Tight Hug: ಆತ ಕರಡಿಯಂತೆ ಬಾಚಿ ತಪ್ಪಿಕೊಂಡ, ಆಕೆಯ ಎದೆಯ ಎಲುಬು ಚಟಾರ್ ಅಂತ ಮುರಿದು ಹೋಯ್ತು!

ಅಪ್ಪುಗೆ ಅಂದ್ರೆ ಅಪ್ಪಿ ಕೊಂಡವರಿಗೂ, ಅವರ ತೋಳಿನಲ್ಲಿ ಇರುವವರಿಗೂ ಹಿತವಾದ ಅನುಭವ ಆಗಬೇಕು. ಆದರೆ ಕರಡಿ ಅಪ್ಪುಗೆ ಅಂತ ಒಂದಿದೆ. ಕರಡಿ ತನ್ನ ಅಪ್ಪುಗೆಯಲ್ಲಿ ಇದ್ದವರನ್ನು ಉಸಿರುಗಟ್ಟುವಂತೆ ಮಾಡುತ್ತಂತೆ. ಇಲ್ಲಿ ಆಗಿದ್ದೂ ಇದೇ. ಆತನ ಅಪ್ಪುಗೆಯಿಂದ ಆಕೆಯ ಪಕ್ಕೆಲುಬೇ ಮುರಿದು ಹೋಗಿದ್ಯಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚೀನಾ: ಅಪ್ಪಿಕೊಳ್ಳುವುದು (Hugging) ಅಂದರೆ ಪ್ರೀತಿ (Love), ಸ್ನೇಹವನ್ನು (Friendship), ಕಾಳಜಿಯನ್ನು (Care), ಮಮತೆ, ವಾತ್ಸವ್ಯವನ್ನು ವ್ಯಕ್ತಪಡಿಸುವ ಒಂದು ವಿಧಾನ. ಅಪ್ಪುಗೆ (Hug) ಅಂದ್ರೆ ಅಪ್ಪಿ ಕೊಂಡವರಿಗೂ, ಅವರ ತೋಳಿನಲ್ಲಿ ಇರುವವರಿಗೂ ಹಿತವಾದ ಅನುಭವ ಆಗಬೇಕು. ಆದರೆ ಕರಡಿ (Bear) ಅಪ್ಪುಗೆ ಅಂತ ಒಂದಿದೆ. ಕರಡಿ ತನ್ನ ಅಪ್ಪುಗೆಯಲ್ಲಿ ಇದ್ದವರನ್ನು ಉಸಿರುಗಟ್ಟುವಂತೆ ಮಾಡುತ್ತಂತೆ. ಇಲ್ಲಿ ಆಗಿದ್ದೂ ಇದೇ. ಕರಡಿಯಂತೆ ಅಪ್ಪುಗೆ ಕೊಟ್ಟ ವ್ಯಕ್ತಿಯೊಬ್ಬ ಯಡವಟ್ಟು ಮಾಡಿಕೊಂಡಿದ್ದಾನೆ. ಆತನ ಅಪ್ಪುಗೆಗೆ ಸಿಕ್ಕಿದ ಜೀವವೊಂದು ಪಕ್ಕೆಲುಬು ಮುರಿದುಕೊಂಡು (Rib Broken) ಆಸ್ಪತ್ರೆ (Hospital) ಸೇರುವಂತಾಗಿದೆ.   

ಪುರುಷ ಸಹೋದ್ಯೋಗಿಯ ಅಪ್ಪುಗೆಯಿಂದ ಆಸ್ಪತ್ರೆ ಸೇರಿದ ಮಹಿಳೆ

ಇದೊಂಥರಾ ವಿಚಿತ್ರ ಸುದ್ದಿ. ನಡೆದಿದ್ದು ಚೀನಾದಲ್ಲಿ. ಇಲ್ಲಿನ ಯುಯಾಂಗ್ ನಗರದ ಖಾಸಗಿ ಕಂಪನಿಯೊಂದರಲ್ಲಿ ಪುರುಷ ಸಹೋದ್ಯೋಗಿಯೊಬ್ಬ ಮಹಿಳಾ ಸಹೋದ್ಯೋಗಿಯೊಬ್ಬಳನ್ನು ತಬ್ಬಿಕೊಂಡಿದ್ದಾನೆ. ಅಷ್ಟೇ ನೋಡಿ, ಆಕೆ ಕಿಟಾರನೆ ಕಿರುಚಿ ಕೊಂಡು ಅಸ್ವಸ್ಥಗೊಂಡಿದ್ದಾಳೆ. ಒಂದು ವಾರದ ಬಳಿಕ  ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಗಿಯಾದ ಅಪ್ಪುಗೆಯಿಂದ ನರಳಿದ ಮಹಿಳೆ

ತನ್ನ ಕೆಲಸದ ಸ್ಥಳದಲ್ಲಿ ಮಹಿಳೆಯು ತನ್ನು ಪುರುಷ ಸಹೋದ್ಯೋಗಿಯೊಂದಿಗೆ ಮಾತನಾಡುತ್ತಿದ್ದಾಗ, ಆತ ಖುಷಿಯಿಂದ ಆಕೆಯನ್ನು ಸಂಭವಿಸಿದೆ. ಆದ್ರೆ ಆತನ ಅಪ್ಪುಗೆ ತಾಳಲಾರದೇ ಆಕೆ ನೋವಿನಿಂದ ಕಿರುಚಿದ್ದಾಳೆ. ಆ ದಿನ ಕೆಲಸ ಬಿಟ್ಟ ನಂತರ ಎದೆನೋವು ಅನುಭವಿಸುವಷ್ಟರ ಮಟ್ಟಿಗೆ ಆತನ ಅಪ್ಪುಗೆ ಆಕೆಯನ್ನು ಕಾಡಿದೆ. ಮನೆಗೆ ಹೋಗಿ ಎದೆಗೆ ಬಿಸಿ ಎಣ್ಣೆ ಹಚ್ಚಿ ಮಲಗಿದ್ದಾಳೆ.

ಇದನ್ನೂ ಓದಿ: Saree Secrets: ಸೀರೆ ಉಟ್ಟು ಸುಂದರವಾಗಿ ಕಾಣಬೇಕೇ? ಈ ರೀತಿ ಮಾಡಿ ನೀವು ಗೊಂಬೆ ತರ ಕಾಣಿಸ್ತೀರಿ!

ಅಪ್ಪುಗೆಯಿಂದ ಮೂರು ಪಕ್ಕೆಲುಬು ಮುರಿತ

ಒಂದು ವಾರದ ನಂತರ, ಅವಳು ಇನ್ನೂ ಎದೆಯಲ್ಲಿ ತೀವ್ರವಾದ ನೋವನ್ನು ಅನುಭವಿಸಿದಳು. ಕೊನೆಗೆ ನೋವು ತಾಳಲಾರದೇ ಅವಳು ತಪಾಸಣೆಗಾಗಿ ಆಸ್ಪತ್ರೆಗೆ ಹೋದಳು. ಅಲ್ಲಿ ಆಕೆಯ ಎದೆಯ ಎಕ್ಸ್ ರೇ ಮಾಡಿದಾಗ, ಆಕೆಯ ಮೂರು ಪಕ್ಕೆಲುಬುಗಳು ಮುರಿದು ಹೋಗಿದ್ದು ಗೊತ್ತಾಗಿದೆ. ಹೀಗಾಗಿ ಆಕೆ ಕೆಲಸ ಮಾಡದ ಸ್ಥಿತಿ ತಲುಪಿದ್ದು, ಅನಿವಾರ್ಯವಾಗಿ ಅವಳು ಕೆಲಸದಿಂದ ರಜೆ ತೆಗೆದುಕೊಂಡು ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕಾಯಿತು.

ವೈದ್ಯಕೀಯ ವೆಚ್ಚ ಭರಿಸಲು ಒಪ್ಪದ ಪುರುಷ ಸಹೋದ್ಯೋಗಿ

ಆಕೆ ತನ್ನ ವೈದ್ಯಕೀಯ ವೆಚ್ಚವನ್ನು ಭರಿಸುವಂತೆ ಪುರುಷ ಸಹೋದ್ಯೋಗಿಗೆ ಹೇಳಿದ್ದಾಳೆ. ಆದರೆ ಆತ ತನ್ನ ಸ್ನೇಹಪೂರ್ವಕ ಅಪ್ಪುಗೆಯಿಂದ ಎದೆ ಪಕ್ಕೆಲುವು ಮುರಿದು, ನೋವು, ಗಾಯ ಉಂಟಾಯಿತು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಅಂತ ವಾದಿಸಿದ್ದಾನೆ. ಅಲ್ಲದೇ ವೈದ್ಯಕೀಯ ವೆಚ್ಚ ಕೊಡಲು ನಿರಾಕರಿಸಿದ್ದಾನೆ.

ಸಹೋದ್ಯೋಗಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಮಹಿಳೆ

ಹೀಗಾಗಿ ಆಕೆ ಅನಿವಾರ್ಯವಾಗಿ ತನ್ನ ಪುರುಷ ಸಹೋದ್ಯೋಗಿ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ್ದಾಳೆ. ತನ್ನ ಅನಾರೋಗ್ಯ ಹಾಗೂ ಆರ್ಥಿಕ ನಷ್ಟಕ್ಕೆ ಪರಿಹಾರವನ್ನು ಕೇಳಿದಳು. ಮಹಿಳೆಯ ಮುರಿದ ಪಕ್ಕೆಲುಬುಗಳು ಇತರ ದೈಹಿಕ ಚಟುವಟಿಕೆಗಳಿಂದ ಉಂಟಾಗಿದೆ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿದ್ದು, ಇದು ಆತನ ಬಿಗಿಯಾದ ಅಪ್ಪುಗೆಯಿಂದ ಆಗಿದ್ದು ಅಂತ ಕೋರ್ಟ್ ಹೇಳಿದೆ.

ಇದನ್ನೂ ಓದಿ: Condom Gift: ಮಗಾ ಲಡ್ಡು ಬಂದು ಬಾಯಿಗ್ ಬಿತ್ತಾ? ನವ ದಂಪತಿಗೆ ಸರ್ಕಾರದಿಂದ ಕಾಂಡೋಮ್, ಮಾತ್ರೆ ಗಿಫ್ಟ್!

ಅಪ್ಪುಗೆಯಿಂದ ಎಲುಬು ಮುರಿದಿದ್ದಕ್ಕೆ 1.6 ಲಕ್ಷ ರೂಪಾಯಿ ದಂಡ

ಸಹೋದ್ಯೋಗಿ ಮಹಿಳೆಗೆ 10,000 ಯುವಾನ್ ಅಂದರೆ ಅಂದಾಜು 1,473 ಡಾಲರ್ ಮೊತ್ತವನ್ನು ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 1.6 ಲಕ್ಷ ಹಣವನ್ನು ಪರಿಹಾರವಾಗಿ ಪಾವತಿಸಲು ಕೋರ್ಟ್ ಆ ಪುರುಷ ಸಹೋದ್ಯೋಗಿಗೆ ಆದೇಶಿಸಿದೆ.
Published by:Annappa Achari
First published: