Relationship: ಹೌಸ್ ಕೀಪಿಂಗ್ ಸಿಬ್ಬಂದಿಯನ್ನೇ ಮದುವೆಯಾದ ಡಾಕ್ಟರ್: ಹೀಗೆ ಶುರುವಾಯ್ತು ಇವರ ಪ್ರೇಮ್ ಕಹಾನಿ!

ಈ ಪ್ರೀತಿ ಎನ್ನುವುದು ಯಾವಾಗ? ಯಾರ ಜೊತೆ? ಎಲ್ಲಿ? ಆಗುತ್ತದೆ ಅಂತ ಯಾರು ಸಹ ಊಹಿಸಲು ಸಾಧ್ಯವಿಲ್ಲ. ಇಲ್ಲೊಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ. ಇದರಲ್ಲಿ ಪಾಕಿಸ್ತಾನದ ಜೋಡಿಯೊಂದು ತಮ್ಮ ಪ್ರೀತಿಗೆ ಸವಾಲಾಗಿರುವ ಅನೇಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಸಹ ಮದುವೆ ಆಗಿದ್ದಾರೆ. ಈ ಪ್ರೀತಿ ಎನ್ನುವುದು ಎಂತವರನ್ನು ಒಟ್ಟಿಗೆ ತರಬಲ್ಲದು ಎಂದು ಮತ್ತೊಮ್ಮೆ ಸಾಬೀತಾಗಿದೆ. 

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈ ಪ್ರೀತಿ (Love) ಎಂಬ ಪದವನ್ನು ಕೇಳಿದ ತಕ್ಷಣ ಯಾರಿಗೆ ತಾನೇ ರೋಮಾಂಚನವಾಗುವುದಿಲ್ಲ ಹೇಳಿ? ಜಗತ್ತಿನಲ್ಲಿ (world) ನಿಜವಾದ ಪ್ರೀತಿ ನಮಗೆ ಸಿಕ್ಕಿಬಿಟ್ಟರೆ ನಾವು ಏನನ್ನಾದರೂ ಗೆಲ್ಲಬಹುದು ಮತ್ತು ಎಂತಹ ಕಠಿಣವಾದ ಸಮಸ್ಯೆಗಳನ್ನು ಸಹ ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಈ ಪ್ರೀತಿ ಎನ್ನುವುದು ಯಾವಾಗ? ಯಾರ ಜೊತೆ? ಎಲ್ಲಿ? ಆಗುತ್ತದೆ ಅಂತ ಯಾರು ಸಹ ಊಹಿಸಲು ಸಾಧ್ಯವಿಲ್ಲ. ಇಲ್ಲೊಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social Media) ಹರಿದಾಡುತ್ತಿದೆ ನೋಡಿ. ಇದರಲ್ಲಿ ಪಾಕಿಸ್ತಾನದ (Pakistan) ಜೋಡಿಯೊಂದು ತಮ್ಮ ಪ್ರೀತಿಗೆ ಸವಾಲಾಗಿರುವ ಅನೇಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಸಹ ಮದುವೆ (Marriage) ಆಗಿದ್ದಾರೆ. ಈ ಪ್ರೀತಿ ಎನ್ನುವುದು ಎಂತವರನ್ನು ಒಟ್ಟಿಗೆ ತರಬಲ್ಲದು ಎಂದು ಮತ್ತೊಮ್ಮೆ ಸಾಬೀತಾಗಿದೆ. 

ಹೌಸ್ ಕೀಪಿಂಗ್ ಸಿಬ್ಬಂದಿಯನ್ನೇ ಮದ್ವೆಯಾಗ್ಬಿಟ್ರು ಡಾಕ್ಟರ್
ಇವರಿಬ್ಬರ ವಿಶಿಷ್ಟ ಪ್ರೇಮಕಥೆ ಅಂತರ್ಜಾಲದಲ್ಲಿ ಈಗ ವೈರಲ್ ಆಗಿದೆ ಮತ್ತು ನೆಟ್ಟಿಗರನ್ನು ಇದನ್ನು ಓದಿ ಸಂತೋಷ ಪಡುತ್ತಿದ್ದಾರೆ. ಎಂಬಿಬಿಎಸ್ ವೈದ್ಯರಾದ ಕಿಶ್ವರ್ ಸಾಹಿಬಾ ಅವರು ಅದೇ ಆಸ್ಪತ್ರೆಯ ಹೌಸ್ ಕೀಪಿಂಗ್ ಸಿಬ್ಬಂದಿಯಾದ ಶಹಜಾದ್ ಅವರಿಗೆ ಪ್ರಪೋಸ್ ಮಾಡಿದಾಗ ಇವರ ಪ್ರೇಮಕಥೆ ಶುರುವಾಯಿತು ನೋಡಿ.

"ಮೇರಾ ಪಾಕಿಸ್ತಾನ್" ಯೂಟ್ಯೂಬ್ ಚಾನೆಲ್ ನಲ್ಲಿ ಈ ದಂಪತಿಗಳು ತಮ್ಮ ವಿಶಿಷ್ಟ ಪ್ರೇಮಕಥೆಯನ್ನು ಹಂಚಿಕೊಂಡಿದ್ದಾರೆ. ಒಕಾರಾ ತಹಸಿಲ್ ನ ಪಾಕಿಸ್ತಾನದ ದಿಪಾಲ್ಪುರದಲ್ಲಿ ವಾಸಿಸುತ್ತಿರುವ ಈ ಜೋಡಿ ಯೂಟ್ಯೂಬರ್ ಹರೀಶ್ ಭಟ್ಟಿ ಅವರೊಂದಿಗೆ ಮಾತನಾಡುತ್ತಾ “ಪ್ರೇಮಕ್ಕೆ ಕೆಲವು ಸವಾಲುಗಳು ಅಡ್ಡಿಯಾದರೂ ಹೇಗೆ ಇವರಿಬ್ಬರು ತಮ್ಮ ಪ್ರೇಮವನ್ನು ಮುಂದುವರೆಸಿಕೊಂಡು ಹೋದರು” ಎಂಬುದನ್ನು ಬಹಿರಂಗಪಡಿಸಿದರು.

ಇದನ್ನೂ ಓದಿ: Viral News: ಪ್ರೀತಿಪಾತ್ರರ ಮೃತ ದೇಹವನ್ನು ತಿಂದರೆ, ಶತ್ರುವಿನ ಮೃತ ದೇಹವನ್ನು ಏನ್​ ಮಾಡ್ತಾರೆ ನೋಡಿ ಈ ಬುಡಕಟ್ಟು ಜನಾಂಗದವರು

ಈ ಕ್ಲಿಪ್ ನಲ್ಲಿ ಶಹಜಾದ್ ಅವರು ಇಂತಹ ಒಂದು ಒಳ್ಳೆಯ ಘಟನೆ ಅವರ ಜೀವನದಲ್ಲಿ ನಡೆಯುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಕಿಶ್ವರ್, ತನ್ನ ಗಂಡನ ವ್ಯಕ್ತಿತ್ವವನ್ನು ಅವಳು ಎಷ್ಟು ಮೆಚ್ಚಿಕೊಂಡಿದ್ದಾಳೆಂದು ಉಲ್ಲೇಖಿಸಿದಳು.

ಇವರಿಬ್ಬರ ಲವ್ ಕಹಾನಿ ಶುರುವಾಗಿದ್ದು ಹೇಗೆ? 
ತಾನು ಮೊದಲ ಬಾರಿಗೆ ಶಹಜಾದ್ ನನ್ನು ಭೇಟಿಯಾದಾಗ ಅವನು "ಚಾಯ್ ವಾಲಾ" ಅಥವಾ ಕ್ಲೀನರ್ ಎಂದು ನನಗೆ ಅನ್ನಿಸಲಿಲ್ಲ ಎಂದು ಕಿಶ್ವರ್ ಹೇಳಿದರು. ಅವನು ತನ್ನದೇ ಆದ ವ್ಯವಹಾರವನ್ನು ನಡೆಸುತ್ತಿದ್ದನು ಮತ್ತು ತುಂಬಾ ಸರಳನಾಗಿದ್ದುದರಿಂದ ಅವರು ಅವನಿಂದ ಪ್ರಭಾವಿತಳಾದರು ಎಂದು ಅವರು ಹೇಳಿಕೊಂಡರು. ಅವರು ಶಹಜಾದ್ ಗೆ ಮೊದಲು ಪ್ರಪೋಸ್ ಮಾಡಿದ್ದಾರೆ ಎಂದು ವೈದ್ಯರು ಬಹಿರಂಗಪಡಿಸಿದರು, ಏಕೆಂದರೆ ಅವನಂತಹ ಒಳ್ಳೆಯ ವ್ಯಕ್ತಿಯನ್ನು ಮತ್ತು ಸಂಗಾತಿಯನ್ನು ಕಳೆದುಕೊಳ್ಳಲು ಈಕೆ ಇಷ್ಟ ಪಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ಅವರು ತಮ್ಮ ಜೀವನದ ಎಲ್ಲಾ ನಿರ್ಧಾರಗಳನ್ನು ಕೇವಲ ಒಂದೇ ದಿನದಲ್ಲಿ ತೆಗೆದುಕೊಂಡಿದ್ದಾರೆ ಎಂದು ಕಿಶ್ವರ್ ಹೇಳಿದರು.

[embed]https://youtu.be/tdgEXM9Leqc[/embed]

ಜನರು ಸಾಮಾನ್ಯವಾಗಿ ಈ ಅಂತಸ್ತಿನ ಆಧಾರದ ಮೇಲೆ ಮದುವೆಯಾಗುತ್ತಿದ್ದರೂ, ಕಿಶ್ವರ್ ತನಗೆ ತನ್ನ ಹೃದಯವನ್ನು ನೀಡಿದಳು ಎಂದು ಶಹಜಾದ್ ಪ್ರತ್ಯೇಕವಾಗಿ ಹೇಳಿದರು. ಇದರಲ್ಲಿ ಅದೃಷ್ಟವೊಂದೇ ಕಾರಣ ಎಂದು ಅವರು ಹೇಳಿದರು. ಇದಲ್ಲದೆ, ಅವರು ಇಬ್ಬರೂ ಹೇಗೆ ಭೇಟಿಯಾದರು ಮತ್ತು ಹೇಗೆ ಪರಸ್ಪರ ಮಾತನಾಡಲು ಪ್ರಾರಂಭಿಸಿದರು ಎಂಬುದನ್ನು ಸಹ ಅವರು ಬಹಿರಂಗಪಡಿಸಿದರು. ಅವರು ಆಸ್ಪತ್ರೆಯ ಕೋಣೆಗಳನ್ನು ಸ್ವಚ್ಛಗೊಳಿಸುತ್ತಿದ್ದರು ಮತ್ತು ಮೂವರು ವೈದ್ಯರ ಅಲ್ಲಿಯೇ ಕುಳಿತು ಚಹಾವನ್ನು ಕುಡಿಯುತ್ತಿದ್ದರು ಎಂದು ಶಹಜಾದ್ ಹೇಳಿದರು. ಒಂದು ದಿನ ಕಿಶ್ವರ್ ತನ್ನ ಫೋನ್ ನಂಬರ್ ಅನ್ನು ಕೇಳಿದಳು, ನಂತರ ನಾವಿಬ್ಬರೂ ಫೋನ್ ನಲ್ಲಿ ಪರಸ್ಪರ ಮಾತನಾಡಲು ಪ್ರಾರಂಭಿಸಿದೆವು ಅಂತ ಇವರು ಹೇಳಿದರು.

ವಾಟ್ಸಾಪ್ ಸ್ಟೇಟಸ್ ನೋಡಿ ಪ್ರೀತಿ ಹೆಚ್ಚಾಯ್ತಂತೆ 
ನಂತರ ಕಿಶ್ವರ್ ಗೆ ಶಹಜಾದ್ ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಪೋಸ್ಟ್ ಮಾಡಿದ ಪೋಸ್ಟ್ ಇಷ್ಟವಾಯಿತು ಮತ್ತು ಆ ದಿನದ ನಂತರ, ಕಿಶ್ವರ್ ತನ್ನನ್ನು ಆಸ್ಪತ್ರೆಯಲ್ಲಿಯೇ ಪ್ರಪೋಸ್ ಮಾಡಿದಳು ಎಂದು ಶಹಜಾದ್ ಹೇಳಿದರು. ಅವರು ಅದನ್ನು ಕೇಳಿದ ತಕ್ಷಣ ನಂಬಲು ಸಾಧ್ಯವಾಗದ ಕಾರಣ ಸ್ವಲ್ಪ ಆಘಾತಕ್ಕೊಳಗಾದರು ಎಂದು ಅವರು ಬಹಿರಂಗಪಡಿಸಿದರು. ಈ ವಿಷಯ ಕೇಳಿದ ನಂತರ, ಅವನಿಗೆ ಜ್ವರವೂ ಬಂದಿತು. ಆದರೆ ನಂತರ ಅವರು ಕಿಶ್ವರ್ ಅವರನ್ನು ನೋಡಲು ಹೋದರು.

ಇದನ್ನೂ ಓದಿ: Dream Job: ಜನರೊಂದಿಗೆ ಒಡನಾಟ ಮಾಡೋದೇ ಇವರ ಕೆಲಸ ಅಂತೆ! ಅದರಲ್ಲೇ ನಡೆಯತ್ತೆ ಸಂಪಾದನೆ

ಈ ಕ್ಲಿಪ್ ನಲ್ಲಿ ಕಿಶ್ವರ್ ಮದುವೆಯಾದ ನಂತರ, ಕಿಶ್ವರ್ ತನ್ನ ಸ್ನೇಹಿತರ ನಿಂದನೆಯನ್ನು ಸಹಿಸಬೇಕಾದ ಕಾರಣ ಆಸ್ಪತ್ರೆಯಲ್ಲಿ ತನ್ನ ಕೆಲಸವನ್ನು ತೊರೆದರು ಎಂದು ಹೇಳಿದರು. ಈ ಜೋಡಿ ಈಗ ಹತ್ತಿರದಲ್ಲಿಯೇ ಒಂದು ಪುಟ್ಟ ಕ್ಲಿನಿಕ್ ತೆರೆಯಲು ಯೋಜಿಸಿದೆ. ಅವರು ಯೂಟ್ಯೂಬ್ ಚಾನೆಲ್ ಅನ್ನು ಸಹ ನಿರ್ವಹಿಸುತ್ತಾರೆ, ಅಲ್ಲಿ ಅವರು ತಮ್ಮ ಜೀವನದ ಪ್ರತಿಯೊಂದು ಅಂಶವನ್ನು ಹಂಚಿಕೊಳ್ಳುತ್ತಾರೆ.

ಸಂತೋಷ ವ್ಯಕ್ತ ಪಡಿಸಿದ ನೆಟ್ಟಿಗರು
ಅವರ ಹೃದಯಸ್ಪರ್ಶಿ ಪ್ರೇಮಕಥೆ ನೆಟ್ಟಿಗರನ್ನು ತುಂಬಾನೇ ಸಂತೋಷಪಡಿಸಿದೆ. ಒಬ್ಬ ಬಳಕೆದಾರರು "ಅದ್ಭುತ, ಸೌಂದರ್ಯವು ನೋಡುಗನ ಕಣ್ಣಿನಲ್ಲಿದೆ" ಅಂತ ಬರೆದಿದ್ದಾರೆ. ಇನ್ನೊಬ್ಬರು "ಅದ್ಭುತ ಪ್ರೇಮಕಥೆ.. ಸುಂದರ ಜೋಡಿ” ಅಂತ ಕಾಮೆಂಟ್ ಮಾಡಿದ್ದಾರೆ. ಮೂರನೆಯವರು "ಬ್ಯೂಟಿಫುಲ್ ಕಪಲ್" ಎಂದು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: