್ಷಿಕೆಯನ್ನು ಸಹ ಬರೆದಿದ್ದಾರೆ.
ಸಿಕ್ಕಾಪಟ್ಟೆ ವೈರಲ್ ಆಗಿದೆ ಈ ದೃಶ್ಯ
ಆನ್ಲೈನ್ ನಲ್ಲಿ ಹಂಚಿಕೊಂಡಾಗಿನಿಂದ, ಈ ವಿಡಿಯೋ 3,24,128 ಲೈಕ್ ಗಳು ಮತ್ತು ಲಕ್ಷಾಂತರ ವೀಕ್ಷಣೆಗಳನ್ನು ಸಹ ಇದು ಗಳಿಸಿದೆ. ಈ ವಿಡಿಯೋವನ್ನು ನೋಡಿದ ನಂತರ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ವಿಭಾಗವನ್ನು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಅನೇಕ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.
"ಜಾನೆ ನಹೀಂ ದೆಂಗೆ ತುಜೆ.. ಈ ಹಾಡಿನ ತುಣುಕು ಇದನ್ನು ನೋಡಿದ ನಂತರ ನನ್ನ ಮನಸ್ಸಿನಲ್ಲಿ ಪ್ಲೇ ಆಗುತ್ತಿದೆ" ಎಂದು ಚಿತ್ರದ ಹಾಡನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು "ರಾಜು ರಸ್ತೋಗಿ ಕಾ ಬಾಪ್" ಎಂದು ಕಾಮೆಂಟ್ ಮಾಡಿದ್ದಾರೆ.
ಈ ವಿಡಿಯೋ ನೋಡಿ ಹೇಗೆಲ್ಲಾ ಕಾಮೆಂಟ್ ಮಾಡಿದ್ದಾರೆ ನೋಡಿ ನೆಟ್ಟಿಗರು
ಆದರೆ ಈ ದೃಶ್ಯದ ವಿಡಿಯೋವನ್ನು ಮಾಡುವ ಬದಲು ತನ್ನ ಕಾರಿನಲ್ಲಿ ಈ ವ್ಯಕ್ತಿಗೆ ಇವರು ಲಿಫ್ಟ್ ಕೊಡದೆ ಇದ್ದುದ್ದಕ್ಕಾಗಿ ಶಾಲು ಅವರನ್ನು ಕೆಲವು ನೆಟ್ಟಿಗರು ತುಂಬಾನೇ ಕ್ರೂರವಾಗಿ ತರಾಟೆಗೆ ತೆಗೆದುಕೊಂಡರು.
"3 ಈಡಿಯಟ್ಸ್ ನ ರೀಲ್ ಮಾಡುವ ಬದಲಿಗೆ, ಲಿಫ್ಟ್ ಕೊಡಬಹುದಿತ್ತು ಅಲ್ವಾ” ಎಂದು ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
"ಪ್ರತಿಯೊಬ್ಬರೂ 4 ಚಕ್ರದ ವಾಹನವನ್ನು ಖರೀದಿಸಲು ಸಾಧ್ಯವಿಲ್ಲ, ಆದ್ದರಿಂದ ಇದು ತಮಾಷೆಯಲ್ಲ" ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ರಾಜ್ ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರವು ಸೂಪರ್ ಸ್ಟಾರ್ ಆಮಿರ್ ಖಾನ್ ಅವರ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ