Rooster: ಸತ್ತುಹೋದ ಹುಂಜದ 13ನೇ ದಿನದ ಕಾರ್ಯ ಆಚರಿಸಿದ ಕುಟುಂಬ! ಅಂತದ್ದೇನು ಸಾಧನೆ ಮಾಡಿದೆ ಇದು

ಸಾಮಾನ್ಯವಾಗಿ ತೀರಿಕೊಂಡ ವ್ಯಕ್ತಿಯ ಅಂತಿಮ ವಿಧಿ-ವಿಧಾನಗಳ ಭಾಗವಾಗಿ ಹದಿಮೂರನೇ ದಿನದ ಕಾರ್ಯವನ್ನು ಮಾಡುವುದರ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಹಲವರು ಇದನ್ನು ವೈಕುಂಠ ಸಮಾರಾಧನೆ ಎಂತಲೂ ಕರೆಯುತ್ತಾರೆ ಹಾಗೂ ಉತ್ತರ ಭಾರತದಲ್ಲಿ ಈ ಕಾರ್ಯವನ್ನು "ತೇರಹವಿ" ಎಂಬ ಹೆಸರಿನಿಂದಲೇ ಕರೆಯುತ್ತಾರೆ. ಈಗ ಇದನ್ನೇಕೆ ಹೇಳ್ತಿದ್ದೀವಿ ಗೊತ್ತಾ ಈ ಸ್ಟೋರಿ ಒಮ್ಮೆ ಓದಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸಾಮಾನ್ಯವಾಗಿ ತೀರಿಕೊಂಡ ವ್ಯಕ್ತಿಯ (Person) ಅಂತಿಮ ವಿಧಿ-ವಿಧಾನಗಳ ಭಾಗವಾಗಿ ಹದಿಮೂರನೇ ದಿನದ ಕಾರ್ಯವನ್ನು ಮಾಡುವುದರ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಹಲವರು ಇದನ್ನು ವೈಕುಂಠ ಸಮಾರಾಧನೆ ಎಂತಲೂ ಕರೆಯುತ್ತಾರೆ ಹಾಗೂ ಉತ್ತರ ಭಾರತದಲ್ಲಿ ಈ ಕಾರ್ಯವನ್ನು "ತೇರಹವಿ" (Terahvin) ಎಂಬ ಹೆಸರಿನಿಂದಲೇ ಕರೆಯುತ್ತಾರೆ. ಈ ರೀತಿಯ ಕಾರ್ಯಗಳು ಕೇವಲ ಮನುಷ್ಯರಾದವರಿಗೆ ಮಾತ್ರ ಮಾಡಿಕೊಂಡು ಬರಲಾಗುತ್ತದೆ. ಆದರೆ, ಉತ್ತರ ಪ್ರದೇಶದ (Uttar Pradesh) ಪ್ರತಾಪ್‍ಗಢ್ ಜಿಲ್ಲೆಯ ಕುಟುಂಬವೊಂದು (Family) ತಾವು ಸಾಕಿದ್ದ ಹುಂಜ (Rooster) ತೀರಿಹೋಗಿದ್ದು ಅದರ ತೆರಹವಿ ಕಾರ್ಯವನ್ನು ಮಾಡಿರುವುದು ಈಗ ಹಲವರ ಗಮನ ಸೆಳೆಯುವಂತೆ ಮಾಡಿದೆ.

ಅಷ್ಟಕ್ಕೂ ಹುಂಜ ಮಾಡಿರುವ ಆ ಅದ್ಭುತ ಕೆಲಸ ಏನು
ಇನ್ನೂ ಅಚ್ಚರಿಯ ಸಂಗತಿ ಎಂದರೆ ಗ್ರಾಮದ ಸುಮಾರು ಐದು ನೂರು ಜನರು ಈ ಕುಟುಂಬ ತಮ್ಮ ಹುಂಜದ ಕಾರ್ಯ ಮಾಡಿದ್ದ ಸಂದರ್ಭದಲ್ಲಿ ಹಾಜರಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆನ್ನಲಾಗಿದೆ. ಅಷ್ಟಕ್ಕೂ ಮನುಷ್ಯನಿಗಷ್ಟೇ ಮಾಡಲಾಗುವ ಈ ರೀತಿಯ ಕಾರ್ಯವನ್ನು ಒಂದು ಹುಂಜಕ್ಕಾಗಿ ಮಾಡಲು ಕಾರಣ ಏನು? ಆ ಹುಂಜ ಅಷ್ಟೊಂದು ಮಹತ್ತರವಾದ ಕೆಲಸ ಮಾಡಿದ್ದಾದರೂ ಏನು..ಎಂಬ ಹಲವು ಪ್ರಶ್ನೆಗಳು ನಿಮ್ಮಲ್ಲಿ ಮೂಡಿರಲೂ ಬಹುದು. ಹೌದು, ಆ ಕುಟುಂಬ ಸಾಕಿದ್ದ ಹುಂಜ ಮಾಡಿದ ಕೆಲಸ ಸಾಮಾನ್ಯವಾದುದಲ್ಲ. ಬದಲಾಗಿ ಒಂದು ಜೀವ ಉಳಿಸಲು ಅದು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಕಾರಣ ಕುಟುಂಬವು ಅದರ ಗೌರವಾರ್ಥ ಈ ಕಾರ್ಯ ಮಾಡಿದ್ದಾರೆ.

ಆಗಿದ್ದೇನು?
ಹುಂಜದ ಹದಿಮೂರನೇ ದಿನದ ಕಾರ್ಯ ನಿರ್ವಹಿಸಿದ ಕುಟುಂಬದ ಯಜಮಾನರಾದ ಡಾ. ಸಾಲಿಕ್ರಾಮ್ ಸರೋಜ್ ಅವರು ಹೇಳುವಂತೆ, ಅವರು ಸಾಕಿದ್ದ ಲಾಲಿ ಎಂಬ ಹೆಸರಿನ ಹುಂಜವನ್ನು ಜುಲೈ 7ರಂದು ಮನೆಯ ಹಿತ್ತಲಿನಲ್ಲಿ ಕಟ್ಟಲಾಗಿದ್ದ ಕುರಿಮರಿಯ ರಕ್ಷಣೆ ಮಾಡಲೆಂದು ಹೊರ ಬಿಡಲಾಗಿತ್ತು. ಮನೆಯ ಸದಸ್ಯರು ಮನೆಯ ಮುಂಭಾಗದಲ್ಲಿ ಸಮಯ ಕಳೆಯುತ್ತಿದ್ದರು. ಈ ಸಂದರ್ಭದಲ್ಲಿ ಬೀದಿ ನಾಯಿಯೊಂದು ಮನೆಯ ಹಿತ್ತಲಿನಲ್ಲಿ ಕಟ್ಟಿ ಹಾಕಲಾಗಿದ್ದ ಕುರಿಮರಿಯ ಮೇಲೆ ಆಕ್ರಮಣ ಮಾಡಿದೆ. ಆಗ ಅಲ್ಲಿದ್ದ ಹುಂಜವು ಅದನ್ನು ತಡೆಯಲು ತಾನು ಆ ನಾಯಿಯ ಮೇಲೆ ಆಕ್ರಮಣ ಮಾಡಿದೆ. ಈ ಸಂದರ್ಭದಲ್ಲಿ ಶಬ್ದ ಉಂಟಾದಾಗ ಮನೆಯ ಸದಸ್ಯರೆಲ್ಲರೂ ಹಿತ್ತಲಿಗೆ ಏನಾಯಿತೆಂದು ನೋಡಲು ಧಾವಿಸಿದ್ದಾರೆ.

ಇದನ್ನೂ ಓದಿ: Optical Illusion: 10 ಸೆಕೆಂಡ್​​ನಲ್ಲಿ ಜೀಬ್ರಾಗಳ ಗುಂಪಿನಲ್ಲಿರುವ ಹುಲಿಯನ್ನು ಗುರುತಿಸಿದ್ರೆ ನಿಮ್ಮ ಮೆದುಳು ಸಖತ್ ಶಾರ್ಪ್ ಎಂದರ್ಥ!

ಲಾಲಿಯು ಎಷ್ಟು ಧೈರ್ಯಶಾಲಿ ಆಗಿತ್ತೆಂದರೆ ಸ್ವತಃ ಅದೊಂದೇ ನಾಯಿಯೊಂದಿಗೆ ಕಾದಾಡಿ ಅದನ್ನು ಹಿಮ್ಮೆಟಿಸಿದೆ. ತದನಂತರ ಇತರೆ ಬೀದಿ ನಾಯಿಗಳು ಸೇರಿ ಲಾಲಿಯ ಮೇಲೆ ಆಕ್ರಮಣ ಮಾಡಿ ಅದು ಗಂಭೀರವಾಗಿ ಗಾಯಗೊಳ್ಳುವಂತೆ ಮಾಡಿದವು ಎಂದು ಕುಟುಂಬ ಸದಸ್ಯರು ಹೇಳಿಕೊಂಡಿದ್ದಾರೆ. ತದನಂತರ ಮರುದಿನ ಹುಂಜವು ಗಾಯಗಳಿಂದ ಚೇತರಿಸಿಕೊಳ್ಳದೆ ಪ್ರಾಣ ಬಿಟ್ಟಿದೆ. ಆಗ ಮನೆಯ ಸದಸ್ಯರೆಲ್ಲರೂ ಸೇರಿ ಮನುಷ್ಯನಿಗೆ ಮಾಡಲಾಗುವಂತೆಯೇ ಅದಕ್ಕೂ ಅಂತಿಮ ವಿಧಿ-ವಿಧಾನಗಳನ್ನು ಮಾಡಿ ಮುಗಿಸಿ ಮನೆಯ ಹತ್ತಿರದಲ್ಲೇ ಹೂಳಿದ್ದಾರೆ.

ಹುಂಜದ ಹದಿಮೂರನೇ ದಿನದ ಕಾರ್ಯ ಆಚರಿಸಿದ ಕುಟುಂಬಸ್ಥರು
ಅಂತ್ಯಕ್ರಿಯೆ ಮಾಡುವ ಸಂದರ್ಭದಲ್ಲಿಯೇ ಮನೆಯ ಎಲ್ಲ ಸದಸ್ಯರು ಒಮ್ಮತದಿಂದ ಅದರ ಹದಿಮೂರನೇ ದಿನದ ಕಾರ್ಯವನ್ನೂ ಸಹ ಮಾಡುವ ನಿರ್ಣಯ ತೆಗೆದುಕೊಂಡಿದ್ದಾರೆ. ಅದರ ಪ್ರಯುಕ್ತ ಲಾಲಿ ಹುಂಜದ ಹದಿಮೂರನೇ ದಿನದ ಕಾರ್ಯವನ್ನು ಶಾಸ್ತ್ರಬದ್ಧವಾಗಿ ನೆರವೇರಿಸಲಾಗಿದ್ದು ಈ ಕಾರ್ಯದಲ್ಲಿ ಲಾಲಿ ಆತ್ಮಕ್ಕೆ ಶಾಂತಿ ಕೋರಿ ಗ್ರಾಮದ 500 ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದ ಬಗ್ಗೆ ತಿಳಿದುಬಂದಿದೆ. ಇದು ಕೆಲವೊಮ್ಮೆ ಮನುಷ್ಯ ತಾನು ಸಾಕುವ ಪ್ರಾಣಿ-ಪಕ್ಷಿಗಳನ್ನು ಹೇಗೆ ತಮ್ಮ ಕುಟುಂಬದ ಇನ್ನೊಬ್ಬ ಸದಸ್ಯನಂತೆಯೇ ಕಾಣುತ್ತಾನೆ ಹಾಗೂ ಅದರ ಪ್ರತಿ ಅಷ್ಟು ನಿಷ್ಠೆ ಹೊಂದಿರುತ್ತಾನೆ ಎಂದು ತೋರಿಸುವ ಉದಾಹರಣೆಯಾಗಿ ಇದನ್ನು ಗಮನಿಸಬಹುದು.

ಇಂಥದ್ದೇ ಮತ್ತೊಂದು ಘಟನೆ 
ಈ ಹಿಂದೆ ಇದೇ ರೀತಿಯಲ್ಲಿ ವರದಿಯಾದ ಮತ್ತೊಂದು ಘಟನೆಯಲ್ಲಿ ಒಡಿಶಾ ರಾಜ್ಯದ ಜೈಪುರ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳು ಸೇರಿ ಅವರು ಹಚ್ಚಿಕೊಂಡಿದ್ದ ಕೋತಿಯೊಂದು ತೀರಿಕೊಂಡ ನಂತರ ಹಿಂದು ಸಂಪ್ರದಾಯದ ಪ್ರಕಾರ ಅದರ ಅಂತಿಮ ಕ್ರಿಯೆಯನ್ನು ನಿರ್ವಹಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಬಲಿಚಂದ್ರಪುರ ಪೊಲೀಸ್ ಠಾಣೆಯ ಕಂಪೌಂಡಿನಲ್ಲಿ ಕೋತಿಯೊಂದು ವಾಸಿಸುತ್ತಿತ್ತು ಹಾಗೂ ಅದು ಠಾಣೆಯ ಪೊಲೀಸ್ ಸಿಬ್ಬಂದಿಗಳೊಂದಿಗೆ ಸಾಕಷ್ಟು ಒಡನಾಟ ಬೆಳೆಸಿಕೊಂಡಿತ್ತು. ಅದು ಅಲ್ಲಿನ ಆವರಣದಲ್ಲಿ ನಿರ್ಭಯವಾಗಿ ಎಲ್ಲೆಂದರಲ್ಲಿ ನಡೆದಾಡುತ್ತಿತ್ತು ಹಾಗೂ ಠಾಣೆಯ ಪೊಲೀಸ್ ಸಿಬ್ಬಂದಿ ಸಹ ಅಷ್ಟೇ ಅದರೊಂದಿಗೆ ಸಾಕಷ್ಟು ಸಲುಗೆಯಿಂದ ಇದ್ದರು.

ಇದನ್ನೂ ಓದಿ:  Whale Vomit: ಕೇರಳದ ಮೀನುಗಾರರಿಗೆ ಸಿಕ್ತು 28 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ!

ಆದರೆ, ಅದರ ಹಟಾಟ್ ಸಾವು ಪೊಲೀಸ್ ಸಿಬ್ಬಂದಿ ಬೇಸರಗೊಳ್ಳುವಂತೆ ಮಾಡಿತ್ತು. ಕೊನೆಗೆ ಅವರು ಅದರ ಆತ್ಮಕ್ಕೆ ಶಾಂತಿ ಸಿಗಲೆಂದು ಅದರ ಶವಕ್ಕೆ ಹೂಮಾಲೆ ಹಾಕಿ ಮೆರವಣಿಗೆ ಮೂಲಕ ಸಾಗಿ ಮಣ್ಣಿನಲ್ಲಿ ಹೂಳಿ ಹಿಂದು ವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಿದ್ದರು.
Published by:Ashwini Prabhu
First published: