ಮಹಿಳಾ ರೋಗಿಗಳ ಮೇಲೆ ವೈದ್ಯನಿಂದ ಅತ್ಯಾಚಾರ; ವಿಡಿಯೋದಿಂದ ಬಯಲಾಯ್ತು ಡಾಕ್ಟರ್​ನ ನಿಜಬಣ್ಣ

ಅಷ್ಟಕ್ಕೂ ಈ ಪ್ರಕರಣ ಬೆಳಕಿಗೆ ಬಂದಿದ್ಧಾದರೂ ಹೇಗೆ ಅಂತೀರಾ..? ಆಸ್ಪತ್ರೆಯಲ್ಲಿದ್ದ ಕಾಂಪೌಂಡರ್ ಆಸ್ಪತ್ರೆಗೆ ಬರುವ ರೋಗಿ ಜೊತೆ ದೈಹಿಕ ಸಂಬಂಧ ಬೆಳೆಸುತ್ತಿದ್ದ ವೈದ್ಯನ ಕೃತ್ಯವನ್ನು ವಿಡಿಯೋ ಮಾಡಿದ್ಧಾನೆ. ಇದರಿಂದ ವೈದ್ಯ ಸಿಕ್ಕಿಬಿದ್ದಿದ್ಧಾನೆ ಎನ್ನಲಾಗಿದೆ.

news18
Updated:February 3, 2019, 1:13 PM IST
ಮಹಿಳಾ ರೋಗಿಗಳ ಮೇಲೆ ವೈದ್ಯನಿಂದ ಅತ್ಯಾಚಾರ; ವಿಡಿಯೋದಿಂದ ಬಯಲಾಯ್ತು ಡಾಕ್ಟರ್​ನ ನಿಜಬಣ್ಣ
ಪ್ರಾತಿನಿಧಿಕ ಚಿತ್ರ
news18
Updated: February 3, 2019, 1:13 PM IST
ಗುಜರಾತ್​,(ಫೆ.03): 'ವೈದ್ಯೋ ನಾರಾಯಣೋ ಹರಿ' ಎಂಬ ಮಾತಿದೆ. ಅಂದರೆ ವೈದ್ಯರನ್ನು ದೇವರ ಸ್ಥಾನದಲ್ಲಿ ನೋಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ವೈದ್ಯರಿಗೆ ಈ ಮಾತು ಸೂಕ್ತವಲ್ಲ. ದೇವರೆಂದು ನಂಬಿ ಕಾಯಿಲೆ ಗುಣಪಡಿಸುತ್ತಾರೆಂದು ಹೋದರೆ ದುಷ್ಕೃತ್ಯ ಎಸಗುವ ವೈದ್ಯರ ಸಂಖ್ಯೆ ಹೆಚ್ಚಾಗುತ್ತಿದೆ. ಗುಜರಾತ್​ನಲ್ಲಿ ನಡೆದ ಒಂದು ಘಟನೆಯೂ ಇಂತದ್ದೇ. ಚಿಕಿತ್ಸೆಗಾಗಿ ತನ್ನ ಬಳಿ ಬರುವ ಮಹಿಳಾ ರೋಗಿಗಳ ಮೇಲೆ ವೈದ್ಯನೊಬ್ಬ ಅತ್ಯಾಚಾರವೆಸಗಿದ್ದು, ಆತನ ನಿಜಬಣ್ಣ ಬಯಲಾಗಿದೆ.

ಹಳ್ಳಿಯೊಂದರಲ್ಲಿ ಕ್ಲಿನಿಕ್​ ನಡೆಸುತ್ತಿದ್ದ ವೈದ್ಯ ಬಡ ಮಹಿಳೆಯರಿಗೆ ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ಹೇಳಿದ್ದನಂತೆ. ಅನಾರೋಗ್ಯಕ್ಕೆ ಒಳಗಾದ ಮಹಿಳೆಯರು ಉಚಿತ ಚಿಕಿತ್ಸೆ ನೀಡುತ್ತಾರೆಂದು ನಂಬಿ ಆಸ್ಪತ್ರೆಗೆ ಹೋದರೆ ಅತ್ಯಾಚಾರ ಎಸಗಿದ್ಧಾನೆ.

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೇಲೆ ಗ್ಯಾಂಗ್​ ರೇಪ್​..!

ಅಷ್ಟಕ್ಕೂ ಈ ಪ್ರಕರಣ ಬೆಳಕಿಗೆ ಬಂದಿದ್ಧಾದರೂ ಹೇಗೆ ಅಂತೀರಾ..? ಆಸ್ಪತ್ರೆಯಲ್ಲಿದ್ದ ಕಾಂಪೌಂಡರ್ ಆಸ್ಪತ್ರೆಗೆ ಬರುವ ರೋಗಿ ಜೊತೆ ದೈಹಿಕ ಸಂಬಂಧ ಬೆಳೆಸುತ್ತಿದ್ದ ವೈದ್ಯನ ಕೃತ್ಯವನ್ನು ವಿಡಿಯೋ ಮಾಡಿದ್ಧಾನೆ. ಇದರಿಂದ ವೈದ್ಯ ಸಿಕ್ಕಿಬಿದ್ದಿದ್ಧಾನೆ ಎನ್ನಲಾಗಿದೆ.

ಕಾಂಪೌಂಡರ್​ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ, ಈ ವರೆಗೆ ಸುಮಾರು 135 ವಿಡಿಯೋಗಳನ್ನು ರೆಕಾರ್ಡ್​ ಮಾಡಿರುವುದಾಗಿ ಒಪ್ಪಿಕೊಂಡಿದ್ಧಾನೆ. ಅದರಲ್ಲಿ 25 ವಿಡಿಯೋಗಳನ್ನು ವೈರಲ್​ ಮಾಡಿದ್ದನಂತೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವೈದ್ಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರೋಗ ವಾಸಿ ಮಾಡುತ್ತಾರೆಂಬ ನಂಬಿಕೆಯಿಂದ ಆಸ್ಪತ್ರೆಗೆ ಹೋದ ಮಹಿಳೆಯರ ಮೇಲೆ ಇಂತಹ ದುಷ್ಕೃತ್ಯ ಎಸಗಿರುವುದಕ್ಕೆ ವೈದ್ಯನ ಮೇಲೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ.

First published:February 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ