• Home
  • »
  • News
  • »
  • trend
  • »
  • Viral Video: ಮೂರು ಹಾವುಗಳೊಂದಿಗೆ ಯುವಕನ ಹುಚ್ಚಾಟ! ವಿಷ ಸರ್ಪದ ದಾಳಿಯ ಭಯಾನಕ ವಿಡಿಯೋ ಇಲ್ಲಿದೆ

Viral Video: ಮೂರು ಹಾವುಗಳೊಂದಿಗೆ ಯುವಕನ ಹುಚ್ಚಾಟ! ವಿಷ ಸರ್ಪದ ದಾಳಿಯ ಭಯಾನಕ ವಿಡಿಯೋ ಇಲ್ಲಿದೆ

ಹಾವುಗಳೊಂದಿಗೆ ಸಯೀದ್ ಹುಚ್ಚಾಟ

ಹಾವುಗಳೊಂದಿಗೆ ಸಯೀದ್ ಹುಚ್ಚಾಟ

ಈಗಿನ ಯುವಕ-ಯುವತಿಯರು ಫೇಮಸ್ ಆಗುವ ಭರದಲ್ಲಿ ಕೆಲವೊಮ್ಮೆ ಜೀವಕ್ಕೆ ಸಂಚಕಾರ ತಂದುಕೊಳ್ತಾರೆ. ಇಲ್ಲಿ ಒಬ್ಬ ಯುವಕ ಮಾಡಿದ್ದೂ ಅದನ್ನೇ. ವಿಷ ಸರ್ಪಗಳೊಂದಿಗೆಹುಚ್ಚಾಟ ಮಾಡುವುದಕ್ಕೆ ಹೋಗಿ ಇದೀಗ ತನ್ನ ಪ್ರಾಣಕ್ಕೇ ಅಪಾಯ ತಂದುಕೊಂಡಿದ್ದಾನೆ. ಒಂದಲ್ಲ ಮೂರು ಮೂರು ನಾಗರಹಾವುಗಳು ದಾಳಿ ಮಾಡುವ ಭಯಾನಕ ವಿಡಿಯೋ ರೆಕಾರ್ಡ್ ಆಗಿದ್ದು, ಅದೀಗ ವೈರಲ್ ಆಗಿದೆ.

ಮುಂದೆ ಓದಿ ...
  • Share this:

ಶಿರಸಿ, ಉತ್ತರ ಕನ್ನಡ: ಈ ಸೋಶಿಯಲ್ ಮೀಡಿಯಾಗಳ (Social Media) ಅಬ್ಬರ ಜಾಸ್ತಿ ಆದ ಮೇಲೆ ಕೆಲವರಂತೂ ಸ್ಟಾರ್ (Star) ಆಗಬೇಕು, ಫೇಮಸ್ (Famous) ಆಗಬೇಕು ಅಂತ ಯಾವ್ಯಾವುದೋ ರೀತಿಯ ಫೋಟೋ (Photo), ವಿಡಿಯೋಗಳನ್ನೆಲ್ಲ (Video) ಮಾಡಿ, ಸೋಶಿಯಲ್ ಮೀಡಿಯಾಕ್ಕೆ ಅಪ್ಲೋಡ್ (Upload) ಮಾಡ್ತಾರೆ. ಹೀಗೆ ಫೇಮಸ್ ಆಗುವ ಭರದಲ್ಲಿ ಕೆಲವೊಮ್ಮೆ ಜೀವಕ್ಕೆ ಸಂಚಕಾರ ತಂದುಕೊಳ್ತಾರೆ. ಇಲ್ಲಿ ಒಬ್ಬ ಯುವಕ ಮಾಡಿದ್ದೂ ಅದನ್ನೇ. ವಿಷ ಸರ್ಪಗಳೊಂದಿಗೆ (Poisonous snake) ಹುಚ್ಚಾಟ ಮಾಡುವುದಕ್ಕೆ ಹೋಗಿ ಇದೀಗ ತನ್ನ ಪ್ರಾಣಕ್ಕೇ ಅಪಾಯ ತಂದುಕೊಂಡಿದ್ದಾನೆ. ಒಂದಲ್ಲ ಮೂರು ಮೂರು ನಾಗರಹಾವುಗಳು (Cobra) ದಾಳಿ ಮಾಡುವ ಭಯಾನಕ ವಿಡಿಯೋ (Video) ರೆಕಾರ್ಡ್ (Record) ಆಗಿದ್ದು, ಅದೀಗ ವೈರಲ್ (Viral) ಆಗಿದೆ.


ಘಟನೆ ನಡೆದಿದ್ದು ಎಲ್ಲಿ?


ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಇಲ್ಲಿ ಮೇಜ್ ಸಯೀದ್ ಎಂಬ ಯುವಕ ಈ ರೀತಿಯ ಹುಚ್ಚು ಸಾಹಸ ಮಾಡಿದ್ದಾನೆ. ಕಾಡಿನಲ್ಲಿ ಮೂರು ನಾಗರ ಹಾವುಗಳೊಂದಿಗೆ ಸಯೀದ್ ಹುಚ್ಚಾಟ ಆಡಿದ್ದಾನೆ. ಈ ಭಯಾನಕ ವಿಡಿಯೋ ಈಗ ವೈರಲ್ ಆಗಿದೆ.


ಮೂರು ಹಾವುಗಳೊಂದಿಗೆ ಹುಚ್ಚಾಟ


ಅರಣ್ಯ ಅಧಿಕಾರಿ ಸುಶಾಂತ್ ನಂದ ಎಂಬುವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಯೀದ್ ಎಂಬ ಯುವಕ ಹೆಡೆ ಎತ್ತಿದ ಮೂರು ನಾಗರಹಾವುಗಳ ಎದುರು ಕುಳಿತಿರುವ ದೃಶ್ಯದ ಮೂಲಕ 19 ಸೆಕೆಂಡಿನ ಈ ಕ್ಲಿಪ್ ಶುರುವಾಗುತ್ತದೆ.


ಇದನ್ನೂ ಓದಿ: Lion Viral Video: ಇಂತಹ ವಿಡಿಯೋ ಈ ಹಿಂದೆ ನೋಡಿರಲ್ಲ ನೀವು: ಇವತ್ತು ಮಿಸ್ ಮಾಡ್ಕೊಬೇಡಿ


ಯುವಕನನ್ನು ಕಚ್ಟಲು ಯತ್ನಿಸುವ ಹಾವು


ಒಂದು ಹಂತದಲ್ಲಿ ಭಯಾನಕ ಸನ್ನಿವೇಶ ಎದುರಾಗುತ್ತದೆ. ಅದೇನೆಂದರೆ, ಒಂದು ಹಾವು ಈ ಯುವಕನತ್ತ ನೆಗೆಯುತ್ತದೆ. ಜೊತೆಗೆ, ಕಚ್ಚಲು ಯತ್ನಿಸುತ್ತದೆ.  ಆ ಯುವಕ ಹಾವುಗಳ ಮುಂದೆ ಕುಣಿಯುತ್ತಿತ್ತಾನೆ ಹಾಗೆಯೇ ಅವುಗಳ ಬಾಲವನ್ನು ಎಳೆಯುತ್ತಾನೆ. ಆಗ ಒಂದು ನಾಗರಹಾವು ಪ್ರತಿದಾಳಿ ನಡೆಸಿ, ಆತನ ಕಾಲನ್ನು ಕಚ್ಚಲು ಯತ್ನಿಸುತ್ತದೆ.



ಮಾರಕವಾಗಬಹುದು ಎಂದ ಅಧಿಕಾರಿ


ನಾಗರಹಾವುಗಳನ್ನು ನಿಭಾಯಿಸುವ ಭಯಾನಕ ರೀತಿ ಇದು. ಹಾವುಗಳು ಚಲನೆಯನ್ನು ಬೆದರಿಕೆಯೆಂದು ಪರಿಗಣಿಸುತ್ತವೆ ಮತ್ತು ಆ ಚಲನೆಯನ್ನೇ ಅನುಸರಿಸುತ್ತವೆ. ಒಮ್ಮೊಮ್ಮೆ ಇದರ ಪ್ರತಿಕ್ರಿಯೆಯೂ ಮಾರಕವಾಗಬಹುದು' ಎಂದು ಕ್ಯಾಪ್ಶನ್ ಬರೆದು ಸುಶಾಂತ್ ನಂದ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.


ಯುವಕ ಆಸ್ಪತ್ರೆಗೆ ದಾಖಲು


ಸ್ನೇಕ್‌ಬೈಟ್ ಹೀಲಿಂಗ್ ಅಂಡ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷೆ ಮತ್ತು ಸಂಸ್ಥಾಪಕಿ ಪ್ರಿಯಾಂಕಾ ಕದಮ್ ಹಂಚಿಕೊಂಡ ಫೇಸ್‌ಬುಕ್ ಪೋಸ್ಟ್, ಸಯದ್ ಅವರನ್ನು ಹಾವು ಕಚ್ಚಿದ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬರೆದಿದ್ದಾರೆ.


ಅಂಗೈಯಲ್ಲಿಯೇ ಹಾವಿಗೆ ನೀರು ಕುಡಿಸಿದ ವ್ಯಕ್ತಿ!


ಮತ್ತೊಂದೆಡೆ ವ್ಯಕ್ತಿಯೋರ್ವ ಹಸಿರು ಬಣ್ಣದ ಹಾವಿಗೆ (Snake) ನೀರು ಕುಡಿಸುತ್ತಿರುವ ವೈರಲ್ ಆಗಿದೆ. ಇನ್ನೂ ಈ ವಿಡಿಯೋ ನೋಡಿದ ನೆಟ್ಟಿಗರು, ಹಾವುಗಳ ಸಹ ಜೀವಿಗಳು. ಬೇಸಿಗೆಯಲ್ಲಿ ನೀರು ಮತ್ತು ಆಹಾರ (Food And Water) ಅರಸಿ ಜನ ವಸತಿ ಪ್ರದೇಶಗಳತ್ತ ಬರೋದು ಸಾಮಾನ್ಯ. ಹಾಗಾಗಿ ಅವುಗಳನ್ನು ಕೊಲ್ಲದೇ, ರಕ್ಷಿಸಿ ಅರಣ್ಯ ಪ್ರದೇಶಕ್ಕೆ (Forest) ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: Viral video: ಅಂಗೈಯಲ್ಲಿಯೇ ಹಾವಿಗೆ ನೀರು ಕುಡಿಸಿದ ವ್ಯಕ್ತಿಯ ವಿಡಿಯೋ ನೋಡಿ


ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ?

ವ್ಯಕ್ತಿಯೋರ್ವ ತನ್ನ ಅಂಗೈಯಲ್ಲಿ ಬಾಟಲ್ ನಿಂದ ನಿಧಾನವಾಗಿ ನೀರು ಹಾಕಿಕೊಳ್ಳುತ್ತಿದ್ದಾರೆ. ಇತ್ತ ದಾಹದಿಂದ ದಣಿದ ಹಾವು ನಿಧಾನವಾಗಿ ನೀರು ಕುಡಿಯುತ್ತಿದೆ. ಈ ಹೃದಯಸ್ಪರ್ಧಿ ವಿಡಿಯೋ ವೈರಲ್ ಆಗಿದ್ದು, ಜನರು ನೀರು ಕುಡಿಸಿದ ವ್ಯಕ್ತಿಗೆ ಧನ್ಯವಾದವನ್ನು ಸಲ್ಲಿಸುತ್ತಿದ್ದಾರೆ.

Published by:Annappa Achari
First published: