Ladies Fight Video: ಟೋಲ್‌ನಲ್ಲಿ ಮಹಿಳೆಯರ ಡಿಶ್ಯುಂ ಡಿಶ್ಯುಂ! ಕೆರಳಿದ ನಾರಿಯರ ಜಡೆಜಗಳದಿಂದ ಟ್ರಾಫಿಕ್ ಜಾಮ್!

ಸಿಟ್ಟಿಗೆದ್ದ ಸಿಂಹಿಣಿಯರಂತಾದ ಈ ನಾರಿಯರು ಸುಮಾರು 2 ನಿಮಿಷ, 47 ಸೆಕೆಂಡ್ ಹೊಡೆದಾಡಿದ್ದಾರೆ. ಟೋಲ್ ಪ್ಲಾಜಾ ಅಂತಾನೂ ನೋಡದೇ ಒಬ್ಬರಿಗೊಬ್ಬರ ಜುಟ್ಟು ಹಿಡಿದುಕೊಂಡ ಮಹಿಳೆಯರು, ಬೈಯ್ದುಕೊಳ್ಳುತ್ತಾ, ಹೊಡೆದಾಡಿದ್ದಾರೆ. ಈ ಮಹಿಳೆಯರ ಫೈಟ್‌ನಿಂದ ಟೋಲ್‌ನಲ್ಲಿ ಟ್ರಾಫಿಕ್ ಜಾಮ್ ಸಹ ಉಂಟಾಗಿದೆಯಂತೆ!

ಮಹಿಳೆಯರ ಹೊಡೆದಾಟ

ಮಹಿಳೆಯರ ಹೊಡೆದಾಟ

  • Share this:
ನಾಸಿಕ್, ಮಹಾರಾಷ್ಟ್ರ: ಟೋಲ್ ಪ್ಲಾಜಾದಲ್ಲಿ (Toll Plaza) ಇಬ್ಬರು ಮಹಿಳೆಯರು (Two Ladies) ಸಾರ್ವಜನಿಕರ ಎದುರೇ ಪರಸ್ಪರ ಜುಟ್ಟು (Hair) ಹಿಡಿದುಕೊಂಡು ಹೊಡೆದಾಡಿದ್ದಾರೆ. ಜೊತೆಗಿದ್ದವರು ಜಗಳ (Fight) ತಪ್ಪಿಸೋದಕ್ಕೆ ಬಂದರೂ ಅವರ ಮಾತು ಕೇಳದ ಈ ನಾರಿಯರು, ಸುಮಾರು 2 ನಿಮಿಷ, 47 ಸೆಕೆಂಡ್ ಹೊಡೆದಾಡಿದ್ದಾರೆ. ಟೋಲ್ ಪ್ಲಾಜಾ ಅಂತಾನೂ ನೋಡದೇ ಒಬ್ಬರಿಗೊಬ್ಬರ ಜುಟ್ಟು ಹಿಡಿದುಕೊಂಡ ಮಹಿಳೆಯರು, ಬೈಯ್ದುಕೊಳ್ಳುತ್ತಾ, ಹೊಡೆದಾಡಿದ್ದಾರೆ. ಈ ಮಹಿಳೆಯರ ಫೈಟ್‌ನಿಂದ ಟೋಲ್‌ನಲ್ಲಿ ಟ್ರಾಫಿಕ್ ಜಾಮ್ (Traffic Jam) ಸಹ ಉಂಟಾಗಿದೆಯಂತೆ. ಅಷ್ಟಕ್ಕೂ ಈ ನಾರಿಯರ ಫೈಟ್ ನಡೆದಿದ್ದೆಲ್ಲಿ? ಮಹಿಳೆಯರು ಆಕ್ರೋಶಗೊಂಡಿದ್ದೇಕೆ? ಮುಂದೇನಾಯ್ತು ಅಂತ ತಿಳಿದುಕೊಳ್ಳಲು ಇಲ್ಲಿ ಓದಿ…

ಟೋಲ್ ಪ್ಲಾಜಾದಲ್ಲಿ ಮಹಿಳೆಯರ ಫೈಟ್

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ  ಪಿಂಪಲಗಾಂವ್ ಟೋಲ್ ಪ್ಲಾಜಾ ಕಾರಿನಲ್ಲಿ ಪತಿಯೊಂದಿಗೆ ಬಂದ ಮಹಿಳೆ ಮತ್ತು ಟೋಲ್‌ ಪ್ಲಾಜಾದ ಮಹಿಳಾ ಸಿಬ್ಬಂದಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಟೋಲ್ ಪ್ಲಾಜಾ ಅಂತಾನೂ ನೋಡದೆ, ಪರಸ್ಪರ ಜುಟ್ಟು ಹಿಡಿದುಕೊಂಡ ಮಹಿಳೆಯರು, ಒಬ್ಬರಿಗೊಬ್ಬರ ಜಡೆ ಹಿಡಿದುಕೊಂಡು, ಬೈಯ್ದಾಡಿಕೊಳ್ಳುತ್ತಾ ಹೊಡೆದಾಡಿಕೊಂಡಿದ್ದಾರೆ.



ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಪರಸ್ಪರ ಹೊಡೆದಾಟ

ಮಹಿಳೆಯೊಬ್ಬಳು ತನ್ನ ಗಂಡನ ಕಾರಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದು, ಟೋಲ್‌ ಗೇಟ್‌ ಬಳಿ ಆಕೆಯ ಗಂಡನ ಕಾರು ನಿಂತಿದೆ. ಈ ವೇಳೆ ಟೋಲ್‌ನಲ್ಲಿ ಹಣದ ವಿಚಾರಕ್ಕೆ ಆಕೆ ಟೋಲ್‌ನ ಮಹಿಳಾ ಸಿಬ್ಬಂದಿ ಜೊತೆ ಜಗಳ ತೆಗೆದಿದ್ದಾಳೆ. ಕೊನೆಗೆ ಇಬ್ಬರಿಗೂ ಮಾತಿಗೆ ಮಾತು ಬೆಳೆದು, ಪರಸ್ಪರ ಜಡೆಗೆ ಕೈ ಹಾಕಿದ್ದಾರೆ. ನೋಡ ನೋಡುತ್ತಿದ್ದಂತೆ ಇಬ್ಬರ ನಡುವೆ ದೊಡ್ಡ ಜಗಳವೇ ನಡೆದಿದೆ.

ಇದನ್ನೂ ಓದಿ: Troll Video: ಬ್ಲೌಸ್ ಹಾಕೊಂಡು ಭವಿಷ್ಯ ಹೇಳಮ್ಮಾ! ಖ್ಯಾತ ಜ್ಯೋತಿಷಿಯ ಗ್ರಹಚಾರ ಬಿಡಿಸಿದ ನೆಟ್ಟಿಗರು

2.47 ನಿಮಿಷ ನಡು ರಸ್ತೆಯಲ್ಲೇ ನಾರಿಯರ ಫೈಟ್

ವರದಿಗಳ ಪ್ರಕಾರ ನಾಸಿಕ್ ಟೋಲ್ ಪ್ಲಾಜಾದಲ್ಲಿ ಟೋಲ್ ಪಾವತಿಗೆ ಜಗಳ ನಡೆದಿದೆ. 2 ನಿಮಿಷಗಳ 47 ಸೆಕೆಂಡುಗಳ ವಿಡಿಯೋ ಕ್ಲಿಪ್‌ನಲ್ಲಿ ಸಿಆರ್‌ಪಿಎಫ್‌ನಲ್ಲಿ ಉದ್ಯೋಗಿಯಾಗಿರುವ ತನ್ನ ಪತಿಯ ಜೊತೆ ಮಹಿಳೆ ಬಂದಿದ್ದಾಳೆ. ಕಾರಿನಲ್ಲಿದ್ದ ಪತಿ ಮತ್ತು ಇತರ ಸಾರ್ವಜನಿಕರು ವೀಕ್ಷಿಸುತ್ತಿರುವಂತೆ ಮಹಿಳಾ ಟೋಲ್ ಬೂತ್ ಉದ್ಯೋಗಿಯ ಅಂಗಿಯನ್ನು ಹಿಡಿದಿರುವುದನ್ನು ಕಾಣಬಹುದು.

ಜನರ ಮಾತು ಕೇಳದೇ ಫೈಟ್ ಮುಂದುವರಿಸಿದ ನಾರಿಯರು

ಇಬ್ಬರೂ ಸೇರಿಗೆ ಸವ್ವಾಸೇರು ಎನ್ನುವಂತೆ ಒಬ್ಬರ ಮೇಲೆ ಮತ್ತೊಬ್ಬರು ಮುಗಿಬಿದ್ದು ಬಡಿದಾಡಿಕೊಂಡಿದ್ದಾರೆ. ಇನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ಬಿಡಿಸುವ ಯತ್ನ ಮಾಡಿದ್ದಾರೆ. ಆದರೆ ಮಹಿಳೆಯರು ಯಾರ ಮಾತನ್ನೂ ಲೆಕ್ಕಿಸದೇ ಫೈಟ್ ಮಾಡಿದ್ದಾರೆ.‘

ಹೆಂಗಸರ ಫೈಟ್‌ನಿಂದ ಟ್ರಾಫಿಕ್ ಜಾಮ್

ಇನ್ನು ಹೆಂಗಸರಿಬ್ಬರು ನಡು ರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಇದನ್ನು ನೋಡಲು ಅಕ್ಕಪಕ್ಕದ ವಾಹನಗಳಿಂದ ಜನ ಇಳಿದು ಬಂದಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಆಗಿದೆ. ಜೊತೆಗೆ ಅದು ಟೋಲ್ ಪ್ಲಾಜಾ ಆಗಿರುವ ಕಾರಣ ನಡುರಸ್ತೆಯಲ್ಲಿ ವಾಹನಗಳು ನಿಂತು ಟ್ರಾಫಿಕ್ ಜಾಮ್ ಇನ್ನಷ್ಟು ಹೆಚ್ಚಾಗಿರುವ ಬಗ್ಗೆ ವರದಿಯಾಗಿದೆ.

ಇದನ್ನೂ ಓದಿ: Dead Rat: ಬೀಟ್ರೂಟ್ ಪಲ್ಯದಲ್ಲಿ ಸಿಕ್ತು ಸತ್ತ ಇಲಿ! ಹೋಟೆಲ್‌ ಊಟ ಮಾಡೋ ಮುನ್ನ ಹುಷಾರಪ್ಪ

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಇನ್ನು ಅಲ್ಲೇ ನಿಂತಿದ್ದ ಕೆಲವರು ತಮ್ಮ ಮೊಬೈಲ್‌ನಲ್ಲಿ ಮಹಿಳೆಯರ ಫೈಟ್‌ನ ವಿಡಿಯೋ ಚಿತ್ರೀಕರಣ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Published by:Annappa Achari
First published: