'ಹುಡುಗಿ' ಅಂದುಕೊಂಡು ಅಪ್ಪನನ್ನೇ ಪ್ರೀತಿಸಿದ ಮಗ! ಇದು Facebook ಅಲ್ಲ ಸ್ವಾಮಿ, 'Fake'book!

ಫೇಸ್‌ಬುಕ್‌ನಲ್ಲಿ ಆ ಯುವಕನಿಗೆ ಆ 'ಯುವತಿ' ಪರಿಚಯವಾಗುತ್ತದೆ. ಆಕೆಯನ್ನು ಆತ ಗಾಢವಾಗಿ ಪ್ರೀತಿಸಲೂ ತೊಡಗುತ್ತಾನೆ. ಆದರೆ 'ಆಕೆ' ಯಾರೆಂದು ಗೊತ್ತಾದ ಮೇಲೆ ಆತನಿಗೆ ಶಾಕ್. ಯಾಕೆಂದರೆ ಆ 'ಹುಡುಗಿ' ಬೇರೆ ಯಾರೂ ಅಲ್ಲ, ಆತನ ತಂದೆ! ತಂದೆಯಾಕೆ 'ಹುಡುಗಿ' ಹೆಸರಲ್ಲಿ ಫೇಕ್ ಅಕೌಂಟ್ ತೆರೆದಿದ್ದರು? ಮುಂದೆ ಏನಾಯ್ತು? ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ...

ನಿರ್ದೇಶಕ ಜೇಮ್ಸ್ ಮೊರೋಸಿನಿ

ನಿರ್ದೇಶಕ ಜೇಮ್ಸ್ ಮೊರೋಸಿನಿ

 • Share this:
  ಇಂದಿನ ಡಿಜಿಟಲ್ (Digital) ಯುಗ, ತಂತ್ರಜ್ಞಾನ (Technology) ಹಾಗೂ ಸಾಮಾಜಿಕ ಮಾಧ್ಯಮಗಳು (Social Media) ಹಲವಾರು ಅದ್ಭುತ ಪ್ರಯೋಜನಗಳನ್ನು ಕೊಟ್ಟರೂ ಅವುಗಳಿಂದ ಕೆಟ್ಟ ಚಾಳಿ, ಚಟಗಳು ಉಂಟಾಗಬಹುದೆಂದರೆ ತಪ್ಪಿಲ್ಲ. ಅಂತಹುದ್ದೇ ಒಂದು ವಿಚಿತ್ರ ಹಾಗೂ ಅಪ್ಪನಿಂದಲೇ (Father) ಮಗ (Son) ಮೋಸಕ್ಕೊಳಗಾದ ಘಟನೆಯೊಂದು ವರದಿಯಾಗಿದೆ. ಇತ್ತೀಚೆಗೆ ಹಾಲಿವುಡ್ (Hollywood) ಚಿತ್ರ ನಿರ್ಮಾಣಕಾರರೊಬ್ಬರು ಸ್ವತಃ ಅವರ ಪೋಷಕರಿಂದಲೇ ಮೋಸಹೊದ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಅದು ಹೇಗಂತೀರಾ.. ಅವರ ಪೋಷಕ ಅಂದರೆ ತಂದೆಯು ಫೇಸ್‍ಬುಕ್‌ನಲ್ಲಿ (Facebook) ಯುವ ತರುಣಿಯ ನಕಲಿ ಗುರುತಿನಲ್ಲಿ (Fake ID) ಚಿತ್ರ ನಿರ್ಮಾಣಕಾರರನ್ನು ಮೋಸಗೊಳಿಸಿದ್ದಾರಂತೆ.

  ತಂದೆಯಿಂದ ಮೋಸಹೋದ ಜೇಮ್ಸ್ ಮೊರೋಸಿನ್

  31ರ ಪ್ರಾಯದ ಹಾಲಿವುಡ್ ಚಿತ್ರ ನಿರ್ಮಾಣಕಾರರಾದ ಜೇಮ್ಸ್ ಮೊರೋಸಿನ್ ಎಂಬುವವರು ಇತ್ತೀಚೆಗೆ ಹೇಳಿರುವಂತೆ ಅವರು ಸಾಮಾಜಿಕ ಮಾಧ್ಯಮದ ಮುಖಾಂತರ ಪರಸ್ಪರ ಸಮವಾಗಿರುವ ಹವ್ಯಾಸ ಹಾಗೂ ಆಸಕ್ತಿಗಳಿಗೆ ಸಂಬಂಧಿಸಿದಂತೆ ಬೆಕ್ಕಾ ಎಂಬ ಹುಡುಗಿಗೆ ಪರಿಚಿತರಾಗಿ ಸಂಬಂಧ ಏರ್ಪಡಿಸಿಕೊಂಡರಂತೆ. ಆದರೆ ಸಮಯ ಕಳೆದಂತೆ ಅವರಿಗೆ ಬೆಕ್ಕಾ ಅವರ ಖಾತೆ ನಿರ್ವಹಿಸುತಿರುವವರು ಯಾರೆಂದು ಗೊತ್ತಾದ ಮೇಲೆ ಮುಗಿಲು ಕಳಚಿ ಬಿದ್ದಂತಾಯಿತಂತೆ. ಏಕೆಂದರೆ ಅವರ ಸ್ವಂತ ತಂದೆಯೇ ಆ ಬೆಕ್ಕಾ ಹೆಸರಿನ ಸಾಮಾಜಿಕ ಮಾಧ್ಯಮದ ಖಾತೆಯನ್ನು ನಿರ್ವಹಿಸುತ್ತಿದ್ದರಂತೆ.

  ಯುವತಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಅಕೌಂಟ್

  ಈ ಸಂಬಂಧ ಮಾಧ್ಯಮವೊಂದಕ್ಕೆ ಮಾತನಾಡಿರುವ ಜೇಮ್ಸ್ ಹೇಳುವ ಪ್ರಕಾರ, ಸ್ವತಃ ಅವರ ತಂದೆಯೇ ಅವರನ್ನು ಪರೀಕ್ಷಿಸುವ ಉದ್ದೇಶದಿಂದ ಬೆಕ್ಕಾ ಎಂಬ ನಕಲಿ ಯುವತಿಯ ಹೆಸರಿನಡಿಯಲ್ಲಿ ಖಾತೆ ತೆರೆದಿದ್ದರು. "ಕೊನೆಗೆ ನನಗೆ ಗೊತ್ತಾದ ವಿಷಯವೆಂದರೆ ನನ್ನ ತಂದೆಯೇ ನಾನು ಸರಿಯಾಗಿರುವೆನಾ ಎಂಬುದನ್ನು ಪರೀಕ್ಷಿಸಲು ನಕಲಿ ಯುವತಿಯ ಹೆಸರಿನಲ್ಲಿ ಪೂರ್ಣ ಪ್ರೊಫೈಲ್ ಸೃಷ್ಟಿಸಿದ್ದರು"

  ಇದನ್ನೂ ಓದಿ: Viral News: ಇದೇನು ಆಫೀಸಾ, ಮನೆನಾ ಅಂತ ಇವ್ನನ್ನ ಕೇಳ್ಬೇಡಿ! ಈತ ಇಲ್ಲೇ ಕೆಲ್ಸ ಮಾಡ್ತಾನೆ, ಇಲ್ಲೇ ಮಲಗ್ತಾನೆ!

  ‘ಐ ಲವ್ ಮೈ ಡ್ಯಾಡ್’ ಸಿನಿಮಾದಲ್ಲಿದೆ ನೈಜ ಕಥೆ

  2022ರಲ್ಲಿ ಬಿಡುಗಡೆಯಾಗಿರುವ "ಐ ಲವ್ ಮೈ ಡ್ಯಾಡ್" ಎಂಬ ಹಾಲಿವುಡ್ ಚಿತ್ರ ನಿಮಗೆ ಗೊತ್ತಿದೆಯೇ..? ಹೌದು, ಈ ಚಿತ್ರದಲ್ಲಿ ತರುಣನೊಬ್ಬ ಸಾಮಾಜಿಕ ಮಾಧ್ಯಮದ ಮೂಲಕ ಸುಂದರವಾದ ಯುವತಿಯೊಬ್ಬಳ ಪರಿಚಯ ಮಾಡಿಕೊಳ್ಳಲು ಸಫಲನಾಗುತ್ತಾನೆ. ನಂತರ ಅವರಿಬ್ಬರ ಮಧ್ಯೆ ರೋಮಾಂಚಿತವಾದ ಸಂಭಾಷಣೆಗಳು ನಡೆಯುತ್ತವೆ.

  ನಕಲಿ ಯುವತಿ ತಂದೆಯೇ ಅಂತ ಗೊತ್ತಾದಾಗ ಶಾಕ್!

  ಆ ತರುಣ ಆ ಯುವತಿಯನ್ನು ದಟ್ಟವಾಗಿ ಪ್ರೀತಿಸಲಾರಂಭಿಸುತ್ತಾನೆ. ಕೊನೆಗೆ ಆ ಯುವತಿ ಯಾರೆಂದು ಗೊತ್ತಾದಾಗ ಅವನಿಗೆ ಹಂಡ್ರೆಡ್ ವೋಲ್ಟ್ ಶಾಕ್ ಹೊಡೆದಂತಹ ಅನುಭವವಾಗುತ್ತದೆ. ಏಕೆಂದರೆ ಅವನು ನಿತ್ಯ ಚಾಟ್ ಮಾಡುತ್ತಿದ್ದ ಯುವತಿ, ಪ್ರೀತಿಸುತ್ತಿದ್ದ ಯುವತಿ ಬೇರಾರೂ ಅಲ್ಲ ಆ ತರುಣನ ತಂದೆಯೇ ಆಗಿರುತ್ತಾರೆ.

  ಸತ್ಯ ಘಟನೆ ಆಧಾರಿತ ಸಿನಿಮಾ

  ಈ ಚಿತ್ರವು ಒಂದು ಹಾಸ್ಯಪ್ರಧಾನ ಚಿತ್ರವಾಗಿದ್ದು ಇತ್ತೀಚಿಗಷ್ಟೇ ಅಮೆರಿಕದಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ ಕಥಾ ಹಂದರವು ಮೇಲೆ ವಿವರಿಸಿದ ನೈಜ ಘಟನೆಯ ಮೇಲೆಯೇ ಆಧಾರಿತವಾಗಿದೆ. ಹೌದು, ಈ ಚಿತ್ರವನ್ನು ನಿರ್ದೇಶಿಸಿದವರು ಸ್ವತಃ ಜೇಮ್ಸ್ ಮೊರೋಸಿನಿ ಅವರೆ. ತಮ್ಮ ಜೊತೆ ಈ ರೀತಿಯಲ್ಲಿ ಆದ ಘಟನೆಯನ್ನೇ ಆಧಾರವಾಗಿರಿಸಿಕೊಂಡು ಈ ಚಿತ್ರ ನಿರ್ಮಿಸಿದ್ದಾರೆ.

  ಮಗನನ್ನು ಪರೀಕ್ಷಿಸಲು ತಂದೆಯಿಂದ ಪ್ಲಾನ್

  ಚಿತ್ರದಲ್ಲಿ ಜೇಮ್ಸ್ ಅವರು ಫ್ರ್ಯಾಂಕ್ಲಿನ್ ಎಂಬ ತರುಣನ ಪಾತ್ರ ನಿರ್ವಹಿಸಿದ್ದು ಆ ಪಾತ್ರದ ತಂದೆಯಾಗಿ ನಿರ್ವಹಿಸಿದ ಪಾತ್ರದ ಹೆಸರು ಚಕ್ ಎಂದಾಗಿರುತ್ತದೆ. ಫ್ರ್ಯಾಂಕ್ಲಿನ್ ಒಂದೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸ್ನೇಹಿತರ ಪಟ್ಟಿಯಲ್ಲಿದ್ದ ತನ್ನ ತಂದೆ ಚಕ್ ಅವರನ್ನು ಬ್ಲಾಕ್ ಮಾಡುತ್ತಾರೆ. ಆಗ ತಂದೆ ಚಕ್ ಅವರಿಗೆ ಮಗನ ಮೇಲೆ ಸಂದೇಹ ಉಂಟಾಗುತ್ತದೆ. ತನ್ನ ಮಗ ಸರಿಯಾಗಿರುವನೇ ಅಥವಾ ಇನ್ನೇನಾದರೂ ವಿಷಯ ಇದೆಯೇ ಎಂಬುದನ್ನು ಪರೀಕ್ಷಿಸಲು ಚಕ್, ಬೆಕ್ಕಾ ಎಂಬ ಹೆಸರಿನಲ್ಲಿ ಒಬ್ಬ ಸುಂದರ ಯುವತಿಯ ನಕಲಿ ಖಾತೆ ಸೃಷ್ಟಿಸಿಕೊಂಡು ಸ್ವತಃ ತನ್ನ ಮಗನ ಸ್ನೇಹ ಬಯಸುತ್ತಾರೆ.

  ನಕಲಿ ಯುವತಿ ಜೊತೆ ಯುವಕನ ಪ್ರೇಮ!

  ಇತ್ತ ಮಗ ಬೆಕ್ಕಾ ಮೇಲೆ ಆಕರ್ಷಿತನಾಗಿ ಅವಳ ಸ್ನೇಹ ಸಂಪಾದಿಸಿ ಅವಳ ಜೊತೆ ಚಾಟ್ ಮಾಡಲಾರಂಭಿಸುತ್ತಾನೆ ಹಾಗೂ ಅವಳ ಪ್ರೀತಿಯಲ್ಲಿ ಬೀಳುತ್ತಾನೆ. ಮುಂದೆ ಏನಾಗುತ್ತದೆ ಎಂಬುದನ್ನು ನೀವು ಚಿತ್ರ ವೀಕ್ಷಿಸಿದಾಗಲೇ ತಿಳಿಯುತ್ತದೆ.

  ಇದನ್ನೂ ಓದಿ: Success Story: ಅಂದು ಕೋವಿಡ್‌ ವೇಳೆ ಕೆಲಸ ಕಳ್ಕೊಂಡ್ರು, ಇಂದು ಕೇಟರಿಂಗ್ ಮಾಡಿ ಸಕ್ಸಸ್ ಆದ್ರು! ಇದು ಸಾಧಕ ದಂಪತಿಯ ಸಾಹಸದ ಕಥೆ

  ಒಟ್ಟಾರೆಯಾಗಿ ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದ್ದು ತನ್ನ ಜೊತೆಯೇ ನಡೆದಿರುವ ಈ ಘಟನೆಯನ್ನು ಜೇಮ್ಸ್ ಅವರು ಈಗ ಮಾಧ್ಯಮದ ಮುಂದೆ ವಿವರಿಸಿ ಹೇಳಿದ್ದಾರೆ. ಏನೇ ಆಗಲಿ, ಈ ರೀತಿಯ ಸಹಜವಲ್ಲದ, ಅನೈತಿಕತೆಯ ಘಟನೆಗಳು ಸಹ ಸಾಮಾಜಿಕ ಮಾಧ್ಯಮಗಳಿಂದ ಸಂಭವಿಸುವ ಸಾಧ್ಯತೆ ಇರುವುದನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ, ಇಂದಿನ ಯುವಕರು ಪ್ರೀತಿ-ಪ್ರೇಮಗಳಂತಹ ಉನ್ಮಾದದಲ್ಲಿ ಎಚ್ಚರ ತಪ್ಪಿದರೆ ಅನಾಹುತ ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನೂ ಈ ಘಟನೆ ಹಾಗೂ ಚಿತ್ರ ನೀಡುತ್ತಿದೆ.
  Published by:Annappa Achari
  First published: