McDonald: ಕೂಲ್‌ ಡ್ರಿಂಕ್ಸ್ ಕೊಡಿ ಅಂದ್ರೆ ಸತ್ತ ಹಲ್ಲಿಯನ್ನೂ ಸೇರಿಸಿ ಕೊಡೋದಾ? ಈ ವಿಡಿಯೋ ನೋಡಿದ್ರೆ ನೀವು ವ್ಯಾಕ್ ಅಂತೀರಿ!

ಕೂಲ್ ಡ್ರಿಂಕ್ಸ್‌ನಲ್ಲಿ ಸತ್ತ ಹಲ್ಲಿ ನೋಡಿ ಇಬ್ಬರೂ ಗ್ರಾಹಕರು ಹೌಹಾರಿದ್ದಾರೆ. ಈ ಬಗ್ಗೆ ಮೆಕ್‌ಡೊನಾಲ್ಡ್ ಮ್ಯಾನೇಜರ್‌ಗೆ ದೂರು ನೀಡಿದ್ದರೂ ಅವರು ಹೆಚ್ಚು ಗಮನ ಹರಿಸಲಿಲ್ಲ ಅಂತ ಆರೋಪಿಸಿದ್ದಾರೆ.

ಕೂಲ್ ಡ್ರಿಂಕ್ಸ್‌ನಲ್ಲಿ ಸತ್ತ ಹಲ್ಲಿ

ಕೂಲ್ ಡ್ರಿಂಕ್ಸ್‌ನಲ್ಲಿ ಸತ್ತ ಹಲ್ಲಿ

  • Share this:
ಗುಜರಾತ್: ಮೆಕ್ ಡೊನಾಲ್ಡ್‌ಗೆ (McDonald) ಹೋಗಿ ಗ್ರಾಹಕರೊಬ್ಬರು (Customer) ಕುಡಿಯೋದಕ್ಕೆ ಅಂತ ತಂಪು ಪಾನೀಯ (Cool Drinks) ಕೇಳಿದ್ದಾರೆ. ಅಲ್ಲಿ ಕೆಲಸ (Work) ಮಾಡುವ ಸಿಬ್ಬಂದಿ ಅವರಿಗೆ ಕೂಲ್ ಡ್ರಿಂಕ್ಸ್ ತಂದು ಕೊಟ್ಟಿದ್ದಾರೆ. ಇನ್ನೇನು ಕುಡಿಯುಬೇಕು ಅಂತ ಆತ ಗ್ಲಾಸ್ (Glass) ಬಾಯಿಗಿಟ್ಟಿದ್ದಾನೆ. ಆದರೆ ಅಲ್ಲಿರೋ ವಸ್ತು ಕಂಡು ತಿಂದಿದ್ದ ಆಹಾರವೆಲ್ಲ (Food) ಬಾಯಿಗೆ ಬಂದಂತಾಗಿದೆ. ಯಾಕೆಂದ್ರೆ ಆ ಕೂಲ್ ಡ್ರಿಂಕ್ಸ್‌ನಲ್ಲಿ ಸತ್ತ ಹಲ್ಲಿಯೊಂದು (Dead Lizard) ತೇಲುತ್ತಾ ಇತ್ತು. ಗುಜರಾತ್‌ನ (Gujarat) ಅಹಮದಾಬಾದ್‌ನ (Ahmadabad) ಸೈನ್ಸ್ ಸಿಟಿ ರಸ್ತೆಯಲ್ಲಿರುವ ಮೆಕ್ ಡೊನಾಲ್ಡ್ ಔಟ್ ಲೆಟ್ ನಲ್ಲಿ ತಂಪು ಪಾನೀಯದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಇದೀಗ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (Municipal Corporation) ಈ ಮೆಕ್ ಡೊನಾಲ್ಡ್ ಔಟ್ಲೆಟ್ (Outlet) ಅನ್ನು ಸೀಲ್ ಮಾಡಿದೆ.

ತಂಪು ಪಾನೀಯದಲ್ಲಿ ಸಿಕ್ಕಿತು ಸತ್ತ ಹಲ್ಲಿ

ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಮೆಕ್ ಡೊನಾಲ್ಡ್‌ನ ತಂಪು ಪಾನೀಯದಲ್ಲಿ ಗ್ರಾಹಕರೊಬ್ಬರು ಹಲ್ಲಿ ತೇಲುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಗ್ರಾಹಕರಲ್ಲಿ ಒಬ್ಬರಾದ ಭಾರ್ಗವ ಜೋಶಿ ಎಂಬುವರು ಇದರ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸತ್ತ ಹಲ್ಲಿ ಸಿಕ್ಕಿರುವುದಕ್ಕೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣ

ಕೂಲ್ ಡ್ರಿಂಕ್ಸ್‌ನಲ್ಲಿ ಸತ್ತ ಹಲ್ಲಿ ನೋಡಿ ಇಬ್ಬರೂ ಗ್ರಾಹಕರು ಹೌಹಾರಿದ್ದಾರೆ. ಈ ಬಗ್ಗೆ ಮೆಕ್‌ಡೊನಾಲ್ಡ್ ಮ್ಯಾನೇಜರ್‌ಗೆ ದೂರು ನೀಡಿದ್ದರೂ ಅವರು ಹೆಚ್ಚು ಗಮನ ಹರಿಸಲಿಲ್ಲ ಅಂತ ಆರೋಪಿಸಿದ್ದಾರೆ. ಇನ್ನು ಸಿಬ್ಬಂದಿಗೆ ಹೇಳಿದರೂ ಇದರ ಬಗ್ಗೆ ಗಮನ ಹರಿಸದೇ 300 ರೂಪಾಯಿ ಚೆೇಂಜ್ ಮಾತ್ರ ವಾಪಸ್ ಕೊಟ್ಟಿದ್ದಾರೆ ಅಂತ ಆರೋಪಿಸಿದ್ದಾರೆ.

ಇದನ್ನೂ ಓದಿ: Dogsಗಳು ಕಂಡ ಕಂಡಲ್ಲಿ ಮೂತ್ರ ಮಾಡೊದೇಕೆ? ನಾಯಿ ಬುದ್ಧಿ ಬಗ್ಗೆ ತಜ್ಞರು ಹೇಳುವುದೇನು?

ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ವೈರಲ್

ಈ ವಿಡಿಯೋ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಆಕ್ರೋಶದ ಕಾಮೆಂಟ್ ಮಾಡಿದ್ದಾರೆ. ಇದು ಮುನ್ಸಿಪಲ್ ಗಮನಕ್ಕೂ ಬಂತು. ಬಳಿಕ ಕಾರ್ಯಪ್ರವೃತ್ತವಾದ ಅಧಿಕಾರಿಗಳು ಔಟ್ಲೆಟ್ ಅನ್ನು ಸೀಲ್ ಮಾಡಿದರು. ಅವರು ತಂಪು ಪಾನೀಯದ ಮಾದರಿಯನ್ನು ತೆಗೆದುಕೊಂಡು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.



ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಮೆಕ್ ಡೊನಾಲ್ಡ್

ಘಟನೆಯ ನಂತರ, ಮೆಕ್‌ಡೊನಾಲ್ಡ್ ಅಧಿಕೃತ ಹೇಳಿಕೆಯನ್ನು ತನ್ನ ಬಿಡುಗಡೆ ಮಾಡಿದೆ. ನಾವು ಗ್ರಾಹಕರ ಸುರಕ್ಷತೆ ಮತ್ತು ನೈರ್ಮಲ್ಯವನ್ನು ಗೌರವಿಸುತ್ತಾರೆ ಎಂದು ಹೇಳಿದೆ. ಮೆಕ್‌ ಡೊನಾಲ್ಡ್ಸ್‌ನಲ್ಲಿ, ನಮ್ಮ ಎಲ್ಲಾ ಗ್ರಾಹಕರ ಸುರಕ್ಷತೆ ಮತ್ತು ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಗುಣಮಟ್ಟ, ಸೇವೆ, ಶುಚಿತ್ವ ಮತ್ತು ಮೌಲ್ಯವು ನಮ್ಮ ವ್ಯಾಪಾರ ಕಾರ್ಯಾಚರಣೆಗಳ ಕೇಂದ್ರವಾಗಿದೆ ಅಂತ ಹೇಳಿದೆ.

ನಮ್ಮ ಮೆಕ್ ಡೊನಾಲ್ಡ್‌ ಔಟ್‌ಲೆಟ್‌ಗಳಲ್ಲಿ 42 ರೀತಿಯ ಸುರಕ್ಷಾ ಕ್ರಮ

ಇನ್ನು ಇದಲ್ಲದೆ, ನಮ್ಮ ಎಲ್ಲಾ ಮೆಕ್‌ಡೊನಾಲ್ಡ್ ರೆಸ್ಟೋರೆಂಟ್‌ಗಳಲ್ಲಿ 42 ಕಟ್ಟುನಿಟ್ಟಾದ ಸುರಕ್ಷತೆ ಮತ್ತು ನೈರ್ಮಲ್ಯ ಪ್ರೋಟೋಕಾಲ್‌ಗಳನ್ನು ಅಳವಡಿಸಲಾಗಿದೆ. ಅಹಮದಾಬಾದ್ ಔಟ್‌ಲೆಟ್‌ನಲ್ಲಿ ನಡೆದಿದೆ ಎನ್ನಲಾದ ಈ ಘಟನೆಯನ್ನು ನಾವು ಪರಿಶೀಲಿಸುತ್ತಿದ್ದೇವೆ. ಪದೇ ಪದೇ ಪರಿಶೀಲಿಸಲಾಗಿದೆ ಮತ್ತು ಯಾವುದೇ ತಪ್ಪು ಕಂಡುಬಂದಿಲ್ಲ, ನಾವು ಉತ್ತಮ ಕಾರ್ಪೊರೇಟ್ ನಾಗರಿಕರಾಗಿ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದೇವೆ ಅಂತ  ಮೆಕ್ ಡೊನಾಲ್ಡ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Sheep: ಮಹಿಳೆ ಪ್ರಾಣ ತೆಗೆದ ಕುರಿಗೆ 3 ವರ್ಷ ಜೈಲು ಶಿಕ್ಷೆ! ಹೊರಗೆ ಬಂದ್ಮೇಲೂ ಮೃತಳ ಮನೆಯಲ್ಲೇ ಗೃಹಬಂಧನ!

ಮೆಕ್ ಡೊನಾಲ್ಡ್ ಔಟ್‌ ಲೆಟ್‌ಗೆ ಬೀಗ

ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಮ್‌ಸಿ) ಕ್ರಮ ಕೈಗೊಂಡಿದ್ದು, ಔಟ್‌ಲೆಟ್ ಅನ್ನು ಸೀಲ್ ಮಾಡಿದೆ. ನಗರದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲಿ ಪರೀಕ್ಷಿಸಲು ಮಹಾನಗರ ಪಾಲಿಕೆಯ ಆಹಾರ ಸುರಕ್ಷತಾ ಅಧಿಕಾರಿಯಿಂದ ತಂಪು ಪಾನೀಯದ ಮಾದರಿಗಳನ್ನು  ಔಟ್‌ ಲೆಟ್‌ನಿಂದ ಸಂಗ್ರಹಿಸಲಾಗಿದೆ. ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅನುಮತಿಯಿಲ್ಲದೆ ಔಟ್ಲೆಟ್ ಅನ್ನು ಪುನಃ ತೆರೆಯಲು ಅನುಮತಿಸಲಾಗುವುದಿಲ್ಲ.
Published by:Annappa Achari
First published: