• Home
  • »
  • News
  • »
  • trend
  • »
  • Father-Daughter Love: ಕೆಲಸಕ್ಕಿಂತ ಮಗಳೇ ಮುಖ್ಯ ಎಂದ ತಂದೆ! ಇದಲ್ಲವೇ ಅಪ್ಪನ ಪ್ರೀತಿ

Father-Daughter Love: ಕೆಲಸಕ್ಕಿಂತ ಮಗಳೇ ಮುಖ್ಯ ಎಂದ ತಂದೆ! ಇದಲ್ಲವೇ ಅಪ್ಪನ ಪ್ರೀತಿ

ಮಗಳೊಂದಿಗೆ ತಂದೆ

ಮಗಳೊಂದಿಗೆ ತಂದೆ

ಅವರ ಕೆಲಸದಲ್ಲಿ ತುಂಬಾ ಪ್ರಯಾಣ ಮಾಡಬೇಕಾಗಿರುತ್ತದೆ. ಹೀಗಾಗಿ ಮಗಳ ಜೊತೆಗೆ ಹೆಚ್ಚು ಸಮಯ ಕಳೆಯಲು ಸಿಗುವುದಿಲ್ಲ ಅಂತ ಭಾವಿಸಿ, ತನ್ನ ಮಗಳು ಹುಟ್ಟಿದ ನಂತರ ದೀರ್ಘ ವಿರಾಮವನ್ನು ಬಯಸಿ ಕೆಲಸಕ್ಕೆ ಗುಡ್‌ಬೈ ಹೇಳಿದ್ದಾರೆ.

  • Share this:

ಮದುವೆಯಾದ(Marriage) ನಂತರ ದಂಪತಿಗಳಿಗೆ ತುಂಬಾನೇ ಖುಷಿ ನೀಡುವ ಒಂದು ವಿಚಾರವೆಂದರೆ ಅದು ಮೊದಲ ಮಗುವಿನ ಆಗಮನದ ಸಿಹಿ ಸುದ್ದಿ.  ಹೌದು.. ಮಗುವಿನ ಜನನವು ಪ್ರತಿಯೊಬ್ಬ ಪೋಷಕರ(Parents) ಜೀವನದ ಅತ್ಯಂತ ಪ್ರೀತಿಯ ಕ್ಷಣಗಳಲ್ಲಿ ಒಂದಾಗಿದೆ. ಮಗು ಹುಟ್ಟಿದ ಕೂಡಲೇ ಪೋಷಕರು ತಮ್ಮ ಎಲ್ಲಾ ಗಮನವನ್ನು ಹೆಚ್ಚಾಗಿ ಮಗುವಿನ ಕಡೆ ಹರಿಸುತ್ತಾರೆ.  ಮಹಿಳಾ ಉದ್ಯೋಗಿಗಳಿಗೆ(Women Employee) 6 ತಿಂಗಳು ಹೆರಿಗೆ ರಜೆ ಲಭ್ಯವಿರುತ್ತದೆ.  ಆದರೆ ಪುರುಷರು ಸಾಮಾನ್ಯವಾಗಿ ಪಿತೃತ್ವ ರಜೆಯಾಗಿ ಕೆಲವು ದಿನಗಳ ರಜೆಯನ್ನು ಮಾತ್ರ ಪಡೆಯುತ್ತಾರೆ.


 ಪುಟ್ಟ ಮಗಳ ಜೊತೆ ಸಮಯ ಕಳೆಯಲು ಕೆಲಸ ಬಿಟ್ಟ ತಂದೆ..


ಆದರೆ ಇಲ್ಲೊಬ್ಬ ವ್ಯಕ್ತಿಯು ತನ್ನ ಮಗಳ ಜನನದ ನಂತರ ಕಾರ್ಪೊರೇಟ್ ವಲಯದಲ್ಲಿನ ತನ್ನ ಹೆಚ್ಚಿನ ಸಂಬಳದ ಕೆಲಸವನ್ನೇ ಬಿಟ್ಟಿದ್ದಾರೆ. ಈ ತಂದೆ ತನ್ನ ಪುಟ್ಟ ಮಗಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಬಯಸಿದ್ದಾರಂತೆ. ಈ ಕಥೆಯನ್ನು ಕೆಲವು ದಿನಗಳ ಹಿಂದೆ ಹ್ಯೂಮನ್ಸ್ ಆಫ್ ಬಾಂಬೆ ಪುಟವು ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದೆ.  ಇದು ನೆಟ್ಟಿಗರ ಗಮನವನ್ನು ಸೆಳೆದಿದೆ.


ಕಳೆದ ತಿಂಗಳು, ತನ್ನ ಮಗಳು ಜನಿಸುವ ಕೆಲವು ದಿನಗಳ ಮೊದಲು, ತಾನು ತನ್ನ ಹೆಚ್ಚಿನ ಸಂಬಳದ ಕೆಲಸವನ್ನೇ ತ್ಯಜಿಸಿರುವುದಾಗಿ ಆ ವ್ಯಕ್ತಿ ಹಂಚಿಕೊಂಡಿದ್ದಾರೆ. ಅಲ್ಲದೆ, ಈ ನಿರ್ಧಾರಕ್ಕೆ ಬೆಂಬಲವಾಗಿ ಆತನ ಮಡದಿ ಆಕಾಂಕ್ಷಾ ಸಹ ನಿಂತುಕೊಂಡಿರುವುದರಿಂದ ಅದು ಮುಖ್ಯವಾಗಿದೆ ಎಂತಲೂ ಹೇಳಿಕೊಂಡಿದ್ದಾರೆ. ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಗೆ ಪ್ರವಾಸ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರಿಂದ ದಂಪತಿಗಳು ತಮ್ಮ ಮಗಳಿಗೆ ಸ್ಪಿತಿ ಎಂದು ಹೆಸರಿಡಲು ನಿರ್ಧರಿಸಿದರು.


ಇದನ್ನೂ ಓದಿ: Girls Matter: OMG, ಹುಡುಗಿಯರು ರಾತ್ರಿ ಇಂಟರ್‌ನೆಟ್‌ನಲ್ಲಿ ಇವನ್ನೆಲ್ಲಾ ಸರ್ಚ್ ಮಾಡ್ತಾರಾ? ಗೂಗಲ್‌ ತೆರೆದಿಟ್ಟಿದೆ ಶಾಕಿಂಗ್ ಹಿಸ್ಟ್ರಿ!


ಹೆಚ್ಚು ಸಮಯವನ್ನ ಮಗಳ ಜೊತೆ ಕಳೆಯಲು ಬಯಸಿದ ತಂದೆ..


ಅವರು ತಮ್ಮ ಎಲ್ಲಾ ಸಮಯವನ್ನು ಮಗಳ ಜೊತೆ ಕಳೆಯಲು ಬಯಸುವುದಾಗಿ ಹೇಳಿದರು, ಒಂದು ವಾರದ ಪಿತೃತ್ವ ರಜೆಗೆ ಅನುಮತಿ ನೀಡುವುದಕ್ಕಿಂತ ಹೆಚ್ಚು ದಿನಗಳನ್ನು ಮಗಳ ಜೊತೆ ಕಳೆಯುವುದಾಗಿ ಹೇಳಿದರು. ಆದಾಗ್ಯೂ, ಅವರು ಕೆಲವು ತಿಂಗಳ ಹಿಂದೆ ಹಿರಿಯ ಉಪಾಧ್ಯಕ್ಷರಾಗಿ ಹೊಸ ಕೆಲಸವನ್ನು ಪ್ರಾರಂಭಿಸಿದ್ದರು.


ಅವರ ಕೆಲಸದಲ್ಲಿ ತುಂಬಾ ಪ್ರಯಾಣ ಮಾಡಬೇಕಾಗಿರುತ್ತದೆ. ಹೀಗಾಗಿ ಮಗಳ ಜೊತೆಗೆ ಹೆಚ್ಚು ಸಮಯ ಕಳೆಯಲು ಸಿಗುವುದಿಲ್ಲ ಅಂತ ಭಾವಿಸಿ, ತನ್ನ ಮಗಳು ಹುಟ್ಟಿದ ನಂತರ ದೀರ್ಘ ವಿರಾಮವನ್ನು ಬಯಸಿ ಕೆಲಸಕ್ಕೆ ಗುಡ್‌ಬೈ ಹೇಳಿದ್ದಾರೆ.


ಕಂಪನಿಗೆ ರಜೆಯನ್ನು ವಿಸ್ತರಿಸಲು ಸಾಧ್ಯವಾಗದ ಕಾರಣ, ಆ ವ್ಯಕ್ತಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದು ಅದನ್ನು "ಪಿತೃತ್ವಕ್ಕೆ ಬಡ್ತಿ" ಎಂದು ಕರೆದುಕೊಂಡಿದ್ದಾರೆ.


"ನಾನು ತೆಗೆದುಕೊಂಡ ನಿರ್ಧಾರ ಅಷ್ಟೊಂದು ಸುಲಭವಾದುದಲ್ಲ, ಅನೇಕ ಪುರುಷರು ಅದನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಮುಂಬರುವ ವರ್ಷಗಳಲ್ಲಿ ವಿಷಯಗಳು ತುಂಬಾನೇ ಬದಲಾಗುತ್ತವೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಕಳೆದ 1 ತಿಂಗಳಲ್ಲಿ ನಾನು ಬದುಕಿದ ಜೀವನವು ನನ್ನ ಎಲ್ಲಾ ವರ್ಷಗಳ ಗಡಿಬಿಡಿಗಿಂತ ಹೆಚ್ಚು ತೃಪ್ತಿದಾಯಕವಾಗಿದೆ" ಎಂದು ಪೋಸ್ಟ್ ಕೊನೆಯಲ್ಲಿ ಬರೆದಿದ್ದಾರೆ.


ಈ ಪೋಸ್ಟ್ ಗೆ 2 ಲಕ್ಷಕ್ಕೂ ಹೆಚ್ಚು ಲೈಕ್ ಗಳು ಬಂದಿವೆ..


ಈ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಿನಿಂದಲೂ ಈ ಪೋಸ್ಟ್ ಗೆ 2 ಲಕ್ಷಕ್ಕೂ ಹೆಚ್ಚು ಲೈಕ್ ಗಳು ಬಂದಿವೆ. ಆದಾಗ್ಯೂ, ಪ್ರತಿಯೊಬ್ಬರೂ ಆ ವ್ಯಕ್ತಿಯ ಕ್ರಮವನ್ನು ಒಪ್ಪಲಿಲ್ಲ ಮತ್ತು ಅಂತಹ ಕ್ರಮವನ್ನು ತೆಗೆದುಕೊಳ್ಳಲು ಅವನಿಗೆ ಸಾಕಷ್ಟು ಸವಲತ್ತುಗಳಿರಬೇಕು ಎಂದು ಅಭಿಪ್ರಾಯಪಟ್ಟರು.


"ಹೌದು.. ಪಿತೃತ್ವದ ರಜೆಯೂ ಹೆರಿಗೆ ರಜೆಯಷ್ಟೇ ಮುಖ್ಯ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ನಾನು ಕೂಡ ಸುಮಾರು 2 ತಿಂಗಳ ಹಿಂದೆ ತಂದೆಯಾದೆ. ನಾನು ಸಹ ನನ್ನ ಪುಟ್ಟ ಮಗನೊಂದಿಗೆ ಸಮಯ ಕಳೆಯುತ್ತಾ ಮನೆಯಿಂದ ಫ್ರೀಲಾನ್ಸಿಂಗ್ ಮಾಡಲು ಯೋಚಿಸಿದೆ.


ಇದನ್ನೂ ಓದಿ: Trending Video: ಸ್ನೇಹಿತನ ಮದುವೆಯಲ್ಲಿ ಸೀರೆ ಉಟ್ಟು, ಬಿಂದಿ ಹಚ್ಕೊಂಡು ಬಂದ ವರನ ಫ್ರೆಂಡ್ಸ್!


ಆದರೆ ನನ್ನ ಕುಟುಂಬದ ವಿಷಯಗಳಿಂದಾಗಿ ಅದನ್ನು ಮಾಡಲು ಸಾಧ್ಯವಾಗಲಿಲ್ಲ. ನಾವು "ತಂದೆಯರು" ಪ್ರಪಂಚದ ಅತ್ಯಂತ ಸ್ವಾಭಾವಿಕ ಭಾವನೆಯಿಂದ ವಂಚಿತರಾಗಿದ್ದೇವೆ ಎಂದು ನನಗೆ ದುಃಖವಾಗುತ್ತದೆ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

Published by:Latha CG
First published: