Dead Rat: ಬೀಟ್ರೂಟ್ ಪಲ್ಯದಲ್ಲಿ ಸಿಕ್ತು ಸತ್ತ ಇಲಿ! ಹೋಟೆಲ್‌ ಊಟ ಮಾಡೋ ಮುನ್ನ ಹುಷಾರಪ್ಪ

ಒಂದು ಪ್ರಸಿದ್ಧ ಹೋಟೆಲ್ನಲ್ಲಿ (Famous hotel) ಸಿಬ್ಬಂದಿಯೊಬ್ಬರು ಎಡವಟ್ಟು ಮಾಡಿದ್ದಾರೆ. ಗ್ರಾಹಕರಿಗೆ ಕೊಟ್ಟ ಬೀಟ್ರೂಟ್ ಪಲ್ಯದಲ್ಲಿ (beetroot palya) ಸತ್ತ ಇಲಿಯ ತಲೆ (Dead rat head) ಪತ್ತೆಯಾಗಿದ್ಯಂತೆ. ಪಲ್ಯದಲ್ಲಿ ಸತ್ತ ಇಲಿ ತಲೆ ನೋಡಿ ಗ್ರಾಹಕರು (Customer) ಕಂಗಾಲಾಗಿದ್ದಾರೆ. ಈ ವಿಚಾರ ಇದೀಗ ವೈರಲ್ (Viral) ಆಗಿದ್ದು, ಆ ಹೋಟೆಲ್ನಲ್ಲಿ ಊಟ ಮಾಡಿದ ಗ್ರಾಹಕರೆಲ್ಲ ಕಕ್ಕಾಬಿಕ್ಕಿಯಾಗಿದ್ದಾರೆ.

ಬೀಟ್ರೂಟ್ ಪಲ್ಯದಲ್ಲಿ ಸತ್ತ ಇಲಿ ತಲೆ ಪತ್ತೆ

ಬೀಟ್ರೂಟ್ ಪಲ್ಯದಲ್ಲಿ ಸತ್ತ ಇಲಿ ತಲೆ ಪತ್ತೆ

  • Share this:
ತಮಿಳುನಾಡು: ನೀವು ಪದೇ ಪದೇ ಹೋಟೆಲ್‌ಗೆ (Hotel) ಹೋಗ್ತೀರಾ? ಹಾಗಿದ್ರೆ ಅಲ್ಲಿ ಆಹಾರಗಳು (Foods) ರುಚಿಯಾಗಿರೋದೊಂದೇ (Tasty) ಅಲ್ಲ, ಶುಚಿಯಾಗಿ (Clean) ಇರುತ್ತದೆಯಾ ಅಂತ ಒಮ್ಮೆ ನೋಡಿಕೊಳ್ಳಿ. ದೊಡ್ಡ ಹೋಟೆಲ್, ಒಳ್ಳೆ ಹೋಟೆಲ್‌ ಅಂತ ನಂಬಿಕೊಂಡು ಹೋದ್ರೆ ಶುಚಿಯಾದ ಊಟ ನೀಡದೇ ನಿಮ್ಮನ್ನೇ ಯಾಮಾರಿಸಬಹುದು ಹುಷಾರ್! ಯಾಕೆಂದ್ರೆ ಇಲ್ಲಿ ಒಂದು ಪ್ರಸಿದ್ಧ ಹೋಟೆಲ್‌ನಲ್ಲಿ (Famous hotel) ಸಿಬ್ಬಂದಿಯೊಬ್ಬರು ಎಡವಟ್ಟು ಮಾಡಿದ್ದಾರೆ. ಗ್ರಾಹಕರಿಗೆ ಕೊಟ್ಟ ಬೀಟ್ರೂಟ್ ಪಲ್ಯದಲ್ಲಿ (beetroot palya) ಸತ್ತ ಇಲಿಯ ತಲೆ (Dead rat head)  ಪತ್ತೆಯಾಗಿದ್ಯಂತೆ. ಪಲ್ಯದಲ್ಲಿ ಸತ್ತ ಇಲಿ ತಲೆ ನೋಡಿ ಗ್ರಾಹಕರು (Customer) ಕಂಗಾಲಾಗಿದ್ದಾರೆ. ಈ ವಿಚಾರ ಇದೀಗ ವೈರಲ್ (Viral) ಆಗಿದ್ದು, ಆ ಹೋಟೆಲ್‌ನಲ್ಲಿ ಊಟ ಮಾಡಿದ ಗ್ರಾಹಕರೆಲ್ಲ ಕಕ್ಕಾಬಿಕ್ಕಿಯಾಗಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ? ಹೋಟೆಲ್‌ ಸಿಬ್ಬಂದಿ ಎಡವಟ್ಟು ಮಾಡಿದ್ದೇಕೆ? ಕೊನೆಗೆ ಏನಾಯ್ತು ಅಂತ ತಿಳಿದುಕೊಳ್ಳಲು ಈ ಸುದ್ದಿ ಓದಿ…

ಹೋಟೆಲ್‌ನಿಂದ ಕಾರ್ಯಕ್ರಮಕ್ಕೆ ಊಟ ಸರಬರಾಜು

ತಮಿಳುನಾಡಿನ ತಿರುವಣಮಲೈ ಜಿಲ್ಲೆಯ ಪ್ರಸಿದ್ಧ ಹೋಟೆಲ್ ಒಂದರಲ್ಲಿ ಇಂಥದ್ದೊಂದು ದೊಡ್ಡ ಪ್ರಮಾದ ನಡೆದಿದೆ. ಇಲ್ಲಿನ ಗಾಂಧಿನಗರದ ನಿವಾಸಿಯಾದ ಮುರಳಿ ಎಂಬುವರು ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಬಾಲಾಜಿ ಭವನ ಎಂಬ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಇದಕ್ಕೆ ನಗರದ ಪ್ರಸಿದ್ಧ ಹೋಟೆಲ್ ಒಂದರಿಂದ ಊಟ ತರಿಸಿದ್ದರು. ಆದರೆ ಊಟ ಮಾಡಿದ ಅತಿಥಿಗಳೆಲ್ಲ ಕಕ್ಕಾಬಿಕ್ಕಿಯಾಗಿದ್ದಾರೆ.

ಬೀಟ್ರೂಟ್ ಪಲ್ಯದಲ್ಲಿ ಸಿಕ್ಕಿತು ಸತ್ತ ಇಲಿಯ ತಲೆ!

ಹೌದು, ಮರುಳಿಯವರು ತಮ್ಮ ಮನೆಯ ಕಾರ್ಯಕ್ರಮಕ್ಕೆ ಅರಣಿ ಹಳೆ ಬಸ್ ನಿಲ್ದಾಣದ ಸಮೀಪ ಇರುವ ಹೊಟೇಲ್ ಒಂದರಿಂದ ಆಹಾರವನ್ನು ತರಿಸಲಾಗಿತ್ತು. ಈ ಹೊಟೇಲ್‌ನಿಂದ ಕಳುಹಿಸಿದ್ದ ಆಹಾರವನ್ನು ಇವರ ಮನೆಗೆ ಬಂದಿದ್ದ 30ಕ್ಕೂ ಹೆಚ್ಚು ಜನ ಸೇವಿಸಿದ್ದರು. ಆದರೆ ಊಟ ಮಾಡುತ್ತಿದ್ದ ವೇಳೆ ಬಿಟ್‌ರೂಟ್ ಪಲ್ಯದಲ್ಲಿ ಸತ್ತ ಇಲಿಯ ತಲೆ ಸಿಕ್ಕಿದ್ಯಂತೆ.

ಇದನ್ನೂ ಓದಿ: Bank Fraud: ಬ್ಯಾಂಕ್‌ನ 2 ಕೋಟಿ ಹಣ ಹೆಂಡ್ತಿ ಅಕೌಂಟ್‌ಗೆ ಟ್ರಾನ್ಸ್‌ಫರ್! ವಂಚಕ ಅಸಿಸ್ಟೆಂಟ್ ಮ್ಯಾನೇಜರ್ ಎಸ್ಕೇಪ್

ಸತ್ತ ಇಲಿ ತಲೆಯೊಂದಿಗೆ ಹೋಟೆಲ್‌ಗೆ ಬಂದ ಗ್ರಾಹಕರು

ಬೀಟ್ರೂಟ್ ಪಲ್ಯದಲ್ಲಿ ಸತ್ತ ಇಲಿಯ ತಲೆ ಕಂಡ ಅತಿಥಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಕೆಲವರಂತೂ ವಾಂತಿ ಮಾಡಿಕೊಂಡಿದ್ದಾರಂತೆ. ಇದಾದ ಮುರಳಿ ಹಾಗೂ ಮನೆಯವರು ಪಲ್ಯದಲ್ಲಿ ಸಿಕ್ಕಿದ ಸತ್ತ ಇಲಿಯ ತಲೆಯೊಂದಿಗೆ ಹೊಟೇಲ್‌ಗೆ ಬಂದಿದ್ದಾರೆ. ಇಲಿ ತಲೆ ತೋರಿಸಿ ಹೋಟೇಲ್‌ನವರನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ಹೋಟೆಲ್‌ ಸಿಬ್ಬಂದಿಗೆ ತೀವ್ರ ತರಾಟೆ ತೆಗೆದು ಕೊಂಡಿದ್ದಾರೆ.

ನಾವು ಕಳಿಸಿದ ಪಲ್ಯ ಶುಚಿಯಾಗಿತ್ತು ಎಂದ ಹೋಟೆಲ್

ಪಲ್ಯದಲ್ಲಿ ಸತ್ತ ಇಲಿ ತಲೆ ಇತ್ತು ಅಂತ ಹೋಟೆಲ್ ಸಿಬ್ಬಂದಿ ಒಪ್ಪಿಕೊಳ್ಳಲಿಲ್ಲವಂತೆ. ನಾವು ನಿಮಗೆ ಆಹಾರವನ್ನು ಕಳುಹಿಸಿ ಆರು ಗಂಟೆಗಳೇ ಕಳೆದಿವೆ. ಇಲಿ ತಲೆ ಸಿಕ್ಕಿದೆ ಅಂತ ಆಗಲೇ ಹೇಳಬೇಕಿತ್ತು. ಆದರೆ ಈಗ ಬಂದು ಆಹಾರದಲ್ಲಿ ಇಲಿ ಇದೆ ಎಂದರೆ ಒಪ್ಪಿಕೊಳ್ಳಲಾಗದು ಎಂದು ಹೊಟೇಲ್‌ನವರು ಹೇಳಿದ್ದಾರೆ. ಇದು ದೊಡ್ಡ ವಾಗ್ವಾದಕ್ಕೆ ಕಾರಣವಾಯಿತು.

ಇದನ್ನೂ ಓದಿ: Viral Video: ಅಬ್ಬಾ, ಜಸ್ಟ್​ ಮಿಸ್​! ಈ ವಿಡಿಯೋ ನೋಡೋಕೂ ಡಬಲ್​ ಗುಂಡಿಗೆ ಬೇಕು ರೀ

ಹೋಟೆಲ್ ವಿರುದ್ಧ ದೂರು

ಮುರಳಿ ಕುಟುಂಬಸ್ಥರು ಹಾಗೂ ಹೋಟೆಲ್ ಸಿಬ್ಬಂದಿ ನಡುವೆ ಭಾರೀ ಗಲಾಟೆಯೇ ನಡೆದಿದೆ. ಕೊನೆಗೆ ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹೊಟೇಲ್ ಸಿಬ್ಬಂದಿ ಹಾಗೂ ಮುರಳಿ ಕುಟುಂಬಸ್ಥರ ನಡುವೆ ಮಾತುಕತೆ ನಡೆಸಿ ಸಂಧಾನಕ್ಕೆ ಮುಂದಾಗಿದ್ದಾರೆ. ಆದರೆ ಸಂಧಾನಕ್ಕೆ ಒಪ್ಪದ ಮುರಳಿ, ಹೋಟೆಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು  ಸತ್ತ ಇಲಿ ತಲೆ ಸಿಕ್ಕಿದೆ ಎನ್ನಲಾದ ಪಲ್ಯದ ಸ್ಯಾಂಪಲ್‌ ಅನ್ನು ಆಹಾರ ಸುರಕ್ಷತಾ ಇಲಾಖೆಗೆ ಪರಿಶೀಲನೆಗಾಗಿ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಇದರ ಸತ್ಯಾಸತ್ಯತೆ ಗೊತ್ತಾಗಲಿದೆ.
Published by:Annappa Achari
First published: