• Home
  • »
  • News
  • »
  • trend
  • »
  • Viral Photos: ಭಾರತಕ್ಕಾಗಿ ಆಜಾದಿ ಸ್ಯಾಟ್ ನಿರ್ಮಿಸಿದ ಬಾಲಕಿಯರ ಡಿಫರೆಂಟ್ ಫೋಟೋಶೂಟ್! ನೀವೂ ನೋಡಿ

Viral Photos: ಭಾರತಕ್ಕಾಗಿ ಆಜಾದಿ ಸ್ಯಾಟ್ ನಿರ್ಮಿಸಿದ ಬಾಲಕಿಯರ ಡಿಫರೆಂಟ್ ಫೋಟೋಶೂಟ್! ನೀವೂ ನೋಡಿ

ಆಜಾದಿ ಸ್ಯಾಟ್ ನಿರ್ಮಿಸಿದ ಬಾಲಕಿಯರ ಫೋಟೋಶೂಟ್

ಆಜಾದಿ ಸ್ಯಾಟ್ ನಿರ್ಮಿಸಿದ ಬಾಲಕಿಯರ ಫೋಟೋಶೂಟ್

ಉಪಕ್ರಮದಲ್ಲಿ ಇಸ್ರೋದೊಂದಿಗೆ ಕೈಜೋಡಿಸಿದ್ದ ಸ್ಪೇಸ್‌ಕಿಡ್ಜ್ ಇಂಡಿಯಾ ಈಗ ಭಾರತದ ಶಕ್ತಿಶಾಲಿ ಇತಿಹಾಸ ಹಾಗೂ ಬಾಹ್ಯಾಕಾಶ ವಿಜ್ಞಾನದಲ್ಲಿ ದೇಶದ ಪರಾಕ್ರಮವನ್ನು ತೋರಿಸುವ ವಿಶಿಷ್ಟ ಫೋಟೋಶೂಟ್‌ಗಳನ್ನು ಆರಂಭಿಸಿದೆ. ಆಜಾದಿಸ್ಯಾಟ್‌ನಲ್ಲಿ ಕೆಲಸ ಮಾಡಿದ ಆರು ಗ್ರಾಮೀಣ ಯುವ ವಿಜ್ಞಾನಿಗಳ ತಂಡವು ಸ್ಪೇಸ್‌ಕಿಡ್ಜ್ ಇಂಡಿಯಾ ಮುಖ್ಯಸ್ಥೆ ಡಾ. ಶ್ರೀಮತಿ ಕೇಸನ್ ಜತೆಗೂಡಿ ಭಾರತವು ಸಂಸ್ಕೃತಿಯ ಕೇಂದ್ರ ಮಾತ್ರವಲ್ಲ, ವಿಜ್ಞಾನದ ಕೇಂದ್ರವೂ ಆಗಿದೆ ಎಂಬ ಸಂದೇಶವನ್ನು ಸಾರಿದ್ದಾರೆ.

ಮುಂದೆ ಓದಿ ...
  • Share this:

ಸ್ವಾತಂತ್ರ್ಯದ ಕಳೆದ 75 ವರ್ಷಗಳಲ್ಲಿ ಭಾರತವು (India) ವಿಜ್ಞಾನ ಮತ್ತು ಬಾಹ್ಯಾಕಾಶ ಪರಿಶೋಧನೆಯ ವಿಷಯದಲ್ಲಿ ಬಹಳ ದೂರ ಸಾಗಿದೆ. ಈ ಸಾಧನೆಯನ್ನು ಇನ್ನಷ್ಟು ವಿಶೇಷವನ್ನಾಗಿಸುವ ಸಲುವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಭಾರತದಾದ್ಯಂತ 750 ವಿದ್ಯಾರ್ಥಿನಿಯರು ಅಭಿವೃದ್ಧಿಪಡಿಸಿದ ಮತ್ತು ನಿರ್ಮಿಸಿದ 75 ಪೇಲೋಡ್‌ಗಳನ್ನು ಬಿಡುಗಡೆ ಮಾಡಿತ್ತು. ಆಜಾದಿಸ್ಯಾಟ್ (AzadiSAT) ಸ್ಯಾಟಲೈಟ್ 75 ಪೇಲೋಡ್‌ಗಳನ್ನು ಒಳಗೊಂಡಿದ್ದು, ಕಾರ್ಯಾಚರಣೆಯನ್ನು ನಡೆಸಲು ಹೊಂದಿಸಲಾದ ಸಣ್ಣ ಉಪಗ್ರಹ ಉಡಾವಣಾ ವಾಹನದಲ್ಲಿ (SSLV) ಸವಾರಿ ಮಾಡುತ್ತವೆ. ಇಸ್ರೋ ಮತ್ತು ಸ್ಪೇಸ್‌ಕಿಡ್ಜ್ ಇಂಡಿಯಾ ಕೈಗೊಂಡ ಹಲವಾರು ಉಪಕ್ರಮಗಳು ಉನ್ನತ ಶಿಕ್ಷಣದಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಗಣಿತ (STEM) ವಿಷಯವನ್ನು ಅಭ್ಯಸಿಸುವ ಹುಡುಗಿಯರಿಗೆ (Girls) ಮಾಹಿತಿಪೂರ್ಣ ಹಾಗೂ ಸಹಕಾರಿಯಾಗಿರುವಂತೆ ಉದ್ದೇಶಿಸಲಾಗಿದೆ.


ಇದರಿಂದ ಹೆಚ್ಚು ಹೆಚ್ಚು ಹುಡುಗಿಯರನ್ನು ಬಾಹ್ಯಾಕಾಶ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುವ ಭಾಗವನ್ನಾಗಿಸುವ ಉದ್ದೇಶವನ್ನು ಈ ಉಪಕ್ರಮ ಹೊಂದಿದೆ. ಈ ಉಪಕ್ರಮವನ್ನು ಇಸ್ರೋ ಇದೇ ನಿಟ್ಟಿನಲ್ಲಿ ಉದ್ದೇಶಿಸಿದೆ.


ಭಾರತದ ಘನತೆಯನ್ನು ಸಾರುವ ಫೋಟೋಶೂಟ್ ಕೈಗೊಂಡಿರುವ ಸ್ಪೇಸ್‌ಕಿಡ್ಜ್
ಉಪಕ್ರಮದಲ್ಲಿ ಇಸ್ರೋದೊಂದಿಗೆ ಕೈಜೋಡಿಸಿದ್ದ ಸ್ಪೇಸ್‌ಕಿಡ್ಜ್ ಇಂಡಿಯಾ ಈಗ ಭಾರತದ ಶಕ್ತಿಶಾಲಿ ಇತಿಹಾಸ ಹಾಗೂ ಬಾಹ್ಯಾಕಾಶ ವಿಜ್ಞಾನದಲ್ಲಿ ದೇಶದ ಪರಾಕ್ರಮವನ್ನು ತೋರಿಸುವ ವಿಶಿಷ್ಟ ಫೋಟೋಶೂಟ್‌ಗಳನ್ನು ಆರಂಭಿಸಿದೆ. ಆಜಾದಿಸ್ಯಾಟ್‌ನಲ್ಲಿ ಕೆಲಸ ಮಾಡಿದ ಆರು ಗ್ರಾಮೀಣ ಯುವ ವಿಜ್ಞಾನಿಗಳ ತಂಡವು ಸ್ಪೇಸ್‌ಕಿಡ್ಜ್ ಇಂಡಿಯಾ ಮುಖ್ಯಸ್ಥೆ ಡಾ. ಶ್ರೀಮತಿ ಕೇಸನ್ ಜತೆಗೂಡಿ ಭಾರತವು ಸಂಸ್ಕೃತಿಯ ಕೇಂದ್ರ ಮಾತ್ರವಲ್ಲ, ವಿಜ್ಞಾನದ ಕೇಂದ್ರವೂ ಆಗಿದೆ ಎಂಬ ಸಂದೇಶವನ್ನು ಸಾರಿದ್ದಾರೆ.


ಗ್ರಾಮೀಣ ಹೆಣ್ಣುಮಕ್ಕಳಿಗೆ ಪ್ರೋತ್ಸಾಹ
ಗ್ರಾಮೀಣ ಭಾಗಗಳ ಹೆಣ್ಣುಮಕ್ಕಳಿಗೆ ಸ್ಯಾಟಲೈಟ್ ತಯಾರಿಸುವ ನಿರ್ದೇಶನಗಳನ್ನು ನೀಡುವ ಉದ್ದೇಶವನ್ನು ಫೋಟೋಶೂಟ್ ಒಳಗೊಂಡಿದೆ. ಶಿಕ್ಷಣ, ಸಂಶೋಧನೆ ಮತ್ತು ಉದ್ಯಮದ ಅಗತ್ಯಗಳನ್ನು ಪೂರೈಸಲು ಬಾಹ್ಯಾಕಾಶಕ್ಕೆ ಆರ್ಥಿಕ ಮತ್ತು ಸುಸ್ಥಿರ ಪ್ರವೇಶವನ್ನು ಒದಗಿಸುವುದು ಸಂಸ್ಥೆಯ ಗುರಿಯಾಗಿದೆ ಎಂದು ಸ್ಪೇಸ್‌ಕಿಡ್ಜ್ ಇಂಡಿಯಾ ತಿಳಿಸಿದೆ.




ಇದನ್ನೂ ಓದಿ:   Maitreyee: ಭಾರತವೇ ಹೆಮ್ಮೆ ಪಡುವ ಕೆಲಸ ಮಾಡಿದ ಯುವ ನರವಿಜ್ಞಾನಿ ಮೈತ್ರೇಯಿ


ಕ್ಯೂಬ್‌ಸ್ಯಾಟ್ ನಿರ್ಮಿಸಿದ ಹುಡುಗಿಯರ ತಂಡದೊಂದಿಗೆ ಫೋಟೋಶೂಟ್ ಮಾಡಿಸಿಕೊಂಡಿರುವ ಡಾ. ಶ್ರೀಮತಿ ಕೇಸನ್ ಹುಡುಗಿಯರಿಗೆ ಸ್ಫೂರ್ತಿದಾಯಕವಾಗಿ ನವಚೇತನ ತುಂಬಿದ್ದಾರೆ. ಆಜಾದಿಸ್ಯಾಟ್‌ನಲ್ಲಿ ಕೆಲಸ ಮಾಡಿದ ಆರು ಗ್ರಾಮೀಣ ಯುವ ಹೆಣ್ಣುಮಕ್ಕಳು (ವಿಜ್ಞಾನಿಗಳು) ಫೋಟೋಶೂಟ್‌ನ ಭಾಗವಾಗಿದ್ದಾರೆ.


ಆಜಾದಿಸ್ಯಾಟ್ ಎಂದರೇನು?
ಭಾರತದಾದ್ಯಂತ 750 ವಿದ್ಯಾರ್ಥಿನಿಯರು ಅಭಿವೃದ್ಧಿಪಡಿಸಿದ ಅಜಾದಿಸ್ಯಾಟ್, ಹೆಣ್ಣುಮಕ್ಕಳಿಗೆ ಬಾಹ್ಯಾಕಾಶ ವಲಯದಲ್ಲಿ ವಿಫುಲ ಅವಕಾಶಗಳನ್ನು ಒದಗಿಸುವ ಅಂತೆಯೇ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ವಿಷಯಗಳನ್ನು ತೆಗೆದುಕೊಳ್ಳಲು ISRO ಪ್ರೇರೇಪಿಸಿರುವ ಉಪಕ್ರಮವಾಗಿದೆ.




ಎಂಟು-ಕಿಲೋಗ್ರಾಂ ಕ್ಯೂಬ್‌ಸ್ಯಾಟ್ 75 ವಿಭಿನ್ನ ಪೇಲೋಡ್‌ಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದ್ದು, ಪ್ರತಿಯೊಂದೂ ಸುಮಾರು 50 ಗ್ರಾಂ ತೂಕವಿದೆ, ಅದು ಫೆಮ್ಟೊ-ಪ್ರಯೋಗಗಳನ್ನು ನಡೆಸುತ್ತದೆ.


ಪೇಲೋಡ್‌ ತಯಾರಿಗೆ ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ತರಬೇತಿ
ಈ ಪೇಲೋಡ್‌ಗಳನ್ನು ನಿರ್ಮಿಸಲು ದೇಶಾದ್ಯಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಲಾಯಿತು ಎಂದು ಇಸ್ರೋ ತಿಳಿಸಿದ್ದು, ನಂತರ ಅದನ್ನು "ಸ್ಪೇಸ್ ಕಿಡ್ಜ್ ಇಂಡಿಯಾ" ವಿದ್ಯಾರ್ಥಿ ತಂಡವು ಸಂಯೋಜಿಸಿದೆ. ಪೇಲೋಡ್‌ಗಳು ಹವ್ಯಾಸಿ ರೇಡಿಯೊ ಆಪರೇಟರ್‌ಗಳಿಗೆ ಧ್ವನಿ ಮತ್ತು ಡೇಟಾ ಪ್ರಸರಣವನ್ನು ಸಕ್ರಿಯಗೊಳಿಸಲು ಹ್ಯಾಮ್ ರೇಡಿಯೊ ಆವರ್ತನದಲ್ಲಿ ಕಾರ್ಯನಿರ್ವಹಿಸುವ UHF-VHF ಟ್ರಾನ್ಸ್‌ಪಾಂಡರ್ ಅನ್ನು ಒಳಗೊಂಡಿರುವುದು ಮಾತ್ರವಲ್ಲದೆ, ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.




ಇದನ್ನೂ ಓದಿ:  Moon: ಚಂದ್ರ ರೂಪಗೊಂಡಿದ್ದು ಗಂಟೆಗಳಲ್ಲಿ, ಶತಮಾನಗಳ ಅವಧಿಯಲಲ್ಲ ಅಂದ್ರೆ ನಂಬ್ತೀರಾ?


ಆಜಾದಿಸ್ಯಾಟ್ ತನ್ನ ಕಕ್ಷೆಯಲ್ಲಿ ವಿಕಿರಣ ಮತ್ತು ದೀರ್ಘ-ಶ್ರೇಣಿಯ ಟ್ರಾನ್ಸ್‌ಪಾಂಡರ್ ಅನ್ನು ಅಳೆಯಲು ಘನ-ಸ್ಥಿತಿಯ PIN ಡಯೋಡ್ ಆಧಾರಿತ ವಿಕಿರಣ ಕೌಂಟರ್ ಅನ್ನು ಸಹ ಹೊಂದಿದೆ. ಟೆಲಿಮೆಟ್ರಿಗಾಗಿ ಮತ್ತು ಕಕ್ಷೆಯಲ್ಲಿರುವ ಪೇಲೋಡ್‌ಗಳೊಂದಿಗೆ ಸಂವಹನಕ್ಕಾಗಿ ಸ್ಪೇಸ್ ಕಿಡ್ಜ್ ಇಂಡಿಯಾ ಅಭಿವೃದ್ಧಿಪಡಿಸಿದ ವ್ಯವಸ್ಥೆಯನ್ನು ಇಸ್ರೋ ಬಳಸಿಕೊಂಡಿದೆ.

Published by:Ashwini Prabhu
First published: